Thursday, December 30, 2021

The team work together, eats togethers.. stays together!!!

The team work together, eats togethers.. stays together!!!

Sri what is this invincible team means...?

I just looked at the direction of the question came in...

A board was smiling at me and repeated the question..!

I winked at it, and said "see you came here for a specific reason...after the reasoning is perfect, and worth the efforts.. this is called bonding"

"You will be sent back to the location.. there again you will be subjected to the required challenges.. and you will end up in a fine tuned environment .. and you will feel happy start serving the product.. This is called de-bonding"

"You will have many flaws, that needs to be calibrated, repaired.. you will be subjected to the calibration process or some bad moments from your life will be taken out and reinfused with new lease of life.. This is called re-exporting process.  This helps you to rejuvenate and life will be full of enthusiasm"  

"Some times you can not leave your problems.. nor live with the problems...will be sent for a temporary shifting.... that eases you up and you will again charged up"

"many times work from home will be the best option...you will be at your best environment, no kiri kiri of travelling, no waste of time.... you will be at your best ... and you do wonders.. that ignites your passion of achieving great success and finishing the project on the dotted line... "

"Arey arey.. what sri you are bringing all the logistics terms here.. what is this?"

"arey yaar ... logistics is nothing but logic + statistics... when you interpret the law with logic and put the statistics properly it becomes logistics... that is the life... means.. you question and get the answer which is logically right and put the same in the statistics tab...that becomes logistics for your life.."

See the below image... every thing in the image is in the motion... 

Chariot is moving, 

Arjuna aiming the arrow

Krishna taking care of the chariot

Horses are running

The flag on the chariot is fluttering 

When there is a movement.. you will be moving ahead.. that is logistics...!

Super sri..really i liked the statement... ok tell me ... you said.. The team work together, eats togethers.. stays together!!! 

"Yes"

"sri Can you explain..?"

"See the beautiful team had lunch together.. spent invaluable time together.. pulling each other leg, laughing out loud..at the same time eating delightful stuff.." 

"These moments spent together just ignites the bonding...see here people from warehouse were there, people from physically moving the material in and out were there... people specialist in the documentation front were there.. and above all the the team manager who is taking care of the team getting along with them... that is called the team spirit.."

"sri that's a nice way of putting the team together ... can you introduce them to me one by one"

"yes board.. its my privilege will introduce by their names in alphabetical order "






Archana: Not in the picture.. but the super boss of this invincible team... There is no problem which she cant find the solution with 100% perfect compliance

Aruna - The manager of this invincible team she is simple, down to earth.. smiling attitude.. that solve most of the problem upfront

Ajaz - Smiling guy, thinks with the foot down, and gives a perfect clarification for everything does

Hemanth - Soft attitude, smile on the face, and just puts head in to his work, and sees that it gets over before logs out

Kishor - When the documents requires, he quietly completes the job, concentration is what it demands, yes he has it

Paul - not in the picture today...but quickly learnt the ladder to climb and a reliable source now 

Siva - A front face, gets in to the grove and resolves the subject with a purpose and gets in to challenge with success

Suresh - You name it and he has the solution in a jiffy.. he has wonderful knowledge about the subject, and put a wonderful effort to manage the show

Subrahmanya  - Cool guy..  Meticulously work towards target by looking at the solution from every end of the corner... he plugs all the possible solution to any project.. 

Sri:  #$#$%##%$%$%$%$%

Wow..... that's great team to reckon with ... The year 2022 not only becomes more vibrant for this invincible team.. but successful in meeting up the challenges and stepping up the gas pedal for a great success with a superb cycle time...!!!

Sunday, November 7, 2021

ಕೇಳು ಮಗುವೇ ಕಥೆಯ ... !

ಅಜ್ಜಿ ಅಜ್ಜಿ ಒಂದು ಕಥೆ ಹೇಳಜ್ಜಿ .. 

ಮಕ್ಕಳು, ದೊಡ್ಡವರು ಅನ್ನದ ಹಾಗೆ ಪೀಡಿಸಲು ಶುರು ಮಾಡಿದಾಗ.. ಕರುನಾಡಿನ ರಂಗ ಮಂದಿರಕ್ಕೆ ಹಾಗೂ ಚಿತ್ರರಂಗಕ್ಕೆ ಅಡಿಪಾಯ ಹಾಕಿಕೊಟ್ಟ ಶ್ರೀ ಗುಬ್ಬಿ ವೀರಣ್ಣ ಅವರ ವಂಶದ ಕುಡಿ 
ಶ್ರೀಮತಿ ಜಯಶ್ರೀಯವರು ಅವರ ಅದ್ಭುತ ಕಂಠದಲ್ಲಿ ಶುರು ಮಾಡಿದರು.. 

ನಾಟಕ ರಂಗದ ದೊಡ್ಡ ಘಂಟೆ ಢಣ ಢಣ ಬಾರಿಸಿತು.. ಆಗ ಶುರುವಾಯಿತು ಅದ್ಭುತ ಸಮಯ 

ಅನೇಕಾನೇಕ ಪ್ರತಿಭೆಗಳನ್ನು
ಎಚ್ಚರಿಸಿದ ಕರೆ ಘಂಟೆ 


ಪ್ರತಿಭಾ ಗಣಿ ಶ್ರೀಮತಿ ಜಯಶ್ರೀ 

ನಾಟಕದ ತಾಲೀಮು ನಮ್ಮ ಶಾಲೆಯಲ್ಲಿ 

"ನೋಡ್ರಪ್ಪಾ.. ಈ ಶಾಲೆ ಇದೆಯಲ್ಲ ಇದೊಂದು ಅದ್ಭುತ ಕಲಿಕಾ ಕೇಂದ್ರ.. ಬೆಳೆದು ಹೆಮ್ಮರವಾದ ಎಷ್ಟೋ ಮರಗಳಿಗೆ ಆಶ್ರಯತಾಣವಿದು.. ಇತ್ತೀಚಿಗೆ ತಾನೇ ಶತಮಾನೋತ್ಸವ ಆಚರಿಸಿದ ಈ ದೇಗುಲಕ್ಕೆ ಶ್ರೀಮತಿ ಆನಿಬೆಸಂಟ್ ಅಡಿಪಾಯವಿಟ್ಟರು  ನೀರೆರೆದು ತಾನು ಬೆಳೆದು, ಸಂಸ್ಥೆಯನ್ನು ಬೆಳೆಸಿದ ಶ್ರೀ ಎಚ್  ಎನ್ ಎಂದೇ ಖ್ಯಾತರಾಗಿರುವ ಪ್ರಾತಃ ಸ್ಮರಣೀಯರು ಎಚ್ ನರಸಿಂಹಯ್ಯ ಅವರ ಕನಸಿನ ಕೂಸಿದು.. 










ಅನೇಕಾನೇಕ ಪ್ರತಿಭೆಗಳನ್ನು ರಾಜ್ಯಕ್ಕೆ, ದೇಶಕ್ಕೆ ಕೊಟ್ಟಿರುವ ಈ ಶಾಲೆಯ ವಿದ್ಯಾರ್ಥಿಗಳ ಒಂದು ತಂಡವೇ ಇಲ್ಲಿ ಬಂದಿದೆ ನೋಡಿ.. 

ನೋಡಿ ಅವನೇ ನಿಂಬೀಯ ಅಂತ ತಾರಕ ಸ್ವರದಲ್ಲಿ ಹಾಡಿದ ವೆಂಕಿ, ಹೌದು ಬಾಲ ನಟ ಚೇತನ್ ತರಹ ಇದ್ದ ಶಶಿ, ಓದು ಬೇರೆ ಬದುಕು ಬೇರೆ ಎಂದು ತೋರಿಸಿದ ಎಚ್ ಡಿ ಗಿರೀಶ, ನಮ್ಮ ಅಭಿನವ ಭಾರ್ಗವ ವಿಷ್ಣುವಂತೆ ಎಡಗೈ ಖ್ಯಾತಿಯ ರಮೇಶ, ಯೋಗಾಸನವೆಂದರೆ ಪ್ರಸಾದ್, ಪ್ರಸಾದ್ ಎಂದರೆ ಯೋಗಾಸನ ಎಂದು ಹೆಸರಾಗಿರುವ ಪ್ರಸಾದ್, ಆ ಕಾಲದ ಜಯಂಟ್ ರೋಬೋಟ್ ಧಾರಾವಾಹಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದ ಶ್ರೀಧರ, ಸದಾ ಸದ್ದಿಲ್ಲದೇ ಓದುತಿದ್ದ, ಬುದ್ದಿವಂತರಿಗೆ ಠಕ್ಕರ್ ಕೊಡುತ್ತಿದ್ದ ಲೀಲಾ, ಏಮ್ರಾ ನಾಯ್ಡು ಅಂದಾಗ ಸುಂದರ ನಗು ಕೊಡುವ ಶ್ರೀನಿವಾಸ ನಾಯ್ಡು, ಹೆಸರಲ್ಲಿ ಮಾತ್ರವಲ್ಲದೆ ತರಲೆಯಲ್ಲೂ ಚಕ್ರವರ್ತಿಯಾಗಿರುವ ಚಕ್ರವರ್ತಿ... ಬಂದಿದ್ದಾರೆ.. ಅವರುಗಳ ಮಾತಾಡುವ ಶೈಲಿ, ಆ ಗೆಳೆತನದ ಬಂಧ.. ಅದನ್ನು ಕೇಳುವುದೇ ಒಂದು ಚಂದ.. 



ಇಂದು ಅವರವರ ಶಕ್ತ್ಯಾನುಸಾರ ಬದುಕಲ್ಲಿ ಮಹತ್ತರ ಎತ್ತರ ಏರಿದ್ದಾರೆ.. ಆದರೆ ಅವರು ಇಂದು ಸೇರಿರುವುದು, ಇಂದು ಏನಾಗಿದ್ದಾರೆ ಅನ್ನೋದಕ್ಕಲ.. ಅವರು ಶಾಲೆಯಲ್ಲಿದ್ದಾಗ ನೆಡೆದ ಕೀಟಲೆ ಪ್ರಸಂಗಗಳು,ಸಾಧನೆಗಳು , ತರಲೆಗಳು ಇದನ್ನೆಲ್ಲಾ ಮತ್ತೆ ಮತ್ತೆ ಮೆಲುಕು ಹಾಕುತ್ತಾ, ಆ ದಿನಗಳಿಗೆ ಲಗ್ಗೆ ಹಾಕುತ್ತಿದ್ದಾರೆ.. ಅಂದರೆ ಅವರು ತಮ್ಮ ಇಂದಿನ ಸಾಧನೆ, ಹಣ, ಅಂತಸ್ತು, ಅಧಿಕಾರ ಎಲ್ಲವನ್ನೂ ಮರೆತು, ಆ ಶಾಲಾದಿನಗಳಲ್ಲಿ ಜೊತೆಯಾಗಿದ್ದ ಗೆಳೆತನವನ್ನು ನೆನಪಿಸಿಕೊಳ್ಳುವುದಕ್ಕೆ ಮಾತ್ರ ಇಲ್ಲಿ ಸೇರಿದ್ದಾರೆ.. 


ಇವರೆಲ್ಲರ ಮಾತುಕತೆಗಳನ್ನು ಕೇಳಿಸಿಕೊಂಡು ಒಂದು ಪುಟ್ಟ ಕತೆಯನ್ನು ಹೇಳುವೇ ಕೇಳಿ.. 

ಒಂದು ದಟ್ಟ ಕಾಡು.. ಅಲ್ಲೊಂದು ರಾಜ.. ಅಂದರೆ ಸಿಂಹರಾಜ.. ಅದಕ್ಕೆ ಜೀವನ ಬೇಸರವಾಗಿದೆ ಎಂದು ಹೇಳುತ್ತಾ.. ಎಲ್ಲಾ ಪ್ರಾಣಿ, ಪಕ್ಷಿಗಳನ್ನು ಕರೆಯಲು ನರಿಗೆ ಘಂಟೆ ಬಾರಿಸುತ್ತಾ ಸಂದೇಶವನ್ನು ಸಾರಲು ಹೇಳುತ್ತದೆ.. 



ನರಿ ಘಂಟೆ ಬಾರಿಸುತ್ತಾ  " ಕೇಳ್ರಪ್ಪ ಕೇಳ್ರಿ ನಮ್ಮ ಕಾಡಿನ ರಾಜ ಸಿಂಹರಾಜನಿಗೆ ಬೇಸರವಾಗಿರುವ ಕಾರಣ.. ಎಲ್ಲರೂ  ಮೃಗರಾಜನಿಗೆ ಸಂತಸ ಉಂಟು ಮಾಡುವಂತಹ ಕಾರ್ಯಕ್ರಮಗಳನ್ನು ಪ್ರದರ್ಶಿಸಬೇಕಂತೆ.. "

ಮೃಗರಾಜನ ಅಪ್ಪಣೆ.. ಆದೇಶ.. ಏನಾದರೂ ಅಂದುಕೊಳ್ಳಿ.. ಅದಕ್ಕೆ ಬದ್ಧವಾಗಿರಲೇ ಬೇಕು ಎಂದು.. ಎಲ್ಲವೂ ಸೇರಿದವು.. ಅದಕ್ಕೆ ಜೊತೆಯಾಗಿ ತಾಲೀಮು ನೆಡೆಯುತ್ತಿದ್ದ ಒಂದು ತಂಡವು ಈ ಕೆಳಗಿನ ಚಿತ್ರದಂತೆ ದುಂಡಗೆ ಕೂತರು.. 

ಮೊದಲು ಪ್ರಾರ್ಥನೆ "ನಿಂಬೀಯ ಬನಾದ ಮ್ಯಾಗಡ ಚಂದ ಮಾ ಚಂಡಾಡಿದ" ಎಲ್ಲರೂ ಕಿವಿ ಮುಚ್ಚಿಕೊಂಡು ಆ ಸೊಗಸಾದ ಎತ್ತರ ಸ್ಥಾಯಿಯ ದನಿಯಲ್ಲಿ ಹಾಡಿದವರಿಗೆ  ಕರತಾಡನ ಮಾಡಿದರು.. ತನ್ನ ಹಾಡು ತನ್ನದು ತನ್ನ ರಾಗ ತನ್ನದು ಎಂದು ಹಾಡನ್ನು ಎಲ್ಲರ ಕಿವಿಗೆ ಹಾಗೂ ಹೃದಯಕ್ಕೆ ಮುಟ್ಟಿಸಿದಾಗ ಎಲ್ಲರ ಎದೆಯ ಬಡಿತ ಒಂದೆರಡು ಸಂಖ್ಯೆ ಹೆಚ್ಚಾಗಿದ್ದು ಸುಳ್ಳಲ್ಲ.. (ವೆಂಕಿ)

"ರೋಬಾಟ್.. ಜಯಂಟ್ ರೋಬೋಟ್.. " ಎಂದು ನಮ್ಮ ಪ್ರಪಂಚವನ್ನು ಹೇಗೆ ರಕ್ಷಿಸಿತು ಎಂಬುದನ್ನು ಜಯಂಟ್ ರೋಬೋಟ್ ನೋಡುವ ಸಲುವಾಗಿ ಗುರುವಾರ ಪಾಠದ ವೇಳೆಯನ್ನು ಬದಲಿಸಿಕೊಂಡು ಟಿವಿ ನೋಡುವಷ್ಟು ಹುಚ್ಚು ಹಿಡಿಸಿದ್ದ ಧಾರಾವಾಹಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದಾಗ ಕಿವಿ ತೂತು ಬೀಳುವಷ್ಟು ಜೋರಾದ ಚಪ್ಪಾಳೆ..  (ಶ್ರೀಧರ)

"ಈ ಅಂಜದ ಎದೆಯಲ್ಲಿ ನಂಜೇ ಇಲ್ಲ ಬಗ್ಗುವ ಆಳಲ್ಲ ತಲೆ ತಗ್ಗಿಸಿ ಬಾಳೋಲ್ಲ" ಎಂದು ಹಾಡಿ ವಿಷ್ಣುವಿನ ತರಹವೇ ಅಭಿನಯ ಮಾಡುತ್ತಾ.. ಎಡಗೈಯಲ್ಲಿ ಬೌಲಿಂಗ್ ಅಭಿನಯ ಮಾಡಿದಾಗ ಮೃಗರಾಜನ ಮೊಗದಲ್ಲಿ ಮೆಲ್ಲನೆ ನಗು ಮೂಡಲು ಆರಂಭಿಸಿತು.. (ರಮೇಶ)

"ನೋಡ್ರಪ್ಪಾ.. ಬದುಕಲ್ಲಿ ಓದೋದೇ ಮುಖ್ಯವಲ್ಲ.. ಜಗತ್ತನ್ನು ಓದಬೇಕು .... ಅದರ ಇತಿಮಿತಿಗಳನ್ನುಅರಿತು . ಜಗತ್ತಿಗೆ ಸರಿಯಾದ ಮಾಹಿತಿ ನೀಡಬೇಕು" ಎಂದು ಜಗತ್ತನ್ನು ಅಂಗೈಯಲ್ಲಿ ತೋರಿಸಿದಾಗ ಮೃಗರಾಜ ಎದ್ದು ನಿಂತು ತಲೆಬಾಗಿ ವಂದಿಸಿತು.. (ಎಚ್ ಡಿ ಗಿರೀಶ)

"ಓದು ಮೆದುಳಿಗೆ.. ವ್ಯಾಯಾಮ ದೇಹಕ್ಕೆ.. ದೇಹವನ್ನು ಕೊಂಚ ದಂಡಿಸಿದಾಗ ಬುದ್ದಿ ನಮ್ಮ ಮಾತು ಕೇಳುತ್ತದೆ ಎಂದು ಮಯೂರಾಸನ ಮಾಡಿದಾಗ... ಮೃಗರಾಜ ಮೆಲ್ಲನೆ ನೆಡೆದು ಬಂದು ತಬ್ಬಿ ಮುದ್ದು ಮಾಡಿತು.. (ಪ್ರಸಾದ್)

"ಕಲಿಕೆಗೆ ಕೊನೆಯೇ ಇಲ್ಲ.. ಓದುವ ಹಾದಿ ಚೆನ್ನಾಗಿರಬೇಕು.. ಸಹಪಾಠಿಗಳ ಒಡನೆ ಓದುತ್ತಾ,  ಗೆಲ್ಲುತ್ತಾ ಹೋಗಬೇಕು .. ಅಂಕೆ ಇಲ್ಲದ ಜಗತ್ತಿನಲ್ಲಿ ಅಂಕ ಪಟ್ಟಿ ಬೇಕು" ಈ ಮಾತಿಗೆ ಸಿಂಹ ತಲೆಯಾಡಿಸಿ ಒಪ್ಪಿಗೆ ಸೂಚಿಸಿತು.. (ಲೀಲಾ)

"ತರಲೆ ಇಲ್ಲದ ಜೀವನ ಅದೊಂದು ಜೀವನವೇ.. .. ಸದಾ ನಗುತ್ತಿರಬೇಕು.. ನಮ್ಮ ಮುಂದಿನ ಬದುಕಲ್ಲಿ ಅಂಕ ಪಟ್ಟಿಗಿಂತ.. ತರಲೆ ಪಟ್ಟಿಗಳು ಯಾವತ್ತಿಗೂ ನೆನಪಲ್ಲಿ ಉಳಿದಿರುತ್ತೆ .. ನಗಬೇಕು.. ನಗುತ್ತಲಿರಬೇಕು.. ಅದುವೇ ಜೀವನ.. " ವಾಹ್ ಎನ್ನುತ್ತಾ ಎರಡೂ ಕೈಯಲ್ಲಿ ಚಪ್ಪಲ್ಲಿ ಬಾರಿಸಿತು..(ಚಕ್ರವರ್ತಿ) 

"ಸುಂದರವದನ ಅರವಿಂದವನ.. " "ಆಹಾ ಬೆಳದಿಂಗಳು ಚೆಲ್ಲುವ ಚಂದಮಾಮ ಇರುವಾಗ.. ಪ್ರತಿ ಕ್ಷಣವೂ ಸುಂದರವೇ.. ಆ ಮುದ್ದು ಮೊಗವನ್ನು ಸದಾ ನೋಡುವ ಆಸೆ " ಮೃಗರಾಜ ತನ್ನ ದೂರದಲ್ಲಿ ಒಂದು ಬಂಡೆಯ ಹಿಂದೆ ಕೂತಿದ್ದ ತನ್ನ ಇನ್ನೊಂದು ಸಿಂಹಕ್ಕೆ ಕಣ್ಣು ಹೊಡೆಯಿತು.. ಆ ಸಿಂಹ ತನ್ನ  ಸಿಂಹಿಣಿಯನ್ನು ಒಮ್ಮೆ ನೋಡಿದಾಗ.. ಸಿಂಹಿಣಿ ಮೆಲ್ಲನೆ ಗುರ್ ಎಂದಿತು.. ಆದರೆ ತಕ್ಷಣಕ್ಕೆ ಒಂದು ನಗೆ ಕೊಟ್ಟಿತು..  (ಶಶಿ)

ಒಂದೇ ನಾಡು ಒಂದೇ ಕುಲವು ಒಂದೇ ದೈವವು.. ಹೌದು ಭಾಷೆ ಯಾವುದಾದರೇನು ಭಾವ ನವೀನ.. ಸುಂದರ ನಗೆಯ ಸರದಾರನಿಗೆ ಎಂದೆಂದೂ ಶ್ರೀನಿವಾಸನ ಕೃಪೆ ಇದ್ದೆ ಇರುತ್ತದೆ ಎಂದು ಹೇಳಿದಾಗ ಮೃಗರಾಜನ ಮೊಗ ಅರಳಿತು .. (ಶ್ರೀನಿವಾಸ್ ನಾಯ್ಡು)

ಮೃಗರಾಜ ಒಂದು ಸಣ್ಣಗೆ ಕಣ್ ಹೊಡೆದಾಗ.. ಈ ಇಡೀ ಕಾರ್ಯಕ್ರಮವನ್ನು ತನ್ನ ಮೂರನೇ  ಕಣ್ಣಿನಲ್ಲಿ ಚಿತ್ರಿಸಿ ಎಲ್ಲರಿಗೂ ಬಿತ್ತರಿಸುವ ಕೆಲಸ ಶುರು ಮಾಡಿತು.. (ಶ್ರೀ)

"ನರಿರಾಯ ಈ ಪುಟ್ಟ ಕಾರ್ಯಕ್ರಮ ಬಹಳ ಖುಷಿ ಕೊಟ್ಟಿತು.. ನೋಡಿ ... ಬಂದವರಿಗೆಲ್ಲಾ ಶ್ರೀ ಕೃಷ್ಣನ ಗೋಕುಲಕ್ಕೆ ಕಳಿಸಿ.. ಅಲ್ಲಿ ಅವರಿಗಾಗಿ ರೊಟ್ಟಿ, ಹಪ್ಪಳ, ನಿಂಬೆ ರಸದ ಪಾನಕ, ಚಟಪಟ ಅನಿಸುವ ತಿನಿಸುಗಳು, ಮೇತಿ ಅನ್ನ, ಜೀರಿಗೆ ಅನ್ನ, ಮೊಸರನ್ನ..ಇದರ ಜೊತೆಗೆ ಹಿತವಾದ ವಾತಾವರಣವನ್ನು ಅಣಿಮಾಡಲು ಹೇಳಿದ್ದೇನೆ.. ಹೋಗಿ ಅವರಿಗೆ ಪ್ರಯಾಸವಾಗದ ಹಾಗೆ ನೋಡಿ ಕೊಳ್ಳಿ ಎನ್ನುತ್ತಾ ಮೃಗರಾಜ ಎದ್ದು ನಿಂತು.. ಜೋರಾಗಿ ಕೂಗಿ ಎಲ್ಲರಿಗೂ ಶುಭ ಹೇಳಿತು.. 








"ಮಕ್ಕಳಾ .. ನಾವು ಎಲ್ಲಿದ್ದರೇನು, ಹೇಗಿದ್ದರೇನು., ನಮ್ಮ ನಮ್ಮ ಗೆಳೆತನ ಅಂದಿಗೂ, ಇಂದಿಗೂ, ಎಂದೆಂದಿಗೂ ಮರಯಲಾರದ್ದು.. ಜೊತೆಯಾಗಿರಬೇಕು, ಜೊತೆಯಾಗಿ ಕಾಲ ಕಳೆಯಬೇಕು .. ಮಳೆ ಬಂದೆ ಬರುತ್ತದೆ.. ಮಳೆಗೆ ಕಾಯಬೇಕು ಅಷ್ಟೇ .. ಈಗಲೇ ಇಷ್ಟು ನಕ್ಕು ನಲಿಯುವ ಈ ಮುಗ್ಧ ಗೆಳೆಯರ ಸಡಗರ ಮಳೆ ಬಂದಾಗ ಹೇಗಿರುತ್ತದೆ ಊಹಿಸಿಕೊಳ್ಳಿ"

ಬಂದ ಮಕ್ಕಳಿಗೆ ಖುಷಿಯಾಯಿತು.. ಹಾಗೆಯೇ ಈ ಕ್ಷಣವನ್ನು ಆನಂದಿಸಿದ ಎಲ್ಲರಿಗೂ ಸಂತಸ ನೂರ್ಮಡಿಯಾಯಿತು.. 




****
ಗೆಳೆಯರ ಜೊತೆಗೂಡಿ ಕಳೆದ ಪ್ರತಿ ಕ್ಷಣವೂ ಇಮ್ಮಡಿಯಾಗುತ್ತಾ ಹೋಗುತ್ತದೆ.. ಆ ಸವಿ ಕ್ಷಣಗಳನ್ನು ತಿರುಗಿಸಿ, ತಿರುಗಿಸಿ ಮೆಲುಕು ಹಾಕಿದಾಗ ಪ್ರತಿಕ್ಷಣವೂ ಸುಂದರ ಅತಿ ಸುಂದರ 

Friday, May 7, 2021

DFR.. The inspiring personality! - Part II

 "ಮೇಡಂ.... ಇವಳು ನನ್ನ ತಂಗಿ ಮೀನಾ.. ಇವಳು ಆಫೀಸ್ ಇಂದ ಮನೆಗೆ ಬರುವಾಗ .. ಯಾರೋ ಇವಳ ಹತ್ತಿರ ಬಂದು ಪರ್ಸ್ ಕಿತ್ತುಕೊಂಡು ಹೋಗಿದ್ದರು.. ಇವಳು ಪೊಲೀಸ್ ಸ್ಟೇಶನ್ನಿಗೆ ಹೋದರೆ ಸುಮ್ಮನೆ ಗೋಳಾಡಿಸುತ್ತಾರೆ ಅಂತ ಹೋಗಿಲ್ಲ.. ಈಗ ಸಂಜೆ.. ಪೊಲೀಸ್ ಸ್ಟೇಷನಿಂದ ಕರೆ ಬಂದಿತ್ತು.. ನಿಮ್ಮ ವಸ್ತುಗಳು ಒಂದು   ಮರದ ಹತ್ತಿರ ಬಿದ್ದಿತ್ತು.. ಅದರ ಪಕ್ಕ ಮಳೆಯಲ್ಲಿ ನೆಂದು ತೊಪ್ಪೆಯಾಗಿದ್ದ ವ್ಯಕ್ತಿಯೂ ಬಿದ್ದಿದ್ದನು .. ನೀವು ಕೂಡಲೇ ನಿಮ್ಮ ಮನೆ ಹತ್ತಿರ ಇರುವ ಸ್ಟೇಷನಿಗೆ ಬನ್ನಿ.. ಅಂತ ಹೇಳಿದರು. ನಮಗೆ ಏನೂ ತೋಚದೆ.. ನಿಮ್ಮ ನೆನಪು ಬಂತು.. ಅದಕ್ಕೆ ಕಷ್ಟವಾದರೂ ಸರಿ.. ದೂರವಾದರೂ ಸರಿ ಎಂದು ಈ ಅವೇಳೆಯಲ್ಲಿ ಬಂದೆ.. ಸಾರಿ ಮೇಡಂ.. ನಮಗೆ ನೀವೇ ದಾರಿ ತೋರಿಸಬೇಕು.. ನಮಗೆ ಪೊಲೀಸ್ ಸ್ಟೇಷನ್, ಪೊಲೀಸು ಅಂದ್ರೆ ಭಯ.. ಅದಕ್ಕೆ  ನನ್ನ ಅಪ್ಪ, ಅಮ್ಮ, ದೊಡ್ಡಪ್ಪ, ದೊಡ್ಡಪ್ಪ, ಅಜ್ಜ ಅಜ್ಜಿ  ಚಿಂತೆಯಿಂದ ನಿದ್ದೆ ಮಾಡಿಯೇ ಇಲ್ಲ.. ನೋಡಿ ನೋಡಿ ಎಲ್ಲರೂ ನಿಮ್ಮನ್ನೇ ಕಾಯುತ್ತಿದ್ದಾರೆ.." ಅಂದದ್ದೇ ತಡ.. ರೂಮಿನಲ್ಲಿದ್ದ ಒಂದು ಕುಟುಂಬವೇ ಹಾಲಿಗೆ ಬಂದು ಕೈ ಮುಗಿದವು ಇವರಿಗೆ..

Scene shifted to Police Station

ಬ್ಯಾಗಿನಲ್ಲಿದ್ದ ಒಂದೊಂದೇ ವಸ್ತುವನ್ನು ತೆಗೆದು ನೋಡಿದರು.. ಕ್ರೆಡಿಟ್ ಕಾರ್ಡ್, ಮೊಬೈಲ್, ಡೆಬಿಟ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಲಿಪ್ಸ್ಟಿಕ್, ಬಾಚಣಿಗೆ, ಐ ಲೈನರ್, ಹೇರ್ ಬ್ಯಾಂಡ್, ಎಲ್ಲವನ್ನೂ ನೋಡಿದ ಮೀನಾ. ಮೇಡಂ ಇದ್ಯಾವುದು ನನ್ನದಲ್ಲ.. ಆದರೆ  ಬ್ಯಾಗ್ ಮಾತ್ರ ನನದು.. ನೋಡಿ ಕಾರ್ಡುಗಳ ಮೇಲೆ ಇರೋ ಹೆಸರು ನೋಡಿ., ಅದು  ನನ್ನದಲ್ಲ.. " ಸ್ವಲ್ಪ ಧೈರ್ಯದಿಂದ ಮೀನಾ ಉತ್ತರಿಸಿದಳು.. 

ಫೈಲಿಗೆ ಮೆಲ್ಲನೆ ಧೂಳು ಹಿಡಿಯೋಕೆ ಶುರುವಾಗಿತ್ತು.. ಏನ್ ಮಾಡೋದು.. ಜಗತ್ತನ್ನೇ ಅಲ್ಲಾಡಿಸುತ್ತಿದ್ದ ಕೊರೊನಾ.. ಅದರ ಮಧ್ಯೆ ಲಾಕ್ ಡೌನ್.. ಸಣ್ಣ ಪುಟ್ಟ ಕೇಸುಗಳು.. ಹೀಗೆ ಹತ್ತಾರು ಜಂಜಾಟಗಳಲ್ಲಿ ಇನ್ಸ್ಪೆಕ್ಟರ್ ಈ ಫೈಲಿನ ಕಡೆ ಗಮನ ಹರಿಸಿರಲಿಲ್ಲ.. 

ಆದರೆ ಕುತೂಹಲ ಅನ್ನೋ ಒಂದು ಬೆಕ್ಕು ಆಗಾಗ ಪೊಲೀಸ್ ಸ್ಟೇಷನ್ನಿಗೆ ಬಂದು ಇದರ ಬಗ್ಗೆ ಕ್ಯಾತೆ ತೆಗೆಯುತ್ತಲೇ ಇತ್ತು.. ಈ ಕೇಸಿನ ಬಗ್ಗೆ ಕುತೂಹಲ ಮುಂದೆ ಏನಾಗುತ್ತೋ ಅನ್ನುವ ತವಕ.. ಕಡೆಗೆ ಇಡೀ ಪ್ರಕರಣದ ರೂವಾರಿ ಇನ್ಸ್ಪೆಕ್ಟರನ್ನು ಘೇರಾವ್ ಮಾಡಿ ಮುಂದೆ ಏನಾಯಿತು ಎಂದು ತಿಳಿದುಕೊಳ್ಳಬೇಕು ಅಂತ ಧಮಕಿ ಹಾಕಿ ಅವರ ವಾಟ್ಸಾಪ್ ಸಂಖ್ಯೆಗೆ ಈ ರೀತಿಯ ಸಂದೇಶ ಹಾಕಿದರು.. 

"ನೋಡಿ ಸರ್ .. ಇಂದಿಗೆ ಒಂದು ವರ್ಷ ಆಯಿತು... ಮುಂದಿನ ಭಾಗ ಬಂದಿಲ್ಲ.. ಜೊತೆಗೆ ಕೇಸ್ ಏನಾಯಿತು.. ಮೀನಾ ಹೇಗಿದ್ದಾರೆ.. ಪರ್ಸ್ ಒಳಗಿದ್ದ ಐಟಂ ಯಾರದು..  ವ್ಯಕ್ತಿ ಯಾರು.. ಒಂದು ವರ್ಷವಾದರೂ ಈ ಕತೆಗೆ ಅಂತ್ಯ ಕೊಡಲಿಲ್ಲ ಅಂದರೆ ನೀವೆಂಥ ಮನುಷ್ಯರು.. ಮನುಷ್ಯತ್ವ ಇಲ್ವಾ.. "

ಪಿಂ ಪಿಂ ಎನ್ನುವ ಮೊಬೈಲ್ ಸದ್ದಿಗೆ ಕಣ್ಣುಜ್ಜಿಕೊಂಡು ಎದ್ದ ಇನ್ಸ್ಪೆಕ್ಟರ್  ಸಂದೇಶ ನೋಡಿ.. ನಸು ನಕ್ಕು.. "ಶರಣಪ್ಪ.. ಆ ಕೇಸ್ ಫೈಲ್ ತಗೊಂಡು ಬನ್ರೀ.. ಇದಕ್ಕೊಂದು ಮಂಗಳ ಹಾಡೋಣ.. "

ಶರಣಪ್ಪ "ಯಾವ ಫೈಲ್ ಸರ್.. ಇಲ್ಲಿ ನೂರಾರು ಫೈಲ್ ಇದಾವೆ"

"ಅದೇ ರೀ ಪರ್ಸ್, ಕಾಫಿ, ಸಿಗರೇಟ್, ಶ್ರೀಮತಿ ರೂಪ ಸತೀಶ್ ಅವರ ಹುಟ್ಟು ಹಬ್ಬ"

"ಓಹ್ ಅದಾ.. ಸರಿ ಸರ್ ತಂದೆ"

ಫೈಲ್ ಬಂತು.. ಒಂದೊಂದೇ ಹಾಳೆಗಳನ್ನು ತಿರುಗಿಸುತ್ತಾ.. ನೋಡುತ್ತಾ ಹೋದ ಹಾಗೆ.. ಕಣ್ಣುಗಳು ಅರಳಿತು.. ಕಣ್ಣುಜ್ಜಿಕೊಂಡು.. "ಶರಣಪ್ಪ..ಮನೆಗೆ ಹೋಗಿ ಫ್ರೆಶ್ ಆಗಿ ಬರ್ತೀನಿ.. ಒಂದು ಕೇಕು.. ಒಂದಷ್ಟು ಡೈರಿ ಮಿಲ್ಕ್ ಚಾಕೊಲೇಟ್.. ಒಂದು ಕೆಜಿ ಕಾಫಿ ಪುಡಿ.. ಒಂದೆರಡು ಕಾಫಿ ಮಗ್  ಎಲ್ಲಾ  ತಂದು ಬಿಡಿ..ಹಾಗೆ ಯಾರೋ ಅವರ ಅಡ್ರೆಸ್ ಕೇಳಿದ್ದರು ಅಲ್ವ.. ಅವರಿಗೂ ಅಡ್ರೆಸ್ ಕೊಡಿ.. ನಾ ಬರುವ ಹೊತ್ತಿಗೆ ಎಲ್ಲಾ ಸಿದ್ಧ ಮಾಡಿ.. ಕೇಸ್ ಮುಗಿಸಿ.. ಹಾಗೆ ಅವರ ಜನುಮದಿನಕ್ಕೂ ಶುಭಾಶಯಗಳನ್ನು ಹೇಳಿ ಬರೋಣ.. ಹಾಗೆ ಮೀನಾ ಸಂಜನಾ ಅವರಿಗೂ ಕರೆ ಮಾಡಿ ರೂಪ ಸತೀಶ್ ಅವರ ಮನೆಗೆ ಬರೋಕೆ ಹೇಳಿ.. "

"ಸರಿ ಸರ್"

ಜೀಪು ಮನೆ ಕಡೆ ಓಡಿತು.. 

ಕ್ಯಾಮೆರಾ ಕಟ್ ಆಯಿತು.. ಮತ್ತೆ ಕ್ಯಾಮೆರಾ ಆನ್ ಮಾಡಿದಾಗ ರೂಪ ಅವರ ಮನೆ ಗಿಜಿ ಗಿಜಿ ಅನ್ನುತ್ತಿತ್ತು.. ಅವರ ಗೆಳೆಯರು, ಬಂಧು ಮಿತ್ರರು.. ಸಹೋದ್ಯೋಗಿಗಳು, ನೆರೆಹೊರೆಯವರು ಬಂದಿದ್ದರು.. 

ಇನ್ಸ್ಪೆಕ್ಟರ್ ಬರುವ ಹೊತ್ತಿಗೆ.. ಸಂಜನಾ ಮೀನಾ ಹಾಗೂ ಅವರ ಮನೆಯವರು ಬಂದರು.. ಇನ್ಸ್ಪೆಕ್ಟರ್ ಒಂದು ಸಣ್ಣ ನಗೆ ಬೀರಿ ಎಲ್ಲಾ ಸರಿ ಹೋಗಿದೆ ಗಾಬರಿ ಬೇಡ ಎನ್ನುವ ಭಾವ ಕೊಟ್ಟರು.. ಅದನ್ನು ಕಂಡು ಮೀನಾ ಮತ್ತು ಸಂಜನಾ ನಿಟ್ಟುಸಿರು ಬಿಟ್ಟರು.. 

ರೂಪ ಸತೀಶ್ ಎಲ್ಲರನ್ನೂ ಕಂಡು ಖುಷಿ ಪಟ್ಟರು.. ಎಲ್ಲರ ಅಭಿನಂದನೆಗಳನ್ನು, ಶುಭಾಶಯಗಳನ್ನು ಸ್ವೀಕರಿಸಿ.. ತಣ್ಣನೆ ಕೂತರು.. 

ಎಲ್ಲರೂ ರೂಪ ಮೇಡಂ, ರೂಪಕ್ಕ, ರೂಪಸಿ.. ರೂಪಕ.. ರೂಪ ಸತೀಶ್ ಮೇಡಂ.. DFR ಕೇಕು ಕಟ್ ಮಾಡಿ ಅಂದಾಗ.. 

ಇನ್ಸ್ಪೆಕ್ಟರ್ ಹತ್ತಿರ ಬಂದು.. "ರೀ ಸರ್.. ಈ ಕೇಸ್ ಏನಾಯಿತು ಅಂತ ಹೇಳಿದರೆ ಮಾತ್ರ ಕೇಕು" ಅಂತ ತುಸು ಮುನಿಸಿನಿಂದಲೇ ಹೇಳಿದರು.. 

"ಆಗಲಿ ಮೇಡಂ.. ನೋಡಿ ಹೀಗಿದೆ.. ರೀ ಸಂಜನಾ ಮೀನಾ ಮೇಡಂ.. ನೀವು ಕೇಳಿಸಿಕೊಳ್ಳಿ.. ನಿಮ್ಮದೇ ಕೇಸ್ ಇದು.. "

ಎಲ್ಲರೂ ಮೈಯೆಲ್ಲಾ ಕಿವಿಯಾಗಿ.... ಇನ್ಸ್ಪೆಕ್ಟರ್ ಹೇಳುವ ಮಾತಿಗೆ ಕಿವಿಗೊಟ್ಟರು.. 

"ನೋಡಿ ಮೇಡಂ.. ಮೀನಾ ಮೇಡಂ.. ನಿಮ್ಮಿಂದ ಪರ್ಸ್ ಕದ್ದ ಆತನ ಮೊಬೈಲ್ ಕರೆಗಳನ್ನು ಟ್ರೇಸ್ ಮಾಡಿ.. ಒಂದಷ್ಟು ವಿಚಾರಣೆ ಮಾಡಿದ ಮೇಲೆ ತಿಳಿದು ಬಂದ ವಿಷಯ.. .... ಆತ ಪರ್ಸ್ ಕದ್ದು ತನ್ನ ಅಡ್ಡ ಕಡೆ ಹೋಗುವಾಗ.. ತನ್ನ ನಾಯಕನ ಕರೆ ಬಂದಿತ್ತು..  ಅರ್ಜೆಂಟ್ ಆಗಿ ಒಂದು ಡೀಲ್ ಇದೆ ಅದನ್ನು ಮುಗಿಸು ಅಂತ.. ಆದರೆ ಈತನಿಗೆ ಅಂದು ಬೇರೆ ಯಾವ ಕೆಲಸ ಮಾಡುವ ಮೂಡ್ಇರಲಿಲ್ಲ .. ಈ ರೀತಿಯ ಜೀವನ ಸಾಕಾಗಿತ್ತು.. ಸರ್ ಇವತ್ತೊಂದು ದಿನ ನನ್ನ ಬಿಟ್ಟು ಬಿಡಿ.. ನಾಳೆ ನಾನೇ ಬರ್ತೀನಿ.. ನಿಮಗೆ ಎಲ್ಲಾ ಹೇಳಿ ನನ್ನ ಊರಿಗೆ ಹೋಗುತ್ತೇನೆ.. ಈ ಲಾಕ್ ಡೌನ್ ಇಂದ ನಮ್ಮ ಊರಲ್ಲಿ ಹೊಲ ಗದ್ದೆ ಜಮೀನು ನೋಡುವವರಿಲ್ಲ.. ಅಪ್ಪ ಅಮ್ಮನನ್ನು ನೋಡಿಕೊಳ್ಳಬೇಕು.. ಯಾವುದೋ ಕೆಟ್ಟ ಘಳಿಗೆ.. ಬೆಂಗಳೂರಿಗೆ ಬಂದು.. ನಿಮ್ಮ ಜಾಲ ಸೇರಿಕೊಂಡು ಮಾಡಬಾರದ ಕೆಲಸ ಮಾಡಿದೆ ..ಈ ಜಂಜಾಟದ ಬದುಕು ಸಾಕಾಗಿದೆ.. ಅಂತ ಹೇಳಿದ.. ಸಾಮಾನ್ಯ ಈ ರೀತಿಯ ಕೋರಿಕೆಗಳನ್ನು ಈ ರೀತಿಯ ತಂಡಗಳ ಬಾಸ್ ಗಳು ಒಪ್ಪುವುದು ಕಷ್ಟ.. ಮತ್ತು ಸಾಧ್ಯವೂ ಇಲ್ಲ.. ಆದರೆ.. ಅದೇನೋ ಈತನ ಒಳ್ಳೆಯ ತನವೋ.. ಕರುಣೆಯೂ, ಅನುಕಂಪವೋ.. ಅಥವ ತಾನೂ ಇದೆ ರೀತಿ ಹಾದಿಯನ್ನು ತುಳಿದಿದ್ದು ನೆನಪಿಗೆ ಬಂತೋ.. ಒಟ್ಟಿನಲ್ಲಿ .. ಸರಿ.. ಇವತ್ತೊಂದು ಪುಟ್ಟ ಡೀಲ್ ಇದೆ.. ಅದನ್ನು ಮುಗಿಸಿ.. ಹೊರಟು ಬಿಡು.. ಮತ್ತೆ ನಿನ್ನ ಮುಖ ನನಗೆ ತೋರಿಸಬೇಡ.. ಶುಭವಾಗಲಿ ಅಂತ ಫೋನ್ ಇಟ್ಟಿದ್ದಾನೆ.. 

ಇದೆ ಖುಷಿಯಲ್ಲಿ, ತನ್ನ ಬಾಸ್ ತನ್ನನ್ನು ಬಿಡುಗಡೆ ಮಾಡಿದ ಎಂಬ ಖುಷಿಯಲ್ಲಿ, ಬಾಡಿಗೆ ಸ್ಕೂಟರ್ ತೆಗೆದುಕೊಂಡು.. ತನ್ನ ಗೆಳತಿಯ ಮನೆಗೆ ಹೊರಟ.. ಮೆಲ್ಲಗೆ ಮಳೆ ಶುರುವಾಗಿತ್ತು.. ಆದರೆ ಮುಂದಿನ ಸುಂದರ ಬದುಕು ನೆನೆಸಿಕೊಂಡು ಹೋಗುತ್ತಿದ್ದ ಅವನಿಗೆ.. ಮಳೆ ಕಾಡಿರಲಿಲ್ಲ.. ಇನ್ನೇನೂ ಆವನು ಮತ್ತು  ಗೆಳತಿ ಸೇರುವ ಜಾಗ ಬರುವಹೊತ್ತಾಗಿತ್ತು .. ಅಷ್ಟರಲ್ಲಿ ಹಿಂದೆ ಒಂದು ಡೀಲ್ ನಲ್ಲಿ ಪುಟ್ಟ ಜಗಳವಾಗಿದ್ದ ಒಬ್ಬ ಅವನಿಗೆ ಅಡ್ಡ ಬಂದ... 

ಸಾಮಾನ್ಯ.. ಮಾಮೂಲಿ ದಿನವಾಗಿದ್ದರೆ ಅಲ್ಲೊಂದು ಹೊಡೆದಾಟ ನೆಡೆಯಬೇಕಿತ್ತು.. ಆದರೆ.. ಗ್ಯಾಂಗ್ ಬಿಟ್ಟು ಹೋಗುವ ಹಾದಿಯಲ್ಲಿದ್ದ ಈತನಿಗೆ.. ಯಾವುದು ಬೇಡವಾಗಿತ್ತು.. ಏನ್ಲಾ ಮಗ ಹೇಗಿದ್ದೀಯೋ ಅಂತ ಆರಾಮಾಗೆ ಮಾತಾಡಿಸಿದ.. ಆದರೆ ಆ ಕಡೆ ವ್ಯಕ್ತಿ.. ಅದು ತನಗೆ ಬೇಡದ ವಿಷಯ ಎನ್ನುವಂತೆ.. ಸೀದಾ ಹೊಡೆದಾಟಕ್ಕೆ ಇಳಿದ.. ಇಬ್ಬರಿಗೂ ಒಂದಷ್ಟು ಹೊತ್ತು ಹೊಡೆದಾಟವಾಯಿತು.. ಆ ಹುಡುಗ.. ಈತನ ಬ್ಯಾಗ್ ಕಿತ್ತುಕೊಂಡು.. ಅದರೊಳಗೆ ಇದ್ದ ವಸ್ತುವನ್ನು ಹುಡುಕತೊಡಗಿದ.. ತನಗೆ ಬೇಕಾದ್ದು ಏನೂ ಸಿಗಲಿಲ್ಲ.. ಆದರೆ ಬ್ಯಾಗ್ ಗಮನ ಸೆಳೆಯಿತು.. ಬ್ಯಾಗ್ ಮಾತ್ರ ಸಾಕು ಅಂತ.. ಅದರೊಳಗಿದ್ದ ವಸ್ತುಗಳೆನ್ನೆಲ್ಲ ಕೆಳಗೆ ಬಿಸಾಕಿ.. ತನ್ನ ಜೋಬಿನಲ್ಲಿದ್ದ ಕೆಲವು, ಕಾರ್ಡುಗಳು, ತನ್ನ ಗೆಳೆತಿಯ ಅಲಂಕಾರಿಕ ಸಾಮಗ್ರಿಗಳನ್ನು ಹಾಕಿ.. ಓಡಿ ಹೋಗೋಕೆ ಹೊರಟ.. ಮೊದಲೇ ಬ್ಯಾಗ್ ಕದ್ದಿದ್ದ ಹುಡುಗ.. ಆ ಬ್ಯಾಗ್ ತನಗೆ ಬೇಕು ಎಂದು.. ಅವನ ಹಿಂದೆ ಓಡಿಸಿಕೊಂಡು ಹೋದ.. ಅಲ್ಲೇ ಹತ್ತಿರದಲ್ಲಿಯೇ ಸಾಲು ಸಾಲು ಮರಗಳ ರಸ್ತೆ.. ಅಕ್ಕ ಪಕ್ಕ ಹುಲ್ಲು ಬೆಳೆದು ಈ ಕಡೆ ಪಾರ್ಕ್ ಅಲ್ಲ.. ಆ ಕಡೆ ರಸ್ತೆಯಲ್ಲ ಎನ್ನುವ ಹಾಗೆ ಇತ್ತು.. ಇಬ್ಬರಿಗೂ ಮತ್ತೆ ಒಂದಷ್ಟು ಹೊಡೆದಾಟವಾದ ಮೇಲೆ..  ಅವರಿಬ್ಬರ ಒಬ್ಬರ ಮೇಲೆ ಒಬ್ಬರ ಸಿಟ್ಟಿಗಿಂತ ಆ ಬ್ಯಾಗಿನ ಮೇಲೆ ಪ್ರೀತಿಯಾಗಿ ಅದನ್ನು ಜಗ್ಗಾಡ ತೊಡಗಿದರು. ಆ ಬರದಲ್ಲಿ ಮೊದಲು ಬ್ಯಾಗ್ ಕದ್ದವ ಕಲ್ಲನ್ನು ಎಡವಿ ಬಿದ್ದೆ ಬಿಟ್ಟ.. ಅವನ ತಲೆ ಅಲ್ಲಿದ್ದ ಒಂದು ಕಲ್ಲಿಗೆ ಬಲವಾಗಿಯೇ ಬಡಿದ ಕಾರಣ ಪ್ರಜ್ಞೆ ತಪ್ಪಿ ಬಿದ್ದ... ಮೆಲ್ಲನೆ ಮಳೆ ಸುರಿಯುತಿತ್ತು.. ಆ ಸಮಯದಲ್ಲಿ ಒಂದು ಪೊಲೀಸ್ ಜೀಪ್ ಹೋಗಿದ್ದರಿಂದ.. ಗಾಬರಿಯಾಗಿ ಇನ್ನೊಬ್ಬಾತ ಓಡಿ ಹೋಗಿದ್ದ 

ಈ ರೀತಿಯ ಹೊಡೆದಾಟದಲ್ಲಿ ಈ ರೀತಿಯ ದೃಶ್ಯಗಳು ಮಾಮೂಲಿಯಾಗಿದ್ದರೂ ಇನ್ನೊಬ್ಬನಿಗೆ ಯಾಕೋ ಗಾಬರಿಯಾಗಿ ಓಡಿ ಹೋದ.. .. ಪ್ರಜ್ಞೆ ತಪ್ಪಿ ಬಿದ್ದವನನ್ನು ಆಸ್ಪತ್ರೆಗೆ ಸೇರಿಸಿದ್ದರಂತೆ.. ಆದರೆ ಆತನಿಗೆ ಜ್ಞಾಪಕ ಶಕ್ತಿ ಹೋಗಿದ್ದರಿಂದ.. ಈ ಕೇಸು ಫೈಲಿನಲ್ಲಿಯೇ ಕೊಳೆಯುತಿತ್ತು.. ಇವತ್ತು ಮತ್ತೆ ಫೈಲ್ ಹಿಡಿದು ನೋಡೋಕೆ ಶುರು ಮಾಡಿದೆ.. ಎಲ್ಲವೂ ಹೊರಗೆ ಬಂತು.. ಈ ಕೇಸು ಖುಲಾಸೆ ಆಯ್ತು..

ಮೀನಾ ಮೇಡಂ.. ಬ್ಯಾಗ್ ನಿಮ್ಮದೇ.. ಆದರೆ ಬ್ಯಾಗಿನೊಳಗೆ ಇದ್ದ ಸಾಮಗ್ರಿಗಳು, ಡೆಬಿಟ್ ಕಾರ್ಡ್, ಎಲ್ಲವನ್ನು ನಾನು ಪರೀಕ್ಷೆ ಮಾಡಿಸಿದ್ದೆ ಆದರೆ.. ಈ ಕೊರೊನಾ ತಲೆ ಬಿಸಿ.. ಎಲ್ಲವನ್ನು ನನ್ನ ತಲೆಯಿಂದ ಮೇರ್ ಮಾಡಿತ್ತು.. ಇವತ್ತು ಬೆಳಗಿನ ವಾಟ್ಸಾಪ್ ಸಂದೇಶ ಮತ್ತೆ ನನ್ನ ತಲೆಗೆ ಚುರುಕು ಮುಟ್ಟಿಸಿತು.. ಹಾಗಾಗಿ  ಇನ್ನು ನಿಮಗೆ ತೊಂದರೆ ಇಲ್ಲ.. ನಿಮಗೆ ಬಿಡುವಾದಾಗ.. ಬ್ಯಾಗ್ ತೆಗೆದುಕೊಂಡು ಒಂದು ಪಾತ್ರ ಬರೆದು ಕೊಡಿ.. ಈ ಬ್ಯಾಗ್ ನನ್ನದೇ ಅಂತ.. ನಾನು ಈ ಕೇಸ್ ಕ್ಲೋಸ್ ಮಾಡ್ತೀನಿ.. 

ಮೀನಾ "ತುಂಬಾ ಸಂತೋಷ ಆಯ್ತು ಸರ್.. ಅಂದ ಹಾಗೆ ನನ್ನ ಬ್ಯಾಗ್ ಕದ್ದವ ಹೇಗಿದ್ದಾನೆ.. ಅವನ ಜೊತೆ ಜಗಳವಾಡಿದವನ ಕತೆ ಏನು"

"ಮೇಡಂ.. ಬ್ಯಾಗ್ ಕದ್ದವನಿಗೆ ಜ್ಞಾಪಕ ಬಂದಿಲ್ಲ.. ಒಂದು ಹಾಸ್ಟೆಲ್ ನಲ್ಲಿ ಬಿಟ್ಟಿದ್ದೀನಿ.. ಅವನನ್ನು ಊರಿಗೆ ತಲುಪಿಸುವ ಕೆಲಸ ಮಾಡುತ್ತೇನೆ.. ಅವನ ಅಪ್ಪ ಅಮ್ಮನಿಗೆ ವಿಷಯ ಹೇಳಿದ್ದೀನಿ.. ವರ್ಷಕ್ಕೆ ಒಂದೆರಡು ಬಾರಿ ಹೋಗುತ್ತಿದ್ದರಿಂದ.. ಅವರೂ ಇವನ ಬಗ್ಗೆ ಅಷ್ಟು ತಲೆ ಕೆಡಿಸಿಕೊಂಡಿರಲಿಲ್ಲ.. ಇನ್ನೂ ಜಗಳವಾಡಿದ ಹುಡುಗನ ಗೆಳತಿಯನ್ನು ಹುಡುಕಿ ಆಕೆಗೆ ಪರ್ಸನಲ್ಲಿದ್ದ ಎಲ್ಲಾ ಸಾಮಗ್ರಿಗಳನ್ನು ಕೊಡುವ ವ್ಯವಸ್ಥೆ ಮಾಡಿದ್ದೇನೆ.. ಆಕೆಯ ಗೆಳೆಯ.. ಊರಿಗೆ ಹೋಗಿದ್ದಾನೆ.. ಮತ್ತೆ ಈ ಹೊಡೆದಾಟ ಬಡಿದಾಟ ಎಲ್ಲಾ ಬಿಟ್ಟಿದ್ದಾನೆ ಅಂತ ಕೇಳಿ ಪಟ್ಟೆ.. ಹೇಗೋ ಎಲ್ಲವೂ ಸುಖಾಂತ್ಯವಾದರೆ ಸಾಕು.. "

"ಸರ್... ಕೇಕು ಕಟ್ ಮಾಡ್ತೀನಿ ಬನ್ನಿ"  ರೂಪ ಅವರ ಧ್ವನಿ ಕೇಳಿ ಇತ್ತ ತಿರುಗಿದ ಇನ್ಸ್ಪೆಕ್ಟರ್.. 

ಕಾನ್ಸ್ಟೇಬಲ್ತಾ ಶರಣಪ್ಪನಿಗೆ ಕಣ್ಣು ಸನ್ನೆ ಮಾಡಿ ತಾನು ತಂದಿದ್ದ ಕೇಕು ತರುವಂತೆ ಹೇಳಿದ .. 

ಎರಡು ಕೇಕು.. 




ಎಲ್ಲರೂ ಸಂಭ್ರಮದಿಂದ ರೂಪ ಸತೀಶ್ ಅವರ ಜನುಮದಿನವನ್ನು ಆಚರಿಸಿದರು..

ಎಂಬಲ್ಲಿಗೆ ಈ ಕಥಾ ಪ್ರಸಂಗ ಮಂಗಳಮಯವಾಯಿತು..!

DFR ಜನುಮದಿನದ ಶುಭಾಶಯಗಳು!