Sunday, July 1, 2012

ಶಶಿ...... ಅಭಿಮಾನದ ಸ್ನೇಹಿತನಿಗೆ ಹುಟ್ಟು ಹಬ್ಬದ ಶುಭಾಶಯಗಳು


ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ...

ಇದು ನಮ್ಮ ಶಶಿಯಾ ವ್ಯಕ್ತಿತ್ವಕ್ಕೆ  ಸೂಕ್ತವಾದ ತಲೆ ಬರಹ!!!

ಗುಣಗಳ ಬಗ್ಗೆ ಹೊಗಳಿ ಬರೆದರೆ...ಏನ್ ತುಂಬಾ ಹೊಗಳುತ್ತಿಯಪ್ಪ...ಅಷ್ಟೆಲ್ಲ ಒಳ್ಳೆ ಗುಣಗಳಿಲ್ಲ ಅಂತಾರೆ
ಏನು  ಬರೆಯದೆ ಸುಮ್ಮನೆ ಹುಟ್ಟಿದ ಹಬ್ಬಕ್ಕೆ ಶುಭಾಶಯಗಳು ಅಂದ್ರೆ..ಯಾಕೆ ಮೂಡ್ ನಲ್ಲಿ ಇಲ್ವಾ..ಏನ್ ಸಮಾಚಾರ ಯಾಕೆ ಬೇಜಾರು? ಏನಾಯ್ತು? ಅಂತಾರೆ!!!
ಉದ್ದಕ್ಕೆ ಬ್ಲಾಗ್ ಬರೆದರೆ...ಮಾಡೋಕೆ ಏನು ಕೆಲಸ ಇಲ್ಲ ಅದಕ್ಕೆ ಹೀಗೆ ಟೈಮ್ ವೇಸ್ಟ್ ಮಾಡ್ತಾನೆ ಅಂತಾರೆ...?
 
ಇಂತಹ ಒಂದು ವಿರುದ್ಧ ದಿಕ್ಕಿನಲ್ಲಿ ಯೋಚನಾ ಲಹರಿ ಹರಿಯುತಿದ್ದಾಗ ನೆನಪಿಗೆ ಬಂದದ್ದು.... ಇವತ್ತು ನಮ್ಮ ಪ್ರೀತಿಯ ಗೆಳೆಯ ಶಶಿಯ ಜನುಮದಿನ...ನಮ್ಮ ಗತಕಾಲದಲ್ಲಿ ನಡೆದ ಒಂದು ಪ್ರಸಂಗವನ್ನು ಹಾಗೆ ಇಳಿಸೋಣ ಅಂತ...ಶುರುವಾಯಿತು ಲೇಖನದ ಹರಿವು!!
 
ಶಶಿ, ವೆಂಕಿ, ಜೆ.ಎಂ, ನಾನು ಶಾಲಾದಿನಗಳಿ೦ದಲೂ ಸ್ನೇಹಿತರು...ಲೋಕಿ ನಮಗೆ ಕಾಲೇಜು ದಿನಗಳಲ್ಲಿ ಜೊತೆಯಾದ..
ವೆಂಕಿ, ಜೆ.ಎಂ,ಶಶಿ, ಶ್ರೀ , ಲೋಕಿ
ಒಮ್ಮೆ..ಕಾಲೇಜು ದಿನಗಳಲ್ಲಿ..ನಾವೆಲ್ಲರೂ ಒಂದು ಸಿನೆಮಾಗೆ ಹೋಗಬೇಕು ಅಂತ ನಿರ್ಧಾರವಾಯಿತು...ಆ ದಿನಗಳಲ್ಲಿ ನಾವೆಲ್ಲ ಜಾಕಿ ಚಾನ್  ಸಿನೆಮಾಗಳ  ಬಹು ದೊಡ್ಡ ಅಭಿಮಾನಿಗಳು (ಈಗಲೂ ಕೂಡ)..ಸರಿ ಸಿಂಫೋನಿ ಟಾಕೀಸ್ನಲ್ಲಿ ಸಿನಿಮಾ ಇತ್ತು..ಎಲ್ಲರಿಗೋ ಅಲ್ಲಿಗೆ ಬರಲು ಹೇಳಿದೆವು..

ಶಶಿ ಮತ್ತು ನಾನು ಸುಮಾರು ೧೧.೩೦ಕ್ಕೆ ಅಲ್ಲಿ ತಲುಪಿದೆವು..ಸರೀ ಮಿಕ್ಕವರು ಬರುತ್ತಾರೆ ಎಂದು ಕಾದೆವು..೧೨.೩೦ ಆಯಿತು ೧೩.೦೦ ಆಯಿತು..ಯಾರು ಪತ್ತೆ ಇಲ್ಲ..

"ಶಶಿ..ಏನೋ ಇವರು ಯಾರು ಪತ್ತೆ ಇಲ್ಲ..ಸರಿಯಾಗಿ ಹೇಳಿದ್ದೆವು ಅಲ್ವ..
"ಏನೋ ಸ್ನೇಹಿತರೋ ಏನೋ...ಇವರು ಇನ್ನೆಲ್ಲಿ ಕಾಯ್ತಾ ಇದ್ದರೋ...ಮಜೆಸ್ಟಿಕ್ ಹತ್ತಿರ ಹೋಗಿ ನೋಡೋಣ...ಅಲ್ಲಿ ಇರಬಹುದು ನಡಿ ಅಲ್ಲಿಗೆ ಹೋಗೋಣ" 

ಅಲ್ಲಿಗೆ ಶಶಿ ಮತ್ತು ನಾನು ಬಂದೆವು...

ವೆಂಕಿ ನಮಗಾಗಿ ಕಾಯುತ್ತ ನಿಂತಿದ್ದ..ಸಂತೋಷ್ ಟಾಕಿಸ್ ಮುಂದೆ...

ವೆಂಕಿ ನಮಗೆ ಬಯ್ಯಲು ಬಾಯಿ ತೆಗೆದ...

ಅಷ್ಟರಲ್ಲಿ ಶಶಿ "ಎನಲೇ..ಎಂ.ಜಿ. ರೋಡ್ ಗೆ ಬಾ ಅಂದ್ರೆ ಇಲ್ಲಿ ನಿಂತಿದೀಯ...? ನಮಗೆ ಕಾದು ಕಾದು ಸುಸ್ತಾಯಿತು...#@#!@#!@#!@"
ವೆಂಕಿ ಮತ್ತೆ ಮಾತಿಲ್ಲ..
ಸರಿ ನಮ್ಮ "ಅಣ್ಣ ಬಾಂಡ್"  ಜೆ.ಎಂ. ನ ಹುಡುಕಬೇಕಿತ್ತು...ಎಲ್ಲಿರಬಹುದು ಅಂತ ಯೋಚನೆ ಮಾಡಿದೆವು..
ಸರಿ ಇರಲಿ ಅಂತ "ಕೈಲಾಶ್" ಟಾಕೀಸ್ ಹತ್ತಿರ ಹೋದೆವು..
ಮ್ಯೂಸಿಕ್ ಪ್ಲೆಯೇರ್ನಲ್ಲಿ ಹಾಡು ಹಾಕಿಕೊಂಡು..ತಲೆಗೆ ಟೋಪಿ ಹಾಕಿಕೊಂಡು...ಹಾಡನ್ನು ಸವಿಯುತ್ತ ನಿಂತಿದ್ದ ನಮ್ಮ ಜೆ.ಎಂ...

ಶಶಿ"ಲೇ ಎಲ್ಲಿ ಕಾಯೋಕೆ ಹೇಳಿದ್ವಿ..ನೀನು ಎಲ್ಲಿ ನಿಂತಿದ್ದೆಯ..."

"you people asked me to wait here..so am waiting for you from last two hours..why you all late....?"

ಶಶಿಗೆ ಅರ್ಥ ಆಯಿತು...ತಾಳ್ಮೆ ಒಂದೇ ಇವರಿಗೆಲ್ಲ ಮದ್ದು ಅಂತ 

ತನ್ನೆಲ್ಲ ಹಲ್ಲನ್ನು ತೋರಿಸುತ್ತ..ಸರಿ ಅಣ್ಣ..ಬಾ ಯಾವುದಾದರು ಸಿನೆಮಾಗೆ ಟಿಕೆಟ್ ಸಿಗುತ್ತಾ ನೋಡೋಣ...ಹಾಗೆ ಊಟ ಮಾಡಿ ಬರೋಣ...

ಎಲ್ಲರು ಒಂದು ಸಿನೆಮಾಗೆ ಹೋಗಿ ಹೊಟ್ಟೆ ತುಂಬಾ ಊಟ ಮಾಡಿ ಮನೆ ಸೇರಿದೆವು...

ಇವತ್ತಿಗೂ ಇಡಿ ಪ್ರಕರಣವನ್ನು ಶಶಿ ನಿಭಾಯಿಸಿದ ರೀತಿ ಮೆಚ್ಚುಗೆಯಾಗುತ್ತದೆ...ಅಂತಹ ತಾಳ್ಮೆಯ ಸ್ನೇಹಿತ ನಮ್ಮ ಜೊತೆಯಲ್ಲಿ ಇರುವುದು ಹಾಗು ಹಿರಿಯ ಅಣ್ಣನಂತೆ ನಮ್ಮನೆಲ್ಲ ಕೈ ಹಿಡಿದು ನಡೆಸುತ್ತಿರುವುದು ಖುಷಿ ಕೊಡುತ್ತದೆ..

ನಾವು ಐದು ಜನ ಸ್ನೇಹಿತರು ಕೈ ಬೆರಳಿನಂತೆ...ಒಂದಕ್ಕೊಂದು ಸಂಬಂಧವಿಲ್ಲ...ಎಲ್ಲರ ಗುಣಕ್ಕೂ ಅಜಗಜಾಂತರ..ಆದರು ನಾವೆಲ್ಲ ಕಳೆದ ೨೫ ವರುಷಗಳಿಂದ ಒಬ್ಬರಿಗೊಬ್ಬರು ಅಂಟು ಬಿಡದ ಸ್ನೇಹಿತರಾಗಿದ್ದೇವೆ...ಬೆರಳುಗಳು ಬೇರೆ ಬೇರೆ ಉದ್ದ ಅಗಲ ಇದ್ದರೂ ಅದನ್ನ ಹಿಡಿದಿಡುವುದು ಮುಷ್ಠಿ...ಹಾಗೆಯೇ ನಮ್ಮನ್ನ ಬಂಧಿಸಿಟ್ಟಿರುವ ಶಕ್ತಿ ನಿರ್ಮಲ ಸ್ನೇಹ ಹಾಗು ಹಿರಿಯಣ್ಣನ ಪ್ರೀತಿ..ಹಾಗು ಸ್ನೇಹ ...

ಅಂತಹ ಹಿರಿಯಣ್ಣನಿಗೆ, ಅಭಿಮಾನದ ಸ್ನೇಹಿತನಿಗೆ ಹುಟ್ಟು ಹಬ್ಬದ ಶುಭಾಶಯಗಳು!!!!

10 comments:

  1. ನಿಮ್ಮ ಸ್ನೇಹಿತರಿಗೆ ನಮ್ಮ ಶುಭಾಶಯಗಳು...

    ಅವರ ಎಲ್ಲ ಆಸೆ..
    ಕನಸುಗಳು ನನಸಾಗಲಿ........

    ReplyDelete
  2. Anna, namaskara, nijavaglu ee ghatane marte hogidivi. Eegalu namboke aagta illa, navella bere bere kade kayta iddivi anta. Great post and thanks for taking us down the memory lane and silver jubilee of our friendship.

    ReplyDelete
  3. Thank you Sriki for the wishes. It was amazing that you can remember so amny such incidents. those were the days of no cell phones; with all these cell phones, even today we are strugle to meet right at the planned time and place

    ReplyDelete
  4. Super maga!!! thanks for reminding those memories:-)..for your info we went to "Action Jackson" some junk movie and got firings as well:-(

    ReplyDelete
  5. ಪ್ರಕಾಶಣ್ಣ..ತುಂಬಾ ಧನ್ಯವಾದಗಳು..ನಿಮ್ಮ ಪ್ರತಿಕ್ರಿಯೆ..ಯಾವಾಗಲು ಖುಷಿ ಕೊಡುತ್ತೆ...ಉತ್ಸಾಹ ತುಂಬುತ್ತೆ..

    ReplyDelete
  6. ಜೆ. ಎಂ...ಜೀವನ ಒಂದು ಪಯಣ...ಪಯಣದಲ್ಲಿ ಯಾನ ಮಾಡಿದ ಕ್ಷಣಗಳನ್ನು ನೆನೆಯುವುದು ಒಂದು ಸುಂದರ ಸುಮಧುರ ಕ್ಷಣಗಳು..ನಿಮಗೆಲ್ಲ ಧನ್ಯವಾದಗಳು ಅಂತಹ ಕ್ಷಣಗಳನ್ನು ಒದಗಿಸಿದಕ್ಕೆ ...ಧನ್ಯವಾದಗಳು ನಿನ್ನ ಸುಂದರ ಮಾತುಗಳಿಗೆ...

    ReplyDelete
  7. ಶಶಿ..ಕೆಲವೊಮ್ಮೆ..ನಾವು ಸೇರಬೇಕು, ಮಾತಾಡಬೇಕು ಅನ್ನುವಾಗ ಇರುವ ಮಜಾ ..ಸೇರಿದಾಗ ಸಿಗೋಲ್ಲ...ಹಾಗೆಯೇ..ಒಬ್ಬರಿಗೊಬ್ಬರು, ಕಾಯುತ್ತ, ಬಂದ ಮೇಲೆ ಒಬ್ಬರಿಗೊಬ್ಬರು ಬಯ್ದು..ಆಮೇಲೆ ಒಟ್ಟಿಗೆ ಕಳೆಯುವ ಕ್ಷಣಗಳು ಯಾವಾಗಲು ಮಧುರ....ಸಾಲಾಗಿ ಹೋಗುವ ಇರುವೆಗಳ ಸಾಲು ನೋಡಿದಾಗ ಖುಶಿ ಆಗುತ್ತದೆ..ಆದ್ರೆ ಅಡ್ಡಾ ದಿಡ್ಡಿ ಓಡಾಡುವ ಪ್ರಾಣಿಗಳ ಚಿತ್ರ ತೆಗೆಯಲು ನಾವು ಶ್ರಮ ಪಡುತ್ತೇವೆ...ನಿನ್ನ ಜನುಮ ದಿನ ಸುಂದರವಾಗಿರಲಿ...

    ReplyDelete
  8. ವೌ..ಗುರುವೇ..ನಿನ್ನ ಕಾಮೆಂಟ್ ನೋಡಿ ಸಕತ್ ಖುಷಿ ಆಯಿತು...ಹೌದು ನಿಜ..ಆ ಸಿನೆಮಾನ ನೋಡಿದ್ದು..ತುಂಬಾ ತಲೆ ಕೆಡಿಸ್ಕೊಂಡೆ ಆ ಸಿನಿಮಾ ಹೆಸರನ್ನ ನೆನಪಿಸಿಕೊಳ್ಳೋಕೆ....ಹ ಹ ಹ ...ಅ ಸಿನಿಮಾ ನೋಡಿದ ಮೇಲೆ ನಿನಗೆ ಸಿಕ್ಕ ಮಾತುಗಳು..ಬಯ್ಗುಳ...ಹಹಹಹ ಸೂಪರ್....

    ReplyDelete
  9. ಸ್ನೇಹಿತರನ್ನು ಸುದೀರ್ಘ ಕಾಲ ಉಳಿಸಿಕೊಂಡು ಹೋಗುವುದು ತಮಾಷೆ ಮಾತಲ್ಲ ಸಾರ್.

    ಗೆಳೆಯನು ನೆನೆದು ಒಳ್ಳೆಯ ಲೇಖನ ಬರೆದಿದ್ದೀರಿ. ನಿಮ್ಮ ಬ್ಲಾಗ್ ಹೆಸರು ನಿಜವಾಗಲೂ ಸಾರ್ಥಕ.

    ReplyDelete
  10. ದೇವರು ಕೊಟ್ಟ ವರ ...
    ಸ್ನೇಹ ಹಾಗು ಸ್ನೇಹಿತರು...
    ಬಾಳಿನಲ್ಲಿ ಕಷ್ಟ, ಸುಖಕ್ಕೆ ಜೊತೆ ನಿಲ್ಲುವರು
    ಅಂತಹವರನ್ನು ಸದಾ ನೆನೆಯುವುದು
    ಒಂದು ಕುಶಿ ತರುವುದು..
    ಧನ್ಯವಾದಗಳು ಬದರಿ ಸರ್...

    ReplyDelete