Saturday, August 9, 2014

ಚಂದ್ರಲೋಕದಲ್ಲಿ ಕೋಲಾಹಲ.. ಸುವ್ವಿ ಸುವ್ವಾಲಿ.. !!!

ಚಂದ್ರಲೋಕದಲ್ಲಿ ಕೋಲಾಹಲ.. 

ಮನುಜ ಚಂದ್ರಲೋಕದಲ್ಲಿ ಕಾಲಿಟ್ಟ ಆ ಘಳಿಗೆ ಮನುಕುಲದಲ್ಲಿ ಇಟ್ಟ ದಿಟ್ಟ ಹೆಜ್ಜೆ ದೊಡ್ಡ ಹೆಜ್ಜೆ ನಿರಂತರ ಹೆಜ್ಜೆ.. ಹೀಗೆ ಅನೇಕ ಮಾತುಗಳು ಹೊಗಳಿಕೆಗಳು ಕೇಳಿಬರುತ್ತಿದ್ದವು.. 

ಚಂದ್ರಲೋಕದಲ್ಲಿ ಕಾಲಿಟ್ಟಾ ಆ ಮಹಾಪುರಷನ ಸಂದರ್ಶನ ಮಾಡಲು ಸುಮಾರು ವರ್ಷಗಳ ನಂತರ ಮಾಧ್ಯಮಗಳೆಲ್ಲ ನಾ ಮುಂದು ತಾ ಮುಂದು ಎಂದು ಬಡಿದಾಡುತ್ತಾ.. ಆ ಕಡೆಗೆ ಹೆಜ್ಜೆ ಹಾಕಿದರು.. 

ಸಂದರ್ಶನ ಶುರುವಾಯಿತು.. 

"ನಮಸ್ಕಾರ ನಿಮ್ಮ ಸಂದರ್ಶನ ಬೇಕಿತ್ತು..  !"

"ಅರೆ.. ಅದಕ್ಕೇನಂತೆ.. ಆದರೆ ಮೊದಲು ನಾವೆಲ್ಲಾ ಚಂದ್ರಲೋಕಕ್ಕೆ ಹೋಗೋಣ.. ಅಲ್ಲಿ ಏನೋ ಕೋಲಾಹಲ ನಡೆಯುತ್ತಿದೆಯಂತೆ.. ಮೊದಲು ಅದನ್ನು ಬಗೆ ಹರಿಸಿ ನಂತರ ವಿಷಯಕ್ಕೆ ಬರೋಣ.. ನಡೆಯಿರಿ ಗಾಡಿ ಸಿದ್ಧವಿದೆ"

... 

ಎಲ್ಲರೂ ಚಂದ್ರಲೋಕಕ್ಕೆ ಹೆಜ್ಜೆ ಇಟ್ಟರು.. 

ಸೂರ್ಯನ ಬೆಳಕು.. ಪ್ರತಿಫಲಿಸುವ ಆ ಸುಂದರ ಗೋಲ... ಭುವಿಗಿಂತ ಇನ್ನಷ್ಟು ಸುಂದರವಾಗಿ ಕಾಣುತ್ತಿತ್ತು... 

ಆ ಮಹಾಪುರುಷ.. ಚಂದ್ರನನ್ನೇ ಕೇಳಿದ.. 

"ಚಂದ್ರಪ್ಪ ಏನಪ್ಪಾ ನಿನ್ನ ಸಂಕಟ.. ಯಾಕೆ.. ಏನಾಯ್ತು.. "

ಚಂದ್ರ ನಿಧಾನಕ್ಕೆ ಬಾಯಿ ಬಿಟ್ಟಾ.... !

"ಅಲ್ಕನ್ರಪ್ಪ.. ನನ್ನ ಲೋಕದಲ್ಲಿ ಇರುವ ಗುಳಿಗಳು ಚೆನ್ನಾಗಿವೆ ಅಂಥಾ ಚಿತ್ರ ತೆಗೆದು ಭೂಲೋಕದಲ್ಲಿ ಹಂಚಿದ್ದೀರಿ... ಮಕ್ಕಳಿಗೆ ನನ್ನ ಲೋಕದಲ್ಲಿರುವ ಗುಳಿಗಳು ಮೊಲದಂತೆ ಇವೆ.. ಜಿಂಕೆಯಂತೆ ಇವೆ ಎಂದು ತೋರಿಸುತ್ತಾ ನೂರಾರು ಕಥೆ ಕಟ್ಟಿ ಮಕ್ಕಳಿಗೆ ಹೇಳಿದ್ದೀರಿ.. ಆದರೆ.. 

"ಏನಪ್ಪಾ ಚಂದ್ರಪ್ಪ ಏನು ಆದರೆ.. ಮುಂದುವರೆಸು"

ನೀನೆ ನೋಡು ಈ ಗುಳಿಗಳನ್ನು.. ಎಂದು ತನ್ನ ಲ್ಯಾಪ್ಟಾಪ್ ನಲ್ಲಿದ್ದಾ ಕೆಲವು ಗುಳಿಗಳ ಚಿತ್ರಗಳನ್ನು ತೋರಿಸಿದ ಚಂದ್ರಪ್ಪ... 








"ಹೌದು.. ಚಂದ್ರಲೋಕದಲ್ಲಿರುವ ಗುಳಿಗಳು ನಮ್ಮ ಭುವಿಯಲ್ಲಿ ತುಂಬಾ ಪ್ರಸಿದ್ಧ.. ಅದಕ್ಕೇನು ನಿನ್ನ ಸಂಕಟ "

"ಇರಪ್ಪ.. ನಾ ಹೇಳುವ ಮಾತು ಕೇಳು.. "

"ಸರಿ ಹೇಳು"

"ನನ್ನ ಲೋಕದಲ್ಲಿರುವ ಗುಳಿಗಳು ಪ್ರಸಿದ್ಧ ಸುಂದರ ಹೌದು.. ಆದರೆ ಈ ಕೆಳಗಿನ ಕೆಲವು ಚಿತ್ರಗಳನ್ನು ನೋಡಿ ಆ ಮೇಲೆ ಹೇಳು.. "

ಸ್ವಲ್ಪ ಹೊತ್ತು.. ಮೌನ ರಾಗ.. ಏನು ಹೇಳಲು ತೋಚುತ್ತಿಲ್ಲಾ ಆ ಮಹಾಪುರುಷನಿಗೆ... ಕನಸು ಕಂಗಳನ್ನು ದೊಡ್ಡದಾಗಿ ಬಿಡುತ್ತಾ ಅದರಲ್ಲಿನ ಭಾವಗಳನ್ನು ತುಂಬಿಕೊಂಡು.. "ಹೌದು ಚಂದ್ರಪ್ಪ ನೀ ಹೇಳೋದು ಸರಿ.. .. ಆ ಭಾವ.. ಆ ಮೌನ.. ಆ ಮೌನಕ್ಕೆ ಪದಗಳನ್ನು ಜೋಡಿಸುವ ಪರಿ ಆಹಾ.. ಎಂಥಹ ಗುಳಿಗಳನ್ನು ತುಂಬಿಬಿಡುತ್ತದೆ.. ಅದರ ಜೊತೆಯಲ್ಲಿ ಇನ್ನೊಂದು ವಿಷ್ಯ ಗೊತ್ತಾ ಚಂದ್ರಪ್ಪ.. "

"ಆ ಚಿತ್ರಗಳ ಬಗ್ಗೆ ತಾನೇ ನೀ ಹೇಳೋದು.. "

"ಹೌದು ಚಂದ್ರಪ್ಪ.. ಶ್ರೀಕಾಂತನ ಜೀವನದಲ್ಲಿ ಸಿಕ್ಕ ಅದ್ಭುತ ಸಹೋದರಿ.. ಈ ಸುಂದರ ಗುಳಿಯ ಪುಟ್ಟಿ.. ಅಣ್ಣಯ್ಯ ಎನ್ನುವಾಗ ಅವನ ಮೊಗದಲ್ಲಿ ಸಿಗುವ ಸಂತಸ.. ಹಾಗೆ ಅವನು ಪುಟ್ಟಿ ಸುಷ್ಮಾ ಎಂದಾಗ ಅವಳ ಕಣ್ಣಲ್ಲಿ ಸೂಸುವ ಭಾವ.... ಆ ಭಾವಕ್ಕೆ ಎಷ್ಟು ಪದಗಳನ್ನು ತುಂಬಿದರೂ ನನ್ನ ಗುಳಿ ತುಂಬಲಾರದು.. ಪದ ಸಂಪತ್ತು ಸಾಲುವುದಿಲ್ಲ.. "

"ಹೌದು ಮಹಾ ಪುರುಷ ಅದಕ್ಕೆ ನನಗೆ ಒಂದು ಸಣ್ಣ ಅನುಮಾನ ಬಂತು.. ನನ್ನಲ್ಲಿರುವ ಈ ಗುಳಿಗಳು ಸುಂದರವೋ ಅಥವಾ ಶ್ರೀಕಾಂತನ ಸಹೋದರಿಯ ಕೆನ್ನೆಯಲ್ಲಿ ಮೂಡುವ ಗುಳಿಗಳು ಸುಂದರವೋ.. ?" 

"ಚಂದ್ರಪ್ಪ.. ಶ್ರೀಕಾಂತನಿಗೆ ಜೋಡಿ ಧಮಾಕ.. ಯಾಕೆ ಗೊತ್ತಾ.. ಪುಟ್ಟಿ ಸುಷ್ಮಾಳ ಅತ್ತಿಗೆಯ ಕೆನ್ನೆಯಲ್ಲೂ ಗುಳಿ, ಪುಟ್ಟಿ ಸುಷ್ಮಾಳ ಸೊಸೆಯ ಕೆನ್ನೆಯಲ್ಲೂ ಗುಳಿ... 

ಇನ್ನೂ 

ಪುಟ್ಟಿ ಸುಷ್ಮಾಳ ಕೆನ್ನೆಯ ಗುಳಿ.. ಆಹಾ.. ನೀನೆ ನೋಡು ..." 







ಅದಕ್ಕೆ ಇಂಥಹ ಸುಂದರ ಪರಿವಾರವನ್ನು ಕಂಡಾಗ ನಾನು ಕೂಡ ಭುವಿಗೆ ಹೋಗಬೇಕು ಎಂದು ಹಠ ಮಾಡುತ್ತಿದ್ದೆ ಅದಕ್ಕೆ ಕೋಲಾಹಲವಾಗುತ್ತಿತ್ತು ಅಷ್ಟೇ.. ಸರಿ ನೀನು ಪುಟ್ಟಿ ಸುಷ್ಮಾಳಿಗೆ ಜನುಮದಿನದ ಶುಭಾಶಯವನ್ನು ಹೇಳಿ.. ನೀ ಸಂದರ್ಶನ ಮುಗಿಸಿ... ಇನ್ನೇನು ನಾಳೆ ಪೌರ್ಣಮಿ.. ಪುಟ್ಟಿ ಸುಷ್ಮಾಳ ಜನುಮದಿನಕ್ಕೆ ಶುಭಾಷಯ ಕೋರಿ ಅವಳ ಬಾಳಲ್ಲಿ ಸದಾ ಬೆಳಕು ಇರಲೆಂದು ನಾ ನನ್ನ ಬೆಳದಿಂಗಳನ್ನು ಅವಳ ಮೌನ ರಾಗದ ಮೂಲಕ ಕನಸು ಕಂಗಳ ತುಂಬಾ ತುಂಬಿ ತುಂಬಿ ಕೊಡುತ್ತಿರುತ್ತೇನೆ.. 

******************************

"ಪುಟ್ಟಿ ನೀ ನನಗೆ ಸಿಕ್ಕ ಅದ್ಭುತ ಸಹೋದರಿ.. ನಿನ್ನ ಮಾತುಗಳು ನೇರ ದಿಟ್ಟ.. ಆದರೆ ನಿನ್ನ ಮಿಡಿವ ಮನ ಸದಾ ನಿರಂತರವಾಗಿ ಪ್ರೀತಿ ಮಮತೆ ವಾತ್ಸ್ಯಲ್ಯದ ಮುಖವನ್ನು ಹೊತ್ತು ನೆಡೆದಾಡುತ್ತಿರುತ್ತದೆ..  

ಜನುಮ ದಿನದ ಶುಭಾಶಯಗಳು!!!