ನಾ ಏನು ಬರೆಯಲಿ..ಹೇಗೆ ಶುಭಾಶಯಕೋರಲಿ..ಮನಸು ದ್ವಂದ್ವದ ಗೂಡಾಗಿತ್ತು..
ಗೆಳೆಯ (ಜೆ. ಎಂ) ಬಗ್ಗೆ ಬರೆಯಲು ಮನಸು ಕಾದಾಡುತಿತ್ತು..ಬರೆಯಲೇ ಬೇಡವೇ..ಯಾಕೆಂದರೆ ಈ ಗೆಳೆಯ ನಮ್ಮ ಗುಂಪಿಗೆ ಒಂದು ತರಹ ಚಮತ್ಕಾರ ಕೊಟ್ಟವನು..ಅವನ ಬಗ್ಗೆ ಬರೆಯಲು ಪುಟಗಳು ಸಾಲದು..ನಮ್ಮ ಗುಂಪಿನಲ್ಲಿ ಒಬ್ಬೊಬ್ಬರು ಕೂಡ ಹಾಗೆಯೇ..ವಿಸ್ಮಯವಾದ ಪ್ರತಿಭೆಗಳು...
...ಸರಿ ನಾನು ಯಾವತ್ತೂ ನನ್ನ ಮನಸಿಗೆ ಅನ್ನಿಸಿದ್ದನ್ನು ಮಾಡುವುದರಲ್ಲಿ ಕುಖ್ಯಾತಿ ಪಡೆದಿದ್ದೆ :-)
ಸುಧಾಮನಗರದಲ್ಲಿ ಜನಿಸಿದ ಈ ಜೀವದ ಗೆಳೆಯ..ನಂತರ ವಿಧ್ಯಾಪೀಠದ ಹತ್ತಿರ ಮನೆಮಾಡಿದಂದಿನಿಂದ ನಮಗೆ ಪರಿಚಿತ..ನಾನು ಅವನು ಏಳನೇ ತರಗತಿಯಿಂದ ಜೊತೆಯಲ್ಲೇ ಓದಿದೆವು..ನಂತರ ಎಂಟನೆ ತರಗತಿಗೆ ಶಶಿ, ವೆಂಕಿ ಜೊತೆಯಾದರು..ನಂತರ ಪಿ.ಯು.ಸಿ.ಯಿಂದ ಲೋಕಿ ಜೊತೆಯಾದ. ಇವರೆಲ್ಲರ ಸಂಗಡ ಕಳೆದ ಕ್ಷಣಗಳು ಅಮೋಘ..
ಈಗ ನಮ್ಮ ಕಥಾನಾಯಕ ಜೆ.ಎಂ ಬಗ್ಗೆ ಬರೆಯೋಣ ಅನ್ನಿಸಿತು..
"ಹೀರೋ ರೇಂಜರ್" ಇದು ಒಂದು ಹೀರೋ ಸೈಕಲ್ ನ ಒಂದು ಮಾಡೆಲ್ .ಇದನ್ನು ಬೆಂಗಳೊರಿನಲ್ಲಿ ಖರೀದಿ ಮಾಡಿದ ಮೊದಲಿಗರಲ್ಲಿ ಇವನು ಒಬ್ಬ (ಪ್ರಾಯಶಃ ಹತ್ತರೊಳಗೆ ಸ್ಥಾನ)..ಅಲ್ಲಿಂದ ಶುರುವಾಯಿತು..ಎಲ್ಲಿಗೆ ಹೋದರು ಸೈಕಲ್, ಏನೇ ಮಾಡಿದರು ಸೈಕಲ್ ಅನ್ನುವ ಹಾಗೆ ಆಯಿತು.
ಸುಮಾರು ೧೯೯೦ರ ಒಂದು ಮಳೆಗಾಲದ ರಾತ್ರಿ..ಗೆಳೆಯ ಶಶಿ ಮನೆ ಕೋರಮಂಗಲದಿಂದ ನಾನು ಮತ್ತು ಜೆ.ಎಂ ಇಬ್ಬರು ಸೈಕಲ್ ನಲ್ಲಿ ಬರುತ್ತಾ ಇದ್ದೆವು. ಸಣ್ಣಗೆ ಶುರುವಾದ ಮಳೆ..ನಂತರ ಜೋರಾಯಿತು..ಮೊದಲೇ ಸ್ವಲ್ಪ (ಹೆಚ್ಚೇ) ಕ್ರಾಕ್ ಮನೋಭಾವದ ಇಬ್ಬರೂ ಸೈಕಲ್ನಲ್ಲೆ ಮಳೆಯಲ್ಲೇ ಮನೆ ಸೇರೋದು ಅನ್ನುವ ಆಸೆಯಾಯಿತು. ಸರಿ ಸಮಾನ ಮನಸ್ಕರಾದ ನಾವು ಹೊರಟೆವು ಬರು ಬರುತ್ತಾ ಮಳೆ ಜೋರೇ ಆಯಿತು..ನಮ್ಮ ಒಳ ಉಡುಪು ಸೇರಿದಂತೆ ಎಲ್ಲವು ವದ್ದೆಮಯ..ನೀರು ಜಿನುಗುತ್ತಿತ್ತು ಅಡಿಯಿಂದ ಮುಡಿಯವರೆಗೆ!!
ಬಸವನಗುಡಿ ರಸ್ತೆಯಲ್ಲಿ ಒಂದು ಬೇಕರಿ ಹತ್ತಿರ ನಿಂತೆವು...ಮಳೆಯಿಂದ ರಕ್ಷಣೆಗಾಗಿ ಸುಮಾರು ದ್ವಿಚಕ್ರವಾಹನ ಸವಾರರು ಅಲ್ಲಿಯೇ ನಿಂತು ಬಿಸಿ ಕಾಫಿ, ಬಾದಾಮಿ ಹಾಲು, ಚಹಾ ಹೀರುತ್ತಾ , ಸಿಗರೆಟ್ ಎಳೆಯುತ್ತ ನಿಂತಿದ್ದರು ..ಜಾಗ ಮಾಡಿಕೊಂಡು ನಾವಿಬ್ಬರು ನುಗ್ಗಿದೆವು!
"ಏನ್ ಸರ್ ಏನ್ ಕೊಡಲಿ..ಬಿಸಿ ಬಾದಮಿ ಹಾಲು, ಕಾಫಿ, ಚಹಾ"
ಇಬ್ಬರೂ ಮುಖ ಮುಖ ನೋಡಿಕೊಂಡೆವು ..ಜೆ. ಎಂ ಸಣ್ಣದಾಗಿ ಮುಗುಳು ನಗೆ ಕೊಟ್ಟ
"ಸರ್ ಎರಡು chilled 7 UP ಕೊಡಿ"
ಬೇಕರಿಯವ ನಮ್ಮಿಬ್ಬರನ್ನು ಅಡಿಯಿಂದ ಮುಡಿಯತನಕ ನೋಡಿದ..ಏನನ್ನೋ ಗೊಣಗಿದ...ನಂತರ..ಸೆವೆನ್ ಅಪ್ ಕೊಟ್ಟ
ಜೆ. ಎಂ.ಅದನ್ನ ಒಮ್ಮೆ ಮುಟ್ಟಿ..
"ಸರ್ full chilled ಕೊಡಿ"
ಬೇಕರಿಯವನು ಚೆನ್ನಾಗಿ ಮನಸಲ್ಲೇ "ಎಲ್ಲೋ ಕ್ರಾಕ್ ಮುಂಡೇವು...ಈ ಚಳಿಯಲ್ಲಿ chilled Seven up ಅಂತೆ ಮಂಗ ಮುಂಡೇವು" ಅಂತ ಬಯ್ದುಕೊಂಡು ಕೊಟ್ಟ!!
ಇಬ್ಬರೂ ತಣ್ಣಗಿರುವ ಸೆವೆನ್ ಅಪ್ ಅನ್ನು ತೆಗೆದುಕೊಂಡೆವು...ಆ ಚಳಿಯಲ್ಲಿ ತುಂಬಾ ತಣ್ಣಗಿದ್ದದರಿಂದ ಅದನ್ನು ಹಿಡ್ಕೊಳೋಕೆ ಆಗ್ತಾ ಇರ್ಲಿಲ್ಲ..ಬೇಕರಿಯವನು ನಮ್ಮ ಕಡೆನೇ ನೋಡ್ತಾ ಇದ್ದಾ..ಮರ್ಯಾದೆ ಪ್ರಶ್ನೆ..ಕಷ್ಟ ಪಟ್ಟು ಆ ಚಳಿಯಲ್ಲೇ ನಡುಗಿ ನಡುಗಿ ಒಂದೊಂದೇ ಗುಟುಕು ಕುಡಿಯುತ್ತ...ಮುಗಿದರೆ ಸಾಕಪ್ಪ ಅಂತ ಕುಡಿದು ಮುಗಿಸಿದೆವು..
ಒಂದು ಅದ್ಭುತ ವಿಲಕ್ಷಣದ ಅನುಭವ ಅದು..ಕಾರಣ..ಅಂದುಕೊಂಡಿದನ್ನ ಮಾಡುವ ವಯಸ್ಸಿನ ಚಪಲತೆ ಅದು..
ಇದನ್ನ ಇವತ್ತಿಗೂ ಕೂಡ ನೆನೆದು ನೆನೆದು ಮನಸು..ಕಣ್ಣು ವದ್ದೆಯಾಗುವಷ್ಟು ನಗುತ್ತೇವೆ..
ಜೆ. ಎಂ ಸತೀಶ್ ಕುಮಾರ್ |
ಇಂತಹ ಒಂದು ಅದ್ಭುತ ನೆನಪಿಗೆ ಕಾರಣನಾದ ನಮ್ಮ ಗೆಳೆಯ ಜೆ. ಎಂ ಗೆ ಹುಟ್ಟು ಹಬ್ಬದ ಶುಭಾಶಯಗಳು!!!
ಹದಿ ಹರೆಯದ ನೆನಪುಗಳನ್ನು ನನ್ನ ಜೀವದ ನಲ್ಮೆಯ ಗೆಳೆಯ ಶ್ರೀ ಮೆಲುಕು ಹಾಕಿಸುವುದರಲ್ಲಿ ಪ್ರಸಿದ್ದಿಯಗಿದ್ದಾನೆ. ಹಾಗೆ ಬ್ಲಾಗ್ ಲೋಕದಲ್ಲಿ ತನ್ನದೇ ಆದ ಶೈಲಿಯಲ್ಲಿ ಒಂದು ಸುಂದರ ಚುಕ್ಕಿಯಗಿದ್ದಾನೆ. ಹೇಗೆ ಧನ್ಯವದಗಳನ್ನು ತೆಲಿಸಿವುದೋ ಕಾಣೆ. ಮನದಾಳದಿಂದ ಬರುತ್ತಿರುವ ಈ ಆಶಯಗಳು ಹೇಗೆ ತಲುಪುತ್ತಿರುವುದೋ ತಿಳಿಯದಾಗಿದೆ. ಧನ್ಯನಾದೆ ನಾನು ನಿನ್ನ ಗೆಳೆತನದಿಂದ ಶ್ರೀ ..
ReplyDeleteಇಂತ ಗೆಳೆಯರು ನಮಗೆ ಯಾವತ್ತೂ ಸ್ಪೂರ್ತಿ ಚಿಲುಮೆಗಳು.
ReplyDeleteಜೆ.ಎಂ. ಅವರಿಗೆ ನನ್ನ ಮತ್ತು ಶ್ರೀ.ಮ. ಅಭಿಮಾನಿಗಳ ಸಂಘದ ಪರವಾಗಿ ಶುಭಾಶಯಗಳು.
ಮಳೆಯಲ್ಲಿ ನೆನೆದು ತೋಪ್ಪೆಯಾಗಿದ್ದರೂ ಚಿಲ್ಡ್ ಸೆವೆನ್ ಅಪ್ ಕುಡಿದ ತುಂಟಾಟಿಕೆ ಮಜಾ ಕೊಟ್ಟಿತು, ಹೌದು ಹದಿವಯಸ್ಸಿನ ಇಂತಹ ತುಂಟಾಟಗಳು ಸ್ನೇಹದ ಬೆಸುಗೆಯನ್ನು ಮತ್ತಷ್ಟು ಬೆಸೆಯುತ್ತವೆ. ಒಳ್ಳೆಯ ಶುಭಾಶಯದ ಕೊಡುಗೆ ಕೊಟ್ಟಿದ್ದೀರಿ ನಿಮ್ಮ ಗೆಳೆಯ ಜೆ.m . ಅವರಿಗೆ. ನಮ್ಮ ಶುಭ ಕಾಮನೆಗಳೂ ಕೂಡ ಅವರಿಗೆ ಸಲ್ಲಲಿ. ಜೈ ಹೋ ಶ್ರೀಕಾಂತ್ ಸಾರ್.
ReplyDeleteಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
ಜೆ ಎಂ. ಇಂತಹ ಒಂದು ಅದ್ಭುತ ಸ್ನೇಹಲೋಕ ನನಗೆ ಸಿಕ್ಕಿದ್ದು ನನ್ನ ಪುಣ್ಯ...ನಿನ್ನ ಪ್ರಶಂಸೆಗೆ ನಾನು ಧನ್ಯ...
ReplyDeleteಬದರಿ ಸರ್ ನಿಮ್ಮ ಶುಭಾಶಯಗಳಿಗೆ ನನ್ನ ಸ್ನೇಹಿತ ಪರವಾಗಿ ನಿಮಗೆ ಧನ್ಯವಾದಗಳು..
ReplyDeleteಬಾಲೂ ಸರ್ ಬಾಲ್ಯದ ಆ ಹುಡುಗಾಟ..ಅದೇ ಮಜಾ ..ನನ್ನ ಸ್ನೇಹಿತ ಪರವಾಗಿ ನಿಮಗೆ ಧನ್ಯವಾದಗಳು..
ReplyDelete