Tuesday, May 7, 2019

DFR... a Phenomenon!

ಜೇನಿನ ಗೂಡಿನಲ್ಲಿ ತನ್ನ ಪಾಡಿಗೆ ತನ್ನ  ಕೆಲಸ ಮಾಡುತ್ತಿರುವ ಜೇನುಗಳು ಒಮ್ಮೆ ತನ್ನ ಗುರುಗಳ ಬಳಿಗೆ ಹೋಗಿ ಕೇಳಿದವು 

"ಗುರುಗಳೇ ನಮ್ಮ ಪಾಡಿಗೆ ನಾವು ಕೆಲಸ ಮಾಡಿಕೊಂಡಿರುತ್ತೇವೆ ಹೂವಿನ ಮಕರಂದ ಹೀರಿ ಜೇನು ಗೂಡು ಕಟ್ಟುತ್ತೇವೆ.. ಮನುಜರಿಗೆ ಜೇನನ್ನು ಕೊಡುತ್ತೇವೆ.. ಇಲ್ಲಿ ನಮ್ಮದೇನಾದರೂ ಮಹಾನ್ ಪ್ರಯತ್ನವಿದೆಯೇ.. ?"

"ಜೇನುಗಳ ಎಂಥಹ ಸುಂದರ ಪ್ರಶ್ನೆ ಕೇಳಿದಿರಿ.. ಇದಕ್ಕೆ ಒಂದು ದೃಷ್ಟಾಂತ ಕತೆ ಹೇಳುತ್ತೇನೆ ಕೇಳಿ"

ಎಲ್ಲವೂ ತಮ್ಮ ಜುಯ್ ಗುಯ್ ಗುಡುವ ಸದ್ದು ಬಿಟ್ಟು ಕಿವಿಯಾನಿಸಿ ಕೂತವು.. 

ಆ ಬೊಮ್ಮ ಒಮ್ಮೆ ತನ್ನ ಸತ್ಯಲೋಕದಲ್ಲಿ ಸೃಷ್ಟಿ ಕಾರ್ಯದಲ್ಲಿ ನಿರತನಾಗಿದ್ದಾಗ.. ವೀಣೆ ಮಿಡಿಯುತ್ತಿದ್ದ ಶಾರದೆ ಕೇಳಿದಳು.. "ಏನ್ರಿ.. ನಿಮ್ಮ ಸೃಷ್ಟಿ ಅಮೋಘ, ಅದ್ಭುತ ಎನಿಸುವುದು ಯಾವಾಗ?"

"ಸರಸು.. ನಾ ಸೃಷ್ಟಿ ಮಾಡಿದ ಪ್ರಪಂಚದಲ್ಲಿ ತನ್ನ ಶಕ್ತಿಗೆ ಅನುಸಾರ ಇತರರ ಮೊಗದಲ್ಲಿ ಮಂದಹಾಸ ಮೂಡಿಸುವ ಚಮತ್ಕಾರ ಕಂಡಾಗ ನನ್ನ ಸೃಷ್ಟಿ ಅಮೋಘ ಅನಿಸುತ್ತದೆ.. "

ಕಿರೀಟ ತೆಗೆದಿಟ್ಟು.. ಬ್ರಹ್ಮನ ಮುಂದೆ ಬಂದು.. "ಸರಿಯಾಗಿ ಹೇಳಿ"

"ಸರಸು ನಗುವೆಂಬುದು ಒಂದು ಅಸ್ತ್ರ.. ಅದನ್ನು ಉಪಯೋಗಿಸುತ್ತ ಇದ್ದಾಗ.. ಎಲ್ಲವೂ ಸರಳವಾಗಿ, ನೇರವಾಗಿ ನಮಗೆ ದಾರಿ ಕಾಣುತ್ತದೆ.. ಕೃಷ್ಣನನ್ನು ಹೊತ್ತು ಸಾಗುವಾಗ ಯಮುನೆ ವಸುದೇವನಿಗೆ ಹಾದಿ ಬಿಟ್ಟ ಹಾಗೆ.. ನಗುವಿದ್ದಾಗ ಜಗವೇ ಸುಂದರ.. "

"ಏನೋ ರೀ.. ಇವತ್ತು ನಿಮ್ಮ ಮಾತು ಆ ಶ್ರೀಕಾಂತನ ತರಹ ಇದೆ.. ಏನೋ ಹೇಳುತ್ತೀರಿ.. ಏನೋ ಬರೆಯುತ್ತೀರಿ.. ಅರ್ಥವಾಗುತ್ತಿಲ್ಲ.. ಸರಿ ಒಮ್ಮೆ ಅವನನ್ನೇ ಕೇಳಿಬಿಡೋಣ ಬನ್ನಿ.. "

"ಮಗು ಶ್ರೀಕಾಂತ.. ನೀನು ಜನುಮದಿನ, ವಿವಾಹದಿನಾ.. ಅದು ಇದು ಅಂತ ಏನಾದರೂ ಗೀಚುತ್ತಲೇ ಇರುತ್ತೀಯ ಇದರಿಂದ ನಿನಗೇನೂ ಉಪಯೋಗ ಹೇಳುವೆಯಾ.. ?

ಬ್ರಹ್ಮನಿಗೆ ಮತ್ತು ಶಾರದೆಗೆ ನಮಸ್ಕರಿಸಿ.. "ದೇವಾ.. ನೀವು ತಲೆಯೊಳಗೆ ಇಟ್ಟುಕೊಟ್ಟ ಬುದ್ದಿಯನ್ನು ಉಪಯೋಗಿಸಿ ಅನಿಸಿದ್ದು ಬರೆಯುತ್ತೇನೆ.. ಇದರಲ್ಲಿ ದೊಡ್ಡತನವೇನು ಇಲ್ಲ.. ಇದರಲ್ಲಿ ಲಾಭ ನಷ್ಟವೇನು ಇಲ್ಲ.. ಜೇನುಗಳು ಹೂವುಗಳ ಮಕರಂದ ಹೀರಿ ಜೇನು ಮಾಡುತ್ತವೆ.. ಆ ಜೇನನ್ನು ಮನುಜ ಉಪಯೋಗಿಸುತ್ತಾನೆ.. ಹಾಗೆಯೇ ನನ್ನ ತಲೆಯೊಳಗೆ ನೀವು ಕೂತು ಬರೆಸುವ ಮಾತುಗಳಿಂದ... ಅವರ ಮೊಗದಲ್ಲಿ ಒಂದು ಸಣ್ಣ ನಗೆ ಬಂದರೆ ಸಾಕು ನನ್ನ ಜೀವನ ಸಾರ್ಥಕ.. ಜೇನಿನ ಉಪಯೋಗವಾದಾಗ ಜೇನು ನೊಣಗಳಿಗೆ ಸಾರ್ಥಕತೆ ಸಿಗುವ ಹಾಗೆ ಇದು.. " ಇದೆ ಮಾತನ್ನು ಮುಂದುವರೆಸುತ್ತಾ "ಜೇನಿನ ರುಚಿ, ಹೂವಿನ ಸುಗಂಧ, ತಂಗಾಳಿಯ ಹಿತ, ಸಮಾಜದಲ್ಲಿ ನಾಲ್ಕು ಜನಗಳಿಗೆ ಸಹಾಯ.. ಅವರಿಂದ ಹೊಗಳಿಕೆ, ಪ್ರಶಂಸೆ ಇಷ್ಟ ಪಡದೆ.. ತನ್ನ ಕಾಯಕದಲ್ಲಿ ತೊಡಗುವ ಪರಿಯೇ ಈ ಜೇನಿನ ಜೀವನ.. ಹಾಗೆ ಅದ್ಭುತ ಗೆಳತೀ ರೂಪ ಸತೀಶ್ ಅಲಿಯಾಸ್ DFR ಕೂಡ.. ಅವರ ಹುಟ್ಟಿದ ಹಬ್ಬ ಅಂದರೆ.. ಅವರನ್ನು ಅಕ್ಕ ಎಂದು ಆರಾಧಿಸುವ ಅನೇಕ ಅಕ್ಕ, ತಮ್ಮಗಳು, ಅಣ್ಣ, ತಂಗಿಯರು.. ಅವರ ಮನೆಗೆ ಹೋಗಿ.. ಅವರ ಬಿಡುವಿಲ್ಲದ ಕೆಲಸದ ನಡುವೆಯೂ ಅವರಿಗೆ ಶುಭಕೋರಿ, ಕೇಕ್ ಕಟ್ ಮಾಡಿ.. ಸಂಭ್ರಮಿಸುವ ಪರಿ.. ಇದಕ್ಕೆ ಸ್ವಾರ್ಥ ಎಲ್ಲಿದೆ.. ಎಲ್ಲವೂ ಮಮತೆ, ವಿಶ್ವಾಸ, ಪ್ರೀತಿ.. ಮಮಕಾರ.. ಅವರನ್ನು ಗೌರವಿಸಿ ತಮ್ಮನ್ನೇ ಗೌರವಿಸಿಕೊಳ್ಳುವ ಪರಿ.. "

*****

ನೋಡೀದಿರೇನಪ್ಪಾ .. ಜೇನಿನ ಕಾರ್ಯಕ್ಷಮತೆ, ರೂಪ ಸತೀಶ್ ಅವರ ಕಾರ್ಯಕ್ಷಮತೆ.. ಇವೆಲ್ಲವೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಗುಣಗಳು... ಅಂದು ಕನಕದಾಸರು "ನಾ"ಹೋದರೆ ಹೋಗಬಹುದು ಎಂದಿದ್ದರು.. ಇಂದು ರೂಪ ಸತೀಶ್ "ನಾ"ಇದ್ದರೇ ಮಂದಹಾಸ ನಲಿದಾಡುವುದು ಎಂದು ಹೇಳುತ್ತಾರೆ.. ಗಿಡದಲ್ಲಿ ಮುಳ್ಳಿದ್ದ ಮಾತ್ರಕ್ಕೆ ಹೂವು ಸುಂದರವಾಗಿರೋಲ್ಲ.. ಮುಳ್ಳನ್ನು ಮೆಟ್ಟಿ ನಿಂತು ಮುಳ್ಳನ್ನು ಮರೆಮಾಚಿ ಹೂವಿನ ಅಂದ ಕಾಣಿಸುವ ಹಾಗೆ.. ಮೊಗದಲ್ಲಿ ನಗುವಿದ್ದಾಗ ಜಗದಲ್ಲಿ ನೋವಿಗೆ ಜಾಗವೆಲ್ಲಿ.. ಜೇನುಗಳ ನಿಮ್ಮ ಸ್ವಾರ್ಥ ರಹಿತ ಕೆಲಸ.. ನಮ್ಮೆಲ್ಲರ ನೆಚ್ಚಿನ ರೂಪ ಸತೀಶ್ ಅವರ ಕಾಯಕ ಎರಡೂ ಒಂದೇ.. 


ಜೇನುಗಳಿಗೆ ಅರ್ಥವಾಯಿತು.. ಕಥಾ ಸಾರಾಂಶ.. ಜೊತೆಯಲ್ಲಿ ಇಂದು ನಮ್ಮಂತೆಯೇ ಕಾರ್ಯನಿರತವಾಗಿರುವ ರೂಪ ಸತೀಶ್ ಅವರ ಜನುಮದಿನ ಕೂಡ ಎಂದು ಅರಿವಾಯಿತು.. ಗುಯ್ ಎನ್ನುತ್ತಾ ತಮ್ಮ ಭಾಷೆಯಲ್ಲಿ ಜನುಮದಿನಕ್ಕೆ ಶುಭಾಶಯಗಳನ್ನು ಕೋರಿದವು.. !!!

DFR ಜನುಮದಿನದ ಶುಭಾಶಯಗಳು!!!