Wednesday, August 15, 2012

ತ್ರಿವೇಣಿ ಸಂಗಮ.... ಶ್ರೀ.ಬಾ.ಬ.....


ಪ್ರಯಾಗದಲ್ಲಿ ತ್ರಿವೇಣಿ ಸಂಗಮಕ್ಕೆ ಕಾರಣವಾದ ಮೂರು ನದಿಗಳು ತಮ್ಮಲ್ಲೇ ಮಾತಾಡುತಿದ್ದವು..
ಕೃಪೆ...ಅಂತರ್ಜಾಲ 
"ಗಂಗಕ್ಕ ನಾವೆಲ್ಲಾ ಒಂದೇ ಕಡೆ ಸೇರುವುದು ಎಷ್ಟು ಚಂದ ಅಲ್ವ.."

"ಹೌದು ಯಮುನಕ್ಕ ನಮ್ಮ ನೆನಪುಗಳು, ಒನಪುಗಳು ಹಂಚಿಕೊಳ್ಳುವ ಈ ಸಮಯ ಬೆಲೆಕಟ್ಟಲಾಗದ ಮಾಣಿಕ್ಯ"

"ಸರಸಕ್ಕ ನೀನು ಯಾಕೆ ಮೌನವಾಗಿದ್ದೀಯ...ಏನು ಮಾತಾಡ್ತಾ ಇಲ್ಲ..?"

"ಹಾಗೇನು ಇಲ್ಲ ಗಂಗಕ್ಕ, ಯಮುನಕ್ಕ...ನಾನು ಈ ತ್ರಿವೇಣಿ ಸಂಗಮದ ತರಹ ಇನ್ನೊಂದು ತ್ರಿವೇಣಿ ಸಂಗಮ ಆಗ್ತಾ ಇದೆ.ಅದರ ಬಗ್ಗೆ ಯೋಚನೆ ಮಾಡ್ತಾ ಇದ್ದೆ.."

"ಹೌದಾ ಸರಸಕ್ಕ!!! ಯಾವುದು ಅದು..? ಎಲ್ಲಿ ಆಯಿತು? ಯಾರು ಯಾರು ಭೇಟಿಯಾದರು?..ಏನು ಕತೆ?...ವಿವರವಾಗಿ ಹೇಳು..?"

"ಹೇಳುತ್ತೇನೆ ಕೇಳಿ...!!!"

ಬದರಿನಾಥ್ ಮಾನಸ ಆಸ್ಪತ್ರೆಯಲ್ಲಿ ಕುಳಿತು ಸಂಜೆ ಸುಮಾರು ೧೬.೩೬ಕ್ಕೆ ಶ್ರೀಕಾಂತ್ ಗೆ ಕರೆ ಮಾಡುತ್ತಾರೆ
"ಶ್ರೀಕಾಂತ್ ಸರ್ ನಮಸ್ಕಾರ...ಹೆಂಗಿದ್ದೀರ...ಆರಾಮ?
"ಬದರಿ ಸರ್ ನಮಸ್ಕಾರ..ಹೆಂಗಿದ್ದೀರ...?
"ನಾನು ನಿನ್ನೆ ಇಂದ ವಿಜಯನಗರದಲ್ಲೇ ಡ್ಯೂಟಿ...ನಮ್ಮ ಸಂಬಂಧಿಕರ ಮಗುಗೆ ಹುಷಾರು ಇಲ್ಲ ನಿನ್ನೆಯಿಂದ ಇಲ್ಲೇ ಇದ್ದೇನೆ.."
"ಎಲ್ಲಿ ಸಾರ್"
"ಇಲ್ಲೇ ಆದಿ ಚುಂಚನಗಿರಿ ಮಠದ  ಹಿಂಬಾಗ ಮಾನ..."
"ಮಾನಸ ಆಸ್ಪತ್ರೆ..ಎಷ್ಟು ಹೊತ್ತಿನ ತನಕ ಇರ್ತೀರಾ?
"ಇನ್ನೊಂದು ಅರ್ಧ ಮುಕ್ಕಾಲು ಘಂಟೆ..."
"ಓಕೆ..ಫ್ರೀ ಇದ್ರೆ ಹೇಳಿ..ಬರ್ತೇನೆ..ಭೇಟಿ ಮಾಡುವ"
"ಓಹ್ ಖಂಡಿತ ಸಾರ್ ಕಾಯ್ತಾ ಇರ್ತೀನಿ"

ನಮಸ್ಕಾರ..ಬದರಿ ಸರ್....ನಮಸ್ಕಾರ ಶ್ರೀಕಾಂತ್ ಸರ್...
ಹೀಗೆ ಶುರು ಆಯಿತು..ಮಾತಿನ ಪದರಂಗ...
ಇಬ್ಬರು ಒಬ್ಬರನ್ನ ಒಬ್ಬರು ಭೇಟಿ ಮಾಡಿದ್ದು..ಅಂತರಂಗ ಬಹಿರಂಗವಾಗಿದ್ದು ಇಬ್ಬರಿಗೂ ಖುಷಿ ತಂದಿತ್ತು...ಹೀಗೆ ಮಾತಾಡುತ್ತ ಉಭಯ ಕುಶಲೋಪರಿ ಸಾಂಪ್ರತ 
ಎನ್ನುವಾಗ ಇನ್ನೊಂದು ಅಚ್ಚರಿ ಕಾದಿತ್ತು..

ಜಂಗಮ ವಾಣಿಯಲ್ಲಿ ಬಂದರು ಬಾಲು ಸರ್.

ಅಲ್ಲಿಗೆ ಬಾಲು, ಬದರಿ, ಶ್ರೀ...ತ್ರಿವೇಣಿ ಸಂಗಮ ..ಸಂಗಮವಾಯಿತು...

ಆನಂದ್ ಚಿತ್ರದಲ್ಲಿ ಬರುವ ಒಂದು ಸಂಭಾಷಣೆ..
"ಜೀವನದಲ್ಲಿ ಒಬ್ಬರನ್ನು ಮಾತಾಡಿಸಿದೆ...ಕೆಲ ಸಮಯ ಅವರಜೊತೆಯಲ್ಲಿ ಕಳೆದೆ...ಸುಖ ದುಖ ಹಂಚಿಕೊಂಡೆ ಇದಕ್ಕಿಂತ ಇನ್ನೇನು ಬೇಕು.."

ಇದೆ ಅಲ್ಲವೇ ನಿರ್ಮಲ ಸ್ನೇಹ ಲೋಕ...ಯಾರು ಹುಟ್ಟಿನಿಂದ ಪರಿಚಿತರಲ್ಲ...
ಅಪರಿಚಿತ ಪದದಿಂದ "ಅ" ಅಕ್ಷರ ತೆಗೆದುಹಾಕಲು ಕೆಲ ಕ್ಷಣಗಳು ಸಾಕು..ಆ ಕ್ಷಣಗಳು ಬ್ಲಾಗ್ ಲೋಕದಲ್ಲಿ ಸಿಗುತ್ತದೆ...

"ಹೆಂಗಿದೆ ಗಂಗಕ್ಕ, ಯಮುನಕ್ಕ...ಈ ತ್ರಿವೇಣಿ ಸಂಗಮ..!!!!!".
"ಸರಸಕ್ಕ  ತುಂಬಾ ಚಂದದ ಸಂಗಮ...ಭೂಲೋಕದಲ್ಲಿ ತಾಮಸ ಗುಣಗಳಿಲ್ಲದ ಕೆಲವೇ ಜಾಗಗಳಲ್ಲಿ "ಬ್ಲಾಗ್ ಲೋಕ" ಕೂಡ ಒಂದು ಅಲ್ಲವೇ..

"ಬ್ಲಾಗ್ ಲೋಕಕ್ಕೆ ಬ್ಲಾಗ್ ಲೋಕದ ಗೆಳೆಯ ಗೆಳತಿಯರೆಲ್ಲರಿಗೂ ನಮನಗಳು..." ಎಂದು ಹೇಳುತ್ತಾ ಗಂಗಾ, ಯಮುನಾ, ಸರಸ್ವತಿ ತಮ್ಮ ಮನೆಯಲ್ಲಿ ದೀಪ ಹಚ್ಚಲು ಮನೆಯ ಕಡೆ ಒಟ್ಟಿಗೆ ಹರಿಯಲು ಶುರು ಮಾಡಿದವು!!!

8 comments:

  1. ಶೀರ್ಷಿಕೆ ನೋಡಿ, ಎಲ್ಲೋ ಶ್ರೀರಂಗಪಟ್ಟಣದ ತ್ರಿವೇಣಿ ಸಂಗಮ ಸತ್ಯ ಸಾಯಿ ಬಾಬಾ ಪವಾಡದ ಆಶ್ರಮ ಅಂದುಕೊಂಡೆ.

    ನೋಡಿದರೆ ಇದು ನಮ್ಮದೇ ಕಥೆ. ನಿಜವಾಗಲೂ ಭಳ ಖುಷಿಯಾಯ್ತು ಸಾರ್. ಮುದುಡಿದ ಮನಸ್ಸಿಗೆ ಒಂತರಾ ನೆಮ್ಮದಿಯ ಸಿಂಚನ.

    ನಿಮ್ಮ ಮತ್ತು ಬಾಲಣ್ಣನ ಜೊತೆ ಮಾತಾಡಿದ್ದು ರೋಗಿಗೆ ಗ್ಲೂಕೋಸ್ ಏರಿಸಿದಂತಾಯ್ತು.

    ಈ ಪೋಸ್ಟಿಗೆ ಧನ್ಯವಾದಗಳು.

    ReplyDelete
  2. hha hha ...bareda riti chennaagide....

    baalu sir....badari sir.....holike sari ide....

    ReplyDelete
  3. ಈ ತ್ರಿವೇಣಿ ಸಂಗಮ ಹೀಗೆ ಸರಾಗವಾಗಿ ಹರಿಯುತ್ತಿರಲಿ.... ನೀವು ಯಾವುದೇ ಲೇಖನವನ್ನು ನಿರೂಪಿಸುವ ಶೈಲಿ ತುಂಬ ಚೆನ್ನಾಗಿದೆ ಸರ್... ಈ ತ್ರಿವೇಣಿ ನದಿಗಳ ಮತ್ತು ಇನ್ನು ಹಲವು ನದಿಗಳ ಪರಿಚಯ ಮತ್ತು ಸ್ನೇಹ ನನಗೆ ವೈಯಕ್ತಿಕವಾಗಿ ಜೀವನದಲ್ಲಿ ತುಂಬ ಖುಷಿ ಕೊಟ್ಟಿದೆ....ನಿಜಕ್ಕೂ ಬ್ಲಾಗ್ ಲೋಕಕ್ಕೆ ನಾವು ಚಿರ ಋಣಿ ಆಗಿರಬೇಕು....

    ReplyDelete
  4. ಸಂಗಮದ ಗಮ್ಮತ್ತೆ ಹಾಗೆ..ಮನದಲ್ಲಿ ಕಾಡಿದ ನೆನಪುಗಳು ಓದಿ ಹೋಗುತ್ತವೆ..ಸುಮಧುರ ಪಲುಕುಗಳು ಓಡಿ ಬರುತ್ತವೆ...ಗೆಳೆತನದ ಲೋಕವೇ ಹಾಗೆ..ಧನ್ಯವಾದಗಳು ಬದರಿ ಸರ್ ಹಾಗು ಬಾಲು ಸಾರ್..

    ReplyDelete
  5. ಧನ್ಯವಾದಗಳು ದಿನಕರ್..ನಿಮ್ಮ ಅನಿಸಿಕೆಗಳಿಗೆ...

    ReplyDelete
  6. ಸದಾ ಶಿಖರವೇರುತ್ತಿರುವ..ಸಂಗಮ ಹೀಗೆ ಸಾಗುತ್ತಿರುತ್ತದೆ..ನಿಮ್ಮನ್ನೆಲ್ಲ ಭೇಟಿ ಮಾಡಿದ್ದು ಬಹಳ ಸಂತಸದಾಯಕ ವಿಷಯ...ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ..

    ReplyDelete