ಚಲನಚಿತ್ರಮಂದಿರ ತುಂಬಿ ತುಳುಕುತ್ತಿದೆ..
ಎಲ್ಲೆಲ್ಲೂ ಶಿಳ್ಳೆಗಳು, ಚಪ್ಪಾಳೆಗಳು, ಕೂಗು, ಕಿರುಚಾಟ..
ಚಿತ್ರಮಂದಿರದ ಹೊರಗೆ ಹೌಸ್ ಫುಲ್ ಬೋರ್ಡು ನಗುತ್ತಿತ್ತು.
ಒಂದೊಂದಾಗಿ ದೀಪಗಳು ಆರಿ ಹೋದವು.. ಬೆಳ್ಳಿ ಪರದೆ ಕಪ್ಪಗೆ ಕಾಣತೊಡಗಿತು.
ಅದರ ಮಧ್ಯೆ ಒಂದು ಸಣ್ಣ ಬೆಳಕಿನ ಗೋಳ ದೊಡ್ಡದಾಗುತ್ತಾ ಹೋಯಿತು
ಎಲ್ಲರೂ ಉಸಿರು ಬಿಗಿ ಹಿಡಿದು ತಮ್ಮ ತಮ್ಮ ಕುರ್ಚಿಯಲ್ಲಿ ಆಸೀನರಾದರು. ಚಿತ್ರಮಂದಿರದ ಒಳಗೆ ತಮ್ಮ ಉಸಿರು ತಮಗೆ ಕೇಳುವಷ್ಟು ಮೌನ..
"ಬ್ಲಾಗ್ ಲೋಕ ಕ್ರಿಯೇಷನ್ಸ್" ಎಂಬ ಫಲಕ ಬಂದೊಡನೆ ಮತ್ತೆ ಶಿಳ್ಳೆ ಚಪ್ಪಾಳೆ ಚೀರಾಟ..
ಮತ್ತೆ ಹತ್ತು ಸೆಕೆಂಡ್ಸ್ ಬರಿ ರಜತ ಪರದೆ ಮಾತ್ರ
ನಂತರ ಬಂತು..
"ಬ್ಲಾಗ್ ಸ್ಟಾರ್"
"ಕವಿತಾ ಸ್ಟಾರ್"
"ಗುಡ್ ಫ್ರೆಂಡ್ ಸ್ಟಾರ್"
"ಟು ಮಿನಿಟ್ಸ್ ಸ್ಪೆಷಲ್ ಸ್ಟಾರ್"
ಚಪ್ಪಾಳೆ, ಶಿಳ್ಳೆ.. ಹೃದಯದ ಬಡಿತವನ್ನು ಮೀರಿಸುತ್ತಿತ್ತು..
ಮೊದಲ ಅಕ್ಷರ B.. ನಂತರ P..
"BP"
ಇನ್ನಷ್ಟು ಜೋರಾಗಿ ಕೂಗಲು ಶುರುಮಾಡಿದರು..
BP.. ಈ ಎರಡು ಅಕ್ಷರಗಳ ಮಧ್ಯೆ ಅಂತರ ಹೆಚ್ಚುತ್ತಾ ಹೋಯಿತು.. ಮದ್ಯೆ ಮದ್ಯೆ ಅಕ್ಷರಗಳು ಸಾಲಾಗಿ ನಿಲ್ಲುತ್ತಾ ಹೋದವು..
"BADARINATH PALAVALLI"
"ಬದರಿನಾಥ್ ಪಲವಳ್ಳಿ"
ಈ ಹೆಸರು ತೆರೆಯ ಮೇಲೆ ಬಂದಾಗ ಹಿನ್ನೆಲೆ ಸಂಗೀತ ತಾರಕಕ್ಕೆ ಏರಿತ್ತು.. ಚಿತ್ರಮಂದಿರದಲ್ಲಿ ಒಬ್ಬರು ಮಾತಾಡಿದ್ದು ಅವರಿಗೆ ಕೇಳುತ್ತಿರಲಿಲ್ಲ..
ತೆರೆಯ ಮೇಲೆ ಬದರಿನಾಥ್ ಮೂಡಿಬಂದಾಗ..ಬಿಡಿ .. ಅಣ್ಣಾವ್ರ ಚಿತ್ರಗಳು, ವಿಷ್ಣುದಾದಾ, ಅಂಬಿ, ರಜನಿಕಾಂತ್ ಬಿಗ್ ಬಿ... ಸಿನೆಮಾಗಳು ಬಿಡಿ.. ಅದಕ್ಕಿಂತ ಜೋರಾದ ಸ್ವಾಗತ..
ಬದರಿನಾಥ್ ಕೈ ಎತ್ತಿ ಎಲ್ಲರನ್ನು ಸಮಾಧಾನ ಪಡಿಸಿದರು..
ಎಲ್ಲರೂ ಬದರಿನಾಥ್ ಅವರಿಗೆ ಗೌರವ ತೋರಿಸಲು ಎದ್ದು ನಿಂತರು..
ನಿಶ್ಯಬ್ಧ.. ಪಿನ್ ಡ್ರಾಪ್ ಸೈಲೆನ್ಸ ಅಂತಾರಲ್ಲ ಹಾಗೆ.. ಎಲ್ಲರ ಹೃದಯದ ಬಡಿತ ಕೇಳುತ್ತಿತ್ತು..
"ಬ್ಲಾಗ್ ಲೋಕದ ಎಲ್ಲಾ ಸದಸ್ಯರಿಗೂ ನನ್ನ ನಮಸ್ಕಾರಗಳು.. ನಿಮ್ಮೆಲ್ಲರ ಆಶೀರ್ವಾದ, ಹಾರೈಕೆ, ಶುಭಶಯಗಳು ನನ್ನನ್ನು ಇಲ್ಲಿ ಕೂರಿಸಿದೆ.. ಇದಕ್ಕೆ ನಿಮಗೆ ನಾ ಆಭಾರಿಯಾಗಿದ್ದೇನೆ.. ನಾ ಯಶಸ್ಸು ಕಂಡಿದ್ದೇನೆ ಎಂದರೆ.. ಅದಕ್ಕೆ ನೀವೇ ಕಾರಣ.. ಈ ಯಶಸ್ಸಿನ ಪೂರ್ಣ ಭಾಗ ನಿಮಗೆ ಸೇರಬೇಕಾದ್ದು.
ನಿಮಗೆಲ್ಲ ನನ್ನ ಅನಂತ ಧನ್ಯವಾದಗಳು.. ಮತ್ತೆ... "
ಏನೋ ಹೇಳೋಕೆ ಹೊರಟರು.. ಅವರ ಕೈಯಲ್ಲಿದ್ದ "ಪಾತ್ರ ಅನ್ವೇಷಣಾ" ಕವನ ಸಂಕಲನದಿಂದ ಒಂದು ಕವಿತೆ ಹೊರಗೆ ಕೈ ತೋರಿ.. ನಿಧಾನವಾಗಿ ಹೊರಗೆ ಬಂತು..
"ನನ್ನ ಜನುಮದಾತನೇ.. ನನ್ನದೊಂದು ಕೋರಿಕೆ.. ನೀವು ಇಂತಹ ಚಂದವಾದ ಕವಿತೆಗಳ ಗುಚ್ಚವನ್ನೆ ಸೃಷ್ಠಿಸಿದ್ದೀರಿ, ಈ ಪುಸ್ತಕದಲ್ಲಿ ಮತ್ತು ನಿಮ್ಮ ಬ್ಲಾಗ್ ನಲ್ಲಿ ಇರುವ ಎಲ್ಲರ ಪರಿಚಯ ನಮಗಾಗಿದೆ.. ನಮಗೆ ಇನ್ನಷ್ಟು ಸ್ನೇಹಿತರು ಬೇಕು.. ಇನ್ನಷ್ಟು ಕವಿತಾ ಮನಸ್ಸು ಬೇಕು.. ನೀವು ಹೊಸ ಹೊಸ ಕವಿತೆ ಬರೆಯುತ್ತಿರಿ.. ಓದುಗರು ಇದ್ದೆ ಇರುತ್ತಾರೆ ನಿಮ್ಮ ಬೆನ್ನ ಹಿಂದೆ.. ಅಲ್ಲಿ ನೋಡಿ ನಮ್ಮೆಲ್ಲರ ತಾಯಿ ಸರಸಮ್ಮ ಕೂಡ ವೀಣೆ ನುಡಿಸುತ್ತಾ ನಿಮಗೆ ಅದನ್ನೇ ಹೇಳುತ್ತಿದ್ದಾಳೆ.. ಜೊತೆಯಲ್ಲಿ ನನ್ನ ಹಾಗೂ ನನ್ನ ಗೆಳೆತಿಯರ ಜನುಮದಾತ ಜನುಮ ಪಡೆದುಕೊಂಡ ದಿನ.. ಅದಕ್ಕಾಗಿ ಈ ಪುಸ್ತಕದಿಂದ ನಾ ಹೊರಗೆ ಬಂದು ನಿಮಗೆ ನನ್ನ ಆಶಯ ಮತ್ತು ಶುಭಾಶಯ ಎರಡನ್ನು ಹೇಳುತ್ತಿದ್ದೇನೆ ... "
ಇಷ್ಟು ಹೇಳಿ.. ಪುಸಕ್ ಅಂಥ ಪುಸ್ತಕದೊಳಗೆ ಮಾಯವಾಯಿತು..
ಬದರಿನಾಥ್.. ತಮ್ಮ ಕನ್ನಡ ತೆಗೆದು ಒಮ್ಮೆ ಕಣ್ಣನ್ನು ಮತ್ತು ಕನ್ನಡಕವನ್ನು ಒರೆಸಿಕೊಂಡು.. "ನಿಮ್ಮೆಲ್ಲರ ಆಶೀರ್ವಾದ.. ಹಾರೈಕೆ ನನ್ನನ್ನು ಮೂಕನನ್ನಾಗಿಸಿದೆ.. ಖಂಡಿತ ಮತ್ತೆ ನನ್ನ ರಚನೆಗಳನ್ನು ಹರಿಯಬಿಡುತ್ತೇನೆ.. ನಮ್ಮೆಲ್ಲರನ್ನು ಬಂಧಿಸಿರುವುದು ಅಕ್ಷರಗಳು ಮತ್ತು ಬ್ಲಾಗ್ ಲೋಕ.. ಖಂಡಿತ ಮತ್ತೆ ನಾ ಆ ಲೋಕದಲ್ಲಿ ಸಕ್ರಿಯನಾಗುತ್ತೇನೆ.. ನಿಮಗೆಲ್ಲರಿಗೂ ನಮ್ಮ ಅನಂತ ಅನಂತ ಧನ್ಯವಾದಗಳು.. ಇದೋ ನಿಮಗಾಗಿ ನನ್ನ ಮೊಬೈಲ್ ನಲ್ಲಿ ಒಂದು ಹಾಡು ಹಾಕುತ್ತೇನೆ
"ಎಂದರೋ ಮಹಾನುಭಾವುಲು ಅಂದರೇಕಿ ವಂದನಮು"
ಎಲ್ಲರೂ ಹೋ ಹೊ ಬದರಿ ಸರ್ ಹುಟ್ಟು ಹಬ್ಬದ ಶುಭಾಶಯಗಳು ಎಂದು ಕೂಗುತ್ತಾ ಮತ್ತೆ ತಮ್ಮ ತಮ ಸೀಟ್ ನಲ್ಲಿ ಕುಳಿತರು..
ಅಲ್ಲಿದ್ದ ಒಂದು ಪುಟಾಣಿ ಎದ್ದು ನಿಂತು.. "ಬದರಿ ಅಂಕಲ್.. ನಿಮ್ಮ ಕವಿತೆಗಳನ್ನು ನಾ ಓದಿದ್ದೇನೆ.. ಕೆಲವನ್ನು ನಮ್ಮ ಅಪ್ಪ ಓದಿ ಹೇಳಿದ್ದಾರೆ.. ನನಗೆ ನಿಮ್ಮಿಂದ ಒಂದಷ್ಟು ಕಥೆಗಳು ಬೇಕು.. ಕವಿತೆಗಳನ್ನು ಬರೆಯಿರಿ.. ಜೊತೆಯಲ್ಲಿ ಕಥೆಗಳನ್ನು ಬರೆಯಿರಿ.. ಇದು ನನ್ನ ಪುಟ್ಟ ಕೋರಿಕೆ"
ಬದರಿನಾಥ್.. "ಆ ಪುಟಾಣಿಗೆ ಕೈ ಬೀಸಿ.. ಖಂಡಿತ ಬಂಗಾರಿ.. ಈಗ ನಾ ಬರೆದ ಕಥೆಯೇ ಸಿನೆಮಾ ಆಗಿರುವುದು ಅದನ್ನೇ.. ನೀವೆಲ್ಲಾ ನೋಡಲು ಬಂದಿರುವುದು.. ಇನ್ನೊಂದು ಸ್ವಲ್ಪ ಹೊತ್ತು ಚಲನಚಿತ್ರ ಶುರುವಾಗುತ್ತದೆ.. ನೀವೆಲ್ಲಾ ನೋಡಿರಿ.. ಹಾರೈಸಿರಿ.. ನಿಮ್ಮ ಅಭಿಮಾನಕ್ಕೆ ನಾ ಶಿರಬಾಗಿ ನಮಿಪೆ"
ಬೆಳ್ಳಿ ಪರದೆಯ ಮತ್ತೆ ಮಾಯವಾಯಿತು.. ಸ್ವಲ್ಪ ಹೊತ್ತು ಮತ್ತೆ ಬಿಳಿಯ ಬೆಳಕಿನ ಕಿರಣ.. ಪರದೆಯ ಮೇಲೆ ಬಂದಿತು..
ಎಲ್ಲರೂ ಆ ಬೆಳಕಿನ ಕಿರಣಗಳನ್ನು ನೋಡುತ್ತಾ ಹಾಗೆ ಹಿಂದೆ ತಿರುಗಿದರು.. ಮಾತೇ ಸರಸ್ವತಿ ತನ್ನ ಅಭಯ ಹಸ್ತವನ್ನು ತೋರುತ್ತಾ ನಿಂತಿದ್ದಳು.. ಆ ಕೈಯಿಂದ ಆ ಬೆಳಕಿನ ಕಿರಣಗಳು ಮೂಡಿ ಬಂದು ಮೂಡಿಸಿದ ಅಕ್ಷರಗಳು
"ಬದರಿನಾಥ್ ಪಲವಳ್ಳಿ.. ಕಂದಾ ಜನುಮದಿನದ ಶುಭಾಶಯಗಳು.. ಈ ಚಿತ್ರವು ಶತದಿನೋತ್ಸವ ಆಚರಿಸಲಿ. ಮತ್ತೆ ಬ್ಲಾಗ್ ಲೋಕದಲ್ಲಿ ನಿಮ್ಮ ಹೆಸರು ಮಿನುಗಲಿ ಮಿಂಚಲಿ.. "
(ದಯವಿಟ್ಟು ನೋಡಿ: ಈ ಚಿತ್ರವು ಇನ್ನೇನು ಸ್ವಲ್ಪ ಹೊತ್ತಿನಲ್ಲಿಯೇ (ಸ್ವಲ್ಪ ದಿನದಲ್ಲಿಯೇ) ಶುರುವಾಗುತ್ತದೆ.. ಬದರಿಸರ್ ಜನುಮದಿನಕ್ಕೆ ಶುಭಾಶಯಗಳು ಕೋರುತ್ತಾ ಈ ಲೇಖನಕ್ಕೆ ಸಶೇಷ ಹಾಕಿದ್ದೇನೆ.. ಚಿತ್ರ ಶುರುವಾಗಲಿದೆ ಆದಷ್ಟು ಬೇಗ)
ಬದರೀಸರ್ ಜನುಮದಿನಕ್ಕೆ ಶುಭಾಶಯಗಳು!!!!

ನಿಮ್ಮ ಹಾರೈಕೆಯ ಈ ಬರಹ ತುಂಬಿತೆನ್ನ ಕಂಗಳ. ಉದಕದ ಹನಿ ಹನಿಗಳಲು ಅಕ್ಷರಗಳ ಬಿನ್ನಹ.
ReplyDelete"ಟು ಮಿನಿಟ್ಸ್ ಸ್ಪೆಷಲ್ ಸ್ಟಾರ್" ಇನ್ಮುಂದೆ available status ಹಾಕುವಂತೆ ಹರಿಸಿರಿ.
ನೀವು produce ಮಾಡಿದ ಈ ಸಿನಿಮ musical number ಆಗಲಿ ಅಲ್ಲವೇ.
ಎಷ್ಟು ಕರಡಿಯಪ್ಪುಗೆಗಳು ಋಣ ವಿಮೋಚನೆ ಮಾಡುವುದೋ ಶ್ರೀಮಾನ್!
ಖಂಡಿತ ಕವನಗಳ ಜೊತೆಗೆ ಕಥೆಗಳನೂ ಹೆಣೆಯುವೆ ಇನ್ಮುಂದೆ.
ಸೂಪರ್ ಶ್ರೀಮಾನ್ ....ಚೆನ್ನಾಗಿದೆ ಬೆಳ್ಳಿ ಪರದೆ ಮೇಲೆ ಬದರಿಯನ್ನು ನೋಡಬೇಕು...
ReplyDeleteಶುಭಾಶಯಗಳು ಬದರಿಮಾಮ....
ಮಹೇಶ್ ಸಾರ್ ಧನ್ಯೋಸ್ಮಿ
DeleteHappy birthday Badarinath JI. Nice article for a legendary friend.
ReplyDeleteಸೀತಾರಾಂ ಸಾರ್, ತಾವು ಬ್ಲಾಗಿಗೆ ಹಿಂದಿರುಗಿದರೆ ಅದೇ ನನಗೆ ದೊಡ್ಡ ಹಾರೈಕೆ
Deletewow...... shree sakkat chennagi barediddeeri. badari sir shubhashayagaLu
ReplyDeleteಸುಗುಣ ಮೇಡಂ, ನನ್ನದೇನಿದೆ ಈ ಬರಹ ಶ್ರೀಮಾನ್ ಬೃಹದ್ ಹೃದಯ.
Deleteವಾರೆವಾಃ ಶ್ರೀಕಾಂತ್ , ಚಂದದ ಕಲ್ಪನೆ ಅಜಾತ ಶತ್ರುವಿನ ಜನುಮದಿನಕ್ಕೆ ಮರೆಯಲಾರದ ಅದ್ಭುತ ಕೊಡುಗೆ ನಿಮ್ಮದು. ಬದರೀಜಿ ಮತ್ತೊಮ್ಮೆ ಪ್ರೀತಿಯ ಶುಭಾಶಯಗಳು .
ReplyDelete👌👌👌
ReplyDelete👌👌👌
ReplyDelete