Wednesday, February 27, 2013

ಟೆಲ್ ಮಿ ಶ್ರೀಕಾಂತ್!!! (ಅಜಾದ್ ಸರ್ ಅವರ ಜೊತೆ ಕೆಲ ಘಂಟೆಗಳು)

"ಟೆಲ್ ಮಿ ಶ್ರೀಕಾಂತ್!!!"

ಎಸ್. ಎಸ್  ಎಲ್ಲಿದ್ದೀರಾ?

"ನಾನು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಹತ್ತಿರ ನಿಂತಿದ್ದೇನೆ ಅಣ್ಣ"

"ಸರಿ ಅಲ್ಲೇ ಇರಿ ಎರಡು ನಿಮಿಷ ಬಂದೆ" ಫೋನ್ ಕಟ್ ಆಯಿತು, ಬೈಕ್ ಓಡಿತು, ಅಲ್ಲೇ ಬೆಳದಿಂಗಳ ನಗು ಚೆಲ್ಲುತ್ತ ಎಸ್ ಎಸ್ (ಸುಲತ) ನಿಂತಿದ್ದರು. ಇಬ್ಬರು ಉ.ಕು.ಸಾಂ ವಿಚಾರಿಸಿ ಕಹಳೆ ಬಂಡೆ (ಬುಗಲ್ ರಾಕ್) ಉದ್ಯಾನ ವನದೊಳಗೆ ಹೊಕ್ಕೆವು.

ಕಹಳೆ ಬಂಡೆ ಪ್ರವೇಶ ದ್ವಾರ 

ಗಿರಿ ಶಿಖರದ ಗಿರೀಶ್ ಎತ್ತರದ ಗಿರಿಯ ಮೇಲೆ ತನ್ನ ಸ್ನೇಹಿತರ ಜೊತೆ ಕುಳಿತಿದ್ದರು. ಅವರ ಹತ್ತಿರ ಮಾತಾಡುತ್ತಾ ಕುಳಿತಿದ್ದೆವು. ಮತ್ತೆ ಕರೆ ಘಂಟೆ ಅಳಲು ಶುರುಮಾಡಿತು.

ಗೆಳೆತನ ತಬಲಾ ಇದ್ದಂತೆ ಎರಡು ಸೇರಿದರೆ ರಾಗಾ ತಾಳ ಭಾವ! 

"ಅಣ್ಣ ಇನ್ನೊಂದೆರಡು ನಿಮಿಷ ನೆಟ್ಟಕಲ್ಲಪ್ಪ ಸ್ಟಾಪ್ ಗೆ ಬರ್ತಾ ಇದ್ದೇನೆ" ಎಸ್.ಪಿ. ಯ ಮಧುರ ವಾಣಿ ಉಲಿಯಿತು . ಗಾಬರಿಯಾಗಬೇಡಿ ಎಸ್ ಪಿ. ಎಂದರೆ ಸಂಧ್ಯಾ ಪುಟ್ಟಿ. ಬೈಕ್ ಅಲ್ಲಿಗೆ ಓಡಿತು, ಸಿಗ್ನಲ್ ಹತ್ತಿರ ನಿಂತಿದ್ದೆ.

"ಅಣ್ಣ.. ಬೈಕಿನಲ್ಲಿ ಅಲ್ಲಿಯ ತನಕ ಕರೆದುಕೊಂಡು ಹೋಗ್ತೀರಾ!!!?"

ಅಚಾನಕ್ಕಾಗಿ ಬಂದ ಅಶರೀರ ವಾಣಿಯ ಕಡೆ ತಿರುಗಿದೆ... ಸುಂದರ ನಗು ಚೆಲ್ಲುತ್ತ ಎಸ್ ಪಿ. ಗಾಡಿ ಹತ್ತಿದ ಮೇಲೆ ಸೀದಾ ಪಾರ್ಕ್ ಹತ್ತಿರ ಬಂದೆವು. ಅಷ್ಟರಲ್ಲಿ ನವದಂಪತಿಗಳು ಗಿರಿಜಾ ಮೀಸೆಯ ಶಿವೂ ಹಾಗು ನಂದಿನಿ ಬಂದಿದ್ದರು.

ಇಲ್ಲೊಂದು ತ್ರಿ-ವೇಣಿಯರ ಸಂಗಮ 
"ಶ್ರೀಕಾಂತ್ ಮಣಿಕಾಂತ್ ಸರ್ ಕಾಮತ್ ಬುಗಲ್ ರಾಕ್ ಹೋಟೆಲ್ಲಿನ ಹತ್ತಿರ ಇದ್ದಾರಂತೆ, ಅಲ್ಲಿಗೆ ಹೋಗೋಣ" ಗಿರೀಶ್ ಹೇಳಿದರು.. "ಇಲ್ಲಾ ಗಿರಿ, ಪ್ರಕಾಶಣ್ಣ ಮತ್ತು ಅಜಾದ್ ಸರ್ ಇಲ್ಲಿಗೆ ಬರ್ತಾರೆ .. ಒಂದು ಸುಂದರ ಗ್ರೂಪ್ ಫೋಟೋ ತೆಗೆದುಕೊಂಡು ಆಮೇಲೆ ಅಲ್ಲಿಗೆ ಹೋಗೋಣ. ನಾನು ಹೋಗಿ ಮಣಿಕಾಂತ್ ಸರ್ ನಾ ಕರೆದುಕೊಂಡು ಬರ್ತೀನಿ"

"ಅಪ್ಪ ಅಂದ್ರೆ ಆಕಾಶ" ಎಂದ ಮಣಿಕಾಂತ್ ಸರ್, ಆಕಾಶದಲ್ಲಿನ ನೀಲಿಯಂತೆ ಸುಂದರವಾಗಿ ಮಂದಹಾಸ ಬೀರುತ್ತ ನಿಂತಿದ್ದರು, ಹತ್ತಿರ ಬಂದು "ನಮಸ್ಕಾರ..ನನ್ನ ಪುಸ್ತಕ ಬಿಡುಗಡೆಯ ಕಾಮೆಂಟರಿ ಸೂಪರ್ ಇದೆ. ತುಂಬಾ ತುಂಬಾ ಧನ್ಯವಾದಗಳು ನಿಮಗೆ..ತುಂಬಾ ಖುಷಿಯಾಯಿತು" ಎಂದರು.

"ನಿಮ್ಮ ಅಭಿಮಾನ ದೊಡ್ಡದು ಸರ್" ಎಂದೆ!

ಅಷ್ಟರಲ್ಲಿ ಗಿರೀಶ್ ಅವರ ಕರೆ "ಗಿರೀಶ್..ಶ್ರೀಕಾಂತ್ ಜೊತೆಯಲ್ಲಿ ನಾನು ಬರ್ತಾ ಇದ್ದೇನೆ.. ಎರಡೇ ನಿಮಿಷ ಬಂದೆ"   ಫೋನ್ ಕಟ್ಟಾಯಿತು..
ಇನ್ನೊಂದು ತ್ರಿ-ಮೂರ್ತಿಗಳ ಸಂಗಮ 

ಸುಲತ, ಸಂಧ್ಯಾ, ನಂದಿನಿ, ಶಿವಪ್ರಕಾಶ್, ಗಿರೀಶ್, ಮಣಿಕಾಂತ್ ಸರ್, ನಾನು ಎಲ್ಲರು ಕೂತು ಒಂದು ಚಿತ್ರ ತೆಗೆಸಿಕೊಂಡೆವು.

ಒಂದು ಸುಂದರ ಗುಂಪು!

ಅಷ್ಟರಲ್ಲಿ ಅಜಾದ್ ಸರ್ ಅವರ ಮದರಂಗಿ ಧ್ವನಿ ಫೋನಿನಲ್ಲಿ "ಶ್ರೀಮನ್.. ನಾವು ಸೀದಾ ಹೋಟೆಲ್ ಹತ್ತಿರಾನೆ ಬಂದು ಬಿಡುತ್ತೇವೆ.  ಪ್ರಕಾಶನಿಗೆ  ವಿಳಾಸ ಹುಡುಕಲು ಕಷ್ಟವಾಗುತ್ತಿದೆ. ಕಟ್ಟುತ್ತಿರುವ ಕಟ್ಟಡ, @##$ ಆಸ್ಪತ್ರೆ, ಇಂತಹ ಗುರುತುಗಳು ಹೇಳಿದರೆ ಬೇಗ ಹುಡುಕುತ್ತಾನೆ, ಸ್ಕೂಲ್, ಕಾಲೇಜು, ಪಾರ್ಕ್ ಎಂದರೆ ಅವನಿಗೆ ಕಷ್ಟ!!!!"

ಆಕರ್ಷಕ ಜ್ಞಾನದ ದಾಹ ತೀರಿಸುವ ಟ್ಯಾಂಕ್ !

ಸರಿ ನಾವೆಲ್ಲರೂ ಅವರನ್ನ ಭೇಟಿ ಮಾಡಲು ಹೋಟೆಲಿನತ್ತ ಹೆಜ್ಜೆ ಹಾಕಿದೆವು, ದಾರಿಯಲ್ಲಿ ಹೀಗೆ ಹಾಗೆ ಮಾತಾಡುತ್ತಾ ಬಂದೆವು. ಅಷ್ಟರಲ್ಲಿ ಶಮ್ಮಿ ಮೇಡಂ ಅವರ ಕುಟುಂಬ ಕೂಡ ಹೋಟೆಲಿನತ್ತಾ ಹೆಜ್ಜೆ ಹಾಕುತ್ತ ಬರುತ್ತಿದ್ದರು.

ಓದುಗರಿಂದ ಓದುಗರಿಗಾಗಿ ಓದುಗರಿಗೋಸ್ಕರ!

ಅಜಾದ್ ಸರ್ ಕೈ ಬೀಸುತ್ತಾ ತಮ್ಮ ಟ್ರೇಡ್ ಮಾರ್ಕ್ ನಗುವಿನೊಂದಿಗೆ ನಮ್ಮನ್ನು ಸ್ವಾಗತಿಸಿದರು, ಪ್ರಕಾಶಣ್ಣ ಕಣ್ಣು ಮಿಟುಕಿಸಿ ಕುಂಬಳಕಾಯಿ ಮೇಳಕ್ಕೆ ಚಾಲನೆ ಇತ್ತರು..

ಹಾ  ಈಗ ಶುರುವಾಗುತ್ತೆ ಕುಂಬಳ ಕಾಯಿ ಮೇಳ!
ಅಲಹಾಬಾದಿನಲ್ಲಿ ಕುಂಭ ಮೇಳಕ್ಕೆ ಲಕ್ಷ ಲಕ್ಷ ಜನ ಸೇರಿದ್ದರು. ಟಿ. ನರಸೀಪುರದಲ್ಲಿ ಮಿನಿ ಕುಂಭ ಮೇಳಕ್ಕೆ ಕೂಡ ಜನಸಾಗರವಿತ್ತು , ಬಸವನಗುಡಿಯ ಬುಗಲ್ ರಾಕ್ ಹತ್ತಿರ  ಮಿನಿ ಬ್ಲಾಗ್ ಮೇಳಕ್ಕೆ ಕಹಳೆ ಊದಿದರು ಪ್ರಕಾಶಣ್ಣ!

ಮೇಳಕ್ಕೆ ಕಹಳೆಯ ನಾದ 
ಮೇಳ ಎಂದಾಗ ತಿಂಡಿ ತಿನಿಸುಗಳು ಕೂಡ ಒಂದು ಭಾಗವಲ್ಲವೆ. ಸ್ನೇಹದ ಗಂಗೆಯಲ್ಲಿ ಮಿಂದೆದ್ದ ನಾವೆಲ್ಲರೂ  ಹೊಟ್ಟೆಗೆ ಪುಷ್ಕಳ ಬೋಜನಕ್ಕೆ ಅಣಿಯಾಗಿ ಕೂತೆವು. ಸಾಂಪ್ರದಾಯಿಕವಾಗಿ ಒಬ್ಬರಿಗೊಬ್ಬರ ಪರಿಚಯವಾಯಿತು. ಪ್ರಕಾಶಣ್ಣ, ಅಜಾದ್ ಸರ್, ಶಿವಪ್ರಕಾಶ್, ನಂದಿನಿ, ಮಣಿಕಾಂತ್ ಸರ್, ಶಮ್ಮಿ ಮೇಡಂ, ಅವರ ಯಜಮಾನರು, ಅವರ ಮುದ್ದು ಗುಂಡು (Hibernate modeನಲ್ಲಿ), ನಂದಿನಿ, ಸುಲತ, ಸಂಧ್ಯಾ, ಗಿರೀಶ್ ಎಲ್ಲರೂ ತಮ್ಮ  ದಂತ ಪಂಕ್ತಿಗಳನ್ನು ತೋರಿದ ಮೇಲೆ ನಗೆ ಬಾಂಬುಗಳು ಸಿಡಿಯತೊಡಗಿದವು.

ಮೀನಿನ ಹೆಜ್ಜೆಯನ್ನು ಕಂಡು ಹಿಡಿಯಬಹುದು, ಹೆಣ್ಣಿನ ಮನವನ್ನು ಓದಬಹುದು.. ಆದರೆ ಕನ್ನಡಕವಿಲ್ಲದೆ, ಜೂಮ್ ಲೆನ್ಸ್ ಇಲ್ಲದೆ ಹೋಟೆಲಿನ ಮೆನು ಓದಲು ಆಗುವುದಿಲ್ಲ ಎಂದರು ಪ್ರಕಾಶಣ್ಣ. ಅದನ್ನ ಇಷ್ಟು ದೂರ ಹಿಡಿದು ಓದಬೇಕು ಎಂದರು ಅಜಾದ್ ಸರ್!
ಹಾಸ್ಯ ಬ್ರಹ್ಮ ಅಜಾದ್ ಸರ್!

ಪ್ರಕಾಶಣ್ಣ ಮತ್ತು ಅಜಾದ್ ಸರ್ ಅವರಿಬ್ಬರ ಸುಂದರ ಗೆಳೆತನ, ಅವರ ಹಾಸ್ಯ ಪ್ರಜ್ಞೆ, ಎಲ್ಲರನ್ನೂ ಸ್ನೇಹದ ಬಂಧನದಲ್ಲಿ ಬೆಸೆಯುವ ಸಹೃದಯತೆಯ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ.

ಒಂದು ಸುಂದರ ಭಾನುವಾರ ಸುಮಧುರ ಹೃದಯಗಳ ಜೊತೆ ಕಳೆದ ಸಮಯಗಳು ಬ್ಲಾಗ್ ಲೋಕದ ಪುಟಗಳಲ್ಲಿ ಚಿನ್ನದಲ್ಲಿ ಮುಳುಗಿ ಎದ್ದ ಸಂದರ್ಭದಲ್ಲಿ ಆ ನೆನಪಿನ ಸುಂದರ ಅಕ್ಷರಗಳು ನಿಮಗಾಗಿ. ಅಜಾದ್ ಸರ್ ಅವರ ಆಗಮನದ ಖುಷಿಯಲ್ಲಿ ಬಸವನಗುಡಿಯ ಬುಗಲ್ ರಾಕ್ನಲ್ಲಿ ನಡೆದ  ಬ್ಲಾಗ್ ಲೋಕದ ಹೃದಯಗಳ ಕುಂಭ ಮೇಳಕ್ಕೆ ನಮ್ಮ ಈ ಚಿತ್ರ ಸಾಕ್ಷಿಯಾಯಿತು!!!

ಹೀಗೊಂದು ಗುಂಪು!
ಗೆಳೆತನ ಪ್ರತಿ ಚರಾಚರ ವಸ್ತುಗಳಲ್ಲೂ ಪ್ರವಹಿಸುವ ಒಂದು ಸುಂದರ ಕಂಪನ ಶಕ್ತಿ!!!