Monday, September 17, 2012

ಬ್ಲಾಗ್ ಲೋಕದ ಮೂರು ತಾರೆಗಳ ಜೊತೆಯಲ್ಲಿ - 16.09.2012


"ತುಲಾ ಮಾಸೇತು ಕಾವೇರಿ
ಸರ್ವಾತೀರ್ಥಾಶ್ರಿತಾ  ನದಿ
ಪಂಚ ಪಾತಕ ಸಂಹರ್ತ್ರಿ ವಾಜಿನೇದ ಫಲಪ್ರದ
ಭಕ್ತಾನುಕಂಪೇ ಮುನಿಭಾಗ್ಯ  ಲಕ್ಷ್ಮಿ
ನಿತ್ಯೆ  ಜಗನ್ಮಂಗಳದಾನ  ಶೀಲೇ
ನಿರಂಜನೆ  ದಕ್ಷಿಣದೇಶ  ಗಂಗೆ
ಕಾವೇರಿ ಕಾವೇರಿ ಮಮ ಪ್ರಸೀದ "

ಎರಡನೇ ಸಲ...ಮೂರನೆಸಲ..ಇದೇ  ಶ್ಲೋಕ...ಕಣ್ಣು ಬಿಟ್ಟೆ...

ನನ್ನ ಜಂಗಮ ಘಂಟೆ (ಮೊಬೈಲ್) ಈ ಶ್ಲೋಕವನ್ನು ಅರುಹುತಿತ್ತು..(ಶರಪಂಜರ ಚಿತ್ರದ ಕೊಡಗಿನ ಕಾವೇರಿ ಹಾಡಲ್ಲಿ ಬರುವ ಶ್ಲೋಕ)..

ಕಣ್ಣು ಬಿಟ್ಟೆ ನನ್ನ ಅಕ್ಕನ ಕರೆ "ಇರು ವಿಜಯ ಮಾತಾಡ್ತಾನಂತೆ"
"ಕಾರ್ಯಕ್ರಮ ಬದಲಾವಣೆ..ಮೈಸೂರಿಗೆ ಹೋಗೋಣ..ಒಂದು ತುರ್ತು ಕೆಲಸ ಇದೆ"
ಇಲ್ಲ ಅನ್ನುವ ಮಾತೆ ಬರೋಲ್ಲ .."ಸರಿ" ಅಂದೇ..

ಮನಸು ಹಿಂದಿನ ದಿನದ ರಾತ್ರಿಗೆ ಓಡಿತು..
"ಅಣ್ಣಯ್ಯ ನಾಳೆ ನಿಮ್ಮ ಸಂಸ್ಥಾನಕ್ಕೆ ಬರುತಿದ್ದೇನೆ..ಸಿಗ್ತೀರ?" ಸುಲತಾ ಅವರ ಸಂದೇಶ ಬಂದಿದ್ಡ್ತುಫೇಸ್ ಬುಕ್ಕಿನಲ್ಲಿ..
"ಹಾ ಇರ್ತೇನೆ ತಂಗ್ಯವ್ವ..ನೀವು ನಿಮ್ಮ ಕೆಲಸ ಎಲ್ಲ ಮುಗಿದ ಮೇಲೆ ಕರೆಮಾಡಿ ಸಿಗುತ್ತೇನೆ" ಎಂದಿದ್ದೆ

ಕಾರು ಮೈಸೂರು ರಸ್ತೆಯಲ್ಲಿ ಆರಾಮಾಗಿ ಚಲಿಸುತ್ತಿತ್ತು..ಮದ್ದೂರ್ ಹತ್ತಿರ ನಿಂತಾಗ..ಬಾಲು ಸರ್ ಗೆ ಕರೆ ಮಾಡಿದೆ..
"ಹೇಳಿ ಶ್ರೀಕಾಂತ್ ಸರ್.." ಬಾಲು ಸರ್ ಅವರ ಸುಲಲಿತ ಮಧುರ ನುಡಿ ಆ ಕಡೆಯಿಂದ ಬಂತು
"ಸರ್ ಮೈಸೂರಿಗೆ ಬರ್ತಾ ಇದ್ದೇನೆ..ಅಣ್ಣನಿಗೆ ಅವನ client office ನಲ್ಲಿ ಒಂದೆರಡು ಘಂಟೆಗಳ ಒಂದು ತುರ್ತು ಕಾರ್ಯ ಇದೆ ..ಅದು ಮುಗಿದ ಮೇಲೆ ನೀವು ಸಿಗುವ ಹಾಗಿದ್ದರೆ ಒಮ್ಮೆ ದರ್ಶನ ಮಾಡುತ್ತೇನೆ.."
"ಓಹ್  ಖಂಡಿತ ಬನ್ನಿ ಸರ್..ಇರ್ತೇನೆ.."

ಹಾಗೆಯೇ ಸುಲತಾ, ಮತ್ತು ಜ್ಯೋತಿ ಇಬ್ಬರಿಗೂ ಸಂದೇಶ ಕಲಿಸಿದೆ.."ತುರ್ತು ಕೆಲಸದ ಮೇಲೆ ಮೈಸೂರಿಗೆ  ಹೋಗುತ್ತಿದ್ದೇನೆ ಸಂಜೆಯ ಹೊತ್ತಿಗೆ ಬರುತ್ತೇನೆ..ಇರುವುದಾದರೆ ಸಿಗುತ್ತೇನೆ .."
ಮರು ಸಂದೇಶ ಬಂತು.."ನಿಮಗಾಗಿ ಕಾಯುತ್ತೇವೆ"
ಮನಸು ಬಾನಾಡಿಯಾ ಹಾಗೆ ಹಾರಿತು..ಇಂದು ಮೂರು ಜನ ಸನ್ಮಿತ್ರರು ಸಿಗುತ್ತಾರೆ...
ಬ್ರಹ್ಮನು ಕೂಡ ಬೆರಗಾಗಬೇಕು..ತಾನೇ ಸೃಷ್ಟಿಸಿದ ರಕ್ತ ಸಂಬಂಧಕ್ಕಿಂತ "ಬ್ಲಾಗ್ ಲೋಕದ ಸಂಬಂಧ" ದೊಡ್ಡದು  ಎಂದು..

ಮೈಸೂರಿನಲ್ಲಿ ಬಂದ ಕಾರ್ಯವಾದಮೇಲೆ ಮತ್ತೆ ಕರೆ ಮಾಡಿದೆ..ಬಾಲು  ಸರ್ ಮನೆಗೆ ಹೋಗಲು ಮಾರ್ಗದರ್ಶನವಾಯಿತು..

ಅವರ ಎಂದಿನ ನಗುಮೊಗದ ದರ್ಶನವಾಯಿತು..ಉಭಯ ಕುಶಲೋಪರಿ ಸಾಂಪ್ರತವಾದ ಮೇಲೆ..ಬಾದಾಮಿ ಹಾಲು, ಬಿಸ್ಕುಟ್ ಮಧ್ಯೆ ಮಾತಿನ ಲಹರಿ ಮುಂದುವರೆಯಿತು..
ಬ್ಲಾಗ್-ಮಂಡಲ ಛಾಯಾ ಚಿತ್ರಗಳಿಗೆ ಒಕ್ಕಣೆ ಹರಿದು ಬರುವ ಸ್ಥಳ..

ಬಾಲು ಸರ್ ಕುಟುಂಬ

ಜೊತೆಯಲ್ಲಿ ನಗುವಿನಲ್ಲೇ

ನನ್ನ ಅಣ್ಣ, ತಮ್ಮ ಇವರೆನ್ನಲ್ಲ ನೋಡಿ ಖುಷಿ ಪಟ್ಟರು..

ಹಾಗೆಯೇ ಬಾಲು ಸರ್ ಅವರ ನಗೆತುಂಬಿದ ಸಂಸಾರವನ್ನು ಪರಿಚಯಮಾಡಿಕೊಟ್ಟರು..
ಅರ್ಧಘಂಟೆ ಅರ್ಧನಿಮಿಷದ ಹಾಗೆ  ಸರಿಯಿತು..ಅವರಿಂದ ಅಪ್ಪಣೆಪಡೆದು ಹೊರಟೆವು..ಬೆಂಗಳೂರಿನ ಕಡೆಗೆ..

ಬೆಂಗಳೂರಿನಲ್ಲಿ ಗೂಡನ್ನು ಸೇರಿದ ತಕ್ಷಣ.. ಸುಲತಾ, ಮತ್ತು ಜ್ಯೋತಿ ಇಬ್ಬರಿಗೂ ಸಂದೇಶ ಕಲಿಸಿದೆ.."ಮರಳಿ ಗೂಡಿಗೆ"
ಉತ್ತರ ಬಂತು..."ನಾವು ತವರಿಗೆ ಬರ್ತೇವೆ"

ಸುಮಾರು ಏಳು ಗಂಟೆಗೆ ಜ್ಯೋತಿ ಕುಟುಂಬ ಹಾಗು ಸುಲತಾ ಬಂದರು...ಮಾತು ಕಡಿಮೆ..ನಗು ಜಾಸ್ತಿ...ಸುಮಾರು ಅರ್ಧ ಮುಕ್ಕಾಲು ಘಂಟೆ ಜ್ಯೋತಿಯ ಮಾತಿಗಿಂತ ವೇಗವಾಗಿ..ಸುಲತಾ ಅವರ ನಗುವಿಗಿಂತ ಮಧುರವಾಗಿ ಕಳೆಯಿತು..
ಜ್ಯೋತಿ ಮತ್ತು ಮಕ್ಕಳು, ಸುಲತಾ, ಮತ್ತು "ಶ್ರೀವಿತಲ್" 

50:50  ಇಬ್ಬರು ನಗೆ..ಇಬ್ಬರು ಪ್ರೇಕ್ಷಕರು..
ಅವರನ್ನು ಬೀಳ್ಕೊಟ್ಟು ಭಾನುವಾರಕ್ಕೆ ಪೂರ್ಣವಿರಾಮ ಹಾಕಿದ ಮೇಲೆ ಮನಸು ಜೇನಿನ ಗೂಡಾಗಿತ್ತು...

ಹೊರಗೆ ಬಂದು ಅಂಬರವನ್ನು ದಿಟ್ಟಿಸಿ ನೋಡಿದೆ..
ಇದು ಎಂಥಹ ಲೋಕವಯ್ಯ...
ಅಂದು ಅಮಾವಾಸ್ಯೆಯಾಗಿದ್ದರೂ...
ಬ್ಲಾಗ್ ಲೋಕದ ತಾರೆಗಳನ್ನ ನೋಡಿದ ಮೇಲೆ..
ಚಂದ್ರು ಇನ್ನೂ ಮಂಕಾಗಿ ಬಿಟ್ಟ
ನಕ್ಷತ್ರಗಳು ಕೂಡ ಮೋಡದ ಹಿಂದೆ ಸರಿದು...
ಭೂಮಿಯಿಂದ ಮರೆಯಾಗಿ ಬಿಟ್ಟವು..

10 comments:

  1. ಹ್ಮ್ಮ್ ... ಮೈಸೂರಿನ ಭೇಟಿಯ ಬಗೆಗೆ ನನ್ನ್ನದೇನು ತಕರಾರು ಇಲ್ಲ. ಆದರೆ ಸುಲತ ಮತ್ತು ಜ್ಯೋತಿ ಅಕ್ಕನಿಗೆ ನನ್ನ ಬಿಟ್ಟು ಹೋಗಿದ್ದಕ್ಕೆ ಕ್ಲಾಸ್ ತೆಗೆದುಕೊಳ್ಳಲೇ ಬೇಕಿದೆ ಅಣ್ಣಯ್ಯ...

    ReplyDelete
  2. ಹಹಹ ಬಾಲು ??? ಬೆಂಗಳೂರಲ್ಲಿ..??????? ಕ್ಷಣಕ್ಕೆ ನನಗೂ ಶಾಕೂ... ಆಮೇಲೆ ನೋಡ್ತೀನಿ...ಇದು ಶ್ರೀಮನ್ ಪಯಣ ಮೈಸೂರಿಗೆ ಆನಂತರ ಜ್ಯೋತಿ-ಸುಲತಾ ಜೋಡಿ ಹಿಂಗೇ...ಒಂದು ರೌಂಡ್ ಅಂತಾ..... ಚನ್ನಾಗಿದೆ... ಆದ್ರೂ ಜ್ಯೋತಿ-ಸುಲತಂಗೆ ಸಂಧ್ಯಾ ಕ್ಲಾಸು ನಾನು ನೋಡಬೇಕು...ಶ್ರೀಮನ್ ವ್ಯವಸ್ಥೆ ಮಾಡಿ ನೇರ ಪ್ರಸಾರಕ್ಕೆ, ಇಲ್ಲಾಂದ್ರೆ ಯೂ ಟ್ಯೂಬಿಗೆ ಹಾಕಿ.

    ReplyDelete
  3. ಸಂಧ್ಯಾ ನಾನು ನಿಮಗೆ ಹೇಳಿಯೇ ಹೊರಟ್ಟಿದ್ದು. ನಾನು ಮತ್ತೆ ಜ್ಯೋತಿ ಅಕ್ಕ ನಿಮಗೆ ಕ್ಲಾಸ್ ತಗೊಳೋ ಸಮಯ:)
    ಅಣ್ಣ ನಿಮಗೆ ಬೇಕಾದ್ರೆ ನಾವು ಸಂದ್ಯಾಗೆ ಕ್ಲಾಸ್ ತಗೊಳದ್ದನ್ನ ಯೂ ಟ್ಯೂಬಿಗೆ ಹಾಕಿ ಕಳಿಸುವೆ.

    ReplyDelete
  4. ಇಂತ ಭೇಟಿಗಳು ಮನಸ್ಸಿಗೆ ಪಫುಲ್ಲ ಗೊಳಿಸುತ್ತವೆ ಶ್ರೀಮ.

    ಬಾಲು ಅವರ ಕುಟುಂಬ ’ತುಂಬು’ ಸಂತಸದ ಕುಟುಂಬವೇ. ಅವರು ತಣ್ಣಗಿರಲಿ.

    ನಿಮ್ಮ ಮನೆಯಲ್ಲಿ ಭೇಟಿಯಾದ ಸುಲತಾ ಅವರ ಬಗ್ಗೆ ಒಂದು ಮಾತು.

    ನಿಮ್ಮ ಶೀರ್ಷಿಕೆ:
    "ಜ್ಯೋತಿ ಮತ್ತು ಮಕ್ಕಳು, ಸುಲತಾ, ಮತ್ತು "ಶ್ರೀವಿತಲ್" "

    ಅದಕ್ಕೆ ಈ ರೀತಿ ಬೇಗ ಬದಲಾವಣೆ ಬರಲಿ.
    ಜ್ಯೋತಿ ಮತ್ತು ಮಕ್ಕಳು, ಸುಲತಾ ಮತ್ತು ಮಕ್ಕಳು, ಮತ್ತು "ಶ್ರೀವಿತಲ್"
    ಎಂದು ಬೇಗ ಸಿದ್ಧಿಯಾಗಲಿ.

    ಫೋಟೋದಲ್ಲಿರುವ ಇನ್ನೆರಡು ’ಗೌರಮ್ಮ’ಗಳ ಪರಿಚಯ ನನಗಿಲ್ಲ.

    ReplyDelete
  5. ಶ್ರೀಕಾಂತು....

    ನಿಜ ಕಣ್ರೀ...

    ಈ ಬ್ಲಾಗ್ ಲೋಕದ ಸಂಬಂಧಗಳು ಎಷ್ಟು ಮಧುರ ಅಲ್ವಾ?

    ಅನುಭವಿಸಿದವರಿಗೇ ಗೊತ್ತು....

    ReplyDelete
  6. ಎಸ್. ಪಿ. ಖಂಡಿತ ಮತ್ತೊಮ್ಮೆ ಸೇರಿದಾಗ ಒಂದು ಒಳ್ಳೆಯ ಕ್ಲಾಸ್ ತೆಗೆದುಕೊಳ್ಳುವ..ನಿನ್ನ ಅನಿಸಿಕೆಗೆ ಧನ್ಯವಾದಗಳು...

    ReplyDelete
  7. ಆಜಾದ್ ಸರ್..ಹೆಣ್ಣು ಮಕ್ಕಳ ಕಾದಾಟದ ಕ್ಲಾಸ್ ನೋಡುವ ವ್ಯವಸ್ಥೆ ಮಾಡುವ...ಸುಂದರ ಪ್ರತಿಕ್ರಿಯೆ ಧನ್ಯವಾದಗಳು

    ReplyDelete
  8. ಎಸ್. ಎಸ್ ..ಸರಿ ಹಾಗಿದ್ರೆ..ಎಸ್. ಪಿ. ಗೆ ಕ್ಲಾಸ್ ತಗೊಂಡು ಅದನ್ನ ಹಾಕಿ ನೋಡಿ ಖುಷಿ ಪಡುವ..ಧನ್ಯವಾದಗಳು

    ReplyDelete
  9. ಬದರಿ ಸರ್..ಧನ್ಯವಾದಗಳು ನಿಮಗೆ..ಈ ರೀತಿಯ ಭೇಟಿಗಳು ಸಂತಸ ತರುತ್ತೆ ಮನಕ್ಕೆ..ಇನ್ನು ನಿಮ್ಮ ಹಾರೈಕೆ ಬೇಗ ಈಡೇರಲಿ ಎಂದು ನಾನು ಪ್ರಾರ್ಥಿಸುತ್ತೇನೆ.

    ReplyDelete
  10. ಪ್ರಕಾಶಣ್ಣ..ಯಾವುದು ನಿರೀಕ್ಷೆ ಇಲ್ಲದೆ, ನಿರ್ಮಲ ಸ್ನೇಹಕ್ಕೆ ಹಾತೊರೆಯುವ ಈ ಬ್ಲಾಗಿಗರ ಮಧುರ ಭಾಂದವ್ಯ ನಿಜಕ್ಕೂ ಚೆನ್ನ..ಧನ್ಯವಾದಗಳು ನಿಮಗೆ..

    ReplyDelete