ಎಲ್ಲೋ ಹುಟ್ಟಿದ ನದಿಯು...ಸಾಗರವ ಸೇರುವಂತೆ...
ಎಲ್ಲೋ ಬೆಳೆದ ಸುಮವು....ಮುಡಿಯ ಸೇರುವಂತೆ...
ಮೂರು ದೇವತೆಗಳು ತುಂಬಾ ಮಾಸಗಳಾಗಿದ್ದವು...ಒಬ್ಬರನ್ನು ಒಬ್ಬರು ನೋಡಿ...
ಅವರ ಕೆಲಸ ಕಾರ್ಯಗಳು ಆ ದೇವತೆಗಳನ್ನು ಸಾನೆ ಬ್ಯುಸಿಯಾಗಿಟ್ಟಿದ್ದವು...
ಆ ಮೂರು ದೇವತೆಗಳು ತಮ್ಮ ಕೆಲಸ ಕಾರ್ಯಗಳನ್ನು ಸ್ವಲ್ಪ ಬದಿಗೊತ್ತಿ ಭೇಟಿ ಮಾಡಲು ನಿರ್ಧರಿಸಿದವು...
ಹರಿ, ಹರ, ಸರಸ್ವತಿಯರೇ ಆ ಮೂರು ದೇವತೆಗಳು...
ಹರಿ ತುಂಬಾ ದೂರದಿಂದ ಬರಬೇಕಿತ್ತು...ಆದ್ರೆ ತನ್ನ ವಾಹನ ಗರುಡನ ಆರೋಗ್ಯ ಸರಿ ಇರದ ಕಾರಣ, ಹೇಗೂ ಅನುಕೂಲ ಮಾಡಿಕೊಂಡು, ತನ್ನ ಆಪ್ತ ಗೆಳೆಯರನ್ನ ನೋಡಲು ರವಷ್ಟು ಮುಂದಾಗಿಯೇ ನಿರ್ಧರಿಸಿದ ಜಾಗ ಸೇರಿಯಾಗಿತ್ತು...
ಹರ ತನ್ನ ನಂದಿ ವಾಹನವನ್ನು ಜೋರಾಗಿ ಚಲಾಯಿಸಿ ಕೊಂಡು ನಿರ್ಧರಿಸಿದ ಜಾಗಕ್ಕೆ ಬಂದು ತಲುಪಿದ...
ಸರಸ್ವತಿ ತನ್ನ ಮುದ್ದಾದ ಕಂಗಳಿಂದ ತನ್ನ ಕುಟುಂಬದ ಸದಸ್ಯರಾದ ಹರಿ ಹಾಗು ಹರ ಇವರನ್ನು ನೋಡುತ್ತಾ ಬಂದಳು..
ಮೂರು ಜನರಿಗೂ ಸಂತಸ ಸಂಭ್ರಮ...ಬಹುದಿನಗಳಾದ ಮೇಲೆ ಒಬ್ಬರಿಗೊಬ್ಬರು ನೋಡಿದ್ದು..ಸಹಜವಾಗೆ ಕುತೂಹಲ ಇತ್ತು...
ಆ ಸಂತಸಕ್ಕೆ, ಗಂಟಲು ಕಟ್ಟಿ ಬಂತು...ಏನು ಮಾತಾಡಲು ಆಗಲಿಲ್ಲ..ಯಾಕೆಂದರೆ ಹೃದಯ ಒಬ್ಬರಿಗೊಸ್ಕರ, ಒಬ್ಬರದು ಮಿಡಿಯುತಿತ್ತು..ಅಂತ ನಿರ್ಮಲ ಗೆಳೆತನ ಅವರದು...
ಏನೂ ಮಾತಾಡದೆ ಎಲ್ಲ ಮಾತಾಡಿದ ಸರಸ್ವತಿ ಕಂಗಳನ್ನು ನೋಡುವುದು ಒಂದು ಖುಷಿ...ಹರ ತನ್ನ ಕೈಲಾಸ ಪರ್ವತದ ವರ್ಣನೆ ಬಾಲ ಗಣಪನ ಆಟಗಳನ್ನು ಹೇಳುತ್ತಾ ಖುಷಿ ಪಡುತ್ತಿದ್ದ...
ಇವರ ಮಧ್ಯೆ ತನ್ನ ಜೀವದ ಗೆಳೆಯರಾದ ಹರ ಮತ್ತು ಸರಸ್ವತಿಯನ್ನ ನೋಡುತ್ತಾ...ಮೊದಲ ಬಾರಿಗೆ ಮಾತು ಕಮ್ಮಿ ಮೌನದ ಜೊತೆ ಹೊಂದಾಣಿಕೆ ಮಾಡಿಕೊಂಡು ಹರಿ ಮನಸಿನಲ್ಲೇ ಖುಷಿ ಪಡುತ್ತಿದ್ದನು.
ಎಂತಹ ಸುಂದರ ಕ್ಷಣಗಳು ಯಾವತ್ತು ಅಮರ....ಮಧುರ...