"ಟೆಲ್ ಮಿ ಶ್ರೀಕಾಂತ್!!!"
ಎಸ್. ಎಸ್ ಎಲ್ಲಿದ್ದೀರಾ?
"ನಾನು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಹತ್ತಿರ ನಿಂತಿದ್ದೇನೆ ಅಣ್ಣ"
"ಸರಿ ಅಲ್ಲೇ ಇರಿ ಎರಡು ನಿಮಿಷ ಬಂದೆ" ಫೋನ್ ಕಟ್ ಆಯಿತು, ಬೈಕ್ ಓಡಿತು, ಅಲ್ಲೇ ಬೆಳದಿಂಗಳ ನಗು ಚೆಲ್ಲುತ್ತ ಎಸ್ ಎಸ್ (ಸುಲತ) ನಿಂತಿದ್ದರು. ಇಬ್ಬರು ಉ.ಕು.ಸಾಂ ವಿಚಾರಿಸಿ ಕಹಳೆ ಬಂಡೆ (ಬುಗಲ್ ರಾಕ್) ಉದ್ಯಾನ ವನದೊಳಗೆ ಹೊಕ್ಕೆವು.
|
ಕಹಳೆ ಬಂಡೆ ಪ್ರವೇಶ ದ್ವಾರ |
ಗಿರಿ ಶಿಖರದ ಗಿರೀಶ್ ಎತ್ತರದ ಗಿರಿಯ ಮೇಲೆ ತನ್ನ ಸ್ನೇಹಿತರ ಜೊತೆ ಕುಳಿತಿದ್ದರು. ಅವರ ಹತ್ತಿರ ಮಾತಾಡುತ್ತಾ ಕುಳಿತಿದ್ದೆವು. ಮತ್ತೆ ಕರೆ ಘಂಟೆ ಅಳಲು ಶುರುಮಾಡಿತು.
|
ಗೆಳೆತನ ತಬಲಾ ಇದ್ದಂತೆ ಎರಡು ಸೇರಿದರೆ ರಾಗಾ ತಾಳ ಭಾವ! |
"ಅಣ್ಣ ಇನ್ನೊಂದೆರಡು ನಿಮಿಷ ನೆಟ್ಟಕಲ್ಲಪ್ಪ ಸ್ಟಾಪ್ ಗೆ ಬರ್ತಾ ಇದ್ದೇನೆ" ಎಸ್.ಪಿ. ಯ ಮಧುರ ವಾಣಿ ಉಲಿಯಿತು . ಗಾಬರಿಯಾಗಬೇಡಿ ಎಸ್ ಪಿ. ಎಂದರೆ ಸಂಧ್ಯಾ ಪುಟ್ಟಿ. ಬೈಕ್ ಅಲ್ಲಿಗೆ ಓಡಿತು, ಸಿಗ್ನಲ್ ಹತ್ತಿರ ನಿಂತಿದ್ದೆ.
"ಅಣ್ಣ.. ಬೈಕಿನಲ್ಲಿ ಅಲ್ಲಿಯ ತನಕ ಕರೆದುಕೊಂಡು ಹೋಗ್ತೀರಾ!!!?"
ಅಚಾನಕ್ಕಾಗಿ ಬಂದ ಅಶರೀರ ವಾಣಿಯ ಕಡೆ ತಿರುಗಿದೆ... ಸುಂದರ ನಗು ಚೆಲ್ಲುತ್ತ ಎಸ್ ಪಿ. ಗಾಡಿ ಹತ್ತಿದ ಮೇಲೆ ಸೀದಾ ಪಾರ್ಕ್ ಹತ್ತಿರ ಬಂದೆವು. ಅಷ್ಟರಲ್ಲಿ ನವದಂಪತಿಗಳು ಗಿರಿಜಾ ಮೀಸೆಯ ಶಿವೂ ಹಾಗು ನಂದಿನಿ ಬಂದಿದ್ದರು.
|
ಇಲ್ಲೊಂದು ತ್ರಿ-ವೇಣಿಯರ ಸಂಗಮ |
"ಶ್ರೀಕಾಂತ್ ಮಣಿಕಾಂತ್ ಸರ್ ಕಾಮತ್ ಬುಗಲ್ ರಾಕ್ ಹೋಟೆಲ್ಲಿನ ಹತ್ತಿರ ಇದ್ದಾರಂತೆ, ಅಲ್ಲಿಗೆ ಹೋಗೋಣ" ಗಿರೀಶ್ ಹೇಳಿದರು.. "ಇಲ್ಲಾ ಗಿರಿ, ಪ್ರಕಾಶಣ್ಣ ಮತ್ತು ಅಜಾದ್ ಸರ್ ಇಲ್ಲಿಗೆ ಬರ್ತಾರೆ .. ಒಂದು ಸುಂದರ ಗ್ರೂಪ್ ಫೋಟೋ ತೆಗೆದುಕೊಂಡು ಆಮೇಲೆ ಅಲ್ಲಿಗೆ ಹೋಗೋಣ. ನಾನು ಹೋಗಿ ಮಣಿಕಾಂತ್ ಸರ್ ನಾ ಕರೆದುಕೊಂಡು ಬರ್ತೀನಿ"
"ಅಪ್ಪ ಅಂದ್ರೆ ಆಕಾಶ" ಎಂದ ಮಣಿಕಾಂತ್ ಸರ್, ಆಕಾಶದಲ್ಲಿನ ನೀಲಿಯಂತೆ ಸುಂದರವಾಗಿ ಮಂದಹಾಸ ಬೀರುತ್ತ ನಿಂತಿದ್ದರು, ಹತ್ತಿರ ಬಂದು "ನಮಸ್ಕಾರ..ನನ್ನ ಪುಸ್ತಕ ಬಿಡುಗಡೆಯ ಕಾಮೆಂಟರಿ ಸೂಪರ್ ಇದೆ. ತುಂಬಾ ತುಂಬಾ ಧನ್ಯವಾದಗಳು ನಿಮಗೆ..ತುಂಬಾ ಖುಷಿಯಾಯಿತು" ಎಂದರು.
"ನಿಮ್ಮ ಅಭಿಮಾನ ದೊಡ್ಡದು ಸರ್" ಎಂದೆ!
ಅಷ್ಟರಲ್ಲಿ ಗಿರೀಶ್ ಅವರ ಕರೆ "ಗಿರೀಶ್..ಶ್ರೀಕಾಂತ್ ಜೊತೆಯಲ್ಲಿ ನಾನು ಬರ್ತಾ ಇದ್ದೇನೆ.. ಎರಡೇ ನಿಮಿಷ ಬಂದೆ" ಫೋನ್ ಕಟ್ಟಾಯಿತು..
|
ಇನ್ನೊಂದು ತ್ರಿ-ಮೂರ್ತಿಗಳ ಸಂಗಮ |
ಸುಲತ, ಸಂಧ್ಯಾ, ನಂದಿನಿ, ಶಿವಪ್ರಕಾಶ್, ಗಿರೀಶ್, ಮಣಿಕಾಂತ್ ಸರ್, ನಾನು ಎಲ್ಲರು ಕೂತು ಒಂದು ಚಿತ್ರ ತೆಗೆಸಿಕೊಂಡೆವು.
|
ಒಂದು ಸುಂದರ ಗುಂಪು! |
ಅಷ್ಟರಲ್ಲಿ ಅಜಾದ್ ಸರ್ ಅವರ ಮದರಂಗಿ ಧ್ವನಿ ಫೋನಿನಲ್ಲಿ "ಶ್ರೀಮನ್.. ನಾವು ಸೀದಾ ಹೋಟೆಲ್ ಹತ್ತಿರಾನೆ ಬಂದು ಬಿಡುತ್ತೇವೆ. ಪ್ರಕಾಶನಿಗೆ ವಿಳಾಸ ಹುಡುಕಲು ಕಷ್ಟವಾಗುತ್ತಿದೆ. ಕಟ್ಟುತ್ತಿರುವ ಕಟ್ಟಡ, @##$ ಆಸ್ಪತ್ರೆ, ಇಂತಹ ಗುರುತುಗಳು ಹೇಳಿದರೆ ಬೇಗ ಹುಡುಕುತ್ತಾನೆ, ಸ್ಕೂಲ್, ಕಾಲೇಜು, ಪಾರ್ಕ್ ಎಂದರೆ ಅವನಿಗೆ ಕಷ್ಟ!!!!"
|
ಆಕರ್ಷಕ ಜ್ಞಾನದ ದಾಹ ತೀರಿಸುವ ಟ್ಯಾಂಕ್ ! |
ಸರಿ ನಾವೆಲ್ಲರೂ ಅವರನ್ನ ಭೇಟಿ ಮಾಡಲು ಹೋಟೆಲಿನತ್ತ ಹೆಜ್ಜೆ ಹಾಕಿದೆವು, ದಾರಿಯಲ್ಲಿ ಹೀಗೆ ಹಾಗೆ ಮಾತಾಡುತ್ತಾ ಬಂದೆವು. ಅಷ್ಟರಲ್ಲಿ ಶಮ್ಮಿ ಮೇಡಂ ಅವರ ಕುಟುಂಬ ಕೂಡ ಹೋಟೆಲಿನತ್ತಾ ಹೆಜ್ಜೆ ಹಾಕುತ್ತ ಬರುತ್ತಿದ್ದರು.
|
ಓದುಗರಿಂದ ಓದುಗರಿಗಾಗಿ ಓದುಗರಿಗೋಸ್ಕರ! |
ಅಜಾದ್ ಸರ್ ಕೈ ಬೀಸುತ್ತಾ ತಮ್ಮ ಟ್ರೇಡ್ ಮಾರ್ಕ್ ನಗುವಿನೊಂದಿಗೆ ನಮ್ಮನ್ನು ಸ್ವಾಗತಿಸಿದರು, ಪ್ರಕಾಶಣ್ಣ ಕಣ್ಣು ಮಿಟುಕಿಸಿ ಕುಂಬಳಕಾಯಿ ಮೇಳಕ್ಕೆ ಚಾಲನೆ ಇತ್ತರು..
|
ಹಾ ಈಗ ಶುರುವಾಗುತ್ತೆ ಕುಂಬಳ ಕಾಯಿ ಮೇಳ! |
ಅಲಹಾಬಾದಿನಲ್ಲಿ ಕುಂಭ ಮೇಳಕ್ಕೆ ಲಕ್ಷ ಲಕ್ಷ ಜನ ಸೇರಿದ್ದರು. ಟಿ. ನರಸೀಪುರದಲ್ಲಿ ಮಿನಿ ಕುಂಭ ಮೇಳಕ್ಕೆ ಕೂಡ ಜನಸಾಗರವಿತ್ತು , ಬಸವನಗುಡಿಯ ಬುಗಲ್ ರಾಕ್ ಹತ್ತಿರ ಮಿನಿ ಬ್ಲಾಗ್ ಮೇಳಕ್ಕೆ ಕಹಳೆ ಊದಿದರು ಪ್ರಕಾಶಣ್ಣ!
|
ಮೇಳಕ್ಕೆ ಕಹಳೆಯ ನಾದ |
ಮೇಳ ಎಂದಾಗ ತಿಂಡಿ ತಿನಿಸುಗಳು ಕೂಡ ಒಂದು ಭಾಗವಲ್ಲವೆ. ಸ್ನೇಹದ ಗಂಗೆಯಲ್ಲಿ ಮಿಂದೆದ್ದ ನಾವೆಲ್ಲರೂ ಹೊಟ್ಟೆಗೆ ಪುಷ್ಕಳ ಬೋಜನಕ್ಕೆ ಅಣಿಯಾಗಿ ಕೂತೆವು. ಸಾಂಪ್ರದಾಯಿಕವಾಗಿ ಒಬ್ಬರಿಗೊಬ್ಬರ ಪರಿಚಯವಾಯಿತು. ಪ್ರಕಾಶಣ್ಣ, ಅಜಾದ್ ಸರ್, ಶಿವಪ್ರಕಾಶ್, ನಂದಿನಿ, ಮಣಿಕಾಂತ್ ಸರ್, ಶಮ್ಮಿ ಮೇಡಂ, ಅವರ ಯಜಮಾನರು, ಅವರ ಮುದ್ದು ಗುಂಡು (Hibernate modeನಲ್ಲಿ), ನಂದಿನಿ, ಸುಲತ, ಸಂಧ್ಯಾ, ಗಿರೀಶ್ ಎಲ್ಲರೂ ತಮ್ಮ ದಂತ ಪಂಕ್ತಿಗಳನ್ನು ತೋರಿದ ಮೇಲೆ ನಗೆ ಬಾಂಬುಗಳು ಸಿಡಿಯತೊಡಗಿದವು.
ಮೀನಿನ ಹೆಜ್ಜೆಯನ್ನು ಕಂಡು ಹಿಡಿಯಬಹುದು, ಹೆಣ್ಣಿನ ಮನವನ್ನು ಓದಬಹುದು.. ಆದರೆ ಕನ್ನಡಕವಿಲ್ಲದೆ, ಜೂಮ್ ಲೆನ್ಸ್ ಇಲ್ಲದೆ ಹೋಟೆಲಿನ ಮೆನು ಓದಲು ಆಗುವುದಿಲ್ಲ ಎಂದರು ಪ್ರಕಾಶಣ್ಣ. ಅದನ್ನ ಇಷ್ಟು ದೂರ ಹಿಡಿದು ಓದಬೇಕು ಎಂದರು ಅಜಾದ್ ಸರ್!
|
ಹಾಸ್ಯ ಬ್ರಹ್ಮ ಅಜಾದ್ ಸರ್! |
ಪ್ರಕಾಶಣ್ಣ ಮತ್ತು ಅಜಾದ್ ಸರ್ ಅವರಿಬ್ಬರ ಸುಂದರ ಗೆಳೆತನ, ಅವರ ಹಾಸ್ಯ ಪ್ರಜ್ಞೆ, ಎಲ್ಲರನ್ನೂ ಸ್ನೇಹದ ಬಂಧನದಲ್ಲಿ ಬೆಸೆಯುವ ಸಹೃದಯತೆಯ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ.
ಒಂದು ಸುಂದರ ಭಾನುವಾರ ಸುಮಧುರ ಹೃದಯಗಳ ಜೊತೆ ಕಳೆದ ಸಮಯಗಳು ಬ್ಲಾಗ್ ಲೋಕದ ಪುಟಗಳಲ್ಲಿ ಚಿನ್ನದಲ್ಲಿ ಮುಳುಗಿ ಎದ್ದ ಸಂದರ್ಭದಲ್ಲಿ ಆ ನೆನಪಿನ ಸುಂದರ ಅಕ್ಷರಗಳು ನಿಮಗಾಗಿ. ಅಜಾದ್ ಸರ್ ಅವರ ಆಗಮನದ ಖುಷಿಯಲ್ಲಿ ಬಸವನಗುಡಿಯ ಬುಗಲ್ ರಾಕ್ನಲ್ಲಿ ನಡೆದ ಬ್ಲಾಗ್ ಲೋಕದ ಹೃದಯಗಳ ಕುಂಭ ಮೇಳಕ್ಕೆ ನಮ್ಮ ಈ ಚಿತ್ರ ಸಾಕ್ಷಿಯಾಯಿತು!!!
|
ಹೀಗೊಂದು ಗುಂಪು! |
ಗೆಳೆತನ ಪ್ರತಿ ಚರಾಚರ ವಸ್ತುಗಳಲ್ಲೂ ಪ್ರವಹಿಸುವ ಒಂದು ಸುಂದರ ಕಂಪನ ಶಕ್ತಿ!!!
ಆವತ್ತು ನಾನು ಬರಲಾಗಲಿಲ್ಲವಲ್ಲ ಎನ್ನುವ ಕೊರಗು, ಈವತ್ತು ಕಳೆಯಿತು ಶ್ರೀಮಾನ್...
ReplyDeleteಅಂದು ಸೇರಿದ ನನ್ನ ಗೆಳೆಯರ ಮುಖದಲೆಲ್ಲ ಅರಳಿರುವ ನಗುವು ಅವರ ಮನಸ್ಸಿನ ಭಾರಗಳನ್ನು ಖಂಡಿತ ಕಡಿಮೆ ಮಾಡಿರುತ್ತದೆ.
ದೂರದ ತೀರದಿಂದ ನಮ್ಮನ್ನು ಭೇಟಿಯಾಗಲು ಬರುವ ಆಜಾದಣ್ಣ ಮತ್ತು ನಮ್ಮ ಸಂಘದ ಜೀವಮಾನದ ಅಧ್ಯಕ್ಷರಾದ ಪ್ರಕಾಶಣ್ಣ ನಮ್ಮನ್ನೆಲ್ಲಾ ಸೇರಿಸುವ ಶ್ರಮ ತೆಗೆದುಕೊಳ್ಳುತ್ತಿದ್ದಾರೆ. ಇಲ್ಲದಿದ್ದರೆ ಈ ಬೆಂಗಳೂರೆಂಬ ಘೋಡಾರಣ್ಯದಲ್ಲಿ ನಾವು ಸಿಗುವ ಮಾತೆಲ್ಲಿ?
ತುಂಬಾ ಒಳ್ಳೊಳ್ಳೆಯ ಶೀರ್ಷಿಕೆ ಸಮೇತ ಕೂಟವನ್ನು ಕಟ್ಟಿಕೊಟ್ಟಿದ್ದೀರಿ. ಬಹಳ ಖುಷಿಯಾಯಿತು.
ಅಂದಹಾಗೆ "ಹಾ ಈಗ ಶುರುವಾಗುತ್ತೆ ಕುಂಬಳ ಕಾಯಿ ಮೇಳ!" ಚಿತ್ರಕ್ಕೆ ಒಪ್ಪುವ ನಾನು ಬರಲಾಗಲಿಲ್ಲವಲ್ಲ ಎನ್ನುವ ನೋವಿದೆ. ಕ್ಷಮೆ ಇರಲಿ.
ಬದರಿ ಸರ್ ನಿಮ್ಮ ಮನಸು ನಮ್ಮೊಳಗೇ ನಮ್ಮ ಮನಸ್ಸು ನಿಮ್ಮೊಳಗೇ ಸದಾ ಇರುತ್ತದೆ ಮತ್ತೊಮ್ಮೆ ಸಮಯ ಕೂಡಿ ಬರುತ್ತದೆ. ಪ್ರಕಾಶಣ್ಣ ಅಜಾದ್ ಸರ್ ಇಬ್ಬರು ಈ ಸ್ನೇಹದ ಮಾಲೆಯ ಎರಡು ಕೊಂಡಿಗಳು. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು
Deleteಸೂಪರ್.. ಎಲ್ಲಾ ಚೆನ್ನಾಗಿ ಎಂಜಾಯ್ ಮಾಡಿದ್ರಾ..? ನಮ್ಮನ್ನ ಬಿಟ್ಟು..:(
ReplyDeleteದೂರದಿಂದಲೇ ಶುಭ ಹಾರೈಸುತ್ತಿದೆ ಕಾಣಿಸುವ ಹಸ್ತ ಅದೇ ಅಕ್ಕಯ್ಯನ ಹಸ್ತ.. ಧನ್ಯವಾದಗಳು ಅಕ್ಕಯ್ಯ.. ನೀವು ಬೆಂಗಳೂರಿಗೆ ಬಂದಾಗ ಎಲ್ಲರೂ ಸಿಗುವ.
Deleteಗುಡ್ ಮಾರ್ನಿಂಗ್ ಅಣ್ಣ, ವೀಕೆಂಡ್ ಪ್ಲಾನ್ ಏನು? ಎಂದು ಶ್ರೀಕಾಂತಣ್ಣನಿಗೆ ಜಿಮೈಲ್ ನಲ್ಲಿ ಪಿಂಗ್ ಮಾಡ್ತಿದ್ದರೆ , ಟಕ್ ಟಕ್ ಅಂತ ಬಡಿದುಕೊಂಡ ವಾಟ್ಸ್ಯಾಪ್ಸ್ ಮೆಸೇಜ್ ನಲ್ಲಿ ಸುಲತಾ , ನಾಳೆ ಬ್ಯುಗಲ್ ರಾಕ್ ಲಿ ಆಜಾದ್ ಭಯ್ಯಾ , ಪ್ರಕಾಶಣ್ಣ ಎಲ್ಲ ಬರ್ತಾರಂತೆ ನೀವು ಬರ್ತೀರ ಅಲ್ವ ಅಂತ ಕೇಳುತ್ತಿದ್ದರು. ಅಲ್ಲಿಗೊಂದು ಚಂದನೆಯ ವೀಕೆಂಡ್ ಪ್ಲಾನ್ ತನ್ನಿಂದ ತಾನೇ ರೂಪುಗೊಂಡಿತ್ತು. ನಕ್ಕು ಸುಸ್ತಾಗುವುದಂತು ನಿಜ ಎಂದು ಗೊತ್ತಿದ್ದಕ್ಕೆ ಮೊದಲೇ ತಯಾರಾಗಿ ಬಂದಿದ್ದೆ. ಶಿವಪ್ರಕಾಶ್ ಮತ್ತು ನಂದಿನಿ ಬಂದಿದ್ದು surprise ಆಗಿತ್ತು. ಶಮ್ಮಿ ಅಕ್ಕ ಮತ್ತವರ family ಹೊಸ ಪರಿಚಯ. ನಗೆಗಡಲ ಸಂಗಮಕ್ಕೆ ಹೋಗಿ ಮತ್ತೆ ನಕ್ಕು ಬಂದೆ ಎಂದರೆ ಅದೇ ದೊಡ್ಡ joke ಆಗುವ ಸಾಧ್ಯತೆಯಿದೆ.
ReplyDeletesuper anna..
ನಕ್ಕು ನಕ್ಕು ಸುಸ್ತಾದೆಯ ಎಸ್ ಪಿ ಯೋಚನೆ ಬೇಡ ಮತ್ತೊಮ್ಮೆ ಇಂತಹ ನಗೆ ಗುಳಿಗೆಗಳು ಸಿಗುವ ಸಾಧ್ಯತೆಗಳು ಇದ್ದೆ ಇದೆ. ಸುಂದರ ಪ್ರತಿಕ್ರಿಯೆ ನಿನ್ನದು
Deleteಶ್ರೀಕಾಂತ್...ಸುಂದರ ಚಿತ್ರಗಳು, ಆತ್ಮೀಯ ಕ್ಷಣಗಳು, ಸೂಪರ್ ವಿವರಣೆ... ನೀವೆಲ್ಲ ಸೇರಿದಾಗ ನಿಮ್ಮ ಬ್ಲಾಗ್ ಬರಹಕ್ಕೆ ಯಾವಾಗಲೂ ಕಾಯ್ತಾ ಇರ್ತೇನೆ... :)
ReplyDeleteಹ ಹ ಇದಪ್ಪ ಸೂಪರ್ ಮಾತು. ಧನ್ಯವಾದಗಳು ಸಹೋದರಿ
Deleteವಾವ್..ಸುಂದರ ವರದಿ ಶ್ರೀ...
ReplyDeleteಬ್ಲಾಗಿಗರ ಕಾರ್ಯಚಟುವಟಿಕೆಯ ವರದಿಯನ್ನು ಸದಾ ಒದಗಸಿ ನಮಗೂ ಎಲ್ಲೋ ಇದ್ದರೂ ನಿಮ್ಮೊಡನೆ ಸೇರಿದ ಅನುಭವ ಕೊಡುತ್ತೀರಿ...
ವಂದನೆಗಳು ನಿಮಗೆ :)..
ಎಲ್ಲರೂ ಸೇರಿದ್ದನ್ನು ಬರಹದಲ್ಲಿ ಮೂಡಿಸುವ ಹಂಬಲ ಸದಾ ಕಾಡುತ್ತಿರುತ್ತದೆ. ಬಂದವರಿಗೆ ಮೆಲುಕು ಹಾಕುವ.. ಕಾರಣಾಂತರಗಳಿಂದ ಬಾರದಿರುವವರಿಗೆ ಒಂದು ಪಕ್ಷಿನೋಟ. ಧನ್ಯವಾದಗಳು ಚಿನ್ಮಯ್
Deleteಒಳ್ಳೆಯ ಕ್ಷಣಗಳು ಕಳೆದ ದಿನ ಅದು. ಆದ್ರೆ ನೀವು ನಮ್ಮ ಜೊತೆ ಊಟ ಮಾಡದೆ ಹೋಗಿದ್ದು ಬೇಜಾರ್ ಆಯಿತು ನೋಡಿ ...
ReplyDeleteಗಿರಿ ಸುಂದರ ಘಳಿಗೆಗಳನ್ನು ಕೊಟ್ಟ ಎಲ್ಲ ಹೃದಯವಂತ ಮಿತ್ರರಿಗೂ ಧನ್ಯವಾದಗಳು. ನನಗು ಬೇಜಾರಾಯ್ತು.. ಆದರೆ ಬೇರೆ ಕಡೆ ನಿರಾಕರಿಸಲಾಗದ ಕರೆ ಇತ್ತಲ್ಲ :-)
Delete:? :? :? ನಾನು ಬರಲಾಗಲಿಲ್ಲ ನನ್ನ ಪ್ರೀತಿಯ ಗೆಳೆಯರೇ ಕ್ಷಮಿಸಿ,. ಆದರೆ ಫೋಟೋ ನೋಡಿ .............. ontaraha khushiyaayitu.
ReplyDeleteನೀವು ಬಂದಿದ್ದರೇ ...ಬಿಡಿ ಅದು ಹೇಳಲು ಆಗೋಲ್ಲ ಅಷ್ಟೊಂದು ನಗೆ ಬಾಂಬುಗಳು ಇರುತ್ತಿದ್ದವು. ಜೊತೆಗೆ ಕಚಗುಳಿ ಇಡುವ ಚಿತ್ರಗಳು. ಧನ್ಯವಾದಗಳು ಸರ್
Deleteನಿಮ್ಮ ಈ ವಿಶೇಷ ಬ್ಲಾಗ್ ನೋಡಿ ಖುಷಿ ಆಯಿತು ಶ್ರೀ ಸರ್ ..... ಈ ತರ ಬ್ಲಾಗ್ ನವ್ರೆಲ್ಲಾ ಒಂದುಕಡೆ ಸೇರಿದರು ಅಂತ ಗೊತ್ತಾದ್ರೆ ಹೊಟ್ಟೆ ಉರಿಯೋದು ನನಗೆ.... ಮುಂಬೈ ತುಂಬಾ ದೂರ ಅನ್ಸೋದು ನೋಡಿ ... ಸುಂದರ ಫೋಟೋಗಳು ... ಸಚಿತ್ರ ವರದಿ.. ... ಬ್ಲಾಗಿಗರ ಈ ಬಂಧ ಸದಾ ಹಸಿರಾಗಿರಲಿ..
ReplyDeleteಬೇಸರ ಬೇಡ ಸರ್ ಮುಂಬೈ ನಲ್ಲೆ ಒಮ್ಮೆ ಸೇರುವ ಸಮಯ ಕೂಡಿಬಂದಾಗ. ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು ಅಶೋಕ್ ಸರ್
Deleteಟೆಲ್ ಮಿ ಶ್ರೀಕಾಂತ್!!! ನೆನಪಿನಲ್ಲಿ ಸದಾ ಇರುತ್ತದೆ....ಸುಂದರವಾದ ಜಾಗ, ಸುಂದರವಾದ ಚಿತ್ರಗಳು, ಆತ್ಮೀಯ ಕ್ಷಣಗಳು...
ReplyDeleteಹ ಹ ಹ ಹ
Deleteಎಸ್ ಎಸ್ ಸೂಪರ್
ಪ್ರೀತಿಯ ಶ್ರೀ...
ReplyDeleteನಿಜಕ್ಕೂ ನಾವೆಲ್ಲ ಸಕತ್ ಖುಶಿ ಪಟ್ಟೆವು..
ಊಟ..
ಊಟಕ್ಕಿಂತ ಸೊಗಸಾದ ಹಾಸ್ಯ ಚಟಾಕಿಗಳು.. !
ಮಹಾತ್ಮಾ ಗಾಂಧಿ ಬಳಿ ಇದ್ದ ಮೂರು ಬೊಂಬೆಗಳು.. !
ಎಲ್ಲವೂ ಕುಂಬಳಕಾಯಿ ಮೇಳಕ್ಕೆ ಮಜಾ ತಂದವು..
ಚಿತ್ರ ಲೇಖನ ಸೂಪರ್ರು !!
ಪ್ರಕಾಶಣ್ಣ ನೀವು ಇದ್ದ ಬಳಿ ಸಂತಸದ ಕಡಲಲ್ಲಿ ಅಲೆಗಳು ಮೇಲೆ ಎದ್ದು ಅಪ್ಪಳಿಸುತ್ತಿರುತ್ತವೆ. ಸುಂದರ ಕ್ಷಣಗಳನ್ನು ಕಳೆದ ಸಂತಸದ ಮನದ ಮಾಲೀಕ ನಾನಾಗಿದ್ದೆ ಅಂದು. ಧನ್ಯವಾದಗಳು
Deleteಕುಂಬಳಕಾಯಿ ಮೇಳಕ್ಕೆ ಕುಂಬಳಕಾಯಿ(ಬದರೀ) ಇಲ್ಲದಿರುವುದು ಬೇಸರ ಅಷ್ಟೆ...
ReplyDeleteಸೊಗಸಾದ ವಿವರಣೆ ಶ್ರೀ....ನಾವು ಮಿಸ್ಸಿಂಗು...
ಮಹೇಶ್ ಸರ್ ಧನ್ಯವಾದಗಳು. ಇನ್ನೊಮ್ಮೆ ಕುಂಬಳ ಕಾಯಿ ಮೇಳಕ್ಕೆ ಕುಂಬಳ ಕಾಯನ್ನು ಕಂಬಳದಲ್ಲಿ ಓಡುವಂತೆ ಓಡಿಸೋಣ ಬಿಡಿ. ಧನ್ಯವಾದಗಳು
Delete