ಬಾಸ್ ಪ್ಲಾನ್ ಯಾವಾಗಲೂ ವಿಶೇಷ ಮತ್ತು ವಿಶಿಷ್ಠ!!!
 |
ಪ್ಲಾನಿಂಗ್ ಬಾಸ್ |
ಬೆಂಗಳೂರಿನಲ್ಲಿ ಮಾರ್ಚ್ ತಿಂಗಳು ಆ ಮಟ್ಟಿಗೆ ಚಳಿ ಇರೋದಿಲ್ಲ.. ಅದು ಎಲ್ಲರಿಗೂ ಗೊತ್ತು..
ಛಳ್.. ಛಳ್ ಒಂದಷ್ಟು ಹಸಿ ಬಿಸಿ ನೀರು ಮೈ ಮೇಲೆ ಬಿತ್ತು .. ನಿದ್ದೆಯ ಮಂಪರಿನಿಂದ ಎದ್ದ ವಿಕ್ಟರ್.. ಕಣ್ಣನ್ನು ಮತ್ತೆ ಉಜ್ಜಿಕೊಂಡಿತು..ಮತ್ತೆ ಒಂದು ಒಣಗಿದ ಬಟ್ಟೆಯಿಂದ ಮೈಯನ್ನು ತನ್ನ ಯಜಮಾನ ಒರೆಸುತ್ತಿದ್ದದ್ದು ಕಂಡು ಬಂತು.. ಮನಸ್ಸಿಗೆ ಸಂತಸ ತಂದಿತು.. ಯಜಮಾನ ಒಮ್ಮೆ ವಿಕ್ಟರ್ ನ ಮೈಯನ್ನು ತಡವಿದ.. ಇವತ್ತು ನೀನು ಕಣೋ.. "ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತಿದ್ದೀಯ.. " ವಿಕ್ಟರ್ ನಿಂತಲ್ಲೇ ಮೆಲ್ಲಗೆ ಮೈಯನ್ನು ಅಲುಗಿಸಿ ತನ್ನ ಸಮ್ಮತಿ ಕೊಟ್ಟಿತು.. ಹೊರಗೆ ನಿಂತಿದ್ದ ರಿಟ್ಜ್ ಗೆ ಸಂತಸವೋ ಸಂತಸ.. ತನ್ನ ಅಣ್ಣ ತನ್ನ ಯಜಮಾನನ ಮಿತ್ರರನ್ನ ಭೇಟಿಯಾಗುತ್ತಿದ್ದನಲ್ಲ ಎಂದು!!!
ವಿಕ್ಟರ್ ರಿಟ್ಜ್ ಗೆ ಹೇಳಿತು.. "ಸಾರಿ ಕಣೋ.. ಇವತ್ತು ನಿನ್ನ ಬದಲಿಗೆ ನಾ ಹೋಗುತ್ತಿದ್ದೇನೆ.. "
ನೋಡು ವಿಕ್ಟರ್ ನನ್ನ ಯಜಮಾನನ ಜೊತೆಯಲ್ಲಿ ಎಷ್ಟೋ ಮುಖ್ಯ ಘಟನೆಗಳಿಗೆ ನಾ ಸಾಕ್ಷಿಯಾಗಿದ್ದೇನೆ.. ನಾ ಬರುವ ತನಕ ನೀ ತಾನೇ ನಮ್ಮ ಯಜಮಾನನನ್ನು ಹೊತ್ತು ತಿರುಗಿಸುತಿದ್ದದು.. ಈಗಲೂ ನಮ್ಮಿಬ್ಬರನ್ನು ತನ್ನ ಹೃದಯ ಕಮಲದಲ್ಲಿ ಇಟ್ಟುಕೊಂಡಿದ್ದಾನೆ.. ಹಾಗಾಗಿ. ನಾ ಹೋದರೇನು ನೀ ಹೋದರೇನು.. ನಮ್ಮ ಯಜಮಾನನ ಸಂತಸ ಮುಖ್ಯ :-).. ನೀನು ಇವತ್ತಿನ ಕಾರ್ಯಕ್ರಮವನ್ನು ನಿನ್ನದೇ ಶೈಲಿಯಲ್ಲಿ ನೀ ಬಂದ ಮೇಲೆ ಹೇಳಬೇಕು ಆಯ್ತಾ.. ಹೋಗಿ ಬಾ ಆಲ್ ದಿ ಬೆಸ್ಟ್ ವಿಕ್ಟರ್..
ಮುಂದೆ... ವಿಕ್ಟರ್ ಉವಾಚ.. !!!
ಲಾಲ್ ಬಾಗ್ ಒಂದು ಐತಿಹಾಸಿಕ ಕ್ಷಣಕ್ಕೆ ಕಾಯುತ್ತಿತ್ತು.. ಸಾಮಾನ್ಯವಾಗಿ ಸಾಮಾಜಿಕ ತಾಣಗಳು ಮನುಜನನ್ನು ಗುಬ್ಬಿಯನ್ನಾಗಿಸಿದೆ.. ಕೈ ಚಾಚಿದರೆ ಸಿಗುವ ಗೆಳೆಯರು.. ಒಂದೆರಡು ಟಚ್ ನಲ್ಲಿ ಜಗತ್ತಿನ ಮೂಲೆ ಮೂಲೆಯಲ್ಲಿದ್ದರೂ ಗೆಳೆಯ ಗೆಳತಿಯರ ಬಗ್ಗೆ ಮಾಹಿತಿಗಳು.. ಇವೆಲ್ಲವೂ ಅರೆ ನಾವೇನೂ ಚಂದ್ರಲೋಕದಲ್ಲಿದ್ದೇವೋ ಅಥವಾ.. ನ್ಯೂಟನ್ ನಿಯಮಗಳಿಗಿಂತ ಮುಂದಿದ್ದೇವೋ .. ಹೀಗೆ ಪ್ರಶ್ನೆಗಳು ಎದ್ದು ನಿಲ್ಲುವ ಹೊತ್ತದು..
 |
ತಂತ್ರಜ್ಞಾನ ಕೈಗೆಟುಕುವ ಹಾದಿ - ಚೂರು ಪಾರು ಜಾರು |
ಆದರೆ ನಾವು ನೆಡೆಯುವ ಹಾದಿಗಳು ಕಣ್ಣಿಗೆ ಕಾಣುತ್ತಿರುತ್ತವೆ.. ಆದರೆ ಆ ಹಾದಿಯಲ್ಲಿ ಅಪರಿಚಿತ ಮುಖಗಳು ಹೆಚ್ಚು ಇರುತ್ತವೆ.. ಕಾಣುವ ಹಾದಿಯಲ್ಲಿ ಹೆಜ್ಜೆ ಹಾಕುತ್ತಾ ಸಾಗಿದಾಗ ನಮ್ಮ ಜೀವನದ ಹಾದಿಯಲ್ಲಿ ಹೆಜ್ಜೆ ಗುರುತು ಮೂಡಿಸಿದ ವ್ಯಕ್ತಿಗಳು, ಗೆಳೆಯರು,ಗೆಳತಿಯರು, ಗುರುಗಳು, ಸಾಧಕರು ಇವರೆಲ್ಲರ ನುಡಿಮುತ್ತುಗಳು ಮಾಣಿಕ್ಯವಾಗಿ ನಮ್ಮ ಜೀವನದ ಕೊರಳಿನ ಸರಕ್ಕೆ ಮಣಿಗಳಾಗುತ್ತವೆ..
 |
ಹೆಜ್ಜೆ ಗುರುತು ಮೂಡಿಸಿದ ಹಾದಿ ಎಂದಿಗೂ ಸುಂದರ |
ಒಂದು ಸಣ್ಣ ತಂತು ದೊಡ್ಡ ಬೆಸುಗೆಗೆ ನಾಂದಿಯಾಗುತ್ತದೆ ಎಂದು ಓದಿದ್ದ ನೆನಪು.. ಮತ್ತು ಅದು ನಿಜವಾಗುವ ಹೊತ್ತು ಕೂಡ ಕಾಲಗರ್ಭದಲ್ಲಿ ಹೂತು ಹೋಗಿದ್ದ ಆ ಕ್ಷಣ ಬಂದೆ ಬಿಟ್ಟಿತ್ತು..
ಒಂದೊಂದೇ ಜೋಡಿ ಹೆಜ್ಜೆಗಳು ಸ್ನೇಹದ ಕಡಲಿನ ತರಂಗಗಳ ಸ್ಪರ್ಶಕ್ಕೆ ಹಾತೊರೆದು ಬರುತ್ತಿದ್ದವು.. ಪ್ರತಿ ಹೆಜ್ಜೆಗಳು, ಪ್ರತಿ ತರಂಗಗಳು ತರುತ್ತಿದ್ದ ನೆನಪುಗಳು, ಮಾಹಿತಿಗಳು, ಕೀಟಲೆಗಳು, ತಮಾಷೆಯ ಕಾಲೆಳೆತಗಳು, ಮೂವತ್ತು ವರ್ಷಕ್ಕೂ ಹಿಂದಕ್ಕೆ ಅನಾಯಾಸವಾಗಿ ನಮ್ಮ ಕ್ಷಣಗಳು ಓಡಾಡುತ್ತಿದ್ದದು ನೋಡಿದರೆ ಆ ಬ್ರಹ್ಮನೂ ಒಮ್ಮೆ ಬೆರಗಾಗುತ್ತಿದ್ದ ಅನ್ನಿಸುತ್ತದೆ. ಆ ರೀತಿಯಲ್ಲಿ ಇತ್ತು ಇಂದಿನ ಹಬ್ಬದ ವಾತಾವರಣ..
ಒಂದೊಂದು ಸ್ನೇಹದ ಮನಸ್ಸು ಸ್ನೇಹದ ತರಂಗಗಳ ಮೇಲೆ ತೇಲಿ ಬಂದಾಗ ಒಂದೊಂದು ರೀತಿಯ ಅನುಭವ.. ತಂಗಾಳಿಯ ತರಹ ಕೆಲವರು ಬಂದರೆ, ಸುಗಂಧದ ಗಂಧ ಹೊತ್ತು ಬಂದವರು ಇನ್ನೊಬ್ಬರು, ನಗೆಗಡಲಿನ ಹಾಯಿ ದೋಣಿಯಲ್ಲಿ ಬಂದವರು ಒಬ್ಬರಾದರೆ, ಸುವಾಸಿತ ನಗುವಲ್ಲಿ ಮಿಂದು ಬಂದವರು ಇನ್ನೊಬ್ಬರು, ತಾಳ್ಮೆಯ ಹೆಜ್ಜೆ ಹಾಕುತ್ತ ಬಂದು ಎಲ್ಲರ ಹೃದಯಕ್ಕೂ ತಾಕುವ ಮನಸ್ಸಿನವರು ಒಬ್ಬರಾದರೆ, ಬಂದ ತಕ್ಷಣವೇ ಪ್ರಕೃತಿಯೇ ಒಮ್ಮೆ ಬೆಚ್ಚಿ ನಡುಗಿ ತನ್ನ ರೆಂಬೆ ಕೊಂಬೆಗಳನ್ನು ಧರೆಗೆ ಸೇರುವಂತೆ ಮಾಡಿಸುವವರು ಒಬ್ಬರು.. ಹೀಗೆ ಅಲ್ಲಿ ನವರಸ ಭಾವವೂ ಮಿಳಿತವಾಗಿತ್ತು..
ಮೂವತ್ತು ವರ್ಷಗಳು ಅಂದರೆ ಒಬ್ಬರು.. ಇನ್ನೊಬ್ಬರು ಅಲ್ಲಾ ಅಲ್ಲ ಮೂವತ್ತ ಮೂರು, ಮೂವತ್ತಾ ನಾಲ್ಕು ಹೀಗೆ ಲೆಕ್ಕಗಳು ಹಾಗೆ ಹೀಗೆ ಆಗುತ್ತಿದ್ದವು ಆದರೆ ಆ ನಿರ್ಮಲ ಮನಸ್ಸಿನ, ಯಾವುದೇ ಜಂಜಾಟವಿಲ್ಲದ, ಕಪಟತನವಿಲ್ಲದ ಗೆಳೆತನದ ಮನಸ್ಸು ಎಲ್ಲರನ್ನು ಬಂಧಿಸಿತ್ತು.
ಪ್ರಾಥಮಿಕ ಶಾಲಾದಿನಗಳು ನಮ್ಮನ್ನು ಪ್ರಮುಖ ಹಾದಿಯಲ್ಲಿ ನೆಡೆಸಲು ಸಜ್ಜು ಗೊಳಿಸುವ ಹಂತ.. ಆ ಹಂತದಲ್ಲಿ ಈಜಿಕೊಂಡು, ಓಡಿಕೊಂಡು, ನೆಡೆದುಕೊಂಡು, ತೆವಳಿಕೊಂಡು ಬಂದಿದ್ದ ಗೆಳೆಯ ಗೆಳತಿಯರ ಸಮಾಗಮ ಒಂದು ಶತಮಾನದ ಅದ್ಭುತ ಎಂದು ಹೇಳಬಹುದು.. ಮೂರು ದಶಕಗಳು ನಮ್ಮ ಬಾಳಿನ ರಥವನ್ನು ಎಲ್ಲಾ ಕಡೆಯೂ ಹರಿಸಿತ್ತು.
 |
ಸ್ನೇಹಕ್ಕೆ ಒಂದೇ ಮಾತು !!! |
ಅವರವರು ಆಯ್ದು ಕೊಂಡ ವೃತ್ತಿ ಕ್ಷೇತ್ರದಲ್ಲಿ ಮೇರು ಮಟ್ಟವನ್ನು ತಲುಪಿದವರೇ ಇದ್ದವರು ಅಲ್ಲಿ.. ಅವರವರ ಸಾಧನೆಗೆ ಅವರ ಏಳಿಗೆಗೆ ಕಾರಣೀಕರ್ತರು ಹಲವಾರು ಆದರೆ ಎಲ್ಲರನ್ನು ಎಲ್ಲವನ್ನು ನೆನೆಪಿಸಿಕೊಳ್ಳುವ ಒಂದು ಭಾವುಕ ಕ್ಷಣವೂ ಅದಾಗಿತ್ತು.
ಸತೀಶ, ಮೋಹನ, ನವನೀತ, ಸುಧಾ, ನಂದಿನಿ, ಸುರೇಶ ಇವರುಗಳು ಪ್ರಮುಖರು.. ನಮಗೆ ಅವರ ಪರಿಚಯವಿದೆ.. ಅವನು ನನಗೆ ಗೊತ್ತು, ಇವಳು ನನಗೆ ಗೊತ್ತು.. ಮಾತಾಡಿಸಿ ಅವರ ಮೊಬೈಲ್ ಸಂಖ್ಯೆ ಕೊಡುತ್ತೇನೆ ಎಂದು ಒಂದು ರೀತಿಯಲ್ಲಿ ತಪಸ್ಸು ಮಾಡಿದಂತೆ ವಿವರಗಳನ್ನು ಕೊಟ್ಟು.. ಕೇವಲ ಅರವತ್ತು ದಿನದೊಳಗೆ ಸುಮಾರು ಹತ್ತಿರ ಹತ್ತಿರ ೩೦ ಸಹಪಾಠಿಗಳ ವಿವರಗಳನ್ನು ನನಗೆ ಕೊಟ್ಟರು.. ಇದೊಂದು ದಾಖಲೆಯೇ ಹೌದು.. ನಮ್ಮ ದಿನಗಳಲ್ಲಿ ಟೆಲಿಫೋನ್ ಒಂದೇ ಮಾಹಿತಿ ಕೇಂದ್ರವಾಗಿತ್ತು.. ಅನಂತರ ಜೀವನದ ಏಳು ಬೀಳುಗಳು ನಮ್ಮನ್ನೆಲ್ಲ ಈ ಮಾಯಾನಗರಿಯ, ಮಹಾನಗರಿಯ ಮೂಲೆ ಮೂಲೆಗೆ ಕಳುಹಿಸಿತ್ತು.. ಆದರೆ ಈ ಮೇಲೇ ಹೆಸರಿಸಿದ ಹಾಗೂ ಅವರ ಜೊತೆಯಲ್ಲಿ ಕೈಗೂಡಿಸಿದ ಪ್ರಕಾಶ ಎಂ ಎಸ್ ಇತರರ ಸಹಾಯದಿಂದ.. ಈ ಹನಿಯಾಗಿದ್ದ ಗುಂಪು ಒಂದು ನದಿಯಾಗಿ ಹರಿಯತೊಡಗಿದೆ.
ಪ್ರತಿಯೊಬ್ಬರಲ್ಲಿಯೂ ಈ ಭೇಟಿ ಒಂದೇ ಭೇಟಿಗೆ ನಿಲ್ಲಬಾರದು.. ಅವಿರತವಾಗಿ ಸಾಗಬೇಕು.. ಎಲ್ಲರ ಪರಿಚಯ ಎಲ್ಲರಿಗೂ ಆಗಬೇಕೆ ಎನ್ನುವ ಕಾಳಜಿ ಎಲ್ಲರಲ್ಲೂ ಇದ್ದದ್ದು ವಿಶೇಷ. ಇಂದು ಸೇರಿದ ಸುಮಾರು ಇಪ್ಪತ್ತೈದು ಮಂದಿ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಜೊತೆಯಾಗಿದ್ದವರಲ್ಲ.. ಮಧ್ಯದಲ್ಲಿ ಬಂದು ಸೇರಿದ, ಮಧ್ಯದಲ್ಲಿ ಬಿಟ್ಟು ಹೋದ, ಆರಂಭದಿಂದ ಕೊನೆಯವರೆಗೂ ಇದ್ದ.. ಮಧ್ಯದಲ್ಲಿ ಬಂದು ಮಧ್ಯದಲ್ಲಿಯೇ ಬಿಟ್ಟು ಹೋದ ಹೀಗೆ ನಾನಾ ಪ್ರಕಾರವಾದ ಕೊಂಡಿಗಳು, ಬಿರುಕುಗಳು ಇದ್ದರೂ ನಮ್ಮನ್ನೆಲ್ಲ ಬಂಧಿಸಿದ್ದು ಒಂದೇ .. ಅದೇ
"ಗೆಳೆತನಕ್ಕೆ ಮಿಡಿಯುತ್ತಿದ್ದ ಮನಸ್ಸು"
 |
ಜೊತೆಯಾಗಿ ಹಿತವಾಗಿ ಸೇರಿ ನಲಿವ ಸೇರಿ ನುಡಿವ |
ಎಲ್ಲರಿಗೂ ಸಂತಸ ತಂದ ದಿನವಿದು.. ಮತ್ತೊಮ್ಮೆ ಎಲ್ಲರೂ ಸೇರುವ ವಿಶ್ವಾಸ ಮೂಡಿಸಿದ್ದು ಈ ಭೇಟಿಯ ವಿಶೇಷವಾಗಿತ್ತು. ಆರಂಭಿಕ ವಿದ್ಯಾಭ್ಯಾಸದ ದಿನಗಳ ಗುರುಗಳು ನಮ್ಮ ಜೀವನವನ್ನು ರೂಪಿಸುವಲ್ಲಿ ಪ್ರಮುಖಪಾತ್ರ ವಹಿಸುತ್ತಾರೆ ಎಂದು ಮೇಲೆ ಉಲ್ಲೇಖ ಮಾಡಿದ್ದಂತೆಯೇ.. ಆ ಗುರುಗಳನ್ನು ನಮ್ಮ ಶಕ್ತಿಗೆ ಅನುಸಾರವಾಗಿ, ನಮ್ಮ ಶ್ರದ್ಧೆ ಭಕ್ತಿಗೆ ಅನುಸಾರವಾಗಿ ನಮ್ಮ ಗೌರವ ತೋರಿಸಬೇಕು ಎನ್ನುವ ಎಲ್ಲರ ಒಕ್ಕೊರಲಿನ ಮನವಿಯ ಕರೆಗೆ ಒಗೂಡುತ್ತಾ ಬರುವ ಏಪ್ರಿಲ್ ಮಾಸದ ಒಂದು ಶುಭ ಭಾನುವಾರ.. ಮತ್ತೆ ಎಲ್ಲರೂ ಸೇರುವ ಜೊತೆಯಲ್ಲಿ ಶಿಕ್ಷಕರ ಜೊತೆಯಲ್ಲಿ ಒಂದಷ್ಟು ಸಂಭ್ರಮದ ಘಳಿಗೆಯನ್ನು ಕಳೆಯುವ ನಿರ್ಧಾರದೊಂದಿಗೆ ಇಂದಿನ ಭಾವುಕ ಭೇಟಿ ಸುಸಂಪನ್ನವಾಗಿತ್ತು.
ಎಲ್ಲರಿಗೂ ಈ ಭೇಟಿಯ ಕ್ಷಣಗಳನ್ನು ಬಂಧಿಸಿಟ್ಟುಕೊಳ್ಳಬೇಕು ಎನ್ನುವ ಕಾತುರ ಎಷ್ಟು ಇತ್ತು ಎನ್ನುವುದಕ್ಕೆ ಸಾಕ್ಷಿ ಈ ಗೆಳಗಿನ ಚಿತ್ರ..
 |
ಕ್ಷಣಗಳನ್ನು ಕ್ಷಣ ಕ್ಷಣಕ್ಕೆ ಹಿಡಿಯುವ ಜಾದೂಗಾರರು !!! |
ಈ ಸುಂದರ ದಿನ. ಸುಮಧುರ ಮಿಲನದ ದಿನ ಎಂದು ಕರೆದವರು ಒಬ್ಬರು, ಮನಸ್ಸಿಗೆ ಮುದ ನೀಡಿದ ರೋಮಾಂಚನಗೊಳಿಸಿದ ದಿನ, ಮಧುರ ಮಿಲನದ ದಿನ.. ಸೂಪರ್ ಸಂಡೇ ಎಂದವರು ಒಬ್ಬರು.. ಗೆಳೆಯರ ಮಿಲನದ ದಿನ ಎಂದವರು ಒಬ್ಬರು, ಇಂದಿನ ದಿನ ಸುದಿನ ಎಂದವರು ಇನ್ನೊಬ್ಬರು.. ತಮ್ಮ ಅನುಭವದ ಬುತ್ತಿಯನ್ನು ಗೆಳೆಯ ಗೆಳತಿಯರ ಜೊತೆಯಲ್ಲಿ ಹಂಚಿಕೊಂಡ ಕ್ಷಣ ಮಧುರ..
ಚಿಟ್ಟಿಬಾಬು ಮತ್ತು ಭಾಗ್ಯಲಕ್ಷ್ಮಿ ಸಿಹಿಯನ್ನು ತಂದು ಎಲ್ಲರಿಗೂ ಹಂಚಿದ್ದು ಈ ಗೆಳೆತನದ ಸ್ವರ್ಗಕ್ಕೆ ಮೂರು ಗೇಣು ಎನ್ನುವುದು ಸಾಬೀತಾಗಿತ್ತು..
 |
ಚಿಟ್ಟಿಯ ಸಿಹಿ ಖಾದ್ಯ.. ಸ್ನೇಹದ ಕಡಲಿಗೆ ತಂದ ಬುತ್ತಿ |
 |
ಸಿಹಿ ಭಾಗ್ಯ ಸಿಕ್ಕಿದ ಘಳಿಗೆ - ಭಾಗ್ಯಲಕ್ಷ್ಮಿ ಹೊತ್ತು ತಂದ ಮಧುರ ಘಳಿಗೆ |
ಈ ಮಧುರ ನೆನಪುಗಳ ಭಾವವನ್ನು ಕೇಳಿದ ರಿಟ್ಜ್ ಒಂದು ಕ್ಷಣ ಆನಂದಭಾಷ್ಪ ಸುರಿಸಿತು.. ವಿಕ್ಟರ್ ನೀನೇ ಧನ್ಯ.. ಈ ಅಮೋಘ ಕ್ಷಣದ ಹಂತಹಂತವನ್ನು ಚಿತ್ರಗಳಲ್ಲಿ ತೆರೆದಿಟ್ಟ ನಿನಗೆ ನಾ ಧನ್ಯವಾದಗಳನ್ನು ಅರ್ಪಿಸುತ್ತೇನೆ.. ಅದು ಹೇಗೆ ಎಂದು ಹೊಳೆಯುತ್ತಿಲ್ಲ ಎಂದಾಗ.. ವಿಕ್ಟರ್ ಹೇಳಿತು.. ರಿಟ್ಜ್ ನಾ ಹೇಳಿದ ವಿವರಗಳಿಗೆ ಕೆಲವು ಚಿತ್ರಗಳಿವೆ ಅದಕ್ಕೆ ನೀ ಅಡಿ ಟಿಪ್ಪಣಿ ಕೊಟ್ಟು ಬಿಡು.. ಅಷ್ಟು ಸಾಕು ಎಂದಿತು...
ಗೆಳೆಯರೇ ನನ್ನ ಪ್ರೀತಿಯ ಮಕ್ಕಳಾದ ವಿಕ್ಟರ್ ಬೈಕ್ ಮತ್ತು ನನ್ನ ರಿಟ್ಜ್ ನಡುವೆ ನೆಡೆದ ಸಂಭಾಷಣೆಗಳಿಗೆ ಪೂರಕವಾಗಿ ಚಿತ್ರಗಳು ನಿಮಗಾಗಿ..
 |
ಜಗದೇಕವೀರ ಜಗ್ಗ |
 |
ಫಳ್ ಎಂದು ನಗುವ ನಗುಮೊಗದ ಚೆಲುವ ನಾರಾಯಣ |
 |
ಹಹಹಹ .. ತರಲೆ ಸುಬ್ಬಾ - ವೆಂಕಟಸ್ವಾಮಿ |
 |
ಮಾಹಿತಿ ಕಣಜ - ನಗುಮೊಗದ ನವನೀತ |
 |
ಒಮ್ಮೆ ಕ್ಲಿಕ್ಕಿಸಿ ಎನ್ನುವ - ಚಿತ್ರಗಾರ - ನಾಗರಾಜ |
 |
ಎಲ್ಲಾ ಕಡೆ ನಂದೇ ಹವಾ ಎನ್ನುವ ವಿಜಯ ನಾರಸಿಂಹ |
 |
ಸಮಾಧಾನದ ಚಿತ್ತ ಪುರುಷ - ಸತೀಶ್ ರಾವ್ |
 |
ಗೆಳೆತನದ ಶಕ್ತಿ - ಸತೀಶ |
 |
ಸದಾ ಹಸನ್ಮುಖಿ - ಯೋಗ ನರಸಿಂಹ |
 |
ಗುಳಿಗೆನ್ನೆಯ ಸರದಾರ - ಪ್ರಕಾಶ |
 |
ದೇಶ ಮತ್ತು ಗೆಳೆತನ ಕಾಯುವ - ಚಿಟ್ಟಿಬಾಬು |
 |
ಸುಂದರ ನಗುವಿನ ಸುಧಾ ಪುಟ್ಟಾ |
 |
ಮಹಿಳಾ ಮಣಿರತ್ನ - ನಂದಿನಿ |
 |
ಗೆಳೆತನದ ಸುಂದರ ಅಕ್ಷರ - ಯಮುನಾ |
 |
ನಿಮ್ಮ ಜೊತೆಯಾಗುವೆ - ರಾಮು |
 |
ನಾ ನಿಮ್ಮ ಜೊತೆ - ಮುರುಳಿ |
 |
ನಾ ಇದ್ದೀನಿ ಕಣೋ ಎನ್ನುವ - ಚಲಪತಿ |
 |
ಚೆಲುವಾಂತ ಚೆನ್ನಿಗ - ಜಗದೀಶ |
 |
ತಲೈವಿ ರೇವತಿ |
 |
ಗುಂಪಿಗೆ ಶಕ್ತಿ ಮತ್ತು ರಕ್ಷಣೆ ಕೊಡುವ ಪ್ರಕಾಶ |
 |
ಸದಾ ನಗುವ ನಗಿಸುವ ಶೋಭನ್ ಬಾಬು |
 |
ತಾಳ್ಮೆಮತ್ತು ಮಿತ ಮೃದು ಭಾಷಿ ಸುರೇಶ |
 |
ಸಿಹಿ ಭಾಗ್ಯಮ್ಮ - ಭಾಗ್ಯಲಕ್ಷ್ಮಿ |
ಈ ಇಡೀ ಲೇಖನವನ್ನು ಬರೆದ ಕಥೆಗಳ ಮಾಲೀಕ
 |
ಕಥೆಗಳ ಬಾಸೂ!!!! |
ಈ ಸುಂದರ ದಿನವನ್ನು ಇನ್ನಷ್ಟು ಸುಂದರವನ್ನಾಗಿಸಿದ ನಿಮಗೆಲ್ಲ ಒಂದೇ ಮಾತಿನಲ್ಲಿ ಹೇಳುವೆ "
ಎಂದರೋ ಮಹಾನುಭಾವುಲು ಅಂದರೀಕಿ ವಂದನಮು ...!!!