Wednesday, July 18, 2012

ವೆಂಕಿ ಜನುಮದಿನದ ಶುಭಾಶಯಗಳು


ಪ್ರತಿಯೊಂದು ಸ್ನೇಹಿತರ ಗುಂಪಿನಲ್ಲೂ ಒಬ್ಬ ಉತ್ಸಾಹ ತುಂಬುವನು, ಎಲ್ಲವನ್ನು ತೂಗಿಸಿಕೊಂಡು ಹೋಗುವನು ಇದ್ದೆ ಇರುತ್ತಾನೆ...ಅಂತಹ ನಮ್ಮ ಸ್ನೇಹಿತ.."ವೆಂಕಿ" ..ಇಂದು ವೆಂಕಿಯ ಜನುಮದಿನ...ಹೀಗೆ ಒಂದು ಅನುಭವ ಹಂಚಿಕೊಳ್ಳೋಣ ಅಂತ ಈ ಪ್ರವಾಸದ ಕಥನ ನಿಮ್ಮ ಮುಂದೆ..

ತನ್ನ ತಮಾಷೆ ಭರಿತ ಮಾತುಗಳು, ಎಲ್ಲರನ್ನು ಸೇರಿಸಿಕೊಂಡು ಮುಂದೆ ಹೋಗುವ, ಸಮಸ್ಯೆಗಳಿಗೆ ಸರಿ ಉತ್ತರ ಹುಡುಕುವ ತಾಕತ್ ಇರುವ ಸ್ನೇಹಿತ...ನಮ್ಮ ವೆಂಕಿ...

ಅವನು ಒಮ್ಮೆ ಶಿವಮೊಗ್ಗದ ಅಬ್ಬಲಗೆರೆ ಗ್ರಾಮದಲ್ಲಿ ಒಂದು ತರಬೇತಿ ಶಿಬಿರಕ್ಕೆ ಸುಮಾರು ತಿಂಗಳುಗಳು  ಇರಬೇಕಿತ್ತು..ಆಗ ನಾವೆಲ್ಲಾ ಉದ್ಯೋಗ ಕ್ಷೇತ್ರಕ್ಕೆ ಆಗ ತಾನೇ ಕಾಲಿಟ್ಟ ದಿನಗಳು...ಹೀಗೆ ವೆಂಕಿ ಒಮ್ಮೆ ವಾರಾಂತ್ಯದಲ್ಲಿ ಬೆಂಗಳೂರಿಗೆ ಬಂದಾಗ  ನಮಗೆಲ್ಲ ಒಂದು ಸಲಹೆ ಕೊಟ್ಟ ಒಂದು ಶನಿವಾರ, ಭಾನುವಾರ ಶಿವಮೊಗ್ಗಕ್ಕೆ ಬನ್ನಿ...ಅಲ್ಲೇ ಸುತ್ತಾಡಿ ಬರೋಣ ಅಂತ..ನಮಗೂ ಸರಿ ಅನ್ನಿಸಿತು...

ಸರಿ..ಶಶಿ, ಲೋಕಿ, ಜೆ.ಎಂ, ಹಾಗು ನಾನು ಶಿವಮೊಗ್ಗಕ್ಕೆ ಶುಕ್ರವಾರ ಜೂನ್ ೨೯ ೧೯೯೬ ರಂದು ಪ್ರಯಾಣ ಬೆಳೆಸಿದೆವು.. ಶಿವಮೊಗ್ಗದಿಂದ ಸುಮಾರು ಕಿ.ಮಿ. ದೂರದಲ್ಲಿ ಸಾವಲಂಗ ಮಾರ್ಗದಲ್ಲಿ ಅಬ್ಬಲಗೆರೆ ಇತ್ತು... ಒಬ್ಬರು ರಾಜಸ್ತಾನಿ ತಾತ..ತನ್ನ ಅಂಬಾಸೆಡರ್ ಕಾರಿನಲ್ಲಿ ಹೋಗುತ್ತಿದ್ದವರು..ನಾವು ಬಸ್ಸಿಗಾಗಿ ಕಾಯುತ್ತ ನಿಂತ ಬಳಿಯಲ್ಲಿ ನಿಲ್ಲಿಸಿ ನಮಗೇನೋ ವಿಳಾಸ ಕೇಳಿದರು ನಮಗೆ ಗೊತ್ತಿಲ್ಲ ಅಂತ ಹೇಳಿದೆವು..ನಂತರ ನೀವೆಲ್ಲಿ ಹೋಗುತಿದ್ದೀರಿ ಅಂತ ಕೇಳಿದಾಗ ನಾನು ನಾವು ಹೋಗಬೇಕಾದ ಸ್ಥಳ ಹೇಳಿದೆ..ಸರಿ ಆ ತಾತ ಬನ್ನಿ ಅಲ್ಲಿಗೆ ಬಿಡುತ್ತೇನೆ ಎಂದು ಹೇಳಿ ಕೂರಿಸಿಕೊಂಡರು...ಸುಮಾರು ಹೊತ್ತು ಕಳೆದರು ನಾವು ಹೋಗಬೇಕಾದ ಸ್ಥಳ ಸಿಗಲಿಲ್ಲ..ಅಲ್ಲೇ ಗ್ರಾಮಸ್ತರನ್ನು ಕೇಳಿದಾಗ ತಿಳಿದು ಬಂದ ವಿಷಯ..ನಾವು ಹೋಗಬೇಕಾದ ದಾರಿಗೆ ವಿರುದ್ಧ ದಿಕ್ಕಿನಲ್ಲಿ ಸಾಕಷ್ಟು ದೂರ ಪಯಣ ಬೆಳೆಸಿದ್ದೆವು  ..ನಂತರ ತಾತನಿಗೆ ಒಂದು ನಮಸ್ಕಾರ ಹೇಳಿ..ಬೇರೆ ಬಸ್ಸಿನಲ್ಲಿ ಸರಿಯಾದ ವಿಳಾಸಕ್ಕೆ ಹೋದ ಮೇಲೆ ನಡೆದ ವಿಷಯವನ್ನೆಲ್ಲ ಕೇಳಿ "ವೆಂಕಿ"ನಮಗೆಲ್ಲರಿಗೂ..ಮತ್ತು ಹೆಚ್ಚಾಗಿ ನನಗೆ ಮಂಗಳಾರತಿ ಮಾಡಿದ...

ಎರಡು ದಿನದ ಕಾರ್ಯಕ್ರಮದಲ್ಲಿ ಒಂದು ದಿನ ಗಾಜನೂರು ಆಣೆಕಟ್ಟು ನೋಡುವುದು, ಎರಡನೇ ದಿನ ಜೋಗ ಜಲಪಾತಕ್ಕೆ ಹೋಗಿ ಬಂದು ಸಂಜೆ ಬೆಂಗಳೂರಿನ ಬಸ್ ಹತ್ತುವುದು ನಿರ್ಧಾರವಾಯಿತು...

ವೆಂಕಿ ತಂಗಿದ್ದ ಮನೆಯಲ್ಲಿದ್ದ ಆಚಾರ್ ಅವರು ನಮ್ಮನೆಲ್ಲ ಚೆನ್ನಾಗಿ ನೋಡಿಕೊಂಡರು.  ಸ್ನಾನ ಎಲ್ಲ ಮುಗಿಸಿ ಗಾಜನೂರು ಅಣೆಕಟ್ಟಿನ ಕಡೆ ಹೊರಟೆವು..

ನನ್ನ ಬಾಲ್ಯದಲ್ಲಿ ಕೆಲ ವರ್ಷಗಳು ಶಿವಮೊಗ್ಗದಲ್ಲಿದ್ದರು ಆ ಸ್ಥಳಕ್ಕೆ ಹೊಗಿರಲಾಗಿರಲಿಲ್ಲ..ಅಣ್ಣಾವ್ರು ಎರಡು ಕನಸು, ವಸಂತ ಗೀತ ಹೀಗೆ ಕೆಲ ಚಿತ್ರಗಳಲ್ಲಿ ಕುಣಿದು ಕುಪ್ಪಳಿಸಿದ್ದ ತಾಣ...ಒಂದು ತರಹ  ಖುಷಿ ತಂದಿತ್ತು...

ಜಲಾಶಯ ತುಂಬಿ ತುಳುಕುತ್ತಿತ್ತು..ಆಗ ಶಶಿ ಹೇಳಿದ "ooh idu over flowing principle" ನಲ್ಲಿ ಕಟ್ಟಿರುವ ಡ್ಯಾಮ್...

ಅಲ್ಲಿಯೇ ಇದ್ದ ತೆಪ್ಪದಲ್ಲಿ ಒಂದು ಸುತ್ತು ಸುತ್ತಿದೆವು..ತೆಪ್ಪ ಮಧ್ಯದಲ್ಲಿದ್ದಾಗ ನಮ್ಮ ಧೀರ ಜೆ.ಎಂ..ತೆಪ್ಪದವರಿಗೆ.."ಚೆನ್ನಾಗಿ ತಿರುಗಿಸಿ" ಎಂದಾಗ ನಮಗೆ ಮೈ ಎಲ್ಲ ನಡುಕ ಶುರುವಾಯಿತು...ಅವನಿಗೆ ಬುದ್ದಿ ಹೇಳಿ ಉಪಾಯವಾಗಿ ದಡಕ್ಕೆ ಬಂದಾಗ ಉಸಿರು ಬಿಟ್ಟೆವು...

ಅಲ್ಲೆಲ್ಲ ಕೋತಿ ಚೇಷ್ಟೆ, ತಮಾಷೆ ಮಾತುಗಳು, ರುಚಿಯಾದ ಕಡಲೆ ಪುರಿ, ಭೇಲ್ ಪುರಿ, ಮಾವಿನಕಾಯಿ ಎಲ್ಲವನ್ನು ತಿಂದು ಆನಂದಿಸಿ ಶಿವಮೊಗ್ಗೆಗೆ ಮರಳಿದೆವು.....ಸುಮಾರು ವರುಷಗಳು ಕಳೆದ ಕಾರಣ ಎಲ್ಲರು ಇದ್ದ ಫೋಟೋ ಇಲ್ಲದ ಕಾರಣ ಜೆ. ಎಮ್ . ತೆಗೆದ ಒಂದು ಚಿತ್ರ ಸಿಕ್ಕಿತು..ಅದನ್ನೇ ಲಗತಿಸಿದ್ದೇನೆ..ಈ ಚಿತ್ರ ತೆಗೆಯುವಾಗ ಲೋಕಿ ಹೇಳಿದ..ಲೋ ಸ್ವಲ್ಪ different  ಆಗಿ ನಿಲ್ಲಬೇಕು ಕಣ್ರೋ ಅಂತ.ಹಿಂಗೆ ನಿಂತ....

ರಾತ್ರಿ ಒಳ್ಳೆಯ ಭೋಜನ ಕಾದಿತ್ತು..

ಮಾರನೆ ದಿನ ಜೋಗ ಜಲಪಾತಕ್ಕೆ ನನ್ನ ಎರಡನೇ ಭೇಟಿ...ಎಲ್ಲರು ಜಲಪಾತದ ತಳಕ್ಕೆ ಹೋಗಿ, ಮಿಂದು, ಆಟವಾಡಿ ಮೇಲಕ್ಕೆ ಬಂದಾಗ ಮದ್ಯಾಹ್ನ ದಾಟಿತ್ತು...

ಅಲ್ಲಿಯೇ ಸಿಕ್ಕ ಹೋಟೆಲ್ ನಲ್ಲಿ ಸಿಕ್ಕದನ್ನು ತಿಂದು ಬಸ್ಸಿನಲ್ಲಿ ಕುಳಿತಾಗ ಟಿಕೆಟ್ ಟಿಕೆಟ್ ಎಂದು ಕೂಗಿಕೊಂಡು ಬಂದ...

ನಾನು ಟಿಕೆಟ್ ತೆಗೆದುಕೊಳ್ಳಲು ನೂರು ರುಪಾಯಿ ನೋಟನ್ನು ಕೊಟ್ಟೆ...(ಕೆಲವು ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಗಾಂಧಿ ಭಾವಚಿತ್ರವಿದ್ದ ನೋಟು ಅದು)...

ಆತ ಆ ನೋಟನ್ನು ತೆಗೆದುಕೊಳ್ಳಲು ಹಿಂಜರಿದ..ಕಾರಣ..ಖೋಟ ನೋಟು ಅಂತ ಅವನ ಭಾವನೆ..ಎಷ್ಟೇ ಹೇಳಿದರು ಒಪ್ಪಲಿಲ್ಲ ಆತ.... ಕಡೆಗೆ ಬೇರೆ ನೋಟನ್ನು ಕೊಟ್ಟು ಟಿಕೆಟ್ ಪಡೆದೆವು...

ಶಿವಮೊಗ್ಗಕ್ಕೆ ಬಂದು ನಿಂತಾಗ ಆಗಲೇ ರಾತ್ರಿಯಾಗಿತ್ತು..ನಮ್ಮ ಬಸ್ ಇನ್ನೇನು ಕೆಲ ಘಂಟೆಗಳಲ್ಲಿ ಹೊರಡುವುದಿತ್ತು  ..ಮತ್ತೆ ವೆಂಕಿಯ ಮನೆಗೆ ಹೋಗಿ ನಮ್ಮ ಬ್ಯಾಗನ್ನು ತರುವುದಕ್ಕೆ ಸಮಯವಿರಲಿಲ್ಲ..ಆಗ ವೆಂಕಿ ತಾನೇ ಎಲ್ಲ ಬ್ಯಾಗನ್ನು ಮುಂದಿನವಾರ ಬರುವಾಗ ತರುವುದಾಗಿ ಹೇಳಿದ..ಅಲ್ಲೇ ಹೋಟೆಲ್ನಲ್ಲಿ  ಊಟ ಮಾಡಿ..ಬಸ್ಸಿಗೆ ಬಂದು ಕೂತಾಗ ಮನಸು ಆನಂದದಲ್ಲಿ ತೇಲಾಡುತಿತ್ತು...

ಮಾರನೆ ದಿನ ಅಂದ್ರೆ ಸೋಮವಾರ ಜುಲೈ ಒಂದನೇ ತಾರೀಕು  ೧೯೯೬ ನಮ್ಮ ಆತ್ಮೀಯ ಗೆಳೆಯ ಶಶಿಯ ಹಾಗು ಹದಿನೆಂಟನೆ ತಾರೀಕು ವೆಂಕಿಯ ಹುಟ್ಟುಹಬ್ಬ ...ಎಂತಹ ಉಡುಗೊರೆ ನಮ್ಮ ಸ್ನೇಹಿತನಿಗೆ ಕೊಟ್ಟೆವು..ಬಹಳ ಸಂತಸ ತಂದ ಪ್ರವಾಸವನ್ನು ಹದಿನಾರು ವರುಷಗಳ ನಂತರ ಮೆಲುಕುಹಾಕುವುದು ಅನಂದವಲ್ಲದೆ ಇನ್ನೇನು...!!!!!!!!!!!!!!!!

Sunday, July 1, 2012

ಶಶಿ...... ಅಭಿಮಾನದ ಸ್ನೇಹಿತನಿಗೆ ಹುಟ್ಟು ಹಬ್ಬದ ಶುಭಾಶಯಗಳು


ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ...

ಇದು ನಮ್ಮ ಶಶಿಯಾ ವ್ಯಕ್ತಿತ್ವಕ್ಕೆ  ಸೂಕ್ತವಾದ ತಲೆ ಬರಹ!!!

ಗುಣಗಳ ಬಗ್ಗೆ ಹೊಗಳಿ ಬರೆದರೆ...ಏನ್ ತುಂಬಾ ಹೊಗಳುತ್ತಿಯಪ್ಪ...ಅಷ್ಟೆಲ್ಲ ಒಳ್ಳೆ ಗುಣಗಳಿಲ್ಲ ಅಂತಾರೆ
ಏನು  ಬರೆಯದೆ ಸುಮ್ಮನೆ ಹುಟ್ಟಿದ ಹಬ್ಬಕ್ಕೆ ಶುಭಾಶಯಗಳು ಅಂದ್ರೆ..ಯಾಕೆ ಮೂಡ್ ನಲ್ಲಿ ಇಲ್ವಾ..ಏನ್ ಸಮಾಚಾರ ಯಾಕೆ ಬೇಜಾರು? ಏನಾಯ್ತು? ಅಂತಾರೆ!!!
ಉದ್ದಕ್ಕೆ ಬ್ಲಾಗ್ ಬರೆದರೆ...ಮಾಡೋಕೆ ಏನು ಕೆಲಸ ಇಲ್ಲ ಅದಕ್ಕೆ ಹೀಗೆ ಟೈಮ್ ವೇಸ್ಟ್ ಮಾಡ್ತಾನೆ ಅಂತಾರೆ...?
 
ಇಂತಹ ಒಂದು ವಿರುದ್ಧ ದಿಕ್ಕಿನಲ್ಲಿ ಯೋಚನಾ ಲಹರಿ ಹರಿಯುತಿದ್ದಾಗ ನೆನಪಿಗೆ ಬಂದದ್ದು.... ಇವತ್ತು ನಮ್ಮ ಪ್ರೀತಿಯ ಗೆಳೆಯ ಶಶಿಯ ಜನುಮದಿನ...ನಮ್ಮ ಗತಕಾಲದಲ್ಲಿ ನಡೆದ ಒಂದು ಪ್ರಸಂಗವನ್ನು ಹಾಗೆ ಇಳಿಸೋಣ ಅಂತ...ಶುರುವಾಯಿತು ಲೇಖನದ ಹರಿವು!!
 
ಶಶಿ, ವೆಂಕಿ, ಜೆ.ಎಂ, ನಾನು ಶಾಲಾದಿನಗಳಿ೦ದಲೂ ಸ್ನೇಹಿತರು...ಲೋಕಿ ನಮಗೆ ಕಾಲೇಜು ದಿನಗಳಲ್ಲಿ ಜೊತೆಯಾದ..
ವೆಂಕಿ, ಜೆ.ಎಂ,ಶಶಿ, ಶ್ರೀ , ಲೋಕಿ
ಒಮ್ಮೆ..ಕಾಲೇಜು ದಿನಗಳಲ್ಲಿ..ನಾವೆಲ್ಲರೂ ಒಂದು ಸಿನೆಮಾಗೆ ಹೋಗಬೇಕು ಅಂತ ನಿರ್ಧಾರವಾಯಿತು...ಆ ದಿನಗಳಲ್ಲಿ ನಾವೆಲ್ಲ ಜಾಕಿ ಚಾನ್  ಸಿನೆಮಾಗಳ  ಬಹು ದೊಡ್ಡ ಅಭಿಮಾನಿಗಳು (ಈಗಲೂ ಕೂಡ)..ಸರಿ ಸಿಂಫೋನಿ ಟಾಕೀಸ್ನಲ್ಲಿ ಸಿನಿಮಾ ಇತ್ತು..ಎಲ್ಲರಿಗೋ ಅಲ್ಲಿಗೆ ಬರಲು ಹೇಳಿದೆವು..

ಶಶಿ ಮತ್ತು ನಾನು ಸುಮಾರು ೧೧.೩೦ಕ್ಕೆ ಅಲ್ಲಿ ತಲುಪಿದೆವು..ಸರೀ ಮಿಕ್ಕವರು ಬರುತ್ತಾರೆ ಎಂದು ಕಾದೆವು..೧೨.೩೦ ಆಯಿತು ೧೩.೦೦ ಆಯಿತು..ಯಾರು ಪತ್ತೆ ಇಲ್ಲ..

"ಶಶಿ..ಏನೋ ಇವರು ಯಾರು ಪತ್ತೆ ಇಲ್ಲ..ಸರಿಯಾಗಿ ಹೇಳಿದ್ದೆವು ಅಲ್ವ..
"ಏನೋ ಸ್ನೇಹಿತರೋ ಏನೋ...ಇವರು ಇನ್ನೆಲ್ಲಿ ಕಾಯ್ತಾ ಇದ್ದರೋ...ಮಜೆಸ್ಟಿಕ್ ಹತ್ತಿರ ಹೋಗಿ ನೋಡೋಣ...ಅಲ್ಲಿ ಇರಬಹುದು ನಡಿ ಅಲ್ಲಿಗೆ ಹೋಗೋಣ" 

ಅಲ್ಲಿಗೆ ಶಶಿ ಮತ್ತು ನಾನು ಬಂದೆವು...

ವೆಂಕಿ ನಮಗಾಗಿ ಕಾಯುತ್ತ ನಿಂತಿದ್ದ..ಸಂತೋಷ್ ಟಾಕಿಸ್ ಮುಂದೆ...

ವೆಂಕಿ ನಮಗೆ ಬಯ್ಯಲು ಬಾಯಿ ತೆಗೆದ...

ಅಷ್ಟರಲ್ಲಿ ಶಶಿ "ಎನಲೇ..ಎಂ.ಜಿ. ರೋಡ್ ಗೆ ಬಾ ಅಂದ್ರೆ ಇಲ್ಲಿ ನಿಂತಿದೀಯ...? ನಮಗೆ ಕಾದು ಕಾದು ಸುಸ್ತಾಯಿತು...#@#!@#!@#!@"
ವೆಂಕಿ ಮತ್ತೆ ಮಾತಿಲ್ಲ..
ಸರಿ ನಮ್ಮ "ಅಣ್ಣ ಬಾಂಡ್"  ಜೆ.ಎಂ. ನ ಹುಡುಕಬೇಕಿತ್ತು...ಎಲ್ಲಿರಬಹುದು ಅಂತ ಯೋಚನೆ ಮಾಡಿದೆವು..
ಸರಿ ಇರಲಿ ಅಂತ "ಕೈಲಾಶ್" ಟಾಕೀಸ್ ಹತ್ತಿರ ಹೋದೆವು..
ಮ್ಯೂಸಿಕ್ ಪ್ಲೆಯೇರ್ನಲ್ಲಿ ಹಾಡು ಹಾಕಿಕೊಂಡು..ತಲೆಗೆ ಟೋಪಿ ಹಾಕಿಕೊಂಡು...ಹಾಡನ್ನು ಸವಿಯುತ್ತ ನಿಂತಿದ್ದ ನಮ್ಮ ಜೆ.ಎಂ...

ಶಶಿ"ಲೇ ಎಲ್ಲಿ ಕಾಯೋಕೆ ಹೇಳಿದ್ವಿ..ನೀನು ಎಲ್ಲಿ ನಿಂತಿದ್ದೆಯ..."

"you people asked me to wait here..so am waiting for you from last two hours..why you all late....?"

ಶಶಿಗೆ ಅರ್ಥ ಆಯಿತು...ತಾಳ್ಮೆ ಒಂದೇ ಇವರಿಗೆಲ್ಲ ಮದ್ದು ಅಂತ 

ತನ್ನೆಲ್ಲ ಹಲ್ಲನ್ನು ತೋರಿಸುತ್ತ..ಸರಿ ಅಣ್ಣ..ಬಾ ಯಾವುದಾದರು ಸಿನೆಮಾಗೆ ಟಿಕೆಟ್ ಸಿಗುತ್ತಾ ನೋಡೋಣ...ಹಾಗೆ ಊಟ ಮಾಡಿ ಬರೋಣ...

ಎಲ್ಲರು ಒಂದು ಸಿನೆಮಾಗೆ ಹೋಗಿ ಹೊಟ್ಟೆ ತುಂಬಾ ಊಟ ಮಾಡಿ ಮನೆ ಸೇರಿದೆವು...

ಇವತ್ತಿಗೂ ಇಡಿ ಪ್ರಕರಣವನ್ನು ಶಶಿ ನಿಭಾಯಿಸಿದ ರೀತಿ ಮೆಚ್ಚುಗೆಯಾಗುತ್ತದೆ...ಅಂತಹ ತಾಳ್ಮೆಯ ಸ್ನೇಹಿತ ನಮ್ಮ ಜೊತೆಯಲ್ಲಿ ಇರುವುದು ಹಾಗು ಹಿರಿಯ ಅಣ್ಣನಂತೆ ನಮ್ಮನೆಲ್ಲ ಕೈ ಹಿಡಿದು ನಡೆಸುತ್ತಿರುವುದು ಖುಷಿ ಕೊಡುತ್ತದೆ..

ನಾವು ಐದು ಜನ ಸ್ನೇಹಿತರು ಕೈ ಬೆರಳಿನಂತೆ...ಒಂದಕ್ಕೊಂದು ಸಂಬಂಧವಿಲ್ಲ...ಎಲ್ಲರ ಗುಣಕ್ಕೂ ಅಜಗಜಾಂತರ..ಆದರು ನಾವೆಲ್ಲ ಕಳೆದ ೨೫ ವರುಷಗಳಿಂದ ಒಬ್ಬರಿಗೊಬ್ಬರು ಅಂಟು ಬಿಡದ ಸ್ನೇಹಿತರಾಗಿದ್ದೇವೆ...ಬೆರಳುಗಳು ಬೇರೆ ಬೇರೆ ಉದ್ದ ಅಗಲ ಇದ್ದರೂ ಅದನ್ನ ಹಿಡಿದಿಡುವುದು ಮುಷ್ಠಿ...ಹಾಗೆಯೇ ನಮ್ಮನ್ನ ಬಂಧಿಸಿಟ್ಟಿರುವ ಶಕ್ತಿ ನಿರ್ಮಲ ಸ್ನೇಹ ಹಾಗು ಹಿರಿಯಣ್ಣನ ಪ್ರೀತಿ..ಹಾಗು ಸ್ನೇಹ ...

ಅಂತಹ ಹಿರಿಯಣ್ಣನಿಗೆ, ಅಭಿಮಾನದ ಸ್ನೇಹಿತನಿಗೆ ಹುಟ್ಟು ಹಬ್ಬದ ಶುಭಾಶಯಗಳು!!!!