ಮನುಷ್ಯನ ಗುರಿ ಸದಾ ಕಣ್ಣ ಮುಂದೆಯೇ ಇರುತ್ತದೆ...
ಒಬ್ಬರಿಗೊಬ್ಬರು ಜೊತೆ ನಿಂತಾಗ..ಪ್ರಪಂಚವನ್ನೇ ಅಲುಗಾಡಿಸಬಹುದು ಇದು ಒಂದು ಆಡು ಮಾತು..
ಸ್ನೇಹ ಎನ್ನುವ ವಿಷಯ ಬಂದಾಗ ಅಲ್ಲಿ ಮಿಕ್ಕಿದೆಲ್ಲವು ಗೌಣ...
ಅಸಮಾನತೆ, ಮೇಲು, ಕೀಳು ಎನ್ನುವ ಭಾವ, ಭಾವನೆ ಯಾವುದು ಇರುವುದಿಲ್ಲ..
ಒಬ್ಬರ ಸಂತಸದಲ್ಲಿ, ದುಃಖದಲ್ಲಿ ಜೊತೆ ನಿಲ್ಲುವುದು ಗೆಳೆತನ..
ಒಬ್ಬ ಸಹಾಯ ಮಾಡಿದ್ದ ಅದಕ್ಕೆ ನಾನು ಸಹಾಯ ಮಾಡಬೇಕು ಅನ್ನುವ ಬದಲು..ನೀನು ಕುಳಿತಾಗ ನಾನು ನಿಲ್ಲುವೆ..ನೀನು ನಿಂತಾಗ ನಾನು ಕುಳಿತುಕೊಳ್ಳುವೆ ಇದು ಗೆಳೆತನ ಸೂಸುವ ಭಾವ...
ಶ್ರೀ ರಾಮಚಂದ್ರನು ವಾನರ ಸೇನೆಯ ಜೊತೆ ಇಡಿ ಲಂಕವನ್ನು ಹಾಗು ಸೀತೆಮಾತೆಯನ್ನ ರಾವಣನ ಹಿಡಿತದಿಂದ ಬಿಡಿಸಿ ಸಮುದ್ರ ದಾಟಿ ಬಂದಾಗ..ಸಾಗರದ ತಡಿಯಲ್ಲಿ ಒಂದು ಪುಟ್ಟ ಅಳಿಲು ಅಳುತ್ತ ಕುಳಿತಿತ್ತು....
ಶ್ರೀರಾಮಚಂದ್ರನು ಅದನ್ನ ನೋಡಿ ಯಾಕೆ ಅಳುತಿರುವೆ..ಎಂದು ಕೇಳಿದಾಗ...
ಅಳಿಲು ಹೇಳಿತು..
"ಹನುಮಂತ ಸಾಗರ ದಾಟಿ ಸೀತಾ ಮಾತೆಯನ್ನು ನೋಡಿ ಬಂದ."
ಜಾಂಬುವಂತ ಇಡಿ ಯುದ್ದದ ತಯಾರಿ ಹಾಗು ಅದಕ್ಕೆ ಸಿದ್ದತೆ ಮಾಡಿ ಗೆಲುವನ್ನ ಸಾಧಿಸಲು ಶ್ರಮಿಸಿದ"
ಅಂಗದ ರಾವಣ ಆಸ್ಥಾನಕ್ಕೆ ಹೋಗಿ ಬಂದ..
ನೀಲ ಸಾಗರದ ಮೇಲೆ ಸೇತುವೆ ಕಟ್ಟಲು ಸಹಾಯ ಮಾಡಿದ...
ಆದ್ರೆ ನಾನು ಏನು ಮಾಡಲು ಆಗಲಿಲ್ಲ..ನನ್ನ ಹತ್ತಿರ ಸಹಾಯ ಮಾಡುವ ಮನಸಿತ್ತು..ಆದ್ರೆ ಶಕ್ತಿ ಇರಲಿಲ್ಲ..ಅದಕ್ಕೆ ಬೇಸರವಾಗಿದೆ..ಇಲ್ಲಿರುವ ಕೆಲವು ಬಂಡೆಗಳು ಮಾತಾಡುತ್ತ ಇದ್ದವು..ನಾವು ಸೇತುವೆಯಾಗಿ ಶ್ರೀ ರಾಮಚಂದ್ರನಿಗೆ ಸಹಾಯಮಾಡಿದೆವು, ಮರಳು ಕೂಡ ಬಂಡೆಯ ಮಧ್ಯೆ ಸೇರಿಕೊಂಡು ಗಟ್ಟಿ ಮಾಡಿದವು...ಈ ಚಿಕ್ಕ ಅಳಿಲು ಏನು ಮಾಡಿಲ್ಲ.ಶ್ರೀರಾಮಚಂದ್ರನಿಂದ ಅನೇಕ ಬಾರಿ ಸಹಾಯ ಪಡೆಯಿತು..ಆದ್ರೆ ಪ್ರತಿಯಾಗಿ ಏನು ಸಹಾಯ ಮಾಡಲಿಲ್ಲ..ಅಂತ
ಆಗ ಶ್ರೀ ರಾಮಚಂದ್ರ ಹೇಳುತ್ತಾನೆ.."ಅಳಿಲೆ..ಪ್ರಪಂಚದಲ್ಲಿ ಸಹಾಯ ಮಾಡಬೇಕು ಎನ್ನುವ ಮನಸು ಬೇಕು..ಅದಕ್ಕೆ ನೀನು, ನಿನ್ನ ಗೆಳೆಯರಾದ ಬಂಡೆ, ಮರಳು, ನಮ್ಮ ವಾನರ ಸೇನೆಯೇ ಸಾಕ್ಷಿ...ಅವರ ಮಾತು ನಿಜ..ಆದ್ರೆ..ನೀನು ನಿನ್ನ ಶ್ರಮದಾನ ಮದುತಿದ್ದೀಯ..ಅವರ ಜೊತೆ ಸುಖದಲ್ಲೇ ಆಗಲಿ, ಕಷ್ಟದಲ್ಲೇ ಆಗಲಿ ಸದಾ ಇರುತ್ತೀಯ..ಇದಕ್ಕಿಂತ ಇನ್ನೇನು ಬೇಕು..ನಾನು ನಿನ್ನ ಜೊತೆ ಇದ್ದೀನಿ ಅನ್ನುವ ಭಾವ ಎಲ್ಲ ಸಂಪತ್ತು, ಸಹಾಯಕ್ಕಿಂತಲೂ ಮೇಲೆ ಇರುತ್ತದೆ...ಸಂಪತ್ತು ನೀರಲ್ಲಿ ಮರಳಿನ ಹಾಗೆ ಕರಗಿ ಹೋಗುತ್ತದೆ...ಆದ್ರೆ ಅದನ್ನು ಮತ್ತೆ ಮತ್ತೆ ಮರಳಿ ಹೊತ್ತು ತರುವ ಅಲೆಗಳ ಹಾಗೆ ಶ್ರಮದಾನ ಹಾಗು ಭಾವ...ಅದಕ್ಕಾಗಿ ಪ್ರಪಂಚದಲ್ಲಿ ಅಳಿಲು ಸೇವೆ ಅನ್ನುವ ಪದವಿದೆ...ನಿನ್ನ ಚಿಂತೆ ಬಿಡು..ನನ್ನ ಅಭಯ ಯಾವಾಗಲು ನಿನ್ನ ಮೇಲೆ ಇರುತ್ತದೆ..ಗೆಳೆತನವನ್ನು ರಕ್ಷಿಸುವ ಹೊಣೆ ಹೊತ್ತು ನೆದೆಯುತ್ತಿದೀಯ..ಅದೇ ದೊಡ್ಡ ಸಹಾಯ ನಿನ್ನಿಂದ"
"ಈ ಮೇಲಿನ ಮಾತುಗಳು ಗೆಳೆತನದ ಆಳವನ್ನು ತೋರಿಸುತ್ತದೆ.."
ಪ್ರಪಂಚದಲ್ಲಿ ನಿರ್ಮಲವಾದ ಗೆಳೆತನ ನಮಗೆ ದೊರಕಿಸಿಕೊಟ್ಟ ಆ ಭಗವಂತನು..ಇಂದು ವೆಂಕಿ ಹಾಗು ಅವನ ಮಾತಾ ಪಿತೃಗಳ ಕನಸಾದ ಒಂದು ಗೃಹ ನಿರ್ಮಾಣವನ್ನ ಮಾಡಿ..ಅದಕ್ಕೆ ಗೃಹ ಪ್ರವೇಶ ನಡೆಯಿತು..ಎಂತಹ ಒಂದು ಸುಂದರ ಕನಸು ನನಸಾದ ದಿನ..ಅವನ ಅಮ್ಮನಿಗೆ ಸಂತಸ ತಡೆಯಲಾರದಷ್ಟು ತುಂಬಿ ತುಳುಕುತ್ತಿತ್ತು..ಅವರು ನಮ್ಮನ್ನೆಲ್ಲ ನೋಡಿ..ಬಹಳ ಖುಷಿ ಪಟ್ಟರು..ಎಲ್ಲಿ ನಿರ್ಮಲ ಭಾವ ಇರುತ್ತದೆಯು..ಅಲ್ಲಿ ನಿರ್ಮಲ ಮನಸು ಇರುತ್ತದೆ..ಎನುವುದಕ್ಕೆ ಅವನ ಅಮ್ಮನೇ ಸಾಕ್ಷಿ..
ಅವನ ಗೆಳೆಯರು ಒಂದು ಸುಂದರವಾದ ಅಕ್ಷರಗಳನ್ನ ಜೋಡಿಸಿ ಸವಿ ನೆನಪಿಗಾಗಿ ಮಾಡಿಸಿದ ಚಂದದ ಚಿತ್ರ ಗೆಳೆತನದ ಮಹತ್ವ ಸಾರುತ್ತದೆ..
ಕೆಲವು ಮೆಲುಕು ಹಾಕುವ ಪಲುಕುಗಳು..ಕೆಳಕಂಡ ಚಿತ್ರಗಳಲ್ಲಿ..
ಕೆಲವು ಮೆಲುಕು ಹಾಕುವ ಪಲುಕುಗಳು..ಕೆಳಕಂಡ ಚಿತ್ರಗಳಲ್ಲಿ..
ಓಹ್ ದೇವರೇ ಈ ಗೆಳೆತನದ ಸವಿ ಸದಾ ಹೀಗೆಯೇ ಮೇಲು, ಕೀಳು ಎನ್ನದೆ, ಭಾವ, ಅಂತಹಕರಣ, ಪ್ರತಿಭಾಶಾಲಿಗಳಾದ ಕಲಿಯುಗದ ಪಾಂಡವರಿಗೆ ಉಣಬಡಿಸುತ್ತ ಇರಲಿ ಎಂದು ಪ್ರಾರ್ಥಿಸುತ್ತೇನೆ..!!!!
No comments:
Post a Comment