"ಮೇಡಂ.... ಇವಳು ನನ್ನ ತಂಗಿ ಮೀನಾ.. ಇವಳು ಆಫೀಸ್ ಇಂದ ಮನೆಗೆ ಬರುವಾಗ .. ಯಾರೋ ಇವಳ ಹತ್ತಿರ ಬಂದು ಪರ್ಸ್ ಕಿತ್ತುಕೊಂಡು ಹೋಗಿದ್ದರು.. ಇವಳು ಪೊಲೀಸ್ ಸ್ಟೇಶನ್ನಿಗೆ ಹೋದರೆ ಸುಮ್ಮನೆ ಗೋಳಾಡಿಸುತ್ತಾರೆ ಅಂತ ಹೋಗಿಲ್ಲ.. ಈಗ ಸಂಜೆ.. ಪೊಲೀಸ್ ಸ್ಟೇಷನಿಂದ ಕರೆ ಬಂದಿತ್ತು.. ನಿಮ್ಮ ವಸ್ತುಗಳು ಒಂದು ಮರದ ಹತ್ತಿರ ಬಿದ್ದಿತ್ತು.. ಅದರ ಪಕ್ಕ ಮಳೆಯಲ್ಲಿ ನೆಂದು ತೊಪ್ಪೆಯಾಗಿದ್ದ ವ್ಯಕ್ತಿಯೂ ಬಿದ್ದಿದ್ದನು .. ನೀವು ಕೂಡಲೇ ನಿಮ್ಮ ಮನೆ ಹತ್ತಿರ ಇರುವ ಸ್ಟೇಷನಿಗೆ ಬನ್ನಿ.. ಅಂತ ಹೇಳಿದರು. ನಮಗೆ ಏನೂ ತೋಚದೆ.. ನಿಮ್ಮ ನೆನಪು ಬಂತು.. ಅದಕ್ಕೆ ಕಷ್ಟವಾದರೂ ಸರಿ.. ದೂರವಾದರೂ ಸರಿ ಎಂದು ಈ ಅವೇಳೆಯಲ್ಲಿ ಬಂದೆ.. ಸಾರಿ ಮೇಡಂ.. ನಮಗೆ ನೀವೇ ದಾರಿ ತೋರಿಸಬೇಕು.. ನಮಗೆ ಪೊಲೀಸ್ ಸ್ಟೇಷನ್, ಪೊಲೀಸು ಅಂದ್ರೆ ಭಯ.. ಅದಕ್ಕೆ ನನ್ನ ಅಪ್ಪ, ಅಮ್ಮ, ದೊಡ್ಡಪ್ಪ, ದೊಡ್ಡಪ್ಪ, ಅಜ್ಜ ಅಜ್ಜಿ ಚಿಂತೆಯಿಂದ ನಿದ್ದೆ ಮಾಡಿಯೇ ಇಲ್ಲ.. ನೋಡಿ ನೋಡಿ ಎಲ್ಲರೂ ನಿಮ್ಮನ್ನೇ ಕಾಯುತ್ತಿದ್ದಾರೆ.." ಅಂದದ್ದೇ ತಡ.. ರೂಮಿನಲ್ಲಿದ್ದ ಒಂದು ಕುಟುಂಬವೇ ಹಾಲಿಗೆ ಬಂದು ಕೈ ಮುಗಿದವು ಇವರಿಗೆ..
Scene shifted to Police Station
ಬ್ಯಾಗಿನಲ್ಲಿದ್ದ ಒಂದೊಂದೇ ವಸ್ತುವನ್ನು ತೆಗೆದು ನೋಡಿದರು.. ಕ್ರೆಡಿಟ್ ಕಾರ್ಡ್, ಮೊಬೈಲ್, ಡೆಬಿಟ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಲಿಪ್ಸ್ಟಿಕ್, ಬಾಚಣಿಗೆ, ಐ ಲೈನರ್, ಹೇರ್ ಬ್ಯಾಂಡ್, ಎಲ್ಲವನ್ನೂ ನೋಡಿದ ಮೀನಾ. ಮೇಡಂ ಇದ್ಯಾವುದು ನನ್ನದಲ್ಲ.. ಆದರೆ ಬ್ಯಾಗ್ ಮಾತ್ರ ನನದು.. ನೋಡಿ ಕಾರ್ಡುಗಳ ಮೇಲೆ ಇರೋ ಹೆಸರು ನೋಡಿ., ಅದು ನನ್ನದಲ್ಲ.. " ಸ್ವಲ್ಪ ಧೈರ್ಯದಿಂದ ಮೀನಾ ಉತ್ತರಿಸಿದಳು..
ಫೈಲಿಗೆ ಮೆಲ್ಲನೆ ಧೂಳು ಹಿಡಿಯೋಕೆ ಶುರುವಾಗಿತ್ತು.. ಏನ್ ಮಾಡೋದು.. ಜಗತ್ತನ್ನೇ ಅಲ್ಲಾಡಿಸುತ್ತಿದ್ದ ಕೊರೊನಾ.. ಅದರ ಮಧ್ಯೆ ಲಾಕ್ ಡೌನ್.. ಸಣ್ಣ ಪುಟ್ಟ ಕೇಸುಗಳು.. ಹೀಗೆ ಹತ್ತಾರು ಜಂಜಾಟಗಳಲ್ಲಿ ಇನ್ಸ್ಪೆಕ್ಟರ್ ಈ ಫೈಲಿನ ಕಡೆ ಗಮನ ಹರಿಸಿರಲಿಲ್ಲ..
ಆದರೆ ಕುತೂಹಲ ಅನ್ನೋ ಒಂದು ಬೆಕ್ಕು ಆಗಾಗ ಪೊಲೀಸ್ ಸ್ಟೇಷನ್ನಿಗೆ ಬಂದು ಇದರ ಬಗ್ಗೆ ಕ್ಯಾತೆ ತೆಗೆಯುತ್ತಲೇ ಇತ್ತು.. ಈ ಕೇಸಿನ ಬಗ್ಗೆ ಕುತೂಹಲ ಮುಂದೆ ಏನಾಗುತ್ತೋ ಅನ್ನುವ ತವಕ.. ಕಡೆಗೆ ಇಡೀ ಪ್ರಕರಣದ ರೂವಾರಿ ಇನ್ಸ್ಪೆಕ್ಟರನ್ನು ಘೇರಾವ್ ಮಾಡಿ ಮುಂದೆ ಏನಾಯಿತು ಎಂದು ತಿಳಿದುಕೊಳ್ಳಬೇಕು ಅಂತ ಧಮಕಿ ಹಾಕಿ ಅವರ ವಾಟ್ಸಾಪ್ ಸಂಖ್ಯೆಗೆ ಈ ರೀತಿಯ ಸಂದೇಶ ಹಾಕಿದರು..
"ನೋಡಿ ಸರ್ .. ಇಂದಿಗೆ ಒಂದು ವರ್ಷ ಆಯಿತು... ಮುಂದಿನ ಭಾಗ ಬಂದಿಲ್ಲ.. ಜೊತೆಗೆ ಕೇಸ್ ಏನಾಯಿತು.. ಮೀನಾ ಹೇಗಿದ್ದಾರೆ.. ಪರ್ಸ್ ಒಳಗಿದ್ದ ಐಟಂ ಯಾರದು.. ವ್ಯಕ್ತಿ ಯಾರು.. ಒಂದು ವರ್ಷವಾದರೂ ಈ ಕತೆಗೆ ಅಂತ್ಯ ಕೊಡಲಿಲ್ಲ ಅಂದರೆ ನೀವೆಂಥ ಮನುಷ್ಯರು.. ಮನುಷ್ಯತ್ವ ಇಲ್ವಾ.. "
ಪಿಂ ಪಿಂ ಎನ್ನುವ ಮೊಬೈಲ್ ಸದ್ದಿಗೆ ಕಣ್ಣುಜ್ಜಿಕೊಂಡು ಎದ್ದ ಇನ್ಸ್ಪೆಕ್ಟರ್ ಸಂದೇಶ ನೋಡಿ.. ನಸು ನಕ್ಕು.. "ಶರಣಪ್ಪ.. ಆ ಕೇಸ್ ಫೈಲ್ ತಗೊಂಡು ಬನ್ರೀ.. ಇದಕ್ಕೊಂದು ಮಂಗಳ ಹಾಡೋಣ.. "
ಶರಣಪ್ಪ "ಯಾವ ಫೈಲ್ ಸರ್.. ಇಲ್ಲಿ ನೂರಾರು ಫೈಲ್ ಇದಾವೆ"
"ಅದೇ ರೀ ಪರ್ಸ್, ಕಾಫಿ, ಸಿಗರೇಟ್, ಶ್ರೀಮತಿ ರೂಪ ಸತೀಶ್ ಅವರ ಹುಟ್ಟು ಹಬ್ಬ"
"ಓಹ್ ಅದಾ.. ಸರಿ ಸರ್ ತಂದೆ"
ಫೈಲ್ ಬಂತು.. ಒಂದೊಂದೇ ಹಾಳೆಗಳನ್ನು ತಿರುಗಿಸುತ್ತಾ.. ನೋಡುತ್ತಾ ಹೋದ ಹಾಗೆ.. ಕಣ್ಣುಗಳು ಅರಳಿತು.. ಕಣ್ಣುಜ್ಜಿಕೊಂಡು.. "ಶರಣಪ್ಪ..ಮನೆಗೆ ಹೋಗಿ ಫ್ರೆಶ್ ಆಗಿ ಬರ್ತೀನಿ.. ಒಂದು ಕೇಕು.. ಒಂದಷ್ಟು ಡೈರಿ ಮಿಲ್ಕ್ ಚಾಕೊಲೇಟ್.. ಒಂದು ಕೆಜಿ ಕಾಫಿ ಪುಡಿ.. ಒಂದೆರಡು ಕಾಫಿ ಮಗ್ ಎಲ್ಲಾ ತಂದು ಬಿಡಿ..ಹಾಗೆ ಯಾರೋ ಅವರ ಅಡ್ರೆಸ್ ಕೇಳಿದ್ದರು ಅಲ್ವ.. ಅವರಿಗೂ ಅಡ್ರೆಸ್ ಕೊಡಿ.. ನಾ ಬರುವ ಹೊತ್ತಿಗೆ ಎಲ್ಲಾ ಸಿದ್ಧ ಮಾಡಿ.. ಕೇಸ್ ಮುಗಿಸಿ.. ಹಾಗೆ ಅವರ ಜನುಮದಿನಕ್ಕೂ ಶುಭಾಶಯಗಳನ್ನು ಹೇಳಿ ಬರೋಣ.. ಹಾಗೆ ಮೀನಾ ಸಂಜನಾ ಅವರಿಗೂ ಕರೆ ಮಾಡಿ ರೂಪ ಸತೀಶ್ ಅವರ ಮನೆಗೆ ಬರೋಕೆ ಹೇಳಿ.. "
"ಸರಿ ಸರ್"
ಜೀಪು ಮನೆ ಕಡೆ ಓಡಿತು..
ಕ್ಯಾಮೆರಾ ಕಟ್ ಆಯಿತು.. ಮತ್ತೆ ಕ್ಯಾಮೆರಾ ಆನ್ ಮಾಡಿದಾಗ ರೂಪ ಅವರ ಮನೆ ಗಿಜಿ ಗಿಜಿ ಅನ್ನುತ್ತಿತ್ತು.. ಅವರ ಗೆಳೆಯರು, ಬಂಧು ಮಿತ್ರರು.. ಸಹೋದ್ಯೋಗಿಗಳು, ನೆರೆಹೊರೆಯವರು ಬಂದಿದ್ದರು..
ಇನ್ಸ್ಪೆಕ್ಟರ್ ಬರುವ ಹೊತ್ತಿಗೆ.. ಸಂಜನಾ ಮೀನಾ ಹಾಗೂ ಅವರ ಮನೆಯವರು ಬಂದರು.. ಇನ್ಸ್ಪೆಕ್ಟರ್ ಒಂದು ಸಣ್ಣ ನಗೆ ಬೀರಿ ಎಲ್ಲಾ ಸರಿ ಹೋಗಿದೆ ಗಾಬರಿ ಬೇಡ ಎನ್ನುವ ಭಾವ ಕೊಟ್ಟರು.. ಅದನ್ನು ಕಂಡು ಮೀನಾ ಮತ್ತು ಸಂಜನಾ ನಿಟ್ಟುಸಿರು ಬಿಟ್ಟರು..
ರೂಪ ಸತೀಶ್ ಎಲ್ಲರನ್ನೂ ಕಂಡು ಖುಷಿ ಪಟ್ಟರು.. ಎಲ್ಲರ ಅಭಿನಂದನೆಗಳನ್ನು, ಶುಭಾಶಯಗಳನ್ನು ಸ್ವೀಕರಿಸಿ.. ತಣ್ಣನೆ ಕೂತರು..
ಎಲ್ಲರೂ ರೂಪ ಮೇಡಂ, ರೂಪಕ್ಕ, ರೂಪಸಿ.. ರೂಪಕ.. ರೂಪ ಸತೀಶ್ ಮೇಡಂ.. DFR ಕೇಕು ಕಟ್ ಮಾಡಿ ಅಂದಾಗ..
ಇನ್ಸ್ಪೆಕ್ಟರ್ ಹತ್ತಿರ ಬಂದು.. "ರೀ ಸರ್.. ಈ ಕೇಸ್ ಏನಾಯಿತು ಅಂತ ಹೇಳಿದರೆ ಮಾತ್ರ ಕೇಕು" ಅಂತ ತುಸು ಮುನಿಸಿನಿಂದಲೇ ಹೇಳಿದರು..
"ಆಗಲಿ ಮೇಡಂ.. ನೋಡಿ ಹೀಗಿದೆ.. ರೀ ಸಂಜನಾ ಮೀನಾ ಮೇಡಂ.. ನೀವು ಕೇಳಿಸಿಕೊಳ್ಳಿ.. ನಿಮ್ಮದೇ ಕೇಸ್ ಇದು.. "
ಎಲ್ಲರೂ ಮೈಯೆಲ್ಲಾ ಕಿವಿಯಾಗಿ.... ಇನ್ಸ್ಪೆಕ್ಟರ್ ಹೇಳುವ ಮಾತಿಗೆ ಕಿವಿಗೊಟ್ಟರು..
"ನೋಡಿ ಮೇಡಂ.. ಮೀನಾ ಮೇಡಂ.. ನಿಮ್ಮಿಂದ ಪರ್ಸ್ ಕದ್ದ ಆತನ ಮೊಬೈಲ್ ಕರೆಗಳನ್ನು ಟ್ರೇಸ್ ಮಾಡಿ.. ಒಂದಷ್ಟು ವಿಚಾರಣೆ ಮಾಡಿದ ಮೇಲೆ ತಿಳಿದು ಬಂದ ವಿಷಯ.. .... ಆತ ಪರ್ಸ್ ಕದ್ದು ತನ್ನ ಅಡ್ಡ ಕಡೆ ಹೋಗುವಾಗ.. ತನ್ನ ನಾಯಕನ ಕರೆ ಬಂದಿತ್ತು.. ಅರ್ಜೆಂಟ್ ಆಗಿ ಒಂದು ಡೀಲ್ ಇದೆ ಅದನ್ನು ಮುಗಿಸು ಅಂತ.. ಆದರೆ ಈತನಿಗೆ ಅಂದು ಬೇರೆ ಯಾವ ಕೆಲಸ ಮಾಡುವ ಮೂಡ್ಇರಲಿಲ್ಲ .. ಈ ರೀತಿಯ ಜೀವನ ಸಾಕಾಗಿತ್ತು.. ಸರ್ ಇವತ್ತೊಂದು ದಿನ ನನ್ನ ಬಿಟ್ಟು ಬಿಡಿ.. ನಾಳೆ ನಾನೇ ಬರ್ತೀನಿ.. ನಿಮಗೆ ಎಲ್ಲಾ ಹೇಳಿ ನನ್ನ ಊರಿಗೆ ಹೋಗುತ್ತೇನೆ.. ಈ ಲಾಕ್ ಡೌನ್ ಇಂದ ನಮ್ಮ ಊರಲ್ಲಿ ಹೊಲ ಗದ್ದೆ ಜಮೀನು ನೋಡುವವರಿಲ್ಲ.. ಅಪ್ಪ ಅಮ್ಮನನ್ನು ನೋಡಿಕೊಳ್ಳಬೇಕು.. ಯಾವುದೋ ಕೆಟ್ಟ ಘಳಿಗೆ.. ಬೆಂಗಳೂರಿಗೆ ಬಂದು.. ನಿಮ್ಮ ಜಾಲ ಸೇರಿಕೊಂಡು ಮಾಡಬಾರದ ಕೆಲಸ ಮಾಡಿದೆ ..ಈ ಜಂಜಾಟದ ಬದುಕು ಸಾಕಾಗಿದೆ.. ಅಂತ ಹೇಳಿದ.. ಸಾಮಾನ್ಯ ಈ ರೀತಿಯ ಕೋರಿಕೆಗಳನ್ನು ಈ ರೀತಿಯ ತಂಡಗಳ ಬಾಸ್ ಗಳು ಒಪ್ಪುವುದು ಕಷ್ಟ.. ಮತ್ತು ಸಾಧ್ಯವೂ ಇಲ್ಲ.. ಆದರೆ.. ಅದೇನೋ ಈತನ ಒಳ್ಳೆಯ ತನವೋ.. ಕರುಣೆಯೂ, ಅನುಕಂಪವೋ.. ಅಥವ ತಾನೂ ಇದೆ ರೀತಿ ಹಾದಿಯನ್ನು ತುಳಿದಿದ್ದು ನೆನಪಿಗೆ ಬಂತೋ.. ಒಟ್ಟಿನಲ್ಲಿ .. ಸರಿ.. ಇವತ್ತೊಂದು ಪುಟ್ಟ ಡೀಲ್ ಇದೆ.. ಅದನ್ನು ಮುಗಿಸಿ.. ಹೊರಟು ಬಿಡು.. ಮತ್ತೆ ನಿನ್ನ ಮುಖ ನನಗೆ ತೋರಿಸಬೇಡ.. ಶುಭವಾಗಲಿ ಅಂತ ಫೋನ್ ಇಟ್ಟಿದ್ದಾನೆ..
ಇದೆ ಖುಷಿಯಲ್ಲಿ, ತನ್ನ ಬಾಸ್ ತನ್ನನ್ನು ಬಿಡುಗಡೆ ಮಾಡಿದ ಎಂಬ ಖುಷಿಯಲ್ಲಿ, ಬಾಡಿಗೆ ಸ್ಕೂಟರ್ ತೆಗೆದುಕೊಂಡು.. ತನ್ನ ಗೆಳತಿಯ ಮನೆಗೆ ಹೊರಟ.. ಮೆಲ್ಲಗೆ ಮಳೆ ಶುರುವಾಗಿತ್ತು.. ಆದರೆ ಮುಂದಿನ ಸುಂದರ ಬದುಕು ನೆನೆಸಿಕೊಂಡು ಹೋಗುತ್ತಿದ್ದ ಅವನಿಗೆ.. ಮಳೆ ಕಾಡಿರಲಿಲ್ಲ.. ಇನ್ನೇನೂ ಆವನು ಮತ್ತು ಗೆಳತಿ ಸೇರುವ ಜಾಗ ಬರುವಹೊತ್ತಾಗಿತ್ತು .. ಅಷ್ಟರಲ್ಲಿ ಹಿಂದೆ ಒಂದು ಡೀಲ್ ನಲ್ಲಿ ಪುಟ್ಟ ಜಗಳವಾಗಿದ್ದ ಒಬ್ಬ ಅವನಿಗೆ ಅಡ್ಡ ಬಂದ...
ಸಾಮಾನ್ಯ.. ಮಾಮೂಲಿ ದಿನವಾಗಿದ್ದರೆ ಅಲ್ಲೊಂದು ಹೊಡೆದಾಟ ನೆಡೆಯಬೇಕಿತ್ತು.. ಆದರೆ.. ಗ್ಯಾಂಗ್ ಬಿಟ್ಟು ಹೋಗುವ ಹಾದಿಯಲ್ಲಿದ್ದ ಈತನಿಗೆ.. ಯಾವುದು ಬೇಡವಾಗಿತ್ತು.. ಏನ್ಲಾ ಮಗ ಹೇಗಿದ್ದೀಯೋ ಅಂತ ಆರಾಮಾಗೆ ಮಾತಾಡಿಸಿದ.. ಆದರೆ ಆ ಕಡೆ ವ್ಯಕ್ತಿ.. ಅದು ತನಗೆ ಬೇಡದ ವಿಷಯ ಎನ್ನುವಂತೆ.. ಸೀದಾ ಹೊಡೆದಾಟಕ್ಕೆ ಇಳಿದ.. ಇಬ್ಬರಿಗೂ ಒಂದಷ್ಟು ಹೊತ್ತು ಹೊಡೆದಾಟವಾಯಿತು.. ಆ ಹುಡುಗ.. ಈತನ ಬ್ಯಾಗ್ ಕಿತ್ತುಕೊಂಡು.. ಅದರೊಳಗೆ ಇದ್ದ ವಸ್ತುವನ್ನು ಹುಡುಕತೊಡಗಿದ.. ತನಗೆ ಬೇಕಾದ್ದು ಏನೂ ಸಿಗಲಿಲ್ಲ.. ಆದರೆ ಬ್ಯಾಗ್ ಗಮನ ಸೆಳೆಯಿತು.. ಬ್ಯಾಗ್ ಮಾತ್ರ ಸಾಕು ಅಂತ.. ಅದರೊಳಗಿದ್ದ ವಸ್ತುಗಳೆನ್ನೆಲ್ಲ ಕೆಳಗೆ ಬಿಸಾಕಿ.. ತನ್ನ ಜೋಬಿನಲ್ಲಿದ್ದ ಕೆಲವು, ಕಾರ್ಡುಗಳು, ತನ್ನ ಗೆಳೆತಿಯ ಅಲಂಕಾರಿಕ ಸಾಮಗ್ರಿಗಳನ್ನು ಹಾಕಿ.. ಓಡಿ ಹೋಗೋಕೆ ಹೊರಟ.. ಮೊದಲೇ ಬ್ಯಾಗ್ ಕದ್ದಿದ್ದ ಹುಡುಗ.. ಆ ಬ್ಯಾಗ್ ತನಗೆ ಬೇಕು ಎಂದು.. ಅವನ ಹಿಂದೆ ಓಡಿಸಿಕೊಂಡು ಹೋದ.. ಅಲ್ಲೇ ಹತ್ತಿರದಲ್ಲಿಯೇ ಸಾಲು ಸಾಲು ಮರಗಳ ರಸ್ತೆ.. ಅಕ್ಕ ಪಕ್ಕ ಹುಲ್ಲು ಬೆಳೆದು ಈ ಕಡೆ ಪಾರ್ಕ್ ಅಲ್ಲ.. ಆ ಕಡೆ ರಸ್ತೆಯಲ್ಲ ಎನ್ನುವ ಹಾಗೆ ಇತ್ತು.. ಇಬ್ಬರಿಗೂ ಮತ್ತೆ ಒಂದಷ್ಟು ಹೊಡೆದಾಟವಾದ ಮೇಲೆ.. ಅವರಿಬ್ಬರ ಒಬ್ಬರ ಮೇಲೆ ಒಬ್ಬರ ಸಿಟ್ಟಿಗಿಂತ ಆ ಬ್ಯಾಗಿನ ಮೇಲೆ ಪ್ರೀತಿಯಾಗಿ ಅದನ್ನು ಜಗ್ಗಾಡ ತೊಡಗಿದರು. ಆ ಬರದಲ್ಲಿ ಮೊದಲು ಬ್ಯಾಗ್ ಕದ್ದವ ಕಲ್ಲನ್ನು ಎಡವಿ ಬಿದ್ದೆ ಬಿಟ್ಟ.. ಅವನ ತಲೆ ಅಲ್ಲಿದ್ದ ಒಂದು ಕಲ್ಲಿಗೆ ಬಲವಾಗಿಯೇ ಬಡಿದ ಕಾರಣ ಪ್ರಜ್ಞೆ ತಪ್ಪಿ ಬಿದ್ದ... ಮೆಲ್ಲನೆ ಮಳೆ ಸುರಿಯುತಿತ್ತು.. ಆ ಸಮಯದಲ್ಲಿ ಒಂದು ಪೊಲೀಸ್ ಜೀಪ್ ಹೋಗಿದ್ದರಿಂದ.. ಗಾಬರಿಯಾಗಿ ಇನ್ನೊಬ್ಬಾತ ಓಡಿ ಹೋಗಿದ್ದ
ಈ ರೀತಿಯ ಹೊಡೆದಾಟದಲ್ಲಿ ಈ ರೀತಿಯ ದೃಶ್ಯಗಳು ಮಾಮೂಲಿಯಾಗಿದ್ದರೂ ಇನ್ನೊಬ್ಬನಿಗೆ ಯಾಕೋ ಗಾಬರಿಯಾಗಿ ಓಡಿ ಹೋದ.. .. ಪ್ರಜ್ಞೆ ತಪ್ಪಿ ಬಿದ್ದವನನ್ನು ಆಸ್ಪತ್ರೆಗೆ ಸೇರಿಸಿದ್ದರಂತೆ.. ಆದರೆ ಆತನಿಗೆ ಜ್ಞಾಪಕ ಶಕ್ತಿ ಹೋಗಿದ್ದರಿಂದ.. ಈ ಕೇಸು ಫೈಲಿನಲ್ಲಿಯೇ ಕೊಳೆಯುತಿತ್ತು.. ಇವತ್ತು ಮತ್ತೆ ಫೈಲ್ ಹಿಡಿದು ನೋಡೋಕೆ ಶುರು ಮಾಡಿದೆ.. ಎಲ್ಲವೂ ಹೊರಗೆ ಬಂತು.. ಈ ಕೇಸು ಖುಲಾಸೆ ಆಯ್ತು..
ಮೀನಾ ಮೇಡಂ.. ಬ್ಯಾಗ್ ನಿಮ್ಮದೇ.. ಆದರೆ ಬ್ಯಾಗಿನೊಳಗೆ ಇದ್ದ ಸಾಮಗ್ರಿಗಳು, ಡೆಬಿಟ್ ಕಾರ್ಡ್, ಎಲ್ಲವನ್ನು ನಾನು ಪರೀಕ್ಷೆ ಮಾಡಿಸಿದ್ದೆ ಆದರೆ.. ಈ ಕೊರೊನಾ ತಲೆ ಬಿಸಿ.. ಎಲ್ಲವನ್ನು ನನ್ನ ತಲೆಯಿಂದ ಮೇರ್ ಮಾಡಿತ್ತು.. ಇವತ್ತು ಬೆಳಗಿನ ವಾಟ್ಸಾಪ್ ಸಂದೇಶ ಮತ್ತೆ ನನ್ನ ತಲೆಗೆ ಚುರುಕು ಮುಟ್ಟಿಸಿತು.. ಹಾಗಾಗಿ ಇನ್ನು ನಿಮಗೆ ತೊಂದರೆ ಇಲ್ಲ.. ನಿಮಗೆ ಬಿಡುವಾದಾಗ.. ಬ್ಯಾಗ್ ತೆಗೆದುಕೊಂಡು ಒಂದು ಪಾತ್ರ ಬರೆದು ಕೊಡಿ.. ಈ ಬ್ಯಾಗ್ ನನ್ನದೇ ಅಂತ.. ನಾನು ಈ ಕೇಸ್ ಕ್ಲೋಸ್ ಮಾಡ್ತೀನಿ..
ಮೀನಾ "ತುಂಬಾ ಸಂತೋಷ ಆಯ್ತು ಸರ್.. ಅಂದ ಹಾಗೆ ನನ್ನ ಬ್ಯಾಗ್ ಕದ್ದವ ಹೇಗಿದ್ದಾನೆ.. ಅವನ ಜೊತೆ ಜಗಳವಾಡಿದವನ ಕತೆ ಏನು"
"ಮೇಡಂ.. ಬ್ಯಾಗ್ ಕದ್ದವನಿಗೆ ಜ್ಞಾಪಕ ಬಂದಿಲ್ಲ.. ಒಂದು ಹಾಸ್ಟೆಲ್ ನಲ್ಲಿ ಬಿಟ್ಟಿದ್ದೀನಿ.. ಅವನನ್ನು ಊರಿಗೆ ತಲುಪಿಸುವ ಕೆಲಸ ಮಾಡುತ್ತೇನೆ.. ಅವನ ಅಪ್ಪ ಅಮ್ಮನಿಗೆ ವಿಷಯ ಹೇಳಿದ್ದೀನಿ.. ವರ್ಷಕ್ಕೆ ಒಂದೆರಡು ಬಾರಿ ಹೋಗುತ್ತಿದ್ದರಿಂದ.. ಅವರೂ ಇವನ ಬಗ್ಗೆ ಅಷ್ಟು ತಲೆ ಕೆಡಿಸಿಕೊಂಡಿರಲಿಲ್ಲ.. ಇನ್ನೂ ಜಗಳವಾಡಿದ ಹುಡುಗನ ಗೆಳತಿಯನ್ನು ಹುಡುಕಿ ಆಕೆಗೆ ಪರ್ಸನಲ್ಲಿದ್ದ ಎಲ್ಲಾ ಸಾಮಗ್ರಿಗಳನ್ನು ಕೊಡುವ ವ್ಯವಸ್ಥೆ ಮಾಡಿದ್ದೇನೆ.. ಆಕೆಯ ಗೆಳೆಯ.. ಊರಿಗೆ ಹೋಗಿದ್ದಾನೆ.. ಮತ್ತೆ ಈ ಹೊಡೆದಾಟ ಬಡಿದಾಟ ಎಲ್ಲಾ ಬಿಟ್ಟಿದ್ದಾನೆ ಅಂತ ಕೇಳಿ ಪಟ್ಟೆ.. ಹೇಗೋ ಎಲ್ಲವೂ ಸುಖಾಂತ್ಯವಾದರೆ ಸಾಕು.. "
"ಸರ್... ಕೇಕು ಕಟ್ ಮಾಡ್ತೀನಿ ಬನ್ನಿ" ರೂಪ ಅವರ ಧ್ವನಿ ಕೇಳಿ ಇತ್ತ ತಿರುಗಿದ ಇನ್ಸ್ಪೆಕ್ಟರ್..
ಕಾನ್ಸ್ಟೇಬಲ್ತಾ ಶರಣಪ್ಪನಿಗೆ ಕಣ್ಣು ಸನ್ನೆ ಮಾಡಿ ತಾನು ತಂದಿದ್ದ ಕೇಕು ತರುವಂತೆ ಹೇಳಿದ ..
ಎರಡು ಕೇಕು..
ಎಲ್ಲರೂ ಸಂಭ್ರಮದಿಂದ ರೂಪ ಸತೀಶ್ ಅವರ ಜನುಮದಿನವನ್ನು ಆಚರಿಸಿದರು..
ಎಂಬಲ್ಲಿಗೆ ಈ ಕಥಾ ಪ್ರಸಂಗ ಮಂಗಳಮಯವಾಯಿತು..!
DFR ಜನುಮದಿನದ ಶುಭಾಶಯಗಳು!
❤❤
ReplyDeleteSri 🥰 heegoo wish maadboda... Gotte iralilla... Ha ha... Sequel ishta aaytthu tumba. Heartfelt thanks for your lovely wishes 🎉... Will cherish this write up Forever.
ReplyDeleteWah. . Anthu meena purse kathege ondhu kone sigthu.. 😁😁😁
ReplyDelete