Friday, December 27, 2013

"ನಿನ್ನ ಹೆಸರೇ" ಹೌದು.............................!

ಗೋರಾ ಗೋರಾ  ಎಂದು ಕೂಗುತ್ತಾ ಒಳ ಬರುವ ಭಕ್ತ ನಾಮದೇವರು ಅವಕ್ಕಾಗಿ ನಿಂತು ಬಿಡುತ್ತಾರೆ...

ಎರಡು ಕೈಗಳನ್ನು ಕಡಿದುಕೊಂಡು ವಿಠಲನಿಂದಲೇ ರಂಗಣ್ಣನ ರೂಪದಲ್ಲಿ ಸೇವೆಯನ್ನು ಮಾಡಿಸಿಕೊಳ್ಳುತ್ತಿದ್ದ  ಗೋರ ಆಶ್ಚರ್ಯ ಚಕಿತರಾಗಿ ಹೊರ ಬಂದು ನೋಡುತ್ತಾರೆ.. ಪರಮಾಶ್ಚರ್ಯ.. ಕೋಪಗೊಂಡು ಸಿಡಿಮಿಡಿ ನುಡಿಗಳಿಂದ ಗೋರನನ್ನು ಬಯ್ದು ಹೋಗಿದ್ದ ನಾಮದೇವರನ್ನು ನೋಡಿ,

"ನಾಮದೇವರೇ ನಾಮದೇವರೇ ಅಂದು ಮನಸ್ಸಿಗೆ ಬಹಳ ನೋವು ಮಾಡಿಕೊಂಡು ಹೋಗಿಬಿಟ್ಟಿರಿ.. ಇಂದು ನನ್ನ ಮೇಲೆ ಕೃಪೆ ಮಾಡಿ ಬಂದಿದ್ದೀರಾ.." ಎಂದು ಹಾಗೆಯೇ ಸಾಷ್ಟ್ರಾಂಗ ನಮಸ್ಕಾರ ಮಾಡುತ್ತಾರೆ..

"ಎಲ್ಲಿ ಎಲ್ಲಿ ತೋರಿಸು" 

"ಎಲ್ಲಿ ಸ್ವಾಮೀ.. ಎಷ್ಟೋ ವರ್ಷಗಳ ಬಯಕೆ.. ನಾನು ನೋಡಬೇಕೆಂಬ ಬಯಕೆ... "

"ನೀನ್ಯಾಕಪ್ಪ ಅಲ್ಲಿಗೆ ಹೋಗಬೇಕು.. ಇಲ್ಲಿಯೇ ಇಲ್ಲಿಯೇ ಬಂದು ಬಿಟ್ಟಿದ್ದೆ ನಿನಗೆ"

"ನಿಮ್ಮ ಮಾತೆ ನನಗೆ ಅರ್ಥವಾಗುತ್ತಿಲ್ಲ.. ನಮ್ಮ ಮನೆಯಲ್ಲಿ ನಾನು, ಮಂಜು... "

ಅರ್ಧದಲ್ಲಿಯೇ ಭಕ್ತ ಕುಂಬಾರ ಗೋರನ ಮಾತನ್ನು ಮೊಟಕುಗೊಳಿಸುವ ನಾಮದೇವರು

"ಅದಲ್ಲಪ್ಪ ನಾನು ಕೇಳುತ್ತಿರುವುದು ರಂಗಣ್ಣನಲ್ಲ.. ರಂಗಣ್ಣ ನೋಡು ಇಲ್ಲಿಯೇ ನನ್ನ ಪಕ್ಕದಲ್ಲಿಯೇ ನಿಂತಿದ್ದಾನೆ.. ನಾನು ಕೇಳುತ್ತಿರುವುದು ಬಾಲಣ್ಣ ಮತ್ತು ಇನ್ನೊಬ್ಬ ಅಣ್ಣ ಫೇಸ್ ಬುಕ್ ನಲ್ಲಿ ಹಾಕಿರುವ ಪೋಸ್ಟ್ ಭಾಗ್ಯ ಪುಟ್ಟಿಯ ಬ್ಲಾಗ್ ಲೇಖನ ಎಲ್ಲಿ ಎಲ್ಲಿ ಎಲ್ಲಿ ಎಲ್ಲಿ ಎಲ್ಲಿ ಎಲ್ಲಿ ತೋರಿಸು!"

"ಅಯ್ಯೋ ನಾಮದೇವರೇ ನಾನು ಅದಕ್ಕೆ ಕಾಯುತ್ತಾ ಇದ್ದೇನೆ.. ನೋಡಿ ಇನ್ನು ಸಮಯ ೧೧. ೫೮ ಇನ್ನು ಎರಡು ನಿಮಿಷ ಬಾಕಿ ಇದೆ..  ಇನ್ನೇನು ಫೇಸ್ಬುಕ್ಕಿನಲ್ಲಿ ಬಂದು ಬಿಡುತ್ತದೆ.. .. ಬನ್ನಿ ಇಲ್ಲೇ ಕೆಲವು ಮಡಕೆಗಳನ್ನು ಸರಿಸಿ ಕೂತು ವಿಶ್ರಮಿಸಿಕೊಳ್ಳಿ.. ಚಿಕಮಗಳೂರಿನ ಟೌನ್ ಕ್ಯಾಂಟೀನ್ನಲ್ಲಿ ಸಿಗುವ ಬೆಣ್ಣೆ ಮಸಾಲಾ ದೋಸೆ ಬರುತ್ತದೆ.. ಅಷ್ಟರಲ್ಲಿ ಬ್ಲಾಗ್ ಕೂಡ ಬರುತ್ತದೆ ಮತ್ತು ಭಾಗ್ಯ ಪುಟ್ಟಿ ಕೂಡ ಆನ್ಲೈನ್ ಗೆ ಬರುತ್ತಾಳೆ... "

"ಇಲ್ಲಾ ಗೋರಾ ನನಗೆ ಕಾಯಲು ಆಗುತ್ತಿಲ್ಲ.. ಕನಿಷ್ಠ ಪಕ್ಷ ಆ ಬ್ಲಾಗಿನ ಕೊಂಡಿಯನ್ನಾದರು ಕೊಡು.. ನೋಡುತ್ತಿರುತೇನೆ.. "

"ಓಹ್ ನಿಮ್ಮ ಕುತೂಹಲ ಅರ್ಥವಾಗುತ್ತಿದೆ.. ನೋಡಿ ಈ ಕೊಂಡಿಯಲ್ಲಿ ಲೇಖನ ಸಿಗುತ್ತದೆ.. ಆದರೆ ಅದನ್ನು ರಿಫ್ರೆಶ್ ಮಾಡುತ್ತಾ ಇರಬೇಕು ಆಯ್ತಾ... "

ಭಕ್ತ ಕುಂಬಾರ ಚಿತ್ರದ ನಿರ್ದೇಶಕರಿಗೆ ತಲೆ ಕೆಟ್ಟು ಹೋಗುತ್ತದೆ.. ಎಲ್ಲಿಯ ಬ್ಲಾಗ್, ಎಲ್ಲಿಯ ಮಸಾಲೆದೋಸೆ.. ಎಲ್ಲಿಯ ಭಾಗ್ಯ ಪುಟ್ಟಿ.. ಏನಿದು ನನಗೆ ತಲೆಗೆ ಹುಳ ಬಿಡುತ್ತಾ ಇದ್ದಾರೆ ಇವರು" ಎಂದು ಇಲ್ಲದ ತಲೆಯ ಕೂದಲನ್ನು ಸವರಿ ಕೊಳ್ಳುತ್ತಾ ಅತ್ತಿತ್ತಾ ನೋಡುತ್ತಾ.. ಬ್ಲಾಗ್ ಲಿಂಕ್ ಕೊಂಡಿಯನ್ನು ರಿಫ್ರೆಶ್ ಮಾಡುತ್ತಲೇ ಇರುತ್ತಾರೆ..

ಟನ್ ಟನ್ ಟನ್ ಟನ್ ಟನ್ ಟನ್ ಟನ್ ಟನ್ ಟನ್ ಟನ್ ಟನ್ ಟನ್ !!!!!

ಹನ್ನೆರಡು ಸಲ ದೂರದ ಗಡಿಯಾರ ಹೊಡೆದುಕೊಂಡು ಘಂಟೆ ಮಧ್ಯ ರಾತ್ರಿ ಹನ್ನೆರಡು ಆಯಿತು.. ಕ್ಯಾಲೆಂಡರ್ ಪ್ರಕಾರ ೨೭ನೆ ಡಿಸೆಂಬರ್ ೨೦೧೩ ಬಂತು ಅಂತ ಸಾರುತ್ತಿರುತ್ತದೆ..

"ಒಯೆ ಅಣ್ಣಾ ನಾನು ಬಂದೆ ಆನ್ಲೈನ್" ಅಂತ ಮೆಸೇಜ್ ಬರುತ್ತದೆ..

"ಒಯೆ ಮಗಳೇ.. ತಗೋ ಬ್ಲಾಗ್ ಲೇಖನ"  ಅಂತ ಈ ಕಡೆಯಿಂದ ಒಂದು ಕೊಂಡಿಯನ್ನು ಕಳಿಸುತ್ತಾರೆ!

"ಅಣ್ಣ ಈ ಸಾರಿ ನನಗೆ ಎರಡೆರಡು ಬಾರಿ ಹುಟ್ಟು ಹಬ್ಬಕ್ಕೆ ಶುಭಾಶಯಗಳು ಗೊತ್ತಾ.. ನಾನು ಫುಲ್ ಕುಶ್.. ಅಣ್ಣನಂತಹ ಅಣ್ಣ ಬಾಲಣ್ಣ ಒಂದು ದಿನ ಮೊದಲೇ ನನಗೆ ಶುಭಾಶಗಳನ್ನು ಕಳಿಸಿ ನನ್ನ ಪರೀಕ್ಷೆ ಸುಗಮವಾಗಿ ಸಾಗಲಿ ಅಂತ ಹಾರೈಸಿದ್ದಾರೆ.. ಅದರ ಜೊತೆಯಲ್ಲಿ ಸುಮಾರು ೧೦೩ ಮಂದಿ  ಆ ಪೋಸ್ಟನ್ನು ಇಷ್ಟ ಪಟ್ಟಿದ್ದಾರೆ ಮತ್ತು ೪೯ ನನ್ನ ಆತ್ಮೀಯರು, ಅಣ್ಣಂದಿರು, ಸ್ನೇಹಿತರು, ತಂಗಿಯರು, ಸ್ನೇಹಿತೆಯರು, ಗುರುಗಳು ಶುಭಾಶಯಗಳನ್ನು ತಲುಪಿಸಿದ್ದಾರೆ.. ಇನ್ನು ನನಗೆ ನಿಮ್ಮ ಮಗಳು ಶೀತಲ್ ಶ್ರೀಕಾಂತ್ ಜೊತೆಯಲ್ಲಿ ನನಗೂ ಎರಡನೇ ಮಗಳ ಸ್ಥಾನ ನೀಡಿರುವ ನೀವು ಬರೆದಿರುವ ಬ್ಲಾಗ್ ಬೇರೆ.. ನಾಳೆ ಇನ್ನು ಎಷ್ಟು ಕಾಮೆಂಟ್ ಸಿಗುತ್ತೋ.. ಈ ಸಾರಿ ನನಗೆ ಇಬ್ಬರು ಅಣ್ಣಂದಿರಿಂದ ಡಬಲ್ ಧಮಾಕ.. ಖುಷಿಯಾಗ್ತಿದೆ ಅಣ್ಣ.. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಪಡೆದಿರುವ ನಾನೇ ಧನ್ಯ.. "

ಇಲ್ಲ ಮಗಳೇ ನೀನು ಧನ್ಯಳಾಗಿರಬಹುದು...ಆದರೆ ನಿನ್ನಂತಹ ಪುಟ್ಟ ತುಂಟ ತಂಗಿ ನಮಗೆಲ್ಲ ಸಿಕ್ಕಿರುವುದು ನಮ್ಮ "ನಿನ್ನ ಹೆಸರೇ" ಹೌದು ಪುಟ್ಟಿ ...

"ಸುಂದರ ಶುಭಾಶಯಗಳು ನಿನಗಾಗಿ ಬಿ ಪಿ.. ಪರೀಕ್ಷೆಗಳು ನಿರೀಕ್ಷೆಯಂತೆ ಸುಲಭವಾಗಿರಲಿ, ಸುಗಮವಾಗಿರಲಿ.. ಜೊತೆಯಲ್ಲಿಯೇ ಮಾಯ್ನೋರ ಮನೆಯಲ್ಲಿ ಹದಿನೆಂಟು ತುಂಬಿ ನಾನು ಮತ ಹಾಕಬಹುದು ಎಂದು ನೆಗೆದಾಡಿಕೊಂಡು ಕುಣಿದಾಡಲಿ.. ಪರೀಕ್ಷೆ ಕಳೆದು (ಸಧ್ಯ ಪೋಸ್ಟ್ ಪೋನ್ ಆಗದಿದ್ದರೆ) ಬೇಗ ಊರಿಗೆ ಸೇರಿ ಬೆಳೆಯಬಹುದಾದ ಬಾಲದ ಜೊತೆಯಲ್ಲಿ ಪ್ರಕೃತಿ ಮಡಿಲಲ್ಲಿ ನೆಗೆಯುತ್ತಾ ನಗುತ್ತ ಕುಣಿದಾಡುವ ಖುಶಿ ನಿನದಾಗಲಿ.. ಹ್ಯಾಪಿ ಬರ್ತ್ಡೇ ಬಿ ಪಿ... "

ಧನ್ಯೋಸ್ಮಿ ಅಣ್ಣಾ(ಪ್ಪಾ)...ಮತ್ತೆ ಸಿಗ್ತೇನೆ.. ಓದಲು ಹೋಗಬೇಕು.. ಸಿಗ್ತೀನಿ.. ಬೈ.. ಬೈ

ನಿರ್ದೇಶಕರು ಪೂರ್ತ ತಲೆ ಕೆರೆದುಕೊಂಡು "ಭಾಗ್ಯ ಭಟ್ ನಿನ್ನ ಹುಟ್ಟು ಹಬ್ಬ ನನ್ನ ಚಿತ್ರದ ಚಿತ್ರಕಥೆಯನ್ನೇ ಬದಲಾಯಿಸಿಬಿಟ್ಟಿತು.. ಸುಂದರ ಹುಟ್ಟು ಹಬ್ಬದ ಸಡಗರ ನಿನದಾಗಲಿ... ಹುಟ್ಟು ಹಬ್ಬದ ಶುಭಾಶಯಗಳು"

Saturday, November 30, 2013

ಶಶಿಯ ಅ"ಪ್ರತಿಭಾ" ಪಯಣ ಹದಿನೈದರ ಹರಯದಲ್ಲಿ!!!

ಆಗ ತಾನೇ ಕಾಲೇಜು ತುಳಿದಿದ್ದ ದಿನಗಳು. ಶಾಲೆಯ ಬಂಧನ ಎನ್ನುವಂತ ಪರಿಸರದಿಂದ ಮುಕ್ತವಾದ ಬಯಲಿಗೆ ಬಿದ್ದಂತೆ ಅನುಭವವಾದ ದಿನಗಳು. ಸಮವಸ್ತ್ರ, ಬೂಟ್ಸ್, ಚೀಲ ಇದರಿಂದ ಮುಕ್ತಿ ಹೊಂದಿದ್ದ ದಿನಗಳು. ಮನದೊಳಗೆ ಇಳಿಬಿದ್ದಿದ್ದ ಆಸೆಗಳು ಗರಿಗೆದರಿ ಹಾರಲು ಸಿದ್ಧವಾಗುತ್ತಿದ್ದ ದಿನಗಳು. "ಮನದಲ್ಲಿ ಆಸೆಯೇ ಬೇರೆ ಬದುಕಲ್ಲಿ ನಡೆವುದೇ ಬೇರೆ" ಎನ್ನುವ ಮೋಡದ ಮರೆಯಲ್ಲಿ ಚಿತ್ರದ ಹಾಡಿನಂತೆ ಅರ್ಥಿಕ ಮುಗ್ಗಟ್ಟು ಇದ್ದುದರಿಂದ ಬರಿ ಓದುವುದಷ್ಟಕ್ಕೆ ಸೀಮಿತವಾಗಿತ್ತು.

ಆ ದಿನಗಳಲ್ಲಿ ಬೈಕ್ ಕಲಿಯಬೇಕು.. ಓಡಿಸಬೇಕು.. ಎನ್ನುವ ಚಪಲವಿದ್ದರೂ ಸಂಕೋಚ ಸ್ವಭಾವದ ಎಲೆಮರೆಯ ಕಾಯಿಯ ಗುಣದ ನಾನು ಬೈಕ್ ಓಡಿಸುವಿದರಲಿ ನೋಡುವ ಸಾಹಸ ಕೂಡ ಮಾಡುತ್ತಿರಲಿಲ್ಲ. ಇನ್ನೂ ಮೀಸೆ ಚಿಗುರದ ಚಿಕ್ಕ ಪುಟ್ಟ ಹುಡುಗರೆಲ್ಲಾ ಬೈಕ್ ಓಡಿಸುವುದನ್ನು ಕಂಡಾಗ ಮನದಲ್ಲಿ ನಾಚಿಕೆಯಾಗುತ್ತಿದ್ದರು ಮಿತಿಯ ಅರಿವಿದ್ದವ ತಿಮಿರವನ್ನು ತಿನ್ನುವನಂತೆ ಎನ್ನುವ ಮಾತಿನಂತೆ ಇದ್ದೆ.

ಎರಡು ಕತ್ತೆಗಳ ವಯಸ್ಸು ದಾಟಿ ಮೂರನೇ ಕತ್ತೆ ವಯಸ್ಸು ಮುಗಿಯುವ ಅಂಚಿನಲ್ಲಿದ್ದೆ.. ಜೊತೆಗೆ ಈ ಕತ್ತೆಗೆ ಒಂದು ಸುಂದರ ಕುದುರೆಯ ಜೊತೆ ಆಯಿತು.. ಮದುವೆ ಇನ್ನೇನು ಕೆಲವೇ ವಾರಗಳು ಇದ್ದವು..

ಅಂಥಹ ಒಂದು ಸುಂದರ ದಿನಗಳಲ್ಲಿ ನನ್ನ ಪ್ರೀತಿಯ ಗೆಳೆಯರು ಶಶಿ, ಲೋಕಿ, ಜೆ ಎಂ ಮತ್ತು ಅವರ ಪರಿವಾರ ಒಂದು ಹರಕೆಯ ನೆಪದಲ್ಲಿ ಯಾಣ ಮತ್ತಿತ್ತರ ತಾಣಗಳಿಗೆ ಹೋಗಬೇಕಿತ್ತು. ಹೆಬ್ಬಾಳದ ಬಳಿಯ ಸಹಕಾರನಗರದಲ್ಲಿದ್ದ ಅವನ ಮನೆಯನ್ನು ಎರಡು ಮೂರುದಿನಗಳ ಮಟ್ಟಿಗೆ ಜೋಪಾನ ಮಾಡುವ ಉಸ್ತುವಾರಿಯನ್ನು ನನಗೆ ಮತ್ತು ವೆಂಕಿಗೆ ಶಶಿ ವಹಿಸಿಕೊಟ್ಟಿದ್ದನು. ನಾವಿಬ್ಬರು ನಮ್ಮ ಕೆಲಸದ ಒತ್ತಡದ ಕಾರಣ ಅವರ ಜೊತೆಯಲ್ಲಿ ಹೋಗುವ ಪರಿಸ್ಥಿಯಲ್ಲಿರಲಿಲ್ಲ.

ತನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತಿದ್ದ..    ಮತ್ತು ಉಡುಗೊರೆಯಾಗಿ ಬಂದಿದ್ದ ಆ ಕಾಲದ ಸೂಪರ್ ಹಿಟ್ ಬೈಕ್ ಯಮಹ Rx ೧೦೦ ಈ ಬೈಕನ್ನು ಉಪಯೋಗಿಸಿಕೊಳ್ಳಲು ಅನುಮತಿ ನೀಡಿದ್ದ.. ನಾನು ಮತ್ತು ವೆಂಕಿ ಇಬ್ಬರು ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಕೆಲಸ ಮಾಡುತ್ತಿದ್ದರಿಂದ.. ನಮಗೂ ಅನುಕೂಲವಾಗಿತ್ತು..

ಅವರೆಲ್ಲರಿಗೂ ಶುಭ ಪ್ರಯಾಣ ಹೇಳಿ.. ವೆಂಕಿ ಸೂಪರ್ ಆಗಿ ಮಾಡಿದ್ದ ಚಿತ್ರಾನ್ನ ತಿಂದು ಇಬ್ಬರು ಬೆಳಿಗ್ಗೆ ಎದ್ದು ಆಫೀಸ್ ಗೆ ಹೊರಟೆವು. ವೆಂಕಿಗೆ ಬೈಕ್ ಓಡಿಸಲು ಬರುತ್ತಿತ್ತು.. ನನಗೆ ಹಹಹಃ ಹಹಹ ಹಹಃ.. ಸ್ಟಾಂಡ್ ಹಾಕಿ ನಿಲ್ಲಿಸಿದ್ದ ಬೈಕ್ ಮೇಲೆ ಕೂರಲು ಸರಿಯಾಗಿ ಬರುತ್ತಿರಲಿಲ್ಲ.. ವೆಂಕಿ ಯಾವಾಗಲೂ ಬಯ್ಯುತ್ತಿದ್ದ ಲೋ.. ಮೊದಲು ಕ್ಲಚ್ ಯಾವುದು ಬ್ರೇಕ್ ಯಾವುದು ತಿಳ್ಕೊಳೋ ಅಂಥಾ!

ಸರಿ ಸಹಕಾರನಗರದಿಂದ ಇಲೆಕ್ಟ್ರಾನಿಕ್ಸ್ ಸಿಟಿ ಕಡೆಗೆ ಶುರುವಾಯಿತು ನಮ್ಮ ಬೈಕ್ ಯಾತ್ರೆ.. ಇಬ್ಬರು ನಗುತ್ತಾ ನಗುತ್ತಾ ಅನಿಲ್ ಕುಂಬ್ಳೆ ವೃತ್ತದ ತನಕ ಬಂದೆವು.. ಅದು ಇದು ಮಾತಾಡುತ್ತಾ ಒಬ್ಬರಿಗೊಬ್ಬರು ರೇಗಿಸಿಕೊಳ್ಳುತ್ತಾ ಬರುತ್ತಿದ್ದೆವು.. ಕೆಂಪು ದೀಪ ನಮ್ಮ ನಾಗಾಲೋಟಕ್ಕೆ ತಡೆಯೊಡ್ಡಿತು..

ಸುಂದರ ಸ್ಪುರದ್ರೂಪಿ ನಮ್ಮ ವೆಂಕಿ.. ಅಚಾನಕ್ ಅವನ ಆಫೀಸಿನ ಬಸ್ ಕಾಣಿಸಿತು.. ಅಥವಾ ಬಸ್ಸಿನ ಕಿಟಕಿಯೊಳಗಿಂದ !@@@@@ ಕಾಣಿಸಿರಬೇಕು.. "ಶ್ರೀಕಿ ನಾನು ಬಸ್ಸಿನಲ್ಲಿ ಹೋಗುತ್ತೇನೆ.. ಸಂಜೆ ಸಿಗೋಣ" ಎಂದು ಹೇಳಿ ಆನ್ ನಲ್ಲೆ ಇದ್ದ ಬೈಕನ್ನು ಬಿಟ್ಟು ಬಸ್ ಹತ್ತೇ ಬಿಟ್ಟಾ.. ಕೆಂಪಿನಿಂದ ಹಸಿರು ಬಣ್ಣಕ್ಕೆ ಸಿಗ್ನಲ್ ಲೈಟ್ ತಿರುಗಿತು.. ಹಸಿರು ಬಣ್ಣ ನೋಡಿದ ನಾನು ಯಮನನ್ನು ನೋಡಿದ ಮಾರ್ಕಂಡೇಯನ ಹಾಗೆ ಆಗಿ ಬಿಟ್ಟಿತು ನನ್ನ (ಸುಂದರ) ಮುಖ..

ಹಿಂದೆಯಿಂದ ಹಾರನ್ ಗಳ ಸುರಿಮಳೆ.. ಕಷ್ಟ ಪಟ್ಟು ಮೊದಲ ಗೇರ್ ಗೆ ಹಾಕಿ ಟ್ರಿನಿಟಿ ಸರ್ಕಲ್ ತನಕ ಹಾಗೆ ಹೋದೆ.. ನನ್ನ ಅಕ್ಕ ಪಕ್ಕ ಬರುತ್ತಿದ್ದವರು ನನ್ನನ್ನು ಪ್ರಾಣಿಯೆನ್ನುವಂತೆ ನೋಡುತ್ತಿದ್ದರು.. ಹಾಗು ಹೀಗೂ ಟ್ರಿನಿಟಿ ಸರ್ಕಲ್ ಹತ್ತಿರ ಬಂದಾಗ ಧೈರ್ಯ ಮಾಡಿ ಸೆಕೆಂಡ್ ಗೇರ್ ಗೆ ಹಾಕಿದೆ.. ಎಲ್ಲರಿಗೂ ಗೊತ್ತಿರುವಂತೆ ಯಮಹ ಸದ್ದನ್ನು ನಿಲ್ಲಿಸಿಯೇ ಬಿಟ್ಟಿತು.. ಮುಂದೆ ಎರಡು ನಿಮಿಷ ಯಮ ಸಾಹಸಮಾಡಿದರೂ ಸ್ಟಾರ್ಟ್ ಆಗ್ತಾ ಇತ್ತೇ ಹೊರತು ಮುಂದಕ್ಕೆ ಹೋಗುತ್ತಿರಲಿಲ್ಲ.. ಕಾರಣ ನಿಮಗೆ ಗೊತ್ತೇ ಇದೆ ಗೇರ್ ನಲ್ಲಿ ಇತ್ತು.. ಕ್ಲಚ್ ಉಪಯೋಗ ಸರಿಯಾಗಿ ಗೊತ್ತಿರಲಿಲ್ಲ..  ಯಮಹ ಹರಯಕ್ಕೆ ಬಂದ ಜಿಂಕೆಯಂತೆ ನೆಗೆಯುತ್ತಿತ್ತು..

ಹಿಂದೆ ಆಟೋರಿಕ್ಷದಲ್ಲಿ ಸುಂದರ ಮೂರು ಕಾಲೇಜು ತರುಣಿಯರು.. ಮುಸಿ ಮುಸಿ ನಗುತ್ತಿದ್ದರು ನನ್ನ ಪಾಡು ನೋಡಿ.. ಅವರು ನಗುತ್ತಿದ್ದನ್ನು ನೋಡಿ ರಿಕ್ಷಾ ಚಾಲಕನಿಗೆ ಸ್ಫೂರ್ತಿ ಸಿಕ್ಕಿತು.. "ನೋಡಿ ಮೇಡಂ ಯಾರನ್ನೋ ಮೆಚ್ಚಿಸಲು ಯಾರದ್ದೋ ಬೈಕ್ ತಂದು ಬಿಡ್ತಾರೆ ಓಡಿಸೋಕೆ ಬರೋಲ್ಲ.. ಮಂಗ ಮುಂಡೇವು.. ಲೋ ಗುರು.. ಮೊದಲು ನ್ಯೂಟ್ರಲ್ ಗೇರ್ ಗೆ ತಂದು ಸ್ಟಾರ್ಟ್ ಮಾಡು ನಿಧಾನವಾಗಿ ಕ್ಲಚ್ ಬಿಡು.. ಇಲ್ಲಾ ಅಂದ್ರೆ ಇವತ್ತೆಲ್ಲ ಬಸವನಹುಳುವಿನ ತರಹ ಇಂಚು ಇಂಚು ಮುಂದಕ್ಕೆ ಹೋಗ್ತೀಯ ಅಂದಾ..ಆಟೋದಲ್ಲಿ ನಗುವಿನ ತರಂಗಗಳು.. ಬೆಂಗಳೂರು ಡಿಸೆಂಬರ್ ನಲ್ಲೂ ಮಳೆಯನ್ನು ತರಿಸುವ ಸುಂದರ ತಾಣ.. ಈ ಘಟನೆ ಫೆಬ್ರುವರಿ ಮತ್ತು ಮಾರ್ಚ್ ೨೦೦೩ ನಡುವೆ ನಡೆದದ್ದು.. ಆ ಸಮಯದಲ್ಲೂ ನನ್ನ ಮೈ ಮನಸ್ಸು ಒದ್ದೆ ಮಯ..

ಕಷ್ಟ ಪಟ್ಟು.. ಹೇಗೋ ಮೊದಲ ಅಥವಾ ಎರಡನೇ ಗೇರ್ ನಲ್ಲಿ ಹಾಗೂ ಹೀಗೂ ಹೊಸೂರು ರಸ್ತೆಗೆ ಬಂದೆ.. ಅಷ್ಟು ಹೊತ್ತಿಗೆ ಕ್ಲಚ್ ಮಂಗಾಟ ಅರ್ಥವಾಗಿತ್ತು.. ನನ್ನ ಮೊದಲ ಬೈಕ್ ಪಯಣ ಮೈ ಮನಸ್ಸನ್ನು ಒದ್ದೆ ಮಾಡಿದ್ದರೂ ನಂತರದ ಮೂರು ದಿನಗಳಲ್ಲಿ ಶಶಿಯ ಪ್ರೀತಿಯ ಬೈಕ್ ನನಗೆ ಸರಿಯಾಗಿ ಬೈಕ್ ಓಡಿಸಲು ಕಲಿಸಿಯೇ ಬಿಟ್ಟಿತು..

ಇಂದು ಆ ಬೈಕ್ ಗೆ ರಜತ ಮಹೋತ್ಸವ.. ಬೆಂಗಳೂರಿನ ಮೊದಲ ಮಾಲ್ ಸಂಸ್ಕೃತಿ ಬಿತ್ತಲು ಆರಂಭ ಎನ್ನಬಹುದಾದ  (ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನಂತರ) ಅಲಂಕಾರ್ ಪ್ಲಾಜಾದಲ್ಲಿ ಉಡುಗೊರೆಯಾಗಿ ಸಿಕ್ಕಿದ ಈ ಸುಂದರ ರಜತ ಮಹೋತ್ಸವದ ಗೆಳೆಯನಿಗೆ ಶುಭಾಶಯಗಳನ್ನು ಕೋರುವುದು ನಮ್ಮೆಲ್ಲರ ಕರ್ತವ್ಯ. ನಾನು ವೆಂಕಿ ಬೈಕ್ ಓಡಿಸಲು ಕಲಿತಿದ್ದೆ ಈ ಬೈಕ್ ನಲ್ಲಿ.. ಜೊತೆಯಲ್ಲಿ ಇಂದಿಗೂ ಸುಸ್ಥಿಯಲ್ಲಿ ಇರುವ ಹಾಗು ಅಷ್ಟೇ ಆಸ್ತೆಯಿಂದ ನೋಡಿಕೊಳ್ಳುತ್ತಿರುವ ಅದರ ಸರದಾರ ಶಶಿಗೂ ಕೂಡ ಅಭಿನಂದನೆಗಳು..

ಜೊತೆಯಲ್ಲಿ ಶಶಿಗೆ ನೆರಳಾಗಿ. ಬಾಳ ಸಂಗಾತಿಯಾಗಿ ಹೆಜ್ಜೆ ಹಾಕುತ್ತಿರುವ ನಮ್ಮೆಲ್ಲರ ಪ್ರೀತಿಯ ಅಕ್ಕ "ಪ್ರತಿಭಾ" ಇವರಿಬ್ಬರ ವೈವಾಹಿಕ ನಂಟಿಗೆ ಹದಿನೈದರ ಹರೆಯ.. ಸುಮಧುರ ಗೆಳೆತನ ನಮ್ಮೆಲ್ಲರದು.. ಒಂದು ಕಾಲದಲ್ಲಿ ನಡೆದಾಡಿಕೊಂಡು ಒಬ್ಬರನ್ನು ಒಬ್ಬರು ಭೇಟಿ ಮಾಡುತ್ತಿದ್ದೆವು.. ನಂತರ ಸೈಕಲ್ ಸಿಕ್ಕಿತ್ತು.. ಆಮೇಲೆ ಮೋಟಾರ್ ಸೈಕಲ್.. ಈಗ ಕಾರಲ್ಲಿ ಓಡಾಡುವ ಶಕ್ತಿ ಇದ್ದರೂ ನಮ್ಮೆಲ್ಲರ ಗೆಳೆತನದಲ್ಲಿ ಸಂತಸ ತುಂಬಿ ಹರಿಯುತ್ತಿದೆ..

ಸೂಪರ್ ಗೆಳೆಯ ಮೃಧು ಭಾಷಿ, ಸುರ ಸುಂದರ ಶಶಿ  ಮತ್ತು  ಪತಿಯ ಸ್ನೇಹಿತರನ್ನು ತಮ್ಮಂದಿರಂತೆ ಅಣ್ಣಂದಿರಂತೆ ಅಕ್ಕರೆಯಿಂದ ಕಾಣುವ ನಮ್ಮೆಲ್ಲರ ಪ್ರೀತಿಯ ಅಕ್ಕ ಪ್ರತಿಭಾ ನಿಮಗೆ ಈ "ಗ್ರೇಟ್ BOD" ತಂಡದಿಂದ ವಿವಾಹ ವಾರ್ಷಿಕೋತ್ಸವದ ಸವಿ ನೆನಪುಗಳು.. ಪ್ರೀತಿ, ಪ್ರೇಮ, ಮಧುರ ನೆನಪುಗಳು ಇವಕ್ಕೆಲ್ಲ ಕಲಶ ಎನ್ನುವಂತೆ ನಮ್ಮ ಈ ಪುಟ್ಟ ತಂಡವನ್ನು ನಡೆಸುತ್ತಿರುವ ನಮ್ಮೆಲ್ಲರ ಅಚ್ಚು ಮೆಚ್ಚಿನ ಶಶಿ ಪ್ರತಿಭಾ ಅವರಿಗೆ ನಮ್ಮೆಲ್ಲರ ಆಭಿನಂದನೆಗಳು.. ನೂರ್ಕಾಲ ಹೀಗೆ ನಸು ನಗುತ್ತಾ ಇರಿ.. ಜೊತೆಯಲ್ಲಿ ರಜತ ಮಹೋತ್ಸವದ ಸಂತಸದಲ್ಲಿ ತೇಲುತ್ತಿರುವ ನಿಮ್ಮಿಬ್ಬರ ಸಂಗಾತಿಗೂ ಕೂಡ ಶುಭವಾಗಲಿ..

ಈ ಬೈಕ್ ನ ಇಪ್ಪತ್ತೈದು ವರ್ಷಗಳ ಒಂದು ಪಕ್ಷಿನೋಟ ನಿಮಗಾಗಿ.. ನಮ್ಮೆಲ್ಲರಿಗಾಗಿ!!!

ಅಣ್ಣ ತಮ್ಮ ಮನೆಗೆ ಬಂದ ಸಂತಸದ ಉಡುಗೊರೆಯ ಜೊತೆಯಲ್ಲಿ  -
 ಶಶಿ ಮತ್ತು ವಿಶ್ವ
(ಚಿತ್ರಕೃಪೆ - ಶಶಿ) 

ದಂಪತಿಗಳು ಎನ್ನುವ ಪದಕ್ಕೆ ಒಂದು ಉತ್ತಮ ಉದಾಹರಣೆ -
ಶಶಿ ಮತ್ತು ಪ್ರತಿಭಾ
(ಚಿತ್ರಕೃಪೆ - ಶಶಿ) 
ನಗುಮೊಗದ ಸರದಾರ ನಮ್ಮ ಶಶಿ
(ಚಿತ್ರಕೃಪೆ - ಶಶಿ) 
ಮುದ್ದು ಪುಟಾಣಿ ಶಶಿ ಪ್ರತಿಭಾ ಅವರ ಮೊದಲ "ಪ್ರತಿ"- ಸಾತ್ವಿಕ್
(ಚಿತ್ರ ಕೃಪೆ ಶಶಿ)

ಅಪ್ಪ ಎಂದರೆ ಹೀಗೆ ಇರಬೇಕು - ನಮ್ಮೆಲ್ಲರ ಮಾರ್ಗದರ್ಶಿ ಶಶಿಯ ತಂದೆ
(ಚಿತ್ರಕೃಪೆ - ಶಶಿ)  

ರಜತ ಮಹೋತ್ಸವದ ಸಂಗಾತಿಯ ಜೊತೆಯಲ್ಲಿ ಶಶಿ (ಚಿತ್ರಕೃಪೆ - ಶಶಿ) 
ನಾ ಓಡಿಸಲು ಕಲಿತ ಬೈಕ್ ಮೇಲೆ ನನ್ನ ಸ್ನೇಹಿತೆ - ಶೀತಲ್ 

(ಈ ಲೇಖನ ನಮ್ಮ ಗೆಳೆತನ ಇಪ್ಪತೆಂಟು ವಸಂತಗಳನ್ನು ಕಂಡ ಸವಿನೆನಪಿಗೆ ಈ ವರ್ಷಗಳಲ್ಲಿ ನಮ್ಮ ಜೊತೆಯಲ್ಲಿ ನಡೆದ ಸವಿ ಘಟನೆಗಳನ್ನು ದಾಖಲಿಸುವ ಒಂದು ಪುಟ್ಟ ಪ್ರಯತ್ನ)  

Wednesday, November 27, 2013

ನಗುವಿನಲ್ಲಿ ಸ್ವಾತಂತ್ರ್ಯ......!

ಭಕ್ತ ಕುಂಬಾರ ಚಿತ್ರದ ಚಿತ್ರೀಕರಣ ನಡೆಯುತ್ತಲಿತ್ತು.. ರಾಜಶಂಕರ್ ಎನ್ನುವ ಕಲಾವಿದ ಭಕ್ತ ನಾಮದೇವರ ಪಾತ್ರದಲ್ಲಿ ಅಭಿನಯಿಸುತ್ತಿದ್ದರು.. ಆಗ ಒಂದು ಸಂಭಾಷಣೆ ಹೇಳಬೇಕಿತ್ತು..

"ನನ್ನ ಅಜ್ಞಾನಕ್ಕೆ ದಿಕ್ಕಾರವಿರಲಿ.. ಅಹಂಕಾರ ತುಂಬಿ ಬರಿದಾಗಿರುವ ನನ್ನ ತಲೆಯೇ ಶಿವನಿಲ್ಲದ ಸ್ಥಳ... ಗುರುಗಳೇ ನನ್ನ ಮಹಾಪರಾಧವನ್ನು ಮನ್ನಿಸಿ.. " ಎಂದು ಹೇಳಬೇಕಿತ್ತು..

ಸುಮಾರು ಟೇಕ್ ಗಳು ಆದವು.. ಆ ಸನ್ನಿವೇಶ ಅದ್ಭುತವಾಗಿ ಚಿತ್ರದಲ್ಲಿ ಮೂಡಿಬಂದಿತ್ತು...

ಆ ಚಲನಚಿತ್ರ ನೋಡುತ್ತಾ ಕುಳಿತಿದ್ದೆ.. ಅರೆ ಹೌದಲ್ವ ನನಗೂ ಅದೇ ಅನುಭವವಾಗುತ್ತಿದೆ.. ಅಲ್ಲವೇ..

ಕರಿಘಟ್ಟ ಎಂಬ ಮಹೋನ್ನತ ಸ್ಥಳಕ್ಕೆ ಬ್ಲಾಗಿಗರ ಒಂದು ತಂಡ ದೊಡ್ಡ ಬಸ್ಸಿನಲ್ಲಿ ಹೋಗುತ್ತಿತ್ತು.. ಬನಶಂಕರಿ ಹತ್ತಿರ ಈ ಕಾರ್ಯಕ್ರಮದ ರೂವಾರಿ ಪ್ರಕಾಶಣ್ಣ ಮತ್ತು ಕೆಲ ಸ್ನೇಹಿತರು ಹತ್ತಿದರು.. ಯಾರ ಪರಿಚಯವು ಇಲ್ಲದ ನಾನು ಕಾಗೆ ಗೂಡಿನಲ್ಲಿ ಕೂತ ಕೋಗಿಲೆಯ ತರಹ ಅತ್ತಿತ್ತ ನೋಡುತ್ತಲಿದೆ..

"ಶ್ರೀಕಾಂತ್ ಮಂಜುನಾಥ್.. ನಮಸ್ಕಾರ" ಎಂಬ ಧ್ವನಿ ಕೇಳಿದಾಗ ನನಗೆ ಆಶ್ಚರ್ಯ... ಅಲ್ಲಿದ್ದ ಸಹ ಬ್ಲಾಗಿಗರಲ್ಲಿ ಪರಿಚಯ ಅನ್ನುವ ಪದ ನನಗೆ ಹೊಳೆದದ್ದು ಕೆಅವಲ ಪ್ರಕಾಶಣ್ಣನನ್ನು ನೋಡಿದಾಗ  ಮಾತ್ರ.. ಅವರನ್ನು ಬಿಟ್ಟರೆ ಮಿಕ್ಕೆಲ್ಲರೂ ಮುಖ ಪರಿಚಯ ಇಲ್ಲದ ಸಹೃದಯ ಸ್ನೇಹಿತರು... ಆದರೆ ಕೆಲವೆ ನಿಮಿಷಗಳಲ್ಲಿ ಆ "ಅಪರಿಚಿತ" ಎನ್ನುವ ಪದದಿಂದ "ಅ" ಅನ್ನುವ ಅಕ್ಷರ ನನಗೆ ಗೊತ್ತಿಲದೇ ಬಸ್ಸಿಂದ ಇಳಿದು ಹೋಯ್ತು.. :-)

ನಾಮದೇವ ಪಾತ್ರಧಾರಿ ಹೇಳಿದಂತೆ ಏನೋ ಒಂದು ರೀತಿಯ ವಿಚಿತ್ರ ಅಹಂ ಎನ್ನುವ ಭಾವ ನನ್ನಲ್ಲಿ ಇಣುಕುತಿತ್ತು.. ಅದು ಭುವಿಯೊಳಗೆ ಸೇರಿ ಹೋದದ್ದು ಒಂದು ವಿಶಿಷ್ಟ ಪ್ರತಿಭೆಯನ್ನು ಭೇಟಿ ಮಾಡಿ ಮಾತಾಡಿಸಿದಾಗ.. .. ಎಲ್ಲರೊಳು ಒಂದಾಗು ಆವಾಗ ನೀನು ಎನ್ನುವ ಭಾವ ಹೋಗಿ ನಾವೆಲ್ಲಾ ಅನ್ನುವ ಮನೋಭಾವ ಬರುತ್ತದೆ ಎನ್ನುವ ತತ್ವ ಅರಿವಾದ ರಸಮಯ ಘಳಿಗೆ ಅದು..

ಇವರ ಬಗ್ಗೆ ಏನಾದರು ಬರೆಯೋಣ ಅಂದರೆ ಪದಾರ್ಥವೇ ಚಿಂತಾ"ಮಣಿ"ಯಾಗಿಬಿಡುತ್ತದೆ..
ಹಾಸ್ಯ ಬರೆಯೋಣ ಅಂದ್ರೆ "ಬಾಟಮ್ ಪಂಚ್" ನನ್ನನ್ನು ಪಂಚ್ ಮಾಡಲು ಓಡಿ ಬರುತ್ತದೆ...
ಕವಿತೆ ಕಟ್ಟೋಣ ಅಂದ್ರೆ "ಹಾಯ್ಕು ಕಾಯ್ಕು" ಎನ್ನುತ್ತಾ ನನ್ನತ್ತಲೇ ಹಾಯಲು ನುಗ್ಗುತ್ತದೆ..
ಸುಂದರ ಹಾಡು ಹಾಡೋಣ ಅಂದ್ರೆ "ಕರೋಕೆ" ಹಾಗೆ ತೇಲಿ ಬಂದು ಕಿವಿಗೆ ಅಪ್ಪಳಿಸುತ್ತದೆ..
ಹೋಗಲಿ ಬಿಡಿ.. ಹಾಗೆ ಕೆರೆ ಕಟ್ಟೆ ಭಾವಿಯ "ಜಲನಯನ"ದಲ್ಲಿ ನಮ್ಮ ಮುಖ ನೋಡಿಕೊಳ್ಳೋಣ ಅಂದ್ರೆ  ಅಲ್ಲಿರುವ ಮೀನುಗಳೆಲ್ಲ ಮುಸಿ ಮುಸಿ ನಗುತ್ತದೆ
ತರಕಾರಿ ಸೇರಿಸಿ ಚಿತ್ರಾನ್ನ ಮಾಡೋಣ ಅಂತ ಅಡಿಗೆ ಮನೆಗೆ ನುಗ್ಗಿದರೆ.. "ಬಟಾಣಿ ಚಿಕ್ಕಿ" ಚಿಕ್ಕಿ ಬಂದ ಚಿಕ್ಕಿ ಬಂದ  ಅಂತ ಕಿಸಿ ಕಿಸಿ ಎನ್ನುತ್ತದೆ..
ಇವರೆಲ್ಲ ಗುಂಡ ಹೇಳಿದಾ ಮಾತನ್ನು ಕೇಳಿ ಬಿ. ಬಿ. ನ..(ಬಿದ್ದು ಬಿದ್ದು ನಗುವಾಗ) ನಾ ಏನು ಬರೆದರೂ ಅದು ಸರಿ ಹೋಗದು ಅಲ್ಲವೇ!!!

ಬಂಗಾರದ ಮನುಷ್ಯದ  "ನಗು ನಗುತಾ ನಲಿ ನಲಿ ಏನೇ ಆಗಲಿ" ಎಂಬ ಹಾಡಿನಂತೆ ತಾನೂ ನಕ್ಕು, ಇತರರನ್ನು ನಗಿಸಿ, ಸದಾ ನಸು ನಗುತ್ತಾ ಇರುವ ಒಂದು ಸುಂದರ ಮನಸ್ಸು ನಮ್ಮ ಆಜಾದ್ ಸರ್ ಅವರದು..

ನನ್ನ ಹೆಸರಿನ ಬಗ್ಗೆ ನನಗೆ ವಿಪರೀತ ವ್ಯಾಮೋಹ.. ಅದನ್ನು ಇನ್ನಷ್ಟು ಮೋಹಿಸುವಂತೆ "ಶ್ರೀಮಾನ್" ಎನ್ನುವ ಸುಂದರ ನಾಮಕರಣ ಮಾಡಿದ ಸಹೃದಯ ಗೆಳೆಯ ನಮ್ಮ ಆಜಾದ್ ಸರ್.. ಒಬ್ಬ ವ್ಯಕ್ತಿಯಲ್ಲಿ ಎಷ್ಟು ನಗು ಕಾಣಬಹದು, ಎಷ್ಟು ಪ್ರೋತ್ಸಾಹಕ ನುಡಿಮುತ್ತುಗಳನ್ನು ಕಾಣಬಹುದು ಅದರ ಅನ್ವರ್ಥಕ ಹೆಸರೇ ಆಜಾದ್ ಸರ್...   ಅವರಿಂದ ಕಲಿತ ಅನೇಕ ಪಾಠಗಳಲ್ಲಿ ಅನೇಕ ನಗೆ ಪ್ರಕಾರವೂ ಒಂದು...

ನಗೆಗೂ ಹಲವಾರು ಆಯಾಮಗಳು ಇರುತ್ತವೆ.. ಹೀಗೂ ನಗಿಸಬಹುದು ಎನ್ನುವ ಒಂದು ಸೂತ್ರವನ್ನು ಕಲಿತ ಆ ಕ್ಷಣ ಅತಿ ಸುಂದರವೆನಿಸಿತು.. ನಿಮಗೂ ನೋಡಬೇಕು ಅನಿಸುತ್ತಿದೆಯೇ .. ಅರೆ ಅದಕ್ಯಾಕೆ ತಡ.. ನಡೆಯಿರಿ ನಗುವಿನ ಹಲವಾರು ಸೂತ್ರಗಳನ್ನು ಕಂಡು ಬರೋಣ... ಹಾಗೆಯೇ ಬಹುಮುಖ ಪ್ರತಿಭೆಯ ಒಂದು ಸುಂದರ ಅನಾವರಣವನ್ನು ಕಂಡು ಬರೋಣ ...!

ಜಲ ನಯನ.. ಕ್ಯಾಮೇರಾ ನಯನದಲ್ಲಿ ಸೆರೆಯಾದಾಗ!!!
 ( ಚಿತ್ರ ಕೃಪೆ - ನಿಮ್ಮೊಳಗೊಬ್ಬ ಬಾಲು)

ನಾ ಭವಿಷ್ಯ ಹೇಳೋಣ ಅಂತ ಬಂದ್ರೆ.. .ನನಗೆ ಜಾಕ್ ಹಾಕ್ತಾ ಇದ್ದೀರಾ
 (ಚಿತ್ರ ಕೃಪೆ - ಅಜಾದ್ ಸರ್)
ನಾ ಹೇಳೋದು ಒಸಿ ಕೇಳು ಚಂದ್ರಗುಪ್ತ - ಚಿತ್ರ ಕೃಪೆ ಅಜಾದ್ ಸರ್ 
ಕನ್ನಡದಲ್ಲಿ ಕೂಡ ಚಿತ್ರ ತೆಗೆಸಿಕೊಳ್ಳುವ ಚಾಣಕ್ಯ -
(ಚಿತ್ರಕೃಪೆ ಪ್ರದೀಪ್ ರಾವ್) 
ಬನ್ನಿ ಕನ್ನಡ ಬೇಡ ಎಂದವರಿಗೆ ಹಾಕೋಣ ಗಾಳಿ!!!
 (ಚಿತ್ರಕೃಪೆ - ಅಜಾದ್ ಸರ್)

ಎರಡು ಪ್ರತಿಭೆಗಳು.. ಅಜಾದ್ ಸರ್  ಮತ್ತು (ಜ್ಯೂ) ಅಣ್ಣಾವ್ರು
(ಚಿತ್ರಕೃಪೆ - ಅಜಾದ್ ಸರ್ )
ನೋಡ್ರಿ ಇವರು ಅಜಾದ್ ಅಂತೆ.. ನನಗಿಂತ ದಪ್ಪ ಮೀಸೆ..
ಇವರ ಬಾಯಿಗೆ ಅಜಾದಿನೇ ಇಲ್ಲಾ
 ಮೀಸೆಯೇ ತುಂಬಿ ಬಿಟ್ಟಿದೆ!!!
(ಚಿತ್ರ ಕೃಪೆ - ಆಜಾದ್ ಸರ್)

ಏನೂ ನನ್ನ ಹುಟ್ಟು ಹಬ್ಬಕ್ಕೆ ಬ್ಲಾಗ ಬಂತಾ  ಹೌದಾ.. !!!
(ಚಿತ್ರಕೃಪೆ ಅಜಾದ್ ಸರ್ )

ಶ್ರೀಮಾನ್ ಮತ್ತೆ ನನ್ನನ್ನು ಗೋಳು ಹುಯ್ದು ಕೊಳ್ಳಲು ಬಂದ್ರಾ !!!
ಇರಲಿ ಹುಟ್ಟು ಹಬ್ಬ ಮುಗೀಲಿ ಆಮೇಲಿದೆ ನಿಮಗೆ ...:-)
 (ಚಿತ್ರಕೃಪೆ - ಅಜಾದ್ ಸರ್)
ಶ್ರೀಮಾನ್ ಏನೇನೋ ಬರೆಯಲು ಹೋಗಬೇಡಿ (ಕೃಪೆ - ಅಜಾದ್  ಸರ್ )

ರಾತಿ ಹನ್ನೆರಡಕ್ಕೆ ನನಗೆ ವಿಶ್ ಮಾಡಿದ್ರ ...
ಹೌದಾ.. ಇದು ಸೂಪರ್ ಆಲ್ವಾ!!!

ನಿಮ್ಮೆಲ್ಲರ ಪ್ರೀತಿ ವಿಶ್ವಾಸಗಳನ್ನು ಕಂಡ ಮನಸ್ಸು ಹೀಗೆ
ಕುಣಿಯೋಣ ಅನ್ಸುತ್ತೆ ಅಂದ್ರು ಆಜಾದ್ ಸರ್
(ಚಿತ್ರ ಕೃಪೆ - ನಿಮ್ಮೊಳಗೊಬ್ಬ ಬಾಲು)
ಇಂದು ಅವರ ಹುಟ್ಟು ಹಬ್ಬ.. ಇಂತಹ ಒಂದು ಸುಂದರ ಮನಸ್ಸನ್ನು ಭುವಿಗೆ ತಂದ ಆ ಮಹಾನ್ ಮಾತಾ ಪಿತೃಗಳಿಗೆ ವಂದಿಸುತ್ತಾ.. ಹಾಗೆಯೇ ಅವರ ಮನದನ್ನೆ ಮತ್ತು ದೇವರು ಕೊಟ್ಟ ವರ ಮಗಳು ಇವರ ತುಂಬು ಸಂಸಾರದಲ್ಲಿ ನಗೆ, ಸಂತಸ, ಶಾಂತಿ, ನೆಮ್ಮದಿ ಸದಾ ತುಂಬಿ ತುಳುಕುತ್ತಿರಲಿ ಎಂದು ಆಶಿಸುತ್ತಾ ಸಮಸ್ತ ಬ್ಲಾಗ್, ಫೇಸ್ ಬುಕ್ ಹಾಗೂ ಅದರ ಅನೇಕ ಹೆಸರಿಸಲಾಗದ ತಂಡಗಳ ಸದಸ್ಯರ ಪರವಾಗಿ ಅಜಾದ್ ಸರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.. !!!

Thursday, October 24, 2013

Ha Ha Ha....Fine Plotter!

It is not the usual Bengalooru..even though every platform of bus stand, raliway station, airport was brimming with people from around the globe, but there was no chaos.  

They were at their best, and no high decibel noise, no cheering or screaming. Every one who were supervising the junction were held back by surprise, what is this whats happening....

The policing force went in to the crowd, but they could not find one incident or situation where the noise would have reached the roof...

The supreme commander of the policing battalion went past a character in full length black suit, with flowing hairs, with a trade mark smile which just made him to stop and say hello to that character. 

"Hello..."

"Hello Sir"

"Whats happening here, am getting a information from all the hubs that, there are oceans of crowd, but all are at their best... neither they are disturbing the ambiance, nor their fellow passengers, all are glued to their seats, and looking at their wrist watch, and smiling at it again. I found you are a kind of person who appears to be leading them all in... would like to know, if you don't mind!

"Hello sir, you are a observer par excellence, with due to respect to your analysis, and also the worried highway track lines on your forehead, I can gauge that you are not able to digest this peace and calm crowds"

"Yes yes madam..each moment passing, am feeling more and more restless...!"

"ha ha ha ha....Ok...I will free you from that..wait wait...another few more seconds..."

"few more seconds for what...?"

"there it goes, 10, 9, 8,7,6,5,4,3,2,1.............................common..." 

There went a big big screaming...."Happy Birthday to you...Happy Birthday to you, Happy birthday to Nivedita Chirantan...Happy Birthday to you!"

and it went for exactly 5 minutes....people got in to Busses, Flights, and Trains and with a calm and happy faces, all got in to their respective libraries across the world in no time......and slowly slipped in to the books from where they evolved....!

The police officer could not believe his eyes, just rubbing his eyes, pinching himself, and with a astonished look he turned around, the nightingale voice came near by and said..

"hello sir...let me clarify you, today is 31st birthday of a writer who gave birth to all of us with a world class script..her name is Nivedita Chirantan, she made ourselves very proud that, we came in to existence in this world only because of her...So to wish our originator, all the character she plotted in the stories came out from the respective book shelves from across the globe, and wished her, and left to their places....and the silence factor, the character our mam depicts in the stories were never loud, they are emotion filled, and affection balanced,  who always stays calm irrespective of the situation they are in..and that is the reason there was no chaos neither in their head nor in their heart!!!"

"oh oh oh...what a magical moment in my life..characters from the book coming out and wishing and going back...this is truly marvelous.....mam..may i know your name...and if you have time..can we sip a tea at the tea shop in this chilled wee hours.. i know you are expecting a bus which will take few more minutes to come"

"Yes sir...why not..i love to have tea in this chilled morning, and that too from that tea shop which is my favourite place..."

"lets walk madam..."

after sipping hot hot tea in an eerie silence...police officer broke the silence

"by the way...whats your name.....and where you are heading too..when you are coming back to this tea stall again..."

"Am Arpita...am going to Vijaynanagar to meet my fan..and am coming back to this shop on 2nd March 2013 at exactly 5.45AM"

"Have a good take care of yourself madam..and also convey my wishes to Nivedita Madam"

Arpita gave a heart pounding smile at him!

Even though the wind was its chilling best..the police officer....was happy that he met a finest character ever plotted on this earth!

"Happy Birthday to you..Happy Birthday to You...Happy Birthday to you Nivedita Chirantan .Happy Birthday to you...I salute to a great writer who just makes us to give a standing ovation every time you comes with a telling story filled with assurance, re-assurance and insurance"

Happy Birthday!     

Sunday, August 4, 2013

ಗೆಳೆತನದ ಅಯಸ್ಕಾಂತ!

ಬೆಳಿಗ್ಗೆ ಎದ್ದೆ.. ದೂರದರ್ಶನ ನೋಡೋಕೆ ಬೇಸರವಾಯ್ತು.. ನನ್ನ ಮೆಚ್ಚಿನ ರೇಡಿಯೋ ಹಾಕಿದೆ 

ಟೈಗರ್ ಪ್ರಭಾಕರ್ ಪ್ರೀತಿ ವಾತ್ಸಲ್ಯ ಚಿತ್ರದಲ್ಲಿ  "ಸ್ನೇಹಿತರೆ ನಿಮಗೆ ಸ್ವಾಗತ.. ನನ್ನದೆಯ ಪ್ರೀತಿ ಸ್ವಾಗತ ಎಂದೆಂದೂ ನೆನಪಿರಲಿ ಈ ಸುದಿನ" ಹಾಡು ಬಿತ್ತರಗೊಳ್ಳುತ್ತಿತ್ತು. 

ಕಣ್ಣುಜ್ಜಿ "ಕರಾಗ್ರೆ..... "  ಹೇಳಿಕೊಂಡು ಎದ್ದೆ.. .. 

ಪಕ್ಕದಲ್ಲಿ ನನ್ನ ಸ್ನೇಹಿತೆ (ಮಗಳು) "ಅಪ್ಪ ಫ್ರೆಂಡ್ ಶಿಪ್ ಡೇ"  ಹೇಳಿದ್ಲು!

ರೇಡಿಯೋ ಹಾಡು ಬದಲಾಯಿತು " ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ಕೆನ್ನೆಗೆ ಗಲ್ಲಕೆ ಮತ್ತೊಂದು ಕಂದ ಕೊಡುವೆಯ"

ಆಹಾ ಸ್ನೇಹಕ್ಕೆ ವಯಸ್ಸು ಇಲ್ಲ .. ಆದ್ರೆ ಆಯಸ್ಸು ಜಾಸ್ತಿ.. !

ಮುಖ ಪುಸ್ತಕಕ್ಕೆ ಭೇಟಿ ನೀಡೋಣ ಅಂತ ಕಂಪ್ಯೂಟರ್ ಹೊಕ್ಕೆ... ಆಗಲೇ ನೂರಾರು ಸಂದೇಶಗಳು ಕಿಟಕಿಯ ಆಚೆ ಧುಮುಕುತಿತ್ತು. ನನ್ನ  ಎರಡನೇ ಮಗಳಿಂದ ಮೊಬೈಲ್ ಗೆ ಸಂದೇಶ ಕೂಡ ಬಂದಿತ್ತು. 

ಸ್ನೇಹಕ್ಕೆ ಹಾತೊರೆಯುವ ನನ್ನ ಮನಸ್ಸು, ಒಂದು ಬ್ಲಾಗ್ ಲೋಕವನ್ನು ತೆರೆದಿಡಬೇಕು ಎನ್ನುವ ಆಸೆ ಬಂದದ್ದು ಸರಿ ಸುಮಾರು ಮೂರು ವರ್ಷಗಳ ಹಿಂದೆ. 

ಸ್ನೇಹದ ಅಮಲು ಶುರುವಾಗಿದ್ದು ಸುಮಾರು ನಾನು ಆರೇಳು ವರ್ಷದ ಹುಡುಗನಾಗಿದ್ದಾಗ.. ಶಿವಮೊಗ್ಗದಲ್ಲಿ ತುಮಕೂರು ಶ್ಯಾಮರಾವ್ ಬೀದಿಯಲ್ಲಿ ಇದ್ದ ನಮ್ಮ ಮನೆಯ ಪಕ್ಕದಲ್ಲಿ ರವೀಶ್ ಎಂಬ ಹುಡುಗನಿದ್ದ.. ಇಬ್ಬರು ಸ್ನೇಹಿತರಾಗಿದ್ದೆವು. ಬಾಲ ಮಂಗನ ಬುದ್ದಿ ಆಟದಲ್ಲಿ ಕಾರಣವಿಲ್ಲದೆ ಜಗಳವಾಡಿ ಮಾತು ಬಿಟ್ಟಿದ್ದೆವು. ಯಾಕೋ ಆ ಹುಡುಗ ತುಂಬಾ ಕಾಡುತಿದ್ದ. ಅಕ್ಕ ಪಕ್ಕದ ಮನೆಯಲ್ಲಿದ್ದರೂ ಕೆಲವು ವಾರಗಳು ಒಬ್ಬರ ಮುಖ ಇನ್ನೊಬ್ಬರು ನೋಡುತ್ತಿರಲಿಲ್ಲ. 

ಹೀಗೆ ಒಂದು ಭಾನುವಾರ.. ಅಂಗಳದಲ್ಲಿ ಆಟವಾಡುತ್ತಿದ್ದ.. ಸುಮ್ಮನೆ ನಾ ಅವನ ಮುಖ ನೋಡಿದೆ "ಹಾವಿನ ಹೆಡೆ ಚಿತ್ರಕ್ಕೆ ಹೋಗೋಣ ಕಣೋ" ಎಂದೇ.. ಅವನು ಆಕಾಶ  ಭೂಮಿ ನೋಡಿದ.. ಯಾರು ಮಾತಾಡಿದ್ದು ಅಂತ.. ನಾ ಮತ್ತೆ ಮಂಗನ ಹಾಗೆ ಹಲ್ಲು ಕಿರಿಯುತ್ತಾ "ಹೋಗೋಣ ಕಣೋ" ಅಂತ ಹೇಳಿದೆ 

ಅವನಿಗೂ ಏನು ಅನ್ನಿಸಿತೋ "ಸರಿ" ಅಂದ.. 

ಇಬ್ಬರೂ ಮನೆಯಿಂದ ಹಣ ಪಡೆದು "ಹಾವಿನ ಹೆಡೆ" ಸಿನೆಮಾಕೆ ಹೋದೆವು. (ಬಹುಶಃ ಅಣ್ಣಾವ್ರ ಚಿತ್ರಗಳ ಅಭಿಮಾನ ಶುರುವಾಗಿದ್ದು ಅಲ್ಲಿಂದಲೇ ಇರಬೇಕು). 

ನಂತರ ಶಿವಮೊಗ್ಗ ಬಿಟ್ಟು ಬೆಂಗಳೂರಿಗೆ  ಬರುವ ತನಕ ಸ್ನೇಹಿತರಾಗಿದ್ದೆವು.. ನಂತರ ಅವನೆಲ್ಲೋ ನಾನೆಲ್ಲೋ ಆದರೂ ಆ ಸ್ನೇಹದ ಸಂಕೋಲೆ ಇನ್ನೂ ನನ್ನ ಕಾಡುತ್ತದೆ... ಅದರ ನಂತರ ಅಸಂಖ್ಯಾತ ಗೆಳೆಯರು ಗೆಳತಿಯರು ಸಿಕ್ಕರೂ ಆ ಸ್ನೇಹದ ಸರಮಾಲೆಗೆ ಆ ರವೀಶನೇ ಮೊದಲ ಮಣಿ. ತುಂಬಾ ಒಳ್ಳೆಯ ಹಾಡುಗಾರನಾಗಿದ್ದ ಹಾಗೆಯೇ "ಶರಣೆಂಬೆನಾ ಶಶಿ ಶೇಖರ" ಹಾಡಿಗೆ ಉತ್ತಮ ನೃತ್ಯ ಕೂಡ ಮಾಡುತ್ತಿದ್ದ  

ಹೀಗೆ ಕಾಡುವ, ಪೀಡಿಸುವ ಸ್ನೇಹಲೋಕದ ಗಮ್ಮತ್ತು  ಎಪ್ಪತ್ತರ ದಶಕದ ಅಂತ್ಯದಲ್ಲಿ ಶುರುವಾಗಿದ್ದು ಬೆಳೆಯುತ್ತ ಹೋಯಿತು. 
ಎಂಭತ್ತರ ಆದಿಯಲ್ಲಿ ಪ್ರೌಡ ಶಾಲೆಯಲ್ಲಿ ಸಿಕ್ಕ ಗೆಳೆಯರು ಆಜೀವ ಗೆಳೆಯರಾಗಿಬಿಟ್ಟರು. "Great BOD's" ಅಂತಾನೆ ನಾಮಕರಣಗೊಂಡ ಆ ಗುಂಪಿನಲ್ಲಿ ನಾವು ಒಂದಾಗಿ ಬಾಳಲು ಶುರುಮಾಡಿದ್ದು ೨೯ ವರ್ಷಗಳಿಂದ. 

ಇದರ ಜೊತೆಯಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಸಿಕ್ಕ ಅನೇಕ ಉತ್ತಮ ಸ್ನೇಹಿತರು ಇನ್ನು ನನ್ನ ವರ್ತುಲದಲ್ಲಿಯೆ ಇದ್ದಾರೆ.. ಬರವಣಿಗೆ ಲೋಕಕ್ಕೆ ಇಳಿದಮೇಲೆ ಸಿಕ್ಕ ನಕ್ಷತ್ರಗಳು ಅಪಾರ. ಎಲ್ಲ ತಾರೆಗಳು ನಿಜಕ್ಕೂ ಮಿನುಗುವ ತಾರೆಗಳೇ ಅಂಥಹ ಪ್ರಚಂಡ ಪ್ರತಿಭಾ ನಕ್ಷತ್ರಗಳ ಮಧ್ಯೆ ನನ್ನ ಉಪಸ್ಥಿತಿಯು ಇರುವುದು ನನ್ನ ಭಾಗ್ಯ ಎನ್ನಬಹುದು. 

ಪ್ರವಾಸ, ಸಂಚಾರ ಕಾಡು ಮೇಡು ಅಲೆಯುವ ನನ್ನ ಹುಚ್ಚಾಟಕ್ಕೆ ಜೊತೆಯಾಗಿದ್ದು "ಅಲೆಮಾರಿಗಳು" ತಂಡದ ಸದಸ್ಯರು. 

ಜೊತೆಯಲ್ಲಿ ನನ್ನ ಬಾಳಿಗೆ ಬೆಳಕಾಗಿ ಬಂದ ಪ್ರಾಣ ಗೆಳತಿ, ನನ್ನ ಮಗಳು, ನನ್ನ ಬೈಕ್, ನನ್ನ ಕಾರು, ನನ್ನ ಕ್ಯಾಮೆರಾ ಎಲ್ಲವು ನನ್ನ ಸ್ನೇಹ ವರ್ತುಲದಲ್ಲಿ ಸುತ್ತುತ್ತಲೇ ಇವೆ. ಗೆಳೆಯರ ಹಾಗೆಯೇ ಮಾತುಡುವ ಅಪ್ಪ,ಅಮ್ಮ, ನನ್ನ ಅಣ್ಣ, ತಮ್ಮ, ಅತ್ತಿಗೆ ಎಲ್ಲರೂ ಸೇರಿ ಒಂದು ದೊಡ್ಡ ಸ್ನೇಹಲೋಕವೇ ಸೃಷ್ಟಿಯಾಗಿದೆ. 

ನನ್ನ ಎಲ್ಲಾ ಸ್ನೇಹಿತ(ತೆಯ)ರಿಗೂ ಸ್ನೇಹದ ಅಮೃತ ಸಿಂಚನ ಹಂಚುತ್ತಿರುವ ಜೀವ ಗೆಳೆಯರಿಗೆಲ್ಲಾ ಸ್ನೇಹದ ದಿನ ಶುಭಾಶಯಗಳು.. ಸ್ನೇಹದ ಗಿಡ ಬೆಳೆಯಲು ಕ್ಷಣ, ಘಂಟೆ, ದಿನಗಳು ಬೇಕಿಲ್ಲ.. ಆ ಸಸಿಗೆ ಬೇಕಿರುವುದು ಒಂದು ಹೂ ನಗೆ. ಆ ನಗೆ ನಮ್ಮೆಲ್ಲರ ಬಾಳಿನಲ್ಲೂ ಇರಲಿ...  ಅರಳಲಿ...  ಸುಗಂಧ ಬೀರಲಿ ಎಂದು ಆಶಿಸುವ 
ನಿಮ್ಮೆಲ್ಲರ ಕಾಂತ - ಗೆಳೆತನದ ಅಯಸ್ಕಾಂತ!!!

Friday, June 21, 2013

ಪ್ರೀತಿಯೇ ನನ್ನುಸಿರು .....:-)

 ಕುಮಾರಿ ಭಾಗ್ಯ ಭಟ್  ಎಂಬ ಉತ್ತಮ ಬ್ಲಾಗಿತಿಯ (ಬ್ಲಾಗರ್) ಒಂದು ಸುಂದರ ಪ್ರೇಮ ನಿವೇದನೆಯ ಲೇಖನವನ್ನುಓದಿದಾಗ.. ಮನಸಲ್ಲಿ ಒಂದು ಸಣ್ಣ ಎಳೆ ಹುಟ್ಟಿತು... 

ಅವರ ಲೇಖನವನ್ನು ಹಾಗೆಯೇ ಇಟ್ಟುಕೊಂಡು ಯಾವ ಸಾಲು, ಯಾವ ಅಕ್ಷರ ಬದಲಾಯಿಸದೆ ಅದಕ್ಕೆ ಒಂದು ಬೇರೆ ರೂಪ ಕೊಡುವ ಮನಸ್ಸಾಯಿತು. 

ಭಾಗ್ಯ ಅವರಿಗೆ ಇದನ್ನು ಹೇಳಿದಾಗ ಅವರು "ಜಿ ಇದೊಂದು ವಿಭಿನ್ನ ಪ್ರಯತ್ನ ಅನ್ನಿಸುತ್ತೆ ಖಂಡಿತ ಬರೆಯಿರಿ.. " ಎಂದು ತಮ್ಮ ಅನುಮತಿ ನೀಡಿದರು.. 

ಆ ಲೇಖನವನ್ನು ಓದಿ ಅದರ ಮೂಸೆಯಲ್ಲಿ ಅರಳಿದ ಕಥೆ ನಿಮ್ಮ ಮುಂದೆ ಇಟ್ಟಿರುವೆ.. ಈ ಲೇಖನಕ್ಕೆ ಬೆನ್ನೆಲುಬು, ಅಡಿಪಾಯ, ಗೋಡೆ, ಕಟ್ಟಡ ಎಲ್ಲಾ ಭಾಗ್ಯ ಅವರದು.. ನನ್ನದೇನಿದ್ದರೂ ಮನದ ಪ್ರೇರಣೆಯ ಮಾತಿನಿಂದ... ಅವರು ಕಟ್ಟಿದ  ಸುಂದರವಾದ ಮನೆಗೆ  ಒಂದೆರಡು ಹೂವುಗಳನ್ನು ಇಟ್ಟು ಅಲಂಕರಿಸಿದ್ದೇನೆ.. 

ಭಾಗ್ಯ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಾ ಈ ಲೇಖನ ನಿಮ್ಮ ಮುಂದೆ ಇಡುತಿದ್ದೇನೆ. 

ವಿ ಸೂ : ಬಣ್ಣ ತುಂಬಿದ ಭಾವಪೂರಿತ ಅಕ್ಷರಗಳು, ಸಾಲುಗಳು ಲೇಖಕಿಯದು! 
----------------------------------------------------------------------------- ಕೈಯಲ್ಲಿದ್ದ ಮೊಬೈಲಿನಲ್ಲಿ ಮಸಣದ ಹೂವು ಚಿತ್ರದ ಇಷ್ಟವಾದ  
"ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ" ಹಾಡು ಪ್ರಸಾರವಾಗುತ್ತಿತ್ತು. ಕಿವಿಗೆ ಹ್ಯಾಂಡ್ಸ್ ಫ್ರೀ ಹಾಕಿಕೊಂಡದ್ದರಿಂದ ಅಲೆಗಳ ಮೊರೆತ ಹಾಡಿಗೆ ಭಂಗ ತಂದಿರಲಿಲ್ಲ.. 

ಒಮ್ಮೆ ಕೈನಲ್ಲಿದ್ದ ಗಡಿಯಾರ ನೋಡಿಕೊಂಡಾಗ ಅದು ಹಲ್ಲು ಬೀರುತ್ತಾ "ಇನ್ನೂ ಸಮಯವಿದೆ" ಅಂತ ಹೇಳಿದಂತೆ ಭಾಸವಾಯಿತು. 

ಸರಿ ಅಲೆಗಳ ರಭಸಕ್ಕೆ, ಗಾಳಿಯ ಬೀಸಾಟಕ್ಕೆ ಅಂದು ತಾನೇ ಬ್ಯೂಟಿ ಪಾರ್ಲರ್ನಲ್ಲಿ ಹೊಸದಾಗಿ ಮೂಡಿಸಿದ್ದ ಕೇಶವಿನ್ಯಾಸ 
ಹಾಗೆ ಇರಲಿ ಎಂದು ಬಿಟ್ಟಿದ್ದಕ್ಕೆ ರೇಷ್ಮೆಯಂತ ಜೋಂಪು ಕೂದಲು ಮುಖದ ಮೇಲೆ ಚಿತ್ತಾರ ಮೂಡಿಸುತ್ತಿತ್ತು. ಪರ್ಸ್ನಲ್ಲಿ ಇದ್ದ ಲಕೋಟೆಯನ್ನು ಹಾಗೆ ಒಮ್ಮೆ ಬಿಚ್ಚಿದ ಹುಡುಗಿ.. ತುಟಿಯ ಮೇಲೆ ಒಂದು ಕಿರು ನಗೆ ಬೀರಿ ಅದೆಷ್ಟೋ ಬಾರಿ ಓದಿ ಓದಿ ಕಂಠ ಪಾಠವಾಗಿದ್ದ ಪದಗಳನ್ನು ಮತ್ತೆ ಮತ್ತೆ ಓದಲು ಶುರುಮಾಡಿದಳು.
ಮೊಬೈಲಿನಲ್ಲಿ ಹಾಡು ಬದಲಾಯಿತು "ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ ನಾ ಬರೆವೆ"

"ಪ್ರೀತಿಯ ಮುದ್ದು, 

ಬದುಕಿನ ಒಂದು ಹಂತವ ಹತ್ತಿ ಹಿಂತಿರುಗಿದಾಗ ತುಂಬಾ ಕಾಡಿದ್ದ ಸಂಗಾತಿ ನೆನಪಿದು . ಬಾಳ ದೋಣಿಯಲ್ಲಿ ಅಂಬಿಗನ ಹುಡುಗಾಟದಲ್ಲಿದ್ದಾಗ ಸಿಕ್ಕ ಹುಡುಗ ನೀನು !
ಪ್ರೀತಿ ಪ್ರೇಮದ ಬಗೆಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರದ ನನ್ನಲ್ಲಿ ಅದ್ಯಾಕೋ ಒಂಟಿತನದ ಭೂತ ಕಾಡ ಹತ್ತಿತ್ತು ...ಎಲ್ಲರಂತೆ ನಂಗೂ ಪ್ರೀತಿಸೋ, ಮುದ್ದಿಸೋ ಮನವೊಂದು ಬೇಕನಿಸತೊಡಗಿತ್ತು .."

ಪತ್ರವನ್ನು ಅಲ್ಲಿಯೇ ನಿಲ್ಲಿಸಿದ ಆ ಬೆಡಗಿ ನೀಲ ಆಗಸದ ಕಡೆ ಕಣ್ಣನ್ನು ಚಾಚಿದಳು.. 

ಮನಸಲ್ಲಿ ಏಳುತಿದ್ದ ಅಲೆಗಳನ್ನೆಲ್ಲ ಶರಧಿಗೆ ಮತ್ತೆ ಬಿಟ್ಟು ಬಿಡಬೇಕೆಂಬ ಹಂಬಲ! 
ನಡುವೆಯೇ ಮತ್ತೆ ಇನ್ನೊಂದು ಗಾನ ಶುರುವಾಯಿತು. 
"ನೇರ ಬಿಟ್ಟು ನೆಲದ ಮೇಲೆ ದೋಣಿ ಸಾಗದು.. ನೆಲವ ಬಿಟ್ಟು ನೀರಮೇಲೆ ಬಂಡಿ ಹೋಗದು.. ನಿನ್ನ ಬಿಟ್ಟು ನನ್ನ.. ನನ್ನ ಬಿಟ್ಟು ನಿನ್ನ ಜೀವನ ಸಾಗದು". 

ಮತ್ತೆ ಪತ್ರ ಓದುವತ್ತ ಕಣ್ಣು ಓಡಿತು. 


"ಹುಚ್ಚು ಕನಸು ಕಾಣೋ ವಯಸಲ್ಲೇ ನೀ ನನಗೆ ಪರಿಚಯವಾಗಿದ್ದು...  ಗಂಟೆಗಟ್ಟಲೇ ಹರಟಿದ್ದು ..
ತುಂಬಾ ಕಾಲೆಳೆಯುತ್ತಿದ್ದ ಸ್ನೇಹಿತರ ಗುಂಪಲ್ಲಿ ನೀ ಯಾಕೋ ತೀರಾ ಅಪರೂಪನಾಗಿ ಕಂಡೆ ನಂಗೆ . 
ಆತ್ಮೀಯನಾದೆ ,ಆಧರಿಸಿದೆ.ಅದೆಷ್ಟೋ ಮಾತುಗಳಿಗೆ ಕಿವಿಯಾದೆ ,ಪ್ರೀತಿಗೆ ಹೆಸರಾದೆ,ನನ್ನ ಬೇಸರಕ್ಕೆ ನೀ ಕೈ ಹಿಡಿದು ನೀಡೋ ಸಾಂತ್ವಾನಕ್ಕೆ ನಾ ಯಾವತ್ತೋ ಕಳೆದು ಹೋದೆ .ತೀರಾ ಸೌಮ್ಯನಲ್ಲದ ತೀರಾ ಮಾತಾಡೋನೂ ಅಲ್ಲದ ನಿನ್ನ ಮೇಲೆ ಸಣ್ಣದೊಂದು ಒಲವಾಗಿತ್ತಲ್ಲಿ."

ಓದುತ್ತ ಹೋದ ಹಾಗೆ ಅಲೆಗಳ ತರಹ ಭಾವಗಳ ಹೊಯ್ದಾಟ..

ಹೃದಯ ಮಿಡಿತ, ಬಡಿತ ಆ ಸಮುದ್ರ ದಂಡೆಯಲ್ಲಿ ಅಪ್ಪಳಿಸುತಿದ್ದ ಅಲೆಗಳು ಮಾಡುವ ಶಬ್ಧದ ನಡುವೆಯೂ ಸ್ಪಷ್ಟವಾಗಿ ಕೇಳಿಸುತಿತ್ತು!  
ಕಿವಿಗೆ ಹ್ಯಾಂಡ್ಸ್ ಫ್ರೀ ಹಾಕಿಕೊಂಡಿದ್ದರೂ ಹೆಜ್ಜೆಗಳ ಸಪ್ಪಳ ಕೇಳಿಸಿದ ಮೇಲೆ ಎದೆಯ ಬಡಿತ ಇನ್ನೂ ಜೋರಾಯಿತು.. 
ಯಾರೋ ಕಿವಿಯ ಹತ್ತಿರದಲ್ಲಿ "ಹಾಯ್ ಬಂಗಾರಿ" ಅಂದಂತೆ ಆಯಿತು.. 
ತಟ್ಟನೆ ತಿರುಗಿ ನೋಡಿದರೆ.. ದೂರದಲ್ಲಿ ನಿಧಾನವಾಗಿ ಇಳಿಯುತ್ತಿದ್ದ ಸೂರ್ಯನ ಹೊಂಬಣ್ಣದಲ್ಲಿ ಹೊಳೆಯುತಿದ್ದ ಆ ಹುಡುಗ.. 
ತನ್ನ ತಂಪು ಕನ್ನಡಕವನ್ನು ತೆಗೆದು ಮುಗುಳು ನಗೆ ಬೀರಿದ... 
ಹುಡುಗಿಯು ಒಂದು ಮಲ್ಲಿಗೆ ಹೂವಿನ ನಗೆಯನ್ನು ಬೀರಿದಳು. 
ಜೇಬಿಂದ ಹೊರಬಂದ ಮಿಲ್ಕ್ ಬಾರ್ ಚಾಕ್ಲೆಟ್ ಹುಡುಗಿಯ ಮುನಿಸನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಯಿತು. 

"ಅಲ್ಲಾ ಬಂಗಾರಿ ಈ ಪತ್ರವನ್ನು ಎಷ್ಟು ಬಾರಿ ಓದ್ತೀಯ.. ಅಪ್ಪಾ ನನಗಂತೂ ಪ್ರತಿ ಪದ.. ಪ್ರತಿ ಅಕ್ಷರ ಕೇಳಿ ಕೇಳಿ ಸಾಕಾಗಿದೆ... 
ಇರು ಇನ್ನು ಮುಂದೆ ನಾ ಹೇಳ್ತೇನೆ.. ಸರಿ ಇದೆಯಾ ನೀನೆ ಹೇಳು" 

ಹುಡುಗಿ ಚಾಕ್ಲೆಟ್ ಮೆಲ್ಲುತ್ತಾ ಕಣ್ಣು ಮಿಟುಕಿಸಿದಳು... 


ಹುಡುಗ ನಿಂತುಕೊಂಡು ವಯ್ಯಾರದಿಂದ 

"ಅವತ್ತದ್ಯಾವುದೋ ಹುಡುಗನ ಹೆಸರ ಹೇಳಿ ರೇಗಿಸಿದ್ದ ನಿನ್ನ ಮೇಲೆ ತೀರಾ ಸಿಟ್ಟು ಬಂದಿತ್ತು ನಂಗೆ. ಈ ಹುಡುಗ ಯಾಕೆ ಇನ್ಯಾರದೋ ಹೆಸರಿಗೆ ತನ್ನ ಹುಡುಗಿಯ ಹೆಸರ ಹೇಳಿದ್ದಾನೆ ಅನ್ನೋ ಕೋಪ ಸೀದಾ ಮನದ ಮಾತನ್ನ ನಿನ್ನೆದುರಿಗೆ ತೆರೆದಿಟ್ಟಿತ್ತು ...ನಿನ್ನನ್ನಿಲ್ಲಿ ಆರಾಧಿಸುತ್ತಿರೋ ಹುಡುಗಿಯನ್ಯಾಕೆ ಇನ್ಯಾರದೋ ಹೆಸರ ಜೊತೆಯಾಗಿಸುತ್ತೀಯಾ? 

"ಲವ್ ಯು ಸ್ಟುಪಿಡ್ " 

ಅಂತ ಹೇಳಿ ಆಮೇಲೆ ನಾಲಿಗೆ ಕಚ್ಚಿ ಕೊಂಡ ನೆನಪು ನಿನ್ನೆ ಮೊನ್ನೆಯದು ಅನಿಸುತ್ತಿದೆ ಕಣೋ! ನೀ ನಕ್ಕು ಮುದ್ದಿಸಿದ್ದೆ ನೆನಪಿದ್ಯಾ ನಿಂಗೆ?" 

ಹುಡುಗಿ ಜೋರಾಗಿ ನಗಲು ಶುರು ಮಾಡಿದಳು.. ಹುಡುಗ ಕಕ್ಕಾಬಿಕ್ಕಿ "ಯಾಕೆ ಬಂಗಾರಿ ಏನಾಯ್ತು.. ನಾನು ಹೇಳಿದ್ದು ತಪ್ಪಿದೆಯ"


"ಇಲ್ಲಾ ಕಣೋ ನೀನು ಹೇಳಿರೋದು ಪರ್ಫೆಕ್ಟ್ ಇದೆ.. ತಮಾಷೆ ಗೊತ್ತಾ ಮುಂದಿನ ಸಂಭಾಷಣೆಗಿಂತ ಮುಂಚೆ ಕೇಳು ಈ ಹಾಡನ್ನ" ಅಂದಳು ಹುಡುಗಿ.. 

ಹ್ಯಾಂಡ್ಸ್ ಫ್ರೀ ಕಿವಿಗೆ ಹಾಕಿಕೊಂಡು ಹೇಳಿದ ಹುಡುಗ ಹೊಟ್ಟೆ ಹಿಡಿದು ನಗಲು ಶುರುಮಾಡಿದ.... ನಕ್ಕು ನಕ್ಕು ಸುಸ್ತಾಗಿ ಬಿದ್ದು ಬಿಟ್ಟಾ.. ಹ್ಯಾಂಡ್ಸ್ ಫ್ರೀ ಕಿವಿಯಿಂದ ಕಿತ್ತು ಬಂದ  ಕಾರಣ ಸ್ಪೀಕರ್ ಫೋನ್ ನಲ್ಲಿ ಹಾಡು ಬರುತಿತ್ತು 
"ಕೇಳಿಸದೆ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ" 

ಹುಡುಗಿ ನಗುತ್ತಲೇ ಮುಂದಿನ ಪತ್ರದ ಸಾಲನ್ನು ಹೇಳತೊಡಗಿದಳು 

"ಆಮೇಲಿನದು ನಂಗಿಂತ ಜಾಸ್ತಿ ಗೊತ್ತಿರೋದು ಪ್ರತಿ ದಿನದ ಸಂಜೆಯಲ್ಲಿ ಮರಳ ತೀರದಲ್ಲಿ ಕೂರುತ್ತಿದ್ದ ಅದೇ ಕಲ್ಲು ಬಂಡೆಗಳಿಗೆ ..ನಮ್ಮಿಬ್ಬರ ಭಾವಗಳ ಏಕೈಕ ಸಂಬಂಧಿ ಎಂದರೆ ಅದೇ ಇದ್ದೀತು ..."

ಹುಡುಗ ಒಂದು ತುಂಡು ಚಾಕ್ಲೆಟ್ ಮೆಲ್ಲುತ್ತ ಮತ್ತೆ ತನ್ನ ಹಾವ ಭಾವ ತೋರಿಸುತ್ತಾ   ಪತ್ರದ ಮುಂದಿನ ಸಾಲನ್ನು ಹೇಳಿದ

"ಆ ತೀರದಲ್ಲಿ ನಿನ್ನೊಟ್ಟಿಗೆ ನಿನ್ನ ಕಿರುಬೆರಳ ಹಿಡಿದು ದಿನವೂ ಕೂರುತ್ತಿದ್ದ ದಿನಗಳ್ಯಾಕೋ ನೆನಪಾಗಿದೆ ಕಣೋ . ಭಾವಕ್ಕೆ ಜೊತೆಯಾಗಿ ,ಬದುಕಿಗೆ ಪಾಲುದಾರನಾಗಿ ಬರುವೆ ಗೆಳತಿ ಅಂತ ನೀ ನೀಡಿದ್ದ ಭರವಸೆಯ ಆ ದಿನಗಳು ನೆನಪಾಗುತ್ತಿವೆ.. ಜೊತೆಯಾಗಿ ಸುತ್ತಿದ್ದೆಷ್ಟೋ , ಎದುರು ಕೂತು ಕಣ್ಣಂಚ ಒದ್ದೆಯಾಗಿಸಿದ್ದೆಷ್ಟೋ ,ಪ್ರೀತಿಯಿಂದ ತಲೆ ಸವರಿ ನೀ ಹೇಳಿದ್ದ ಧೈರ್ಯ, ಕಣ್ಣಲ್ಲಿ ಕಣ್ಣಿಟ್ಟು ಕೊಟ್ಟ ಭರವಸೆ ಈ ಜನ್ಮಕ್ಕಾಗುವಷ್ಟಿದೆ."

ಅವನ ಪಕ್ಕದಲ್ಲಿಯೇ ಕಡಲೆಕಾಯಿ,  ಖಾರ ಹಚ್ಚಿದ ಮಾವಿನ ಕಾಯಿ, ಅನಾನಸ್, ಸೌತೆಕಾಯಿ ಇವನೆಲ್ಲಾ ತಳ್ಳು ಗಾಡಿಯಲ್ಲಿಟ್ಟುಕೊಂಡು ಒಬ್ಬಾತ ಜೋರಾಗಿ ಹಾಡುತ್ತಾ ಸಾಗಿದ್ದ "ಜನ್ಮ ಜನ್ಮದ ಅನುಬಂಧ ಹೃದಯ ಹೃದಯಗಳ ಪ್ರೇಮಾನುಬಂಧ..ಜನ್ಮ ಜನ್ಮದ ಅನುಬಂಧಾ ಆ ಆ ಆ" 


ಇಬ್ಬರಿಗೂ ನಗು ತಡೆಯಲಾಗಲಿಲ್ಲ.. "ಏನ್ ಬಂಗಾರಿ ಇದು! ನಾವ್ ಹೇಳುವ ಪದಕ್ಕೆಲ್ಲ ಒಂದು ಹಾಡು ನುಗ್ಗುತ್ತಿದೆ" ಎಂದ


ಮತ್ತೆ ಹುಡುಗಿ ಮುಂದುವರೆಸಿದಳು "ನಮ್ಮಿಬ್ಬರ ಪ್ರತಿ ಭಾವಗಳೂ ಆ ಮರಳ ದಂಡೆಗೆ ಗೊತ್ತೇನೋ ...
ಪಾರ್ಕಿನಲ್ಲಿ ಕೂತು ಮನಸೋ ಇಚ್ಚೆ ಹರಟಿದ್ವಿ ಬಿಟ್ರೆ.... ಅಲ್ಲಿರೋ ಜೋಡಿಗಳ ತರ ನಾವ್ಯಾವತ್ತೂ ಮಾಡಿಲ್ಲ .
ನೀನ್ಯಾವತ್ತೂ ನನ್ನ ತಬ್ಬಿಕೊಂಡಿಲ್ಲ, ಕೈಯಲ್ಲಿ ಬೆಸೆವ, ನಾನಿದ್ದೇನೆ ಜೊತೆ ಅನ್ನೋ ಕೈ, ಹಣೆಯ ಮೇಲೊಂದು ಮುತ್ತು ಬಿಟ್ಟು... ಅದರಾಚೆಯ ಯಾವುದನ್ನೂ ನಿರೀಕ್ಷಿಸಿಲ್ಲ!..ನಿನ್ನ ಮೇಲಿನ ನನ್ನ ಹೆಮ್ಮೆ ಜಾಸ್ತಿಯಾಗೋದು ಇಲ್ಲೆ ಕಣೋ ....ಎಲ್ಲರೆದುರು ಪ್ರೀತಿಯ ಪ್ರದರ್ಶನ ಮಾಡೋ, ಪ್ರೀತಿ ಅಂದ್ರೆ ಅಸಹ್ಯ ಆಗೋ ತರ ಆಡೋ ಅದೆಷ್ಟೋ ಮಂದಿಯೆದುರು ನೀ ಆದರ್ಶನಾದೆ ಅನ್ನೋ ಖುಷಿ ನಂದಾಗಿತ್ತು ಅಲ್ಲಿ!"

ಚುರುಮುರಿ ಗಾಡಿಯವ ಜೋರಾಗಿ ಹಾಡು ಹಾಡುತಿದ್ದ  "ಪ್ರೀತಿನೆ ಆ ದ್ಯಾವ್ರು ತಂದ ಆಸ್ತಿ ನಮ್ಮ ಪಾಲಿಗೆ" 


ಹುಡುಗ ಹುಡುಗಿ ಇಬ್ಬರು ನಸು ನಗುತ್ತಾ ಒಬ್ಬರನ್ನು ಒಬ್ಬರು ನೋಡುತ್ತಾ ಮೈ ಮರೆತಿದ್ದರು.. ಕೈಯಲ್ಲಿದ್ದ ಪತ್ರ ಸಮುದ್ರ ತೀರದ ಗಾಳಿಗೆ ಹಾರಿ ಹೋಯ್ತು..


ಅದನ್ನ ಹಿಡಿಯಲು ಹುಡುಗ ಓದಲು ಶುರ ಮಾಡಿದ ಅಷ್ಟರಲ್ಲೇ ಅವರ ಪಕ್ಕದಲ್ಲೇ ಮಧುರ ಧ್ವನಿ ಕೇಳಿಸಿತು 

"ಆದರೆ ಇವತ್ಯಾಕೋ ನೀ ನನ್ನ ಕನವರಿಕೆಯ ಕನಸಾಗಿ ಕಾಡ ಬಂದೆ, 
ಏನನ್ನೋ ಹುಡುಕುತ್ತಾ ಇದ್ದಾಗ ಸಿಕ್ಕ "ಮಿಸ್ ಯು ಸ್ವೀಟ್ ಹಾರ್ಟ್" ನೀ ನನಗೆ ಕೊಟ್ಟಿದ್ದ ಮೊದಲ ಗ್ರೀಟಿಂಗ್ ನಿನ್ನಲ್ಲೇ ಕಳೆದುಹೋಗಿದ್ದ ನನ್ನ ಹುಡುಕ ಹೊರಟಿತ್ತು ...ಬಿಡು, ನೀನಿಲ್ಲದೆಯೂ ಇರಬಲ್ಲ ನಂಗೆ... ನೆನಪನ್ನೂ ಕೊಡವಿ ಎದ್ದು ಬರೋದು ಅಷ್ಟು ಕಷ್ಟವಾಗಲಾರದು!
ಆದರೆ ಮುದ್ದು! 
(ಕ್ಷಮಿಸು... ನೀ ಇನ್ಯಾರದೋ ಮುದ್ದು ಆದ್ರೂ ನಂಗೆ ನೀನ್ಯಾವತ್ತೂ ನನ್ನ ಮುದ್ದು) 
ಕಾರಣವೇ ಹೇಳದೆ ಎದ್ದು ಹೋದೆಯಲ್ಲೊ ನೀ.
ಭಾವಗಳ ಹೊಯ್ದಾಟವನ್ನ ನಿನ್ನಲ್ಲಿ ನಾನವತ್ತೇ ಗುರುತಿಸಿದ್ದೆ!...
ಮೆಸೇಜ್ ಗೆ ಬರದ ರೀಪ್ಲೈ ,ಅಮೇಲೊಮ್ಮೆ ನೀ ಕೇಳೋ ಅರ್ಥವಿಲ್ಲದ ಪ್ರಶ್ನೆಗಳಾದ 
"ನಾ ಇರದಿದ್ದರೆ ನೀ ಏನು ಮಾಡ್ತೀಯ?......."ನನ್ನನ್ನ ನೆನಪಿಂದಳಿಸಿ ಬಿಡೆ ಹುಡುಗಿ"
ಅನ್ನೋ ಅದೆಷ್ಟು ಅಸಂಬದ್ದ ಮಾತುಗಳಿಗೆ ಬಿಕ್ಕಿ ಬಿಕ್ಕಿ ಅತ್ತಿದ್ದೆ ..
ನಿನ್ನ ನಿರ್ಧಾರಗಳ ಅರಗಿಸಿಕೊಳ್ಳೋ ಶಕ್ತಿ ನನಗವತ್ತಿರಲಿಲ್ಲ ನಿಜವಾಗ್ಯೂ ...
ಕಾಡಿಸಿ ಕಾಡಿಸಿ ಕೇಳಿದ್ದೆ. ಮನ ಹಗುರಾಗಿಸಿ ಅತ್ತು ಬಿಡೋ ನಾನಿದ್ದೀನಿ ಜೊತೆಗೆ ಅಂತದೆಷ್ಟೋ ಸಲ ಹೇಳಿದ್ದೆ.
ನಂಗೇನು ಗೊತ್ತು? 
ಶಾಶ್ವತ ಕಣ್ಣೀರೊಂದನ್ನು ನನಗೇ ಕೊಟ್ಟು (ಬಿಟ್ಟು) ಹೋಗೋ ಹುನ್ನಾರವಿದು ಅನ್ನೋದು ....!!"

ಹುಡುಗ ಹುಡುಗಿ ಇಬ್ಬರು ಆಶ್ಚರ್ಯ ಚಕಿತರಾಗಿ ತಿರುಗಿ ನೋಡಿದರು.. 

ತಕ್ಷಣ ಹುಡುಗ ಹೇಳಿದ "ಅರೆ.. ನೀನು.. ಏನು ಇಲ್ಲಿ.. ಚೆನ್ನಾಗಿದ್ದೀಯ.. ?"

ಹುಡುಗಿಯು ಕೂಡ "ಏನೇ.. ನಮ್ಮನ್ನು ಮರೆತು ಬಿಟ್ಟಿದ್ದೆಯ.. ಎಲ್ಲಿದ್ದೆ.. ಹೇಗಿದ್ದೀಯ?"


ಆ ಮಧುರ ಧ್ವನಿಯ ಪಕ್ಕದಲ್ಲಿ ಮೀನು ಮಾರುತಿದ್ದ ತಾತನ ಹತ್ತಿರ ಇದ್ದ ರೇಡಿಯೋ ಕಿರುಚುತಿತ್ತು 
"ಎಲ್ಲಿದ್ದೆ ಇಲ್ಲಿ ತನಕ ಎಲ್ಲಿಂದ ಬಂದ್ಯವ್ವ.. ನಿನ ಕಂಡು ನಾ ಯಾಕೆ ಮರುಗಿದೇನೋ"

ಆ ಮಧುರ ಧ್ವನಿಯ ಒಡತಿ ಮತ್ತೆ ಶುರು ಮಾಡಿದಳು 

"ಯಾಕೋ ಸಪ್ಪಗಿದ್ದೀಯಾ? ಅನ್ನೋ ನನ್ನ ಪ್ರಶ್ನೆಗಳನ್ನ... 
ಪ್ರಶ್ನೆಗಳನ್ನಾಗಿಯೆ ಉಳಿಸಿ,
ನೀನಿಲ್ಲದ ಜಗತ್ತೇ ಇಲ್ಲ ಅನ್ನೋ ಮನವೊಂದನ್ನು ಪೂರ್ತಿಯಾಗಿ ಬಿಟ್ಟು ಹೊರಟು ಹೋದೆ ನೀನು ..!
ಕೊನೆಗೆ ನೀ ಎದ್ದೇ ಹೋದೆ ,ಮನಸ್ಸಿಂದಲ್ಲ ..
ಕನವರಿಕೆಯ ಕನಸಿಂದ ಮಾತ್ರಾ.... 
ನೆನಪುಗಳನ್ನಿಲ್ಲೇ ಬಿಟ್ಟು ಹೋಗಿದ್ದೀಯಲ್ಲೋ ಹುಡುಗಾ..ಮರೆತು ಹಾಗೇ ಹೋದೆಯೋ ಅಥವಾ ನಿನ್ನ ಪ್ರೀತಿಸಿದ ತಪ್ಪಿಗೆ...  
ನನ್ನನ್ನದು ಕೊನೆಯ ತನಕ ಕಾಡಲಿ ಅಂತ ಬೇಕಂತಲೇ ಬಿಟ್ಟು ಹೋದೆಯೋ ನಾ ಅರಿಯೆ ..."

ಐಸ್ ಕ್ಯಾಂಡಿಯ ತಳ್ಳುಗಾಡಿಯಲ್ಲಿ ಬೀಡಿ ಸೇದಿಕೊಂಡು ಒಬ್ಬ ತನ್ನಷ್ಟಕ್ಕೆ ತಾನೇ ಹಾಡಿಕೊಂಡಿದ್ದ 
"ಪ್ರೀತೀಯ ಕನಸೆಲ್ಲಾ ಅ ಅ ಅ ... ಕರಗಿ ಹೋಯಿತೇ ಕೊನೆಗೂ"

ಆ ಮಧುರ ಧ್ವನಿಗೆ ಸಮಾಧಾನ ಮಾಡುತ್ತಾ ಆ ಹುಡುಗಿ ಹುಡುಗನಿಗೆ ಹೇಳಿದಳು 

"ನೀ ನನಗೆ ಸಿಕ್ಕ ಭ್ರಮೆಯಲ್ಲಿ ಜಗತ್ತೇ ನನ್ನದು ಅಂತ ಬೀಗುತ್ತಿತ್ತಲ್ಲೋ ಈ ಹುಚ್ಚು ಮನಸ್ಸು! ಪಾಠವೊಂದ ಕಲಿಸಿದೆ ನೀ ..ಕೊನೆಯ ತನಕ ಮರೆಯದ ಅತೀ ಹತ್ತಿರವಾದ ಪಾಠವದು!
ಮನ ಮಾತ್ರ ಯಾರನ್ನೂ ನಿನಗಿಂತ ಜಾಸ್ತಿ ಪ್ರೀತಿಸದಿರೆ ಹುಚ್ಚಮ್ಮ ಅಂತ ಪ್ರತಿ ದಿನ ನೆನಪಿಸುತ್ತೆ ...
ನಾ ನಿನ್ನ ಪ್ರೀತಿಸಿದ ಖುಷಿಗೆ ನನ್ನದೇ ಮನ ನನ್ನ ಖುಷಿ ಕಸಿದುಕೊಂಡಂತನಿಸುತ್ತೆ ಕ್ಷಣವೊಂದಕ್ಕೆ!
ಅದಕ್ಕೂ ನನಗಿಂತ ನಿನ್ನ ಮೇಲೇ ಜಾಸ್ತಿ ವ್ಯಾಮೋಹ ನೋಡು!"

ಹುಡುಗ ಮುಗುಳು ನಕ್ಕ.. ತನ್ನಷ್ಟಕ್ಕೆ ತಾನೇ ಜೋರಾಗಿ ಹಾಡಿದ 

"ರಾಣಿ ರಾಣಿ ರಾಣಿ.. ಎಂದೋ ಮೆಚ್ಚಿದೆ ನಾನು.. ನಿನ ಎಂದೋ ಮೆಚ್ಚಿದೆ ನಾನು"

ಆ ಮಧುರ ಧ್ವನಿ ಮತ್ತೆ ಮುಂದುವರೆಸಿತು 

"ಹೊಟ್ಟೆ ಕಿಚ್ಚಾಗುತ್ತೆ ಕಣೋ ನಿನ್ನ ಮೇಲೆ ..ಮನಸ್ಸಿನ ಮೇಲೆ ಸರ್ವಾಧಿಕಾರಿಯಾಗಿ ಮೆರೆದು 
ಈಗ ನಿನಗಿದು ಸಂಬಂಧಿಸಿದ್ದೇ ಅಲ್ಲಾ ಅನ್ನೋ ತರ ಹೊರ ನಡೆದೆಯಲ್ಲೋ ..
ಪೂರ್ತಿಯಾಗಿ ನಿನ್ನದಾಗಿದ್ದನ್ನ ಬಿಟ್ಟು ಹೋಗೋವಾಗ ಸ್ವಲ್ಪವೂ ಬೇಸರವಾಗಲಿಲ್ವಾ ನಿಂಗೆ? 
ನೀನೆ ಕಟ್ಟಿದ್ದ ಕನಸಮನೆ ಮಗುಚಿ ಬಿದ್ದಾಗ್ಲೂ ಒಂದಿನಿತು ದುಃಖವಾಗ್ಲಿಲ್ವಾ?
ಅಥವಾ ಮುಖವಾಡದ ಪ್ರೀತಿ ಅದಾಗಿತ್ತಾ?
ನಿಜ ಹೇಳು ..ಹಾರಿಕೆಯ ಉತ್ತರ ಕೇಳಿ ಕೇಳಿ ಮನ ಬಿಕ್ಕುತ್ತಿದೆ, 
ನೀ ನಡೆದ ಈ ಮನಸ್ಸು ಯಾರಿಗೂ ಕಾಣದಂತೆ ಆತ್ಮಹತ್ಯೆ ಮಾಡಿಕೊಂಡು ತುಂಬಾ ದಿನಗಳಾಯ್ತು !..."

ಮಧುರ ಧ್ವನಿಯ ಮೊಬೈಲ್ ನಲ್ಲಿ ಹಾಡೊಂದು ಮೂಡಿ ಬರುತಿತ್ತು 

"ಆಟವೇನು? ನೋಟವೇನು? ನನಗೆ ಹೇಳಿದ ಮಾತೇನು? ಏಕೆ ಸುಮ್ಮನೆ ಸುಳ್ಳು ಹೇಳುವೆ ನಿನ್ನ ನಾ ಬಲ್ಲೆನು!"

ಆ ಹುಡುಗಿಗೆ ಯಾಕೋ ಮನ ತಡೆಯಲಿಲ್ಲ.. ತಾನು ಆ ಮಧುರ ಧ್ವನಿಗೆ ಹೇಳತೊಡಗಿದಳು 
"ಯಾರದೋ ಎದೆಯಲ್ಲಿ ಕನಸ ಸೌಧವನ್ನ ಕಟ್ಟಿ ಒಮ್ಮೆಗೇ ಅದನ್ನ ದ್ವಂಸ ಮಾಡಿ ಹಿಂದೆ ತಿರುಗಿಯೂ ನೋಡದೇ ಹೋಗೋ ಅಷ್ಟು ಕೆಟ್ಟವನಲ್ಲ ನನ್ನ ಹುಡುಗ ...! ಯಾವುದೋ ಹೇಳಲಾಗದ ಅನಿವಾರ್ಯತೆಗೆ ಕಟ್ಟುಬಿದ್ದು ನೀ ಹೊರನಡೆದೆಯೇನೋ...."

ಆ ಹುಡುಗಿ ಹುಡುಗನ ಕಡೆ ತಿರುಗಿ ಹೇಳಿದಳು 

"ನನಗರ್ಥವಾದೀತು ಕಣೋ ....ಯಾಕಂದ್ರೆ ನೀ ನನ್ನ ಪ್ರೀತಿ .."

ಮಧುರ ಧ್ವನಿ ಮಧ್ಯದಲ್ಲೇ ತಡೆದು ಹುಡುಗನಿಗೆ ಹೇಳಿದಳು 

"ಬಾಳ ತೆಪ್ಪ ಹುಟ್ಟಿಲ್ಲದೇ ಹೊಯ್ದಾಡುತ್ತಿದ್ದಾಗ ಹುಟ್ಟು ಹಾಕಿದ್ದು ನೀ ಬಿಟ್ಟು ಹೋದ ಮಧುರ ನೆನಪುಗಳೇ..
ಸುನಾಮಿಯಾಗದೆ ಮೃದು ಮಧುರ ನೆನಪುಗಳ ಖುಷಿಸೋ ಅಲೆಯಾಗಿ ದಡ ಸೇರಿಸಿತು ನನ್ನ ...ಇದೇ ನಾ ನನ್ನೊಟ್ಟಿಗೆ ಮಾಡಿಕೊಂಡ ಕಾಂಪ್ರಮೈಸ್ ..." ಎಂದು ಹೇಳಿ ನಿಲ್ಲಿಸಿದ ಆ ಮಧುರ ಧ್ವನಿ ತನ್ನಷ್ಟಕ್ಕೆ ತಾನೇ "ಸವಿ ನೆನಪುಗಳು ಬೇಕು ಸವಿಯಲಿ ಬದುಕು.!" ಎಂದು ಹಾಡ ಹತ್ತಿದಳು!

ಆ ಹುಡುಗ ಹೇಳಿದ  
"ನೀ ನನ್ನ ಬಿಟ್ಟು ಹೋಗಿದ್ದು ಸಣ್ಣ ಬೇಸರ ನನ್ನ ಮಟ್ಟಿಗೆ ...ನೀ ನೀನಾಗಿ ನನ್ನೊಟ್ಟಿಗಿಲ್ಲ ಅಷ್ಟೆ .."

ಆ ಮಧುರ ಧ್ವನಿ ಮಧ್ಯೆ ಬಾಯಿ ಹಾಕಿ ಹೇಳಿದಳು 

"ನೆನಪಾಗಿ ,ಕನಸಾಗಿ,ಪ್ರೀತಿಯಾಗಿ,ಆತ್ಮ ಸಂಗಾತಿಯಾಗಿ ನಾ ಯಾವತ್ತೋ ಜೋಪಾನ ಮಾಡಿದ್ದೇ ನಿನ್ನ! ಈಗಲೂ ಬೆಚ್ಚಗೆ ಇದ್ದೀಯ ನೀ ನನ್ನೊಳಗೆ....
ಆದರೆ ನನ್ನ ಯಶಸ್ಸಿಗೆ ಸಂಪೂರ್ಣವಾಗಿ ಖುಷಿಸೋ ಒಂದು ಜೀವದ ಕೊರತೆ ಮತ್ತೆ ಕಾಡುತ್ತಿದೆ ನನ್ನ, 
ಎದೆಯ ನಿಟ್ಟುಸಿರಾಗಿ, ಬೇಸರದ ಮುಸ್ಸಂಜೆಯಾಗಿ,ಮನದ ಕಣ್ಣೀರಾಗಿ, ಅದೇ ಮರಳು ದಂಡೆಯ ಬಂಡೆಯಾಗಿ, ಕೈ ತಾಕೋ ಅಲೆಯಾಗಿ. 
ಆದರೇ ನಾನಿನ್ಯಾವತ್ತೂ ಬೇರೊಬ್ಬ ಅಂಬಿಗನ ಹುಡುಕಾಟ ಮಾಡಲಾರೆ.
ಯಾಕಂದ್ರೆ ನಾ ನೀನಲ್ಲ ! 
ನನ್ನ ಪ್ರೀತಿ ಸತ್ತಿಲ್ಲ, ಒಲವು ಕವಲೊಡೆಯಲ್ಲ ..
ಬೆಚ್ಚಗಿದ್ದೀಯ ಕಣೋ ನೀನಿಲ್ಲಿ ..ನೆನಪಲ್ಲಿ ..ಮನಸಲ್ಲಿ, 
ಇಷ್ಟು ಸಾಕು ನಂಗೆ ..
ನಿನ್ನ ನೆನಪುಗಳೊಟ್ಟಿಗೆ ಬದುಕ ಸವೆದೇನು ಹೊರತು, ಹುಡುಕಿ ಬಂದ ಬೇರೊಂದು ಪ್ರೀತಿಯನ್ನ ಅನುಮೋದಿಸಲಾರೆ ನಾ ...ಅನುಸರಿಸಲಾರೆ."

ಟೂರಿಂಗ್ ಟಾಕೀಸ್ ಪೋಸ್ಟರ್ ಹಿಡಿದು ಜಟಕಾ ಬಂಡಿಯಲ್ಲಿ "ನೋಡಿ ನೋಡಿ ಇಂದೇ ನೋಡಿ ಜಂಗ್ಲಿ ಕನ್ನಡ ಚಿತ್ರ.. " ಎಂದು ಹೇಳಿ ಅದರ ಒಂದು ಗೀತೆ ಹಾಕಿದ 

"ನೀನೆಂದರೆ ನನ್ನೊಳಗೆ..  ಏನೋ ಒಂದು ಸಂಚಲನ"

ಹುಡುಗನಿಗೆ ಮನಸ್ಸು ಭಾರವಾಯಿತು ಮಧುರ ಧ್ವನಿಗೆ ಹೇಳಿದ "ನಾನಿವತ್ತೂ ತಪ್ಪಿಲ್ಲದ ನನ್ನ ತಪ್ಪಿಗೆ ಮಂಡಿಯೂರಿ ಕ್ಷಮೆ ಕೇಳುತ್ತಿದ್ದೇನೆ ನಿನ್ನಲ್ಲಿ"


ಆ ಮಧುರ ಧ್ವನಿಗೆ ದುಃಖ ತಡೆಯದಾಯಿತು 

"ನೀ ನನ್ನವನಾಗದಿದ್ದರೂ... ನನ್ನ ಪ್ರೀತಿಯೊಂದಿಗಿನ ಮಧುರ ಭಾವಕ್ಕೆ ಜೊತೆಯಾಗಿದ್ದೆ ಅನ್ನೋ ಕಾರಣಕ್ಕಾದರೂ ಒಮ್ಮೆ ಕ್ಷಮಿಸುಬಿಡು.. ನಿನ್ನ ಪ್ರೀತಿ ಮಾಡಿದ್ದ ,ಮಾಡುತ್ತಿರೋ ನಿನ್ನದೇ ಹುಡುಗಿಯನ್ನ... "  ಕಳಕೊಂಡ ಪ್ರೀತಿಯಲ್ಲಿ ಅವನದೇ ತಪ್ಪು ಅನ್ನೋಕೆ ಒದ್ದಾಡುತ್ತಿರೋ ಭಾವವನ್ನು ಅದುಮಿ ಕಣ್ಣೀರಿಟ್ಟಳು. 

ಅಲ್ಲಿವರೆಗೂ ಸುಮ್ಮನಿದ್ದ ಜೊಂಪೆ ಕೂದಲಿನ ಹುಡುಗಿ  ಆ ಮಧುರಧ್ವನಿಗೆ "ತಪ್ಪಿಲ್ಲದ ತನ್ನನ್ನೂ ತಪ್ಪಾಗಿಸಿಕೊಂಡು ಕ್ಷಮೆ ಕೇಳುತ್ತಿರೋ ಹುಡುಗಿಯ ಮಾತಾಗಿ ಹೇಳುತಿದ್ದೇನೆ, ಪ್ರೀತಿಸೋ ಜೀವವೊಂದನ್ನ ಕಳಕೊಳ್ಳದಿರು...  ಇಂತದ್ದೇ ಪ್ರೀತಿ, ಗೆಳೆಯ ...ಗೆಳೆತನ ಎಲ್ಲರಿಗೂ ದಕ್ಕಲ್ಲ ...ನಿನಗೆ ದಕ್ಕಿದ್ದ ಪ್ರೀತಿಯನ್ನ ನೀ ದೂರ ಮಾಡಿದೆ ...ಮನವೊಂದಕ್ಕೆ ಮೋಸ ಮಾಡಿದ ಪಾಪಪ್ರಜ್ನೆಯಲ್ಲಿ ಅದ್ ಹೇಗೆ ಬದುಕುವೆಯೋ ನೀ" ಎಂದಳು.  


ಆ ಹುಡುಗನನ್ನು ಉದ್ದೇಶಿಸಿ ಹೇಳುತ್ತಾ "ನಿನ್ನಲ್ಲಿದ್ದ ಅವಳ ಮನವನ್ನವಳು ಪೂರ್ತಿಯಾಗಿ ಹಿಂಪಡೆಯೋ ಮುನ್ನ ಅವಳ ಗೆಳೆಯನಾಗು ನೀ ...ಸ್ನೇಹದ ಕಡಲಿನ ಗೆಳೆತನದ ಹಾಯಿ ದೋಣಿಯ ರಾಣಿ ಕ್ಷಮಿಸಿ ಅಪ್ಪಿಯಾಳು ..."


ಆ ಹುಡುಗ ಸಿಳ್ಳೆ ಹಾಕುತ್ತ ಆ ಮಧುರ ಧ್ವನಿಗೆ ಹೇಳಿದ "ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗ ನಾನಮ್ಮ"


ಆ ಹುಡುಗಿ ಹುಡುಗನಿಗೆ ಒಂದು ಗುದ್ದು ಕೊಟ್ಟು "ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ನಕ್ಕು ನೀ ಸೆಳೆದಾಗ ಸೋತೆ ನಾನಾಗ" ಎಂದು ಹಾಡಿದಳು. 


ಮಧುರಧ್ವನಿ ತನ್ನ ಕಣ್ಣೀರನ್ನು ಒರೆಸಿಕೊಂಡು ನಸು ನಗುತ್ತಾ "ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸಜೋಡಿಗೆ ಶುಭವಾಗಲಿ" ಎಂದಳು!

Monday, May 13, 2013

ಶತಮಾನಂಭವತಿ - ಸಂಗೀತದ ಅಲೆಗಳ ಮೇಲೆ 3K ಮೆರವಣಿಗೆ!

ಸಂಗೀತದ ಅಲೆಗಳ ಮೇಲೆ ಪ್ರೇಮದ ಮೆರವಣಿಗೆ
ಅ ಆ ಇ ಈ ಕಲಿಸಲು ಬರುವುದು ಮನೆಮನೆಗೆ
ಲಾ ಲಾ...  ಲಾ ಲಾ... ಲಾ ಲಾಆಅ!!!

ರೂಪ ಸತೀಶ್ ಅವರಿಗೆ ಆಶ್ಚರ್ಯ...  ಅರೆ... ಇದೇನು ಇವತ್ತು ಈ  ಪದಗಳು ತುಂಬಾ ನೆನಪಿಗೆ ಬರ್ತಾ ಇದೆ... ಹೀಗೆ ಯೋಚಿಸುತ್ತಾ ಕುಳಿತ ಮನಸ್ಸಿಗೆ ಮತ್ತೆ ಕಾಡಿಸಲು ಶುರುವಾಯಿತು ಇನ್ನೊಂದು ಪದಗಳ ಸಾಲು!


"ಯಾರ್ ಯಾರ ಚೆಲುವೆ ಎಲ್ಲಿಹಳೋ
ಯಾರ್ ಯಾರ ಋಣುವು ಎಲ್ಲಿಹುದೋ
ಒಂದೊಂದು ಅಕ್ಕಿಯಾ ಕಾಳಿನೋಳು
ತಿನ್ನೋರಾ ಹೆಸರು ಕೆತ್ತಿದೆಯೋ"

ಯಾಕೋ ಎಲ್ಲಾ ಸರಿ ಏನೋ ಮಿಸ್ ಆಗ್ತಾ ಇದೆ ಅನ್ನಿಸಲಿಕ್ಕೆ ಶುರುವಾಯಿತು..ಇರಲಿ ಒಂದು ಲೋಟ ತಣ್ಣಗೆ ನೀರು ಕುಡಿದು ಬರುತ್ತೇನೆ .... ಆಫೀಸ್ ನ ಕುರ್ಚಿ ಬಿಟ್ಟು ಹೊರಬಂದರು. ನೀರು ಕುಡಿದರು.. ನಿರಾಳವಾಯಿತು. ತಣ್ಣಗಿನ ನೀರು ಬಿಸಿ ತಲೆಯನ್ನು ಕೊಂಚ ತಂಪು ಮಾಡಿತು. ಈಗ ಮತ್ತೆ ಮನಸ್ಸಿನ ಮಿಕ್ಸರ್ ಶುರುವಾಯಿತು...


3K ಸ್ನೇಹದ ಅಲೆಗಳ ಮೇಲೆ ಹಂಸದ ಮೆರವಣಿಗೆ
ಮುನ್ನುಡಿ ಬರೆದು ಹರಸಿದ ಹಂಲೇ ಬರವರು ಕ ಸಾ ಪ ಗೆ (ಕನ್ನಡ ಸಾಹಿತ್ಯ ಪರಿಷತ್)
ಲಾ ಲಾ...  ಲಾ ಲಾ... ಲಾ ಲಾಆಅ!!!

ವಾರೆ ವಾಹ್ ಇದು ಸರಿಯಾಗಿದೆ  ಅನ್ನಿಸಿತು... ಇರಿ ಇನ್ನೊಂದು ಹಾಡಿಗೂ ಏನಾದರೂ ತಲೆಗೆ ಹೊಳೆಯಲಿ ಎಂದು ಇನ್ನೊಂದು ಲೋಟ ತಣ್ಣಗಿನ ನೀರು ಕುಡಿದರು.... ಮಾತೆ ರಾಗ ಮಾಲಿಕೆ ಶುರು...


ಯಾರ್ ಯಾರ ಕವನ ಎಲ್ಲಿಹುದೋ
ಯಾರ್ ಯಾರ ಕಥೆಯು ಹೇಗಿಹುದೋ
ಒಂದೊಂದು ಬುಕ್ಕಿನ ಹಾಳೆಯಲೂ
ಬರೆದೋರ  ಹೆಸರು ಬರೆದಿಹುದೋ
ಪ್ರೀತಿಯಿಂದ ಕ ಸಾ ಪ ಗೆ ಬನ್ನಿರಿ
ಅಲ್ಲಿ ಬಂದು ನಮ್ ಜೊತೆ ಬೆರೆಯಿರಿ!


ಎಲ್ಲರ ಆಸೆ ಆಕಾಂಕ್ಷೆಗಳ ಒಂದು ಸಣ್ಣ ಸಮಾಗಮ - ಚಿತ್ರ ಕೃಪೆ - 3 K  ತಂಡ

ಆಹಾ! ಇದು ಸರಿ ಇದೆ ಎನ್ನಿಸಿತು.. ಹೊರಟಿತು ಶತಮಾನಂಭವತಿ ಭಾವ ಕರೆಯೋಲೆ. ಮುಗಿ ಬಿದ್ದಿತು ಭಾವ ಲೋಕದ ಕವಿಮನಗಳ ಒಂದು ಜಾತ್ರೆ.
ಚಿತ್ರ ಕೃಪೆ - 3 K  ತಂಡ - ಭಾವ ಪೂರಿತ ಕರೆಯೋಲೆ 

ಮುಗ್ಧ ಮುಖದ ಮುದ್ದು ಮನಸ್ಸಿನ ಸಹೋದರಿಯ ಸೊಗಸಾದ ಪ್ರಾರ್ಥನಾ ಗೀತೆಯಿಂದ ಶುರುವಾದ ಕಾರ್ಯಕ್ರಮ ಜೋಗದ ಜಲಪಾತದ ಸೊಬಗಿನಂತೆ ಸುರುಳಿ ಬಿಚ್ಚಿಕೊಳ್ಳುತ್ತಾ ಹೋಯಿತು. 3K ತಂಡದ ಕೇಂದ್ರ ಬಿಂದುಗಳಾದ ಕೆಲವು ಸದಸ್ಯರಿಂದ ಅತಿಥಿಗಳ ಪರಿಚಯವಾಯಿತು.

ನಂತರ ಶ್ರೀ ವಸುಧೇಂದ್ರ ಅವರ ಸುಲಲಿತವಾದ ನುಡಿಮುತ್ತುಗಳಿಂದ ಮನಪುಳಕಿತವಾಯಿತು. ಶ್ರೀ ಹಂಸಲೇಖ ಅವರು ನುಡಿದ ಮಾತುಗಳು "ಟಿ ವಿ ಯನ್ನೇ ನೋಡದ ಇವರ ಠೀವಿ ನೋಡ್ರಿ"  ವಸುದೇಂದ್ರ ಅವರ ವ್ಯಕ್ತಿತ್ವಕ್ಕೆ ಒಂದು ಕಳಶವಾಯಿತು.  ಈ ಶತಮಾನಂಭವತಿ ಪುಸ್ತಕದ ಕವಿಗಳ ಸಾಧನೆ ತೋಟದಂತಲ್ಲ.. ಅದು ನಮ್ಮ ನಿಮ್ಮೆಲರ ಮನೆಯ ಹಿತ್ತಲಿನಂತೆ ಎನ್ನುವ ಮಾತು ಬಲು ಇಷ್ಟವಾಯಿತು. ತೋಟ ವಾಣಿಜ್ಯ ಉದ್ದೇಶಕ್ಕೆ ಆದರೆ... ಹಿತ್ತಲು ಮನಸ್ಸಿನ ಆಜ್ಯಕ್ಕೆ ತಂಪೆರೆಯುವ ಕೈದೋಟ ಎನ್ನುವ ಅರ್ಥ ಗರ್ಭಿತ ಮಾತುಗಳು ಕಣ್ಣಂಚನ್ನು ಒದ್ದೆ ಮಾಡಿದ್ದು ಸುಳ್ಳಲ್ಲ.

ನಂತರ ಮಾತಾಡಿದ ಪದಗಳ ಗಾರುಡಿಗ.. ಕನ್ನಡ ಚಿತ್ರ ಗೀತೆಗಳಿಗೆ ಇನ್ನೊಂದು ದಿಕ್ಕನ್ನು ತೋರಿಸಿದ ಜಾದುಗಾರ ಶ್ರೀ ಹಂಸಲೇಖ.. ಈ ಶತಮಾನಂಭವತಿ ಪುಸ್ತಕ ಸಿದ್ಧಾಂತದ ಪ್ರಪಂಚಕ್ಕೆ ಒಂದು ಬಾಗಿಲು ಎಂದರು. ಶತ"ಸಹಸ್ರ"ಮಾನಂಭವತಿ  ಎನ್ನುವ ಅವರ ಆಶೀರ್ವಾದ ದೇವಸ್ಥಾನದ ಘಂಟನಾದದಂತೆ ಮೊಳಗಿತು. ಸುಂದರ ಪದಗಳನ್ನು ತುಂಬಿದ ಮಾತುಗಳು, ಕಳಕಳಿ ತುಂಬಿದ ಪ್ರೇಮಮಯ ಭಾವ ಕಾರ್ಯಕ್ರಮಕ್ಕೆ ಹೊಳಪು ಕೊಟ್ಟಿತು. 3K ತಂಡದ ಶ್ರಮಗಾರ್ತಿ ನಾಯಕಿ  ರೂಪ ಅವರಿಗೆ ಕನ್ನಡದ ನಿಘಂಟಿನ ಕೆಲವು ಭಾಗಗಳ ಲಭ್ಯತೆ ಬಗ್ಗೆ ಕ ಸಾ ಪ ದಲ್ಲಿ  ವಿಚಾರಿಸಿ ಎಂದಾಗ.. ರೂಪ ಅವರು ನಿಘಂಟಿನ ಎಲ್ಲಾ ಎಂಟು ಸಂಪುಟಗಳನ್ನು ಕೊಟ್ಟಿದ್ದು ಸ್ಮರಿಸಿಕೊಂಡು..  ರೂಪ ಅವರ ಉದಾರ ನಿಷ್ಕಲ್ಮಷ ಮನಸ್ಸನ್ನು ಹೊಗಳಿದರು. 

ಶ್ರೀ ಮಂಜುನಾಥ  ಕೊಳ್ಳೇಗಾಲ ಅವರು ಎಲ್ಲಾ ನೂರು ಕವಿಗಳಿಗೂ ಅಭಿನಂದನೆ ಸಲ್ಲಿಸಿದರು. ಹೆಚ್ಚು ಮಾತಾಡದೆ ಹೇಳಬೇಕಾದ್ದುದನ್ನು ಸೂಕ್ಷವಾಗಿ ತಿಳಿಸಿದಾಗ... ತುಂಬಿದ ಕೊಡ ತುಳುಕಲು ಸಾಧ್ಯವೇ ಎಂದು ಪ್ರಶ್ನಿಸಿತು ಮನಸ್ಸು. ಸಾಧನೆ ಅಪಾರ ಆದರೆ ಅಷ್ಟೇ ನಯವಿನಯದ ಸಜ್ಜನ. (ಕಾರ್ಯಕ್ರಮ ಮುಗಿದನಂತರ.. ಶ್ರೀಕಾಂತ್ ಮಂಜುನಾಥ್ ಅವರೇ ನಿಮ್ಮ ಕೆಲ ಬರಹಗಳನ್ನು ನೋಡಿದ್ದೇ ನಿಮ್ಮನ್ನು ನೋಡಿರಲಿಲ್ಲ ಎಂದಾಗ 5 ಅಡಿ ೫ ಇಂಚು ಇದ್ದ ನಾನು  ಅವರ ಸರಳತೆ ಕಂಡು ಬಲಿ   ಚಕ್ರವರ್ತಿಯ ಹಾಗೆ ಭುವಿಯೊಳಗೆ  ಇಳಿದು ಹೋಗಿದ್ದೆ, ಏನು ಸಾಧನೆ ಮಾಡದ ತಲೆಯನ್ನು ಭುಜದ ಮೇಲೆ ಇಟ್ಟುಕೊಳ್ಳದೆ ಓಡಾಡುವ ನನ್ನ ತರಹದ ಮಂದಿಯೊಳಗೆ ಮಂಜುನಾಥ್ ಸರ್ ಒಂದು ಅನರ್ಘ್ಯ ರತ್ನ)

ಭಕ್ತಿ ಭಂಡಾರಿ ಬಸವಣ್ಣ ತಾವೇ ಬರೆದ "ನುಡಿದರೆ ಮುತ್ತಿನ ಹಾರದಂತಿರಬೇಕು" ವಚನವನ್ನು ಮೆಲುಕು ಹಾಕುತ್ತಿದ್ದರು... ಅಚಾನಕ್ಕಾಗಿ ಆಚೀಚೆ ನೋಡಿ "ಲಿಂಗ ಮೆಚ್ಚಿ  ಅಹುದು ಎನ್ನುತ್ತಿದೆ" ಎಂದರು. ಅಲ್ಲೇ ಇದ್ದ ಸಭಿಕರು "ಬಸವಣ್ಣನವರೇ ಏನಿದು ನಿಮ್ಮ ಮಾತು ನಮಗೆ ಸರಿಯಾಗಿ ಅರ್ಥೈಸಿಕೊಳ್ಳಲಾಗುತ್ತಿಲ್ಲ ಎಂದಾಗ.. ಭುವಿಯಲ್ಲಿ ನೋಡಿ 3K ತಂಡದ ರೂಪ ಸತೀಶ್ ಅವರು ಮಾತಾಡುತ್ತಿರುವ ರೀತಿ... ಸ್ಫಟಿಕದ ಸ್ಪಷ್ಟತೆ, ಮುತ್ತಿನಹಾರದಂತ ಗಾಂಭೀರ್ಯತೆ, ಭಾಷೆ ಸುಲಲಿತವಾಗಿ ತೇಲಿ ಬರುತ್ತಿರುವ ನಾದದಂತೆ ಇದೆ, ಕತ್ತಲಿನಲ್ಲಿ ದೀಪ ಹಾದಿ ತೋರುವಂತೆ ತಾವೂ ಮುನ್ನೆಡೆದು ತಂಡದವರನ್ನು ಮುನ್ನೆಡೆಸುತ್ತಿರುವ ಅವರ ಧೈರ್ಯ ಸ್ಥೈರ್ಯಕ್ಕೆ ನನ್ನ ಆಶೀರ್ವಾದಗಳು ಎಂದಾಗ ಕೈಲಾಸದಲ್ಲಷ್ಟೇ ಅಲ್ಲದೆ ಬೆಂಗಳೂರಿನ ಸಭಾಂಗಣದಲ್ಲೂ ಮಿಂಚಿನ ಕರತಾಡನ.


ಚಿತ್ರ ಕೃಪೆ - 3 K  ತಂಡ
ನಂತರ 3K ತಂಡದ ಮುಖ್ಯ ಸದಸ್ಯರನ್ನು ಕರೆದು ಗೌರವ ಸೂಚಕ ಫಲಕಗಳು, ಶತಮಾನಂಭವತಿ ಎನ್ನುವ ಹೆಸರನ್ನು ಸೂಚಿಸಿದ ಬದರಿನಾಥ್ ಪಲವಳ್ಳಿ ಅವರಿಗೆ , ಕಾರ್ಯಕ್ರಮದ ರೂಪು ರೇಷೆಗಳನ್ನು ಸಿದ್ಧಪಡಿಸಿದ ರೂವಾರಿಗಳಿಗೆ ನೆನಪಿನ ಕಾಣಿಕೆಗಳನ್ನು ಕೊಟ್ಟು ಸತ್ಕರಿಸುವುದೊಂದಿಗೆ ಕಾರ್ಯಕ್ರಮ ಸುಂದರ ಅಂತ್ಯವನ್ನುಕಂಡಿತು .   

ರೂಪ ಕಣ್ಣು ತೆರೆದು ನೋಡುತ್ತಾರೆ... ಅರೆ ಅರೆ ಇದು ಕನಸಲ್ಲ.. ಇದೆಲ್ಲವೂ ನಿಜವಾಗಿಯೂ ನಡೆಯಿತೇ ಎನ್ನುವ ಒಮ್ಮೆಲೇ ಆನಂದದ ಪುಳಕ.   ನನ್ನ ಹುಟ್ಟು ಹಬ್ಬಕ್ಕೆ ಇದಕ್ಕಿಂತ ಬೇರೆ ಒಳ್ಳೆಯ ಉಡುಗೊರೆ ಸಿಕ್ಕಲಿಕ್ಕಿಲ್ಲ ಎನ್ನುತ್ತಾ ಕೂತಿದ್ದಾಗ ಮನಸ್ಸು ಮತ್ತೆ ತಣ್ಣನೆ ನೀರು ಕುಡಿಯುವ ಮನಸಾಯಿತು. ಮತ್ತೆ ಸೀಟ್ ಗೆ ಬಂದಾಗ

"ಒಂದಾನೊಂದು ಕಾಲದಲ್ಲಿ ಆರಂಭ
ಆರ್ಕುಟ್ ಫೇಸ್ ಬುಕ್ ಹಾಳೆಯಿಂದ ಪ್ರಾರಂಭ
ಹಂಸವು ಉಲಿಯಿತು ರೆಕ್ಕೆಯು ಬಲಿಯಿತು
ಭಾವ ಸಿಂಚನದಿಂದ ಶುರುವಾಗಿದ್ದು
ಶತಮಾನಂಭಾವತಿ ಆಯಿತು!!"


ಚಿತ್ರ ಕೃಪೆ - 3 K  ತಂಡ... ನೂರು ಕವಿ ಮನಗಳ ಹೆಸರು 
ಕಣ್ಣಂಚಲ್ಲಿ ಒಸರುತಿದ್ದ ಭಾವ ಸಿಂಚನವನ್ನು ಒಮ್ಮೆ ಮುಟ್ಟಿ  ನೋಡಿ ಅರೆ ಇದು .....  ಹಿರಿಯರ ಪಾದ ಧೂಳೀಯಿಂದ ಸಿಕ್ಕಿದ  "ಶತಮಾನಂಭವತಿ" ಆಶೀರ್ವಾದ... ಎಂದುಕೊಳ್ಳುತ್ತಾ ತಲೆ ಎತ್ತಿ ನೋಡಿದರೆ

"ನಗುತ ನಗುತ ಬಾಳಿ ನೀವು ನೂರು ವರುಷ
ಎಂದು ಹೀಗೆ ಇರಲಿ  ಹರುಷ 3K ವರುಷ ..." ಹಾಡು ತೇಲಿ ಬಂತು...

ಒಂದು ಸುಂದರ ಕಾರ್ಯಕ್ರಮ ಕಣ್ಣ ಮುಂದೆ ಹಾಗೆ ತೇಲಿ ಹೋಯಿತು...


ಚಿತ್ರ ಕೃಪೆ - 3 K  ತಂಡ 
ರೂಪ ಅವರಿಗೆ ಹುಟ್ಟುಹಬ್ಬಕ್ಕೆ ತಡವಾದ ಶುಭಾಶಯಗಳು .. ಹಾಗೆಯೇ ಸುಂದರ ಕಾರ್ಯಕ್ರಮವನ್ನು ಆಯೋಜಿಸಿದ ಪ್ರಾಯೋಜಿಸಿದ 3ಕ ತಂಡಕ್ಕೆ ಹಾಗೂ ಮುನ್ನೆಡೆಸಿದ ರೂಪ ಅವರಿಗೆ ಅಭಿನಂದನೆಗಳು!!!

Wednesday, May 1, 2013

ಪುಟ್ಟಿನ ಪರ್ಬದ ಹಾರೈಕೆ!

ಯೋಚನೆ ಮಾಡುತ್ತಾ ಕೂತಿದ್ದೆ!

ಅಚಾನಕ್ಕಾಗಿ ಕಿಟ್ಟು ಪುಟ್ಟು ಚಿತ್ರ ನೆನಪಿಗೆ ಬಂತು.. ಯಾಕೋ ಆ ಚಿತ್ರ ನೋಡಬೇಕು ಅನ್ನಿಸಿತು. ಪರದೆಯ ಮೇಲೆ ಚಿತ್ರ ಓಡುತ್ತಿತ್ತು. ಬೆರಳುಗಳು ಕೀಲಿ ಮಣೆಯ ಮೇಲೆ ನರ್ತನ ಮಾಡುತಿತ್ತು.

"ಮಾತೊಂದ ಹೇಳುವೆ ಹತ್ತಿರ ಹತ್ತಿರ ಬಾ
ನುಡಿ"ಮುತ್ತೊಂದ" ಕಳಿಸಿರುವೆ ಮೆತ್ತಗೆ ಮೆತ್ತಗೆ ರೀಡ್"

ಅರೆ ಇದೇನು ಹಾಡಿನ ಸಾಹಿತ್ಯವೇ ಬದಲಾಯಿತೆ ಎನ್ನುತ್ತಾ ಕತ್ತೆತ್ತಿ ಸುತ್ತಲೂ ನೋಡಿದೆ! ಮೊಬೈಲ್ ಕ್ರೀಕ್ ಕ್ರೀಕ್ ಅಂತ ಸದ್ದು ಮಾಡಿತು. ಗಡಿಯಾರ ನೋಡಿದೆ.. ಹಲ್ಲು ಕಿರಿದೆ..

ಹೊರಗೆ ಓಡಿ ಬಂದು ಆಕಾಶದ ಕಡೆಗೆ ಕಣ್ಣು ಹಾಯಿಸಿದೆ...  ಸೂರ್ಯದೇವ ನಗುತ್ತಲಿದ್ದ..

ನನಗಿಂತಲೂ ಚೆನ್ನಾಗಿ ನಗುತ್ತಾರೆ  ಅಶೋಕ್ ಶೆಟ್ಟಿ! (ಚಿತ್ರಕೃಪೆ ಅಂತರ್ಜಾಲ)

ನಾನು "ಬೆಳಕು ಬೀರುತಾ ನೀ ಬರುವೆ ....  ಇಂದೇಕೆ ನಗುತಲಿರುವೆ" ಎಂದು ಕೇಳಿದೆ

ಆಗ ಸೂರ್ಯದೇವ "ಕಾಂತ.. ಪ್ರಕೃತಿಗೆ  ನಾನು  ಬೆಳಕನ್ನು ಕೊಡುತ್ತಿರುವೆ.. ಇನ್ನೊಬ್ಬರು ಜ್ಞಾನದ ಬೆಳಕನ್ನು ಕೊಡುತ್ತಲಿರುವರು... ನನ್ನ ಬೆಳಕು ಹೊರಜಗತ್ತಿಗೆ.. ಅವರ ಬೆಳಕು ಒಳ ಜಗತ್ತಿಗೆ... ಅಂತ ಹೇಳಿ ಕಪ್ಪು ಕನ್ನಡಕ ಧರಿಸಿ ಮೋಡದ ಮರೆಯಲ್ಲಿ ಮರೆಯಾದ!
ಅವರು ಕಲಿಸುವ ನುಡಿಮುತ್ತುಗಳು ಯಾವತ್ತಿಗೂ ಸೂಪರ್ ಕೂಲ್! (ಚಿತ್ರಕೃಪೆ - ಅಂತರ್ಜಾಲ)

ಯೋಚಿಸಿದೆ ಹೌದಲ್ವಾ! . ಅಶೋಕ ಸಾಮ್ರಾಟ ಕಳಿಂಗ ಯುದ್ಧವಾದ ಮೇಲೆ ಅಪಾರ ನಷ್ಟವನ್ನು ನೋಡಿ ಸಹಿಸಲಾರದೆ ಶಾಂತಿಯ ಮೊರೆ ಹೊಕ್ಕನು. ನಮ್ಮ  ಗೆಳೆಯ ಸುಂದರ ಹೃದಯದ ಅಶೋಕ್ ಸಾಮ್ರಾಟರು ನಮ್ಮ ಮನದೊಳಗೆ ನಡೆಯುತ್ತಿರುವ ಯುದ್ಧಕ್ಕೆ ಬಿಳಿ ಬಾವುಟ ತೋರಿಸುವ ಸುಂದರ ಸಂದೇಶ ಕಳುಹಿಸುತ್ತಿದ್ದಾರೆ. ಎಷ್ಟು  ಸಾಮ್ಯತೆ ಅಲ್ಲವೇ!. ಹೌದು ಆ ಹೆಸರಿನಲ್ಲೇ ಅಂಥಹ ಒಂದು ತಾಕತ್ ಇದೆ.

ಆ ಆಶೋಕ್ ಸಾಮ್ರಾಟ ಯುದ್ಧದ ನಂತರ ಶಾಂತಿ ಸ್ಥಾಪಿಸಿದರು.. ನಮ್ಮ ನುಡಿಮುತ್ತುಗಳ.. ಸ್ನೇಹಲೋಕದ ಸಾಮ್ರಾಟ್ ಮನದೊಳಗೆ ನಡೆಯುತ್ತಿರುವ ಕಾಳಗವನ್ನು ನಿಲ್ಲಿಸಲು ಸುಂದರ ನುಡಿಮುತ್ತುಗಳನ್ನು ಹೆಣೆಯುತ್ತಾರೆ.

ನುಡಿಮುತ್ತುಗಳು ತಂಡ ಒಂದು ಸುಂದರ ಸ್ನೇಹ ಲೋಕ ! (ಚಿತ್ರಕೃಪೆ ಅಂತರ್ಜಾಲ)

ಇಂತಹ ಅಮರ ಸ್ನೇಹ ಬಯಸುವ ಸುಂದರ ಹೂವಿನ ಮನಸ್ಸುಳ್ಳ ಅಶೋಕ್ ಅವರದು ಇಂದು ಹುಟ್ಟಿದ ಹಬ್ಬ. ಇಂತಹ ಸಹೃದಯದ ಸುಂದರ ಮನಸ್ಸಿನ ನಗುಮೊಗದ ವ್ಯಕ್ತಿತ್ವಕ್ಕೆ ಶುಭಾಶಯಗಳನ್ನು ಕೋರುವ ಭಾಗ್ಯ ನನ್ನದು. 


"ದಿನೋಲ ಸೂರ್ಯೇ ಮೂಡನಗ ಪೊಸತ್ ಭರವಸೆದ ಸಂದೇಶ ಪಥರ್ಪೆ
ಮಾತಾ ಭರವಸೆಲು ಜೀವನದ ಬೊಲ್ಪು ಆಪುಂಡು
ಜೀವನ ಶಾಂತಿದ ತಾದಿ ಆಪುಂಡು
ಶಾಂತಿ ಸಂತೋಷದ ತಾದಿ ಆಪುಂಡು
ಸಂತೋಷ ದಿನನು ಬೊಲ್ಪು ಮಲ್ಪವುಂಡು
ದಿನ ಪೂರ ಸಮಯ ಎಡ್ಡೆಡು ಇಪ್ಪಡು ಪಂದು ಬೇಡುವೆ
ಪುಟ್ಟಿನ ಪರ್ಬದ ಹಾರೈಕೆ!"

ಇದಪ್ಪಾ ನಗು ಅಂದ್ರೆ ಸದಾ ಹೀಗೆ ಇರಲಿ! (ಚಿತ್ರಕೃಪೆ - ವಿಜಯ್ ಆದಿತ್ಯ)
ಅಶೋಕ್ ಸರ್ ಹುಟ್ಟು ಹಬ್ಬದ ಶುಭಾಶಯಗಳು.  ಹೃದಯ ಸಿಂಹಾಸನದಲ್ಲಿ ಕುಳಿತಿರುವ ನಿಮ್ಮ ಸಂಸಾರದಲ್ಲಿ,  "ಕುಶಿ" ಎನ್ನುವ ನಿಮ್ಮ ಮನೆಯ ದೀಪ,  ಸದಾ "ವಿನೋದ"ದಿಂದ ನಗು ನಗುತ್ತಾ...  ನಿಮ್ಮ ಮುಗ್ಧ ಸುವಾಸಿತ ನಗುವಿನ ಜೊತೆಯಲ್ಲಿ  ಸದಾ ಜೀವನದಲ್ಲಿ ಬೆಳಕು ತುಂಬಿರಲಿ.  

(ಹುಟ್ಟು ಹಬ್ಬದ ಸಂದೇಶವನ್ನು ತುಳು ಭಾಷೆಯಲ್ಲಿ ಬರೆದು ಕೊಟ್ಟ ಸ್ಮೈಲಿಂಗ್ ಸಿಸ್ಟರ್ (ಎಸ್ ಎಸ್ = ಸುಲತ ಶೆಟ್ಟಿ ಅವರಿಗೆ ಧನ್ಯವಾದಗಳು)

Saturday, March 23, 2013

Get-together- Alemaarigalu!!!

"Brother where are you?"

"100 years SS!, was just about to call you am just parking my vehicle..another 60 seconds"

New bee to alemaarigalu group, the ever smiling Sulatha was at the predestined venue at the razer sharp time. I was astonished to see her, when we had a tough battle with time, and still failed miserably...

we two were discussing all the issues under the sky, there comes a call from the solo rider, Ravikanth, "Srikanth am near the entrance to the bugal rock, where are you?"..in next few seconds he was in front of us. 

Then came the charming smiling guy Somashekar, guided him to our place, few minutes later Rolling star Darshan made his appearance with his characteristic smile. 

Energetic man famous for sublime narration , Kishor, who was on a Bangalore round trip!!!, finally landed to our place. 

Today being the inspirational day where in "real" freedom fighters, Sri Bhagat Singh, Sri Raj Guru, Sri Sukhdev,  who almost doomed the British empire in India with their selfless service to the mother land, sacrificed themselves to the knot of English Raj almost 82 years ago. To give homage to these real hero's Sandeep, and Raghu arranged the screening of the movie The Legend of Bhagat Singh in their office campus, what a gesture!..hats off two these two gentle giants, also arrived to the destined place. 

By the time it was time up for Sulatha, who had an another appointment to honor, so she rushed back home, by that time, the inspirational knowledge bank, and multifaceted personality Girish Somashekar joined us. 

There was a warm atmosphere, even though most of the eight people seeing each other for the first time, but it was hard to believe by the way they talked to each other, exchanged jokes, big high fives.  Yes yes, this is the spirit of alemaarigalu group.

One by one started cracking jokes, tripping experience, gripping tales all were re-winded for hours together. No one was feeling hungry (pardon me not all!), but everyone was interested in hearing others conversation, experience to cherish, and also debated on the next outing from the group.  Finally the debate was landed in to two options.

1. A day trip to Bheemeshwari
2. A day trip to Pustakada Mane near Pandavapura, and explore the surrounding places.

Based on the majority, will zero on the destination, and the date. 

Guitar started pulling its strings in the stomach, with out blinking the eye lids for the second time, headed towards Jolada Rotti Oota in the adjacent Kamath Bugal Rock. This was the nth time many of us going there, so we knew what to expect in the lunch menu.

The stomach full lunch was finished in no time, the suppliers were tired of serving all the items again and again. We were determined to eat whatever till the last pie of the bill :-)

While coming out, one by one started explaining the day outing
1. Kishor: I need this kind of energetic steroids, often, to recharge myself, and whenever i meet..something in me getting unlocked!!! 
2. Somashekar : My stomach is aching, I can not laugh further..don't crack any jokes please! am filled with e-motions!
3. Ravikanth : A wonderful time spent in a meaningful way! Only you people can pull me out of my solo bike rides!
4. Darshan: I can not wait till the next itinerary, please schedule ASAP, i dont want to miss the fun! If i miss, it will be camera with out a charged battery!
5. Somashekar: A wonderful team spirit, I would like to part of this all the time!
6. Sandeep: Whatever your plans are...My default answer "Am in"
7. Raghu: Plan something early, and ..................... I like to be with this team!
8. Sulatha: A nice team feel, but Girls are less, plan for a one day outing, if any gals comes in, i will be in. 

Thank you all, for making the 210 minutes of cracking entertainment all the way. Our jaw's were aching with pain and said "you fool, do not pack everything for one day!.. keep the gap between the frequency to the minimum, so you will be enjoying, cherishing the moments all the time"

So heeding to the voices of JAW's it was decided that, alternate month there will be a get-together, and alternate month there will be a outing. 

After this outing..we were like in this picture below


Thanks guys for a memorable day spent with the cracking outfit - THE ALEMAARIGALU!!!!

Wednesday, February 27, 2013

ಟೆಲ್ ಮಿ ಶ್ರೀಕಾಂತ್!!! (ಅಜಾದ್ ಸರ್ ಅವರ ಜೊತೆ ಕೆಲ ಘಂಟೆಗಳು)

"ಟೆಲ್ ಮಿ ಶ್ರೀಕಾಂತ್!!!"

ಎಸ್. ಎಸ್  ಎಲ್ಲಿದ್ದೀರಾ?

"ನಾನು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಹತ್ತಿರ ನಿಂತಿದ್ದೇನೆ ಅಣ್ಣ"

"ಸರಿ ಅಲ್ಲೇ ಇರಿ ಎರಡು ನಿಮಿಷ ಬಂದೆ" ಫೋನ್ ಕಟ್ ಆಯಿತು, ಬೈಕ್ ಓಡಿತು, ಅಲ್ಲೇ ಬೆಳದಿಂಗಳ ನಗು ಚೆಲ್ಲುತ್ತ ಎಸ್ ಎಸ್ (ಸುಲತ) ನಿಂತಿದ್ದರು. ಇಬ್ಬರು ಉ.ಕು.ಸಾಂ ವಿಚಾರಿಸಿ ಕಹಳೆ ಬಂಡೆ (ಬುಗಲ್ ರಾಕ್) ಉದ್ಯಾನ ವನದೊಳಗೆ ಹೊಕ್ಕೆವು.

ಕಹಳೆ ಬಂಡೆ ಪ್ರವೇಶ ದ್ವಾರ 

ಗಿರಿ ಶಿಖರದ ಗಿರೀಶ್ ಎತ್ತರದ ಗಿರಿಯ ಮೇಲೆ ತನ್ನ ಸ್ನೇಹಿತರ ಜೊತೆ ಕುಳಿತಿದ್ದರು. ಅವರ ಹತ್ತಿರ ಮಾತಾಡುತ್ತಾ ಕುಳಿತಿದ್ದೆವು. ಮತ್ತೆ ಕರೆ ಘಂಟೆ ಅಳಲು ಶುರುಮಾಡಿತು.

ಗೆಳೆತನ ತಬಲಾ ಇದ್ದಂತೆ ಎರಡು ಸೇರಿದರೆ ರಾಗಾ ತಾಳ ಭಾವ! 

"ಅಣ್ಣ ಇನ್ನೊಂದೆರಡು ನಿಮಿಷ ನೆಟ್ಟಕಲ್ಲಪ್ಪ ಸ್ಟಾಪ್ ಗೆ ಬರ್ತಾ ಇದ್ದೇನೆ" ಎಸ್.ಪಿ. ಯ ಮಧುರ ವಾಣಿ ಉಲಿಯಿತು . ಗಾಬರಿಯಾಗಬೇಡಿ ಎಸ್ ಪಿ. ಎಂದರೆ ಸಂಧ್ಯಾ ಪುಟ್ಟಿ. ಬೈಕ್ ಅಲ್ಲಿಗೆ ಓಡಿತು, ಸಿಗ್ನಲ್ ಹತ್ತಿರ ನಿಂತಿದ್ದೆ.

"ಅಣ್ಣ.. ಬೈಕಿನಲ್ಲಿ ಅಲ್ಲಿಯ ತನಕ ಕರೆದುಕೊಂಡು ಹೋಗ್ತೀರಾ!!!?"

ಅಚಾನಕ್ಕಾಗಿ ಬಂದ ಅಶರೀರ ವಾಣಿಯ ಕಡೆ ತಿರುಗಿದೆ... ಸುಂದರ ನಗು ಚೆಲ್ಲುತ್ತ ಎಸ್ ಪಿ. ಗಾಡಿ ಹತ್ತಿದ ಮೇಲೆ ಸೀದಾ ಪಾರ್ಕ್ ಹತ್ತಿರ ಬಂದೆವು. ಅಷ್ಟರಲ್ಲಿ ನವದಂಪತಿಗಳು ಗಿರಿಜಾ ಮೀಸೆಯ ಶಿವೂ ಹಾಗು ನಂದಿನಿ ಬಂದಿದ್ದರು.

ಇಲ್ಲೊಂದು ತ್ರಿ-ವೇಣಿಯರ ಸಂಗಮ 
"ಶ್ರೀಕಾಂತ್ ಮಣಿಕಾಂತ್ ಸರ್ ಕಾಮತ್ ಬುಗಲ್ ರಾಕ್ ಹೋಟೆಲ್ಲಿನ ಹತ್ತಿರ ಇದ್ದಾರಂತೆ, ಅಲ್ಲಿಗೆ ಹೋಗೋಣ" ಗಿರೀಶ್ ಹೇಳಿದರು.. "ಇಲ್ಲಾ ಗಿರಿ, ಪ್ರಕಾಶಣ್ಣ ಮತ್ತು ಅಜಾದ್ ಸರ್ ಇಲ್ಲಿಗೆ ಬರ್ತಾರೆ .. ಒಂದು ಸುಂದರ ಗ್ರೂಪ್ ಫೋಟೋ ತೆಗೆದುಕೊಂಡು ಆಮೇಲೆ ಅಲ್ಲಿಗೆ ಹೋಗೋಣ. ನಾನು ಹೋಗಿ ಮಣಿಕಾಂತ್ ಸರ್ ನಾ ಕರೆದುಕೊಂಡು ಬರ್ತೀನಿ"

"ಅಪ್ಪ ಅಂದ್ರೆ ಆಕಾಶ" ಎಂದ ಮಣಿಕಾಂತ್ ಸರ್, ಆಕಾಶದಲ್ಲಿನ ನೀಲಿಯಂತೆ ಸುಂದರವಾಗಿ ಮಂದಹಾಸ ಬೀರುತ್ತ ನಿಂತಿದ್ದರು, ಹತ್ತಿರ ಬಂದು "ನಮಸ್ಕಾರ..ನನ್ನ ಪುಸ್ತಕ ಬಿಡುಗಡೆಯ ಕಾಮೆಂಟರಿ ಸೂಪರ್ ಇದೆ. ತುಂಬಾ ತುಂಬಾ ಧನ್ಯವಾದಗಳು ನಿಮಗೆ..ತುಂಬಾ ಖುಷಿಯಾಯಿತು" ಎಂದರು.

"ನಿಮ್ಮ ಅಭಿಮಾನ ದೊಡ್ಡದು ಸರ್" ಎಂದೆ!

ಅಷ್ಟರಲ್ಲಿ ಗಿರೀಶ್ ಅವರ ಕರೆ "ಗಿರೀಶ್..ಶ್ರೀಕಾಂತ್ ಜೊತೆಯಲ್ಲಿ ನಾನು ಬರ್ತಾ ಇದ್ದೇನೆ.. ಎರಡೇ ನಿಮಿಷ ಬಂದೆ"   ಫೋನ್ ಕಟ್ಟಾಯಿತು..
ಇನ್ನೊಂದು ತ್ರಿ-ಮೂರ್ತಿಗಳ ಸಂಗಮ 

ಸುಲತ, ಸಂಧ್ಯಾ, ನಂದಿನಿ, ಶಿವಪ್ರಕಾಶ್, ಗಿರೀಶ್, ಮಣಿಕಾಂತ್ ಸರ್, ನಾನು ಎಲ್ಲರು ಕೂತು ಒಂದು ಚಿತ್ರ ತೆಗೆಸಿಕೊಂಡೆವು.

ಒಂದು ಸುಂದರ ಗುಂಪು!

ಅಷ್ಟರಲ್ಲಿ ಅಜಾದ್ ಸರ್ ಅವರ ಮದರಂಗಿ ಧ್ವನಿ ಫೋನಿನಲ್ಲಿ "ಶ್ರೀಮನ್.. ನಾವು ಸೀದಾ ಹೋಟೆಲ್ ಹತ್ತಿರಾನೆ ಬಂದು ಬಿಡುತ್ತೇವೆ.  ಪ್ರಕಾಶನಿಗೆ  ವಿಳಾಸ ಹುಡುಕಲು ಕಷ್ಟವಾಗುತ್ತಿದೆ. ಕಟ್ಟುತ್ತಿರುವ ಕಟ್ಟಡ, @##$ ಆಸ್ಪತ್ರೆ, ಇಂತಹ ಗುರುತುಗಳು ಹೇಳಿದರೆ ಬೇಗ ಹುಡುಕುತ್ತಾನೆ, ಸ್ಕೂಲ್, ಕಾಲೇಜು, ಪಾರ್ಕ್ ಎಂದರೆ ಅವನಿಗೆ ಕಷ್ಟ!!!!"

ಆಕರ್ಷಕ ಜ್ಞಾನದ ದಾಹ ತೀರಿಸುವ ಟ್ಯಾಂಕ್ !

ಸರಿ ನಾವೆಲ್ಲರೂ ಅವರನ್ನ ಭೇಟಿ ಮಾಡಲು ಹೋಟೆಲಿನತ್ತ ಹೆಜ್ಜೆ ಹಾಕಿದೆವು, ದಾರಿಯಲ್ಲಿ ಹೀಗೆ ಹಾಗೆ ಮಾತಾಡುತ್ತಾ ಬಂದೆವು. ಅಷ್ಟರಲ್ಲಿ ಶಮ್ಮಿ ಮೇಡಂ ಅವರ ಕುಟುಂಬ ಕೂಡ ಹೋಟೆಲಿನತ್ತಾ ಹೆಜ್ಜೆ ಹಾಕುತ್ತ ಬರುತ್ತಿದ್ದರು.

ಓದುಗರಿಂದ ಓದುಗರಿಗಾಗಿ ಓದುಗರಿಗೋಸ್ಕರ!

ಅಜಾದ್ ಸರ್ ಕೈ ಬೀಸುತ್ತಾ ತಮ್ಮ ಟ್ರೇಡ್ ಮಾರ್ಕ್ ನಗುವಿನೊಂದಿಗೆ ನಮ್ಮನ್ನು ಸ್ವಾಗತಿಸಿದರು, ಪ್ರಕಾಶಣ್ಣ ಕಣ್ಣು ಮಿಟುಕಿಸಿ ಕುಂಬಳಕಾಯಿ ಮೇಳಕ್ಕೆ ಚಾಲನೆ ಇತ್ತರು..

ಹಾ  ಈಗ ಶುರುವಾಗುತ್ತೆ ಕುಂಬಳ ಕಾಯಿ ಮೇಳ!
ಅಲಹಾಬಾದಿನಲ್ಲಿ ಕುಂಭ ಮೇಳಕ್ಕೆ ಲಕ್ಷ ಲಕ್ಷ ಜನ ಸೇರಿದ್ದರು. ಟಿ. ನರಸೀಪುರದಲ್ಲಿ ಮಿನಿ ಕುಂಭ ಮೇಳಕ್ಕೆ ಕೂಡ ಜನಸಾಗರವಿತ್ತು , ಬಸವನಗುಡಿಯ ಬುಗಲ್ ರಾಕ್ ಹತ್ತಿರ  ಮಿನಿ ಬ್ಲಾಗ್ ಮೇಳಕ್ಕೆ ಕಹಳೆ ಊದಿದರು ಪ್ರಕಾಶಣ್ಣ!

ಮೇಳಕ್ಕೆ ಕಹಳೆಯ ನಾದ 
ಮೇಳ ಎಂದಾಗ ತಿಂಡಿ ತಿನಿಸುಗಳು ಕೂಡ ಒಂದು ಭಾಗವಲ್ಲವೆ. ಸ್ನೇಹದ ಗಂಗೆಯಲ್ಲಿ ಮಿಂದೆದ್ದ ನಾವೆಲ್ಲರೂ  ಹೊಟ್ಟೆಗೆ ಪುಷ್ಕಳ ಬೋಜನಕ್ಕೆ ಅಣಿಯಾಗಿ ಕೂತೆವು. ಸಾಂಪ್ರದಾಯಿಕವಾಗಿ ಒಬ್ಬರಿಗೊಬ್ಬರ ಪರಿಚಯವಾಯಿತು. ಪ್ರಕಾಶಣ್ಣ, ಅಜಾದ್ ಸರ್, ಶಿವಪ್ರಕಾಶ್, ನಂದಿನಿ, ಮಣಿಕಾಂತ್ ಸರ್, ಶಮ್ಮಿ ಮೇಡಂ, ಅವರ ಯಜಮಾನರು, ಅವರ ಮುದ್ದು ಗುಂಡು (Hibernate modeನಲ್ಲಿ), ನಂದಿನಿ, ಸುಲತ, ಸಂಧ್ಯಾ, ಗಿರೀಶ್ ಎಲ್ಲರೂ ತಮ್ಮ  ದಂತ ಪಂಕ್ತಿಗಳನ್ನು ತೋರಿದ ಮೇಲೆ ನಗೆ ಬಾಂಬುಗಳು ಸಿಡಿಯತೊಡಗಿದವು.

ಮೀನಿನ ಹೆಜ್ಜೆಯನ್ನು ಕಂಡು ಹಿಡಿಯಬಹುದು, ಹೆಣ್ಣಿನ ಮನವನ್ನು ಓದಬಹುದು.. ಆದರೆ ಕನ್ನಡಕವಿಲ್ಲದೆ, ಜೂಮ್ ಲೆನ್ಸ್ ಇಲ್ಲದೆ ಹೋಟೆಲಿನ ಮೆನು ಓದಲು ಆಗುವುದಿಲ್ಲ ಎಂದರು ಪ್ರಕಾಶಣ್ಣ. ಅದನ್ನ ಇಷ್ಟು ದೂರ ಹಿಡಿದು ಓದಬೇಕು ಎಂದರು ಅಜಾದ್ ಸರ್!
ಹಾಸ್ಯ ಬ್ರಹ್ಮ ಅಜಾದ್ ಸರ್!

ಪ್ರಕಾಶಣ್ಣ ಮತ್ತು ಅಜಾದ್ ಸರ್ ಅವರಿಬ್ಬರ ಸುಂದರ ಗೆಳೆತನ, ಅವರ ಹಾಸ್ಯ ಪ್ರಜ್ಞೆ, ಎಲ್ಲರನ್ನೂ ಸ್ನೇಹದ ಬಂಧನದಲ್ಲಿ ಬೆಸೆಯುವ ಸಹೃದಯತೆಯ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ.

ಒಂದು ಸುಂದರ ಭಾನುವಾರ ಸುಮಧುರ ಹೃದಯಗಳ ಜೊತೆ ಕಳೆದ ಸಮಯಗಳು ಬ್ಲಾಗ್ ಲೋಕದ ಪುಟಗಳಲ್ಲಿ ಚಿನ್ನದಲ್ಲಿ ಮುಳುಗಿ ಎದ್ದ ಸಂದರ್ಭದಲ್ಲಿ ಆ ನೆನಪಿನ ಸುಂದರ ಅಕ್ಷರಗಳು ನಿಮಗಾಗಿ. ಅಜಾದ್ ಸರ್ ಅವರ ಆಗಮನದ ಖುಷಿಯಲ್ಲಿ ಬಸವನಗುಡಿಯ ಬುಗಲ್ ರಾಕ್ನಲ್ಲಿ ನಡೆದ  ಬ್ಲಾಗ್ ಲೋಕದ ಹೃದಯಗಳ ಕುಂಭ ಮೇಳಕ್ಕೆ ನಮ್ಮ ಈ ಚಿತ್ರ ಸಾಕ್ಷಿಯಾಯಿತು!!!

ಹೀಗೊಂದು ಗುಂಪು!
ಗೆಳೆತನ ಪ್ರತಿ ಚರಾಚರ ವಸ್ತುಗಳಲ್ಲೂ ಪ್ರವಹಿಸುವ ಒಂದು ಸುಂದರ ಕಂಪನ ಶಕ್ತಿ!!!