Thursday, October 18, 2012

ವೆಂಕಿ ಸೌಮ್ಯ..ವಿವಾಹ ಸಂಭ್ರಮದ ಹತ್ತು ವರ್ಷ!!! - ಒಂದು ಪ್ರವಾಸದ ಕಥಾನಕ!

ನಮ್ಮ ಗ್ರೇಟ್ ಬಿ.ಓ.ಡಿ'ಸ್  ಸಂಘಕ್ಕೆ ಒಂದು ಚೈತನ್ಯದ ಚಿಲುಮೆ ನಮ್ಮ ವೆಂಕಿ..ನಾವು ಕೈಗೊಳ್ಳುವ ಪ್ರತಿ ಪ್ರವಾಸವೇ ಇರಲಿ, ಬೆಂಗಳೂರಿನಲ್ಲಿ ಹೊಡೆಯುವ ಸುತ್ತೆ ಇರಲಿ..ಅವನು ಇರಲೇ ಬೇಕಿತ್ತು. ಹೀಗೆ ಒಂದು ನೆನಪು ಸುಮಾರು 20 ವರ್ಷಗಳ ಹಿಂದಿನದು. ಸರಿಯಾಗಿ ಇಸವಿ ನೆನಪಿಲ್ಲ.ಆದ್ರೆ ನಾವೆಲ್ಲಾ ಕಾಲೇಜ್ನಲ್ಲಿ ಓದುತಿದ್ದ ಕಾಲ....

ಮತ್ತೆ ಕೋರಮಂಗಲದ ಹುಡುಗರು ಸದ್ದು ಮಾಡಿದರು..ಈ ಬಾರಿ ಮೈಸೂರಿನ ಕಡೆ ಹೋಗೋಣ ಅಂತ ನಿರ್ಧಾರವಾಯಿತು. ನಾನು, ಜೆ. ಎಂ. ಕೊರಮಂಗಲದಲ್ಲಿದ್ದ ಶಶಿ ಮನೆಗೆ ಹೋದೆವು..ವಾಹನ ಸಿದ್ಧವಾಗಿತ್ತು..ಹುಡುಗರೆಲ್ಲ ಜೋಶ್ ನಲ್ಲಿದ್ದರು..ನಮ್ಮ ಗುಂಪಿನಲ್ಲಿ ವೆಂಕಿ ಇಲ್ಲದ್ದು ಎಲ್ಲರಿಗು ಕೊರೆತೆ ಕಾಣುತಿತ್ತು..

ಎಲ್ಲರೂ "ವೆಂಕಿ ಎಲ್ಲಿ?"
"ವೆಂಕಿ ಬರೋಲ್ವಾ.?.".
"ವೆಂಕೀನ ಯಾಕೆ ಬಿಟ್ಟು ಬಂದ್ರಿ?"

ಹೀಗೆ ಪ್ರಶ್ನೆಗಳ ಸುರಿಮಳೆ ಸುರಿಯುತಿತ್ತು..

ನಾನು ಮತ್ತು ಜೆ. ಎಂ."ಶಶಿ..ನೋಡೋ ಆ ನನ್ಮಗ ಹೇಳದೆ ಕೇಳದೆ ರಾಮನಗರಕ್ಕೆ ಹೋಗಿದ್ದಾನೆ" ಅಂದೆವು

ನಮ್ಮ ಗುಂಪಿನಲ್ಲಿ ಶಶಿ ಒಂದು ತರಹ ಧರ್ಮರಾಯ ಇದ್ದ ಹಾಗೆ ಪ್ರತಿಯೊಂದು ಮಾತು ತೂಕ ಬದ್ಧವಾಗಿರುತಿತ್ತು..

"ಯೋಚನೆ ಬೇಡ....! ಹೇಗೂ ಮೈಸೂರು ರಸ್ತೆಯಲ್ಲೇ ಹೋಗುತ್ತಿದ್ದೇವೆ.ರಾಮನಗರದಲ್ಲಿನ ಅವನ ಮನೆಗೆ ಹೋಗಿ ಅವನನ್ನು ಕರೆದುಕೊಂಡು ಹೋಗೋಣ" ಅಂದ

ಎಲ್ಲರಿಗೂ ಸರಿ ಅನ್ನಿಸಿತು.ಆದ್ರೆ ಇದ್ದದ್ದು ಒಂದೇ ಭಯ.ವೆಂಕಿಯ ಅಪ್ಪನದು..!

ತುಂಬಾ ಸರಳ ಜೀವಿ ವೆಂಕಿಯ ಅಪ್ಪ..ಮಗನ ಏಳಿಗೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು..ಆ ರೀತಿಯಲ್ಲಿ ತಮ್ಮನ್ನು ಮರೆತು ಮಕ್ಕಳಿಗೆ ಸುಖ ಬಯಸಿದ್ದ ವ್ಯಕ್ತಿ  (ಸಾಮಾನ್ಯ ಎಲ್ಲ ತಂದೆ ತಾಯಿಗಳು ಈ ರೀತಿ ಇರುತ್ತಾರೆ ಅನ್ನುವುದು ಸರಳ ವಾಕ್ಯ) ..ಅವರದು ಒಂದು ರೀತಿ ಗಂಧ ತೇಯುವ ಹಾಗೆ..ತಾನು ಕರಗಿ ಮಕ್ಕಳಿಗೆ ಸುಗಂಧ ಪಸರಿಸಿದವರು - (ಅವರ ಬಗ್ಗೆ ನಮ್ಮ ಗೆಳೆತನದ ಪುಸ್ತಕದಲ್ಲಿ ಇನ್ನಷ್ಟು ಮಾಹಿತಿ ಬರೆಯುತ್ತೇನೆ)

ಸರಿ ಸುಮಾರು ಮಧ್ಯ ರಾತ್ರಿ ಒಂದೂವರೆ..ಅಥವಾ ಎರಡು ಘಂಟೆಯಾಗಿತ್ತು..ನಾನು, ಶಶಿ, ಜೆ.ಎಂ ಆ ಸರಿಹೊತ್ತಿನಲ್ಲಿ ವೆಂಕಿಯ ರಾಮನಗರದಲ್ಲಿನ ಮನೆಯನ್ನು ಬಡಿದೆವು...ಮೆಲ್ಲಗೆ ಬಾಗಿಲು ತೆರೆಯಿತು..ವೆಂಕಿಯ ಅಮ್ಮ ನಮ್ಮನ್ನೆಲ್ಲ ನೋಡಿ ಗಾಭರಿ .
"ಏನಪ್ಪಾ ಇಷ್ಟು ಹೊತ್ತಿನಲ್ಲಿ...!?"

ನಾನು "ಅಮ್ಮ..ನಾವೆಲ್ಲಾ ಮಡಿಕೇರಿಗೆ ಪ್ರವಾಸ ಹೋಗ್ತಾ ಇದ್ದೇವೆ.ವೆಂಕಿನ ಕರೆದುಕೊಂಡು ಹೋಗೋಣ ಅಂತ ಬಂದೆವು..ಅವನು ಬರೋಲ್ಲ ಅಂತ ಹೇಳಿ ರಾಮನಗರಕ್ಕೆ ಬಂದಿದ್ದ..ಅವನಿಲ್ಲದ ನಮಗೆ ಈ ಪ್ರವಾಸ ಮಜಾ ಇರೋಲ್ಲ.ದಯವಿಟ್ಟು ಕಳಿಸಿಕೊಡಿ"

"ಇಲ್ಲ ಮಗ..ರಾತ್ರಿ ಬಂದ....ಮಲಗಿದ್ದಾನೆ ಬೇಡ..ಮಗ..ನೀವೆಲ್ಲರೂ ಹೋಗಿ ಬನ್ನಿ..ಅವನು ಬೇಡ"

ಅಷ್ಟೊತ್ತಿಗೆ ಅವರಪ್ಪ ಎದ್ದರು "ಓಹ್ ಏನ್ ಸರ್ ಎಲ್ಲರು ಬಂದು ಬಿಟ್ಟಿದ್ದೀರ.ಏನು ಸಮಾಚಾರ?"

ನಾನು ಸ್ವಲ್ಪ ಧೈರ್ಯ ತಂದುಕೊಂಡು.."ಸರ್ ನಾವೆಲ್ಲಾ ಮಡಿಕೇರಿಗೆ ಹೋಗ್ತಾ ಇದ್ದೇವೆ..ಎಲ್ಲಾರಿಗೂ ವೆಂಕಿ ಬೇಕು...ದಯವಿಟ್ಟು ಕಳಿಸಿಕೊಡಿ."

ಅವರಪ್ಪ ಕೆಲ ನಿಮಿಷ ಸುಮ್ಮನ್ನಿದ್ದು ತನ್ನ ಮಗಳಿಗೆ "ತಾಯಿ ..ಮಗನನ್ನು ಎಬ್ಬಿಸು..ಅವನ "ಫ್ರೆಂಡ್ಸ್" ಬಂದ್ದಿದ್ದರೆ ಎಂದು ಹೇಳು"

ನಾವು ವೆಂಕಿಯ ಅಪ್ಪ, ಅಮ್ಮನಿಗೆ, ಅಕ್ಕ ತಂಗಿಗೆ ವಂದನೆಗಳನ್ನು ಹೇಳಿ ವೆಂಕಿಯ ಜೊತೆ ಹೊರಡಲು ಸಿದ್ಧವಾದೆವು..

ವೆಂಕಿಯ ಅಮ್ಮ ನಮ್ಮ ಬಳಿ  ಬಂದು "ಹುಷಾರು ಜೋಪಾನ ಹೋಗಿ ಬನ್ನಿ..ಮಗನನ್ನು ನೋಡಿಕೊಳ್ಳಿ "

ನಾನು "ಅಮ್ಮ ಏನು ಯೋಚನೆ ಮಾಡಬೇಡಿ ನಿಮ್ಮ ಮಗನ ಜವಾಭ್ದಾರಿ ನಂದು" (ಮಂಗನಂತೆ ಒಂದು ಹುಮ್ಮಸ್ಸಿನಲ್ಲಿ ಹೇಳಿದ್ದೆ - ನಾನೇನು ದೇವರೇ..ಇವತ್ತಿಗೂ ಆ ಘಟನೆ ನೆನೆದರೆ ನಗು ಬರುತ್ತೆ)

ಸರಿ ಎಲ್ಲರು ವಾಹನದೊಳಗೆ ಬಂದೆವು...ವೆಂಕಿ ಬಿಳಿ ಬಣ್ಣದ ಮೇಲೆ ಹೂವಿನ ಚಿತ್ರ ಇರುವ ಶರ್ಟ್, ಹಾಗು ಕಡು ನೀಲಿ ಬಣ್ಣದ ಜೀನ್ಸ್ ಹಾಕಿದ್ದ..ಅವನಿಗೆ ಸರಿಯಾಗಿ ಬಟ್ಟೆ ತೆಗೆದುಕೊಳ್ಳಲು ನಾವು ಸಮಯ ಕೊಡಲಿಲ್ಲ.....ಸಿಕ್ಕಿದ್ದನ್ನ ಹಾಕಿಕೊಂಡು ಬಂದಿದ್ದ...

ವಾಹನ ಚನ್ನಪಟ್ಟಣ ದಾಟಿತ್ತು..ನಾನು ಶಶಿ, ಜೆ.ಎಂ. ಮೂರು ಜನ ವೆಂಕಿಗೆ ತಲೆಗೆ, ಬೆನ್ನಿಗೆ ಸರಿಯಾಗಿ ಬಿಟ್ಟೆವು..

"ಮಗನೆ..ಟ್ರಿಪ್ ಗೆ ಬಾರೋ ಅಂದ್ರೆ.ಇಲ್ಲಿಗೆ ಬಂದು ಬಚ್ಚಿಟ್ಟುಕೊಂಡಿದ್ದೀಯ .."

ಎಲ್ಲರಿಗೂ ಸಮಾಧಾನ ಆದ ಮೇಲೆ...ಮತ್ತೆ ವಾಹನದಲ್ಲಿ ಜೋಶ್  ತುಂಬಿತು..

ಸರಿ ಸುಮಾರು ಐದು ಘಂಟೆಗೆ  ..ನಾಗರಹೊಳೆ ಅರಣ್ಯ ಪ್ರದೇಶದ ಚೆಕ್-ಪೋಸ್ಟ್ ಬಳಿ  ಬಂದೆವು..

ನಾಗರ ಹೊಳೆ ಚೆಕ್ ಪೋಸ್ಟ್ (ಚಿತ್ರಕೃಪೆ - ಅಂತರ್ಜಾಲ)
ಅಲ್ಲಿನ ಸಿಬ್ಬಂಧಿ ಆರು ಘಂಟೆಗೆ ಗೇಟ್ ತೆಗೆಯುವುದು ಎಂದು ಹೇಳಿದ್ರು...ಸರಿ..ಅಲ್ಲೇ ಕಾಲ ಕಳೆಯಲು ಓಡಾಡ ತೊಡಗಿದೆವು...ನಗೆ ಚಟಾಕಿಗಳು..ಒಬ್ಬರನ್ನೊಬ್ಬರು ಕಿಚಾಯಿಸುವುದು..ನಡೆದಿತ್ತು...

ಕಿರ್ರ್ರ್...ಚೆಕ್ ಪೋಸ್ಟ್ ಗೇಟ್ ಏತ -ಪೈತಾ  ಆಡುತ್ತ ತೆರೆದುಕೊಂಡಿತು...

ವಾಹನ ಭರ್  ಭರ ಅಂತ ಒಳಗೆ ನುಗ್ಗಿತು.. ಒಳಗೆ ಹೋದ ಮೇಲೆ..ಅಲ್ಲಿನ ಸಫಾರಿ ತಾಣಕ್ಕೆ ಬಂದೆವು..ಎಲ್ಲರು ದಬ ದಬ ಸಫಾರಿ ವಾಹನ ಹತ್ತಿದೆವು..

ಸಫಾರಿ ವಾಹನ (ಚಿತ್ರಕೃಪೆ - ಅಂತರ್ಜಾಲ)


ನಮಗೆ ಇದ್ದದ್ದು ಒಂದೇ ತವಕ...ಆದಷ್ಟು ಕಾಡು ಪ್ರಾಣಿಗಳನ್ನ(ನಮಗಿಂತ) ನೋಡ್ಬೇಕು..ವಾಹನದ ಚಿಕ್ಕ ಚಿಕ್ಕ ಕಿಟಕಿಯಲ್ಲಿ ಆದಷ್ಟು ಕತ್ತನ್ನು, ಕಣ್ಣನ್ನು ಹೊರಗೆ ಹಾಕಿ ಒಬ್ಬರಿಗೊಬ್ಬರು ಪೈಪೋಟಿ ಮಾಡುತ್ತಾ..ಮೈಯೆಲ್ಲ ಕಣ್ಣಾಗಿ ನೋಡುತಿದ್ದೆವು..!

ಸಫಾರಿ ಅಷ್ಟೊಂದು ರೋಮಾಂಚಕಾರಿಯಾಗಿರಲಿಲ್ಲ ..ಕಾಡೆಮ್ಮೆ, ಜಿಂಕೆ, ಮೊಲ, ಕಾಡು ಕೋಳಿ, ನರಿ, ಮಂಗಗಳು (ವಾಹನದಲ್ಲಿದ್ದವನ್ನು ಬಿಟ್ಟು) ಇವೆ ಕಂಡಿದ್ದು..ಇನ್ನೇನು ಸಫಾರಿ ಮುಗಿಯುವ ಹಂತ ತಲುಪಿತ್ತು..ತಣ್ಣಗೆ ಒಂದು ಬಿದಿರು ಮೆಳೆಯ  ಒಳಗಿಂದ ಒಂದು ಒಂಟಿ ಸಲಗ ಕಾಣಿಸಿಕೊಂಡಿತು...ಗಜರಾಜನನ್ನು ಕಂಡಿದ್ದು ಬಹಳ ಖುಷಿ ಕೊಟ್ಟಿತ್ತು..
ಗಜರಾಜ - (ಚಿತ್ರಕೃಪೆ - ಅಂತರ್ಜಾಲ)
ಸಫಾರಿಯಾ ನಂತರ..ವಾಹನ ಸೀದಾ ಇರ್ಪು ಜಲಪಾತದ ಕಡೆಗೆ ಹೊರಳಿತು..ಲಕ್ಷ್ಮಣ ತೀರ್ಥದ ಬಳಿ ವಾಹನ ನಿಂತಿತು..ಅಲ್ಲಿಂದ ನಮ್ಮ ಚಾರಣ ಮತ್ತೆ ಶುರು..ದಾರಿಯಲ್ಲಿ "ಸಂಭಾವಿತರಂತೆ" ಮೇಲು ದನಿಯಲ್ಲಿ ಮಾತಾಡುತ್ತ ಜಲಪಾತದಡಿಗೆ ಬಂದೆವು...
ಇರ್ಪು ಜಲಪಾತ..(ಚಿತ್ರಕೃಪೆ - ಅಂತರ್ಜಾಲ)
ನೀರಿಗೆ ಕಾಲಿಟ್ಟ ಕೂಡಲೇ ನಾನು ಕೂಗಿದೆ.."ಲೋ..ಇದು ಇರ್ಪು ಅಲ್ಲ ಬರ್ಫು...!"

ನಡುಗುತ್ತಲೇ..ಒಬ್ಬೊಬ್ಬರಾಗಿ ನೀರಿಗೆ ಇಳಿದು ಆಟವಾಡಿದೆವು...ವೆಂಕಿ ಮೊದಲು ಇಳಿಯಲು ನಿರಾಕರಿಸಿದ...ತಣ್ಣನೆ ನೀರು ಅವನು ಬೇಡ ಅಂದ...ನಂತರ ನಮ್ಮ ಆಟ ನೋಡಿ ತಾನೇ ಇಳಿದ..

ಸುಮಾರು ಹೊತ್ತು ನೀರಿನಲ್ಲಿ ಆಟವಾದ ಮೇಲೆ

ಅಣ್ಣಾವ್ರ "ಹೊಟ್ಟೇ ಚುರುಗುಟ್ ತೈತೆ ರಾಗಿ ಮುದ್ದೆ ಉಣ್ಣೋ ಹೊತ್ತು" ಹಾಡು ನೆನಪಿಗೆ ಬಂತು..

ನೀರಿನಿಂದ ಎದ್ದು ಮತ್ಸ್ಯ ದೇವತೆಗಳಂತೆ ಹೊರ ಬರುವಾಗ..... ವೆಂಕಿ..ಇರು ಜಲಪಾತವನ್ನು ಇನ್ನೊಮ್ಮೆ ನೋಡುತ್ತೀನಿ ಅಂತ..ಒಂದು ಬಂಡೆಯ ತುದಿಗೆ ನಿಂತ.ಅಚಾನಕ್ ಆ ಬಂಡೆಯ ಮೇಲೆ ತುಸು ಪಾಚಿ ಇತ್ತು..ತುಸು ಜಾರಿದ.ತಕ್ಷಣ..ಅಲ್ಲೇ ಇದ್ದ ನಾನು ಕೈ ಹಿಡಿಯಲು ಯತ್ನಿಸಿದೆ..ಅವನೇ ಸ್ವಲ್ಪ ಸಾವಧಾನವಾಗಿ ಚೇತರಿಸಿಕೊಂಡು ಮತ್ತೆ  ನಿಂತು ಕೊಂಡ.

ತಕ್ಷಣ..ನನ್ನ ಮನಸು ಕೆಲವು ಘಂಟೆಗಳ ಹಿಂದೆ ಓಡಿತು...ವೆಂಕಿಯ ಅಮ್ಮನಿಗೆ ಹೇಳಿದ ಮಾತು...("ಅಮ್ಮ ಏನು ಯೋಚನೆ ಮಾಡಬೇಡಿ ನಿಮ್ಮ ಮಗನ ಜವಾಭ್ದಾರಿ ನಂದು")..ತಿರುಪತಿ ವೆಂಕಟರಮಣನಿಗೆ, ಬೆಳವಾಡಿಯ ಗಣಪನಿಗೆ ಮನಸಲ್ಲೇ ವಂದಿಸುತ್ತಾ ನಮಸ್ಕಾರ ಮಾಡಿದೆ...ದೇವರು ದೊಡ್ಡವನು!

ವಾಹನ ನಿಲ್ಲಿಸಿದ ತಾಣದಲ್ಲಿ ಒಂದು ಚಿಕ್ಕ ಉಪಹಾರ ಗೃಹ ಇತ್ತು..ಸಿಕ್ಕಷ್ಟು, ಮಾಡಿದಷ್ಟು ತಿಂದು..ನಮ್ಮ ಪಯಣ...ಬಲಮುರಿ ಜಲಪಾತದ ಕಡೆ ತಿರುಗಿತು...ಬಲಮುರಿಯಲ್ಲಿ ಮತ್ತೆ ನೀರಿಗೆ ಬಿದ್ದೆವು..
ಬಲಮುರಿ ಜಲಪಾತ - (ಚಿತ್ರಕೃಪೆ - ಅಂತರ್ಜಾಲ)
ಇನ್ನೇನು ಸೂರ್ಯಾಸ್ತ ಸಮೀಪಿಸುತ್ತಿತ್ತು...ಗೆಳೆಯರೆಲ್ಲರೂ..ನಡೀರಿ..ನಡೀರಿ..ಕೆ.ಆರ್.ಎಸ್ ಗೆ ಹೋಗೋಣ ಅಂದ್ರು...

ವಾಹನ ಬೃಂದಾವನದ ಕಡೆ ತಿರುಗಿತು..

ಆ ಅಣೆಕಟ್ಟೆಯ ಸೇತುವೆಮೇಲೆ ನಿಂತು ಚಿತ್ರ ತೆಗೆಸಿಕೊಂಡದ್ದು.....ಜೆ. ಎಂ. ಸುಂದರವಾದ ಕೂಲಿಂಗ್ ಗ್ಲಾಸ್ ಹಾಕಿ ಕೊಂಡದ್ದು.....ಥೇಟ್ ಆ ಕಾಲದಲ್ಲಿ ಪ್ರಸಿದ್ಧವಾಗಿದ್ದ ಹಿಂದಿ ನಟ ಸುನೀಲ್ ಶೆಟ್ಟಿ...... ತರಹವೇ ಕಾಣಿಸಿದ್ದು.ಎಲ್ಲ ಸೊಗಸಾಗಿತ್ತು
ಕೆ.ಆರ್. ಎಸ್  ಆಣೆಕಟ್ಟು - (ಚಿತ್ರಕೃಪೆ - ಅಂತರ್ಜಾಲ)
ಬೃಂದಾವನದಲ್ಲಿ ಓಡಾಡಿ, ಸಂಗೀತ ಕಾರಂಜಿಯನ್ನ ನೋಡಿ..ನಲಿದೆವು...
ಸಂಗೀತ ಕಾರಂಜಿ - (ಚಿತ್ರಕೃಪೆ - ಅಂತರ್ಜಾಲ)
ಒಂದೇ ದಿನದಲ್ಲಿ ಒಂದು ಸಫಾರಿ, ಎರಡು ಜಲಪಾತ, ಒಂದು ವಿಶ್ವವಿಖ್ಯಾತ ಬೃಂದಾವನ..

ನಮ್ಮೆಲ್ಲ ಗೆಳೆತನ..ಸುಂದರವಾಗಿತ್ತು...

ರಾಮನಗರ ಬಂದಾಗ.ವೆಂಕಿ ಇಲ್ಲೇ ಇಳಿಯುತ್ತೇನೆ ಎಂದ.ನಾವು ಬಿಡದೆ.ಬೆಂಗಳೂರಿಗೆ ಕರೆದುಕೊಂಡು ಬಂದೆವು (ನನ್ನ ನೆನಪಿನಲ್ಲಿ)

ಸರಿ ಸುಮಾರು ಮಧ್ಯರಾತ್ರಿ ಕೋರಮಂಗಲದ ಶಶಿ ಮನೆ ತಲುಪಿ..ಅಲ್ಲೇ ರಾತ್ರಿ ಉಳಿದು..ಬೆಳಿಗ್ಗೆ ನಮ್ಮ ಗೂಡಿಗೆ ಸೇರಿಕೊಂಡೆವು..

ಇಂತಹ ಒಂದು ಅದ್ಭುತ ಪ್ರವಾಸದ ಕಥಾನಕ.ನಮ್ಮ ಗೆಳೆಯ ವೆಂಕಿ ವಿವಾಹ ಸಂಭ್ರಮದಲ್ಲಿ  ಹತ್ತು ವರ್ಷ ಕಳೆದ ಸವಿ ನೆನಪಿಗಾಗಿ..

ವೆಂಕಿ ಸೌಮ್ಯ..ವಿವಾಹ ದಿನದ ಶುಭಾಶಯಗಳು...ಹೊಸ ಮನೆ ಬಂತು..ಹೀಗೆ ನಿಮ್ಮ ಆಸೆ ಆಕಾಂಕ್ಷೆಗಳು ಎಲ್ಲವನ್ನು ಆ ಭಗವಂತ ಈಡೇರಿಸಲಿ  ಎಂದು ಹಾರೈಸುವ...ನಿಮ್ಮ ಗೆಳೆಯರ ವೃಂದ..

20 comments:

  1. Dhanyavada tande:-) Ninna atyamoolya samaya vyayisi ee sundara lekhana barediddakkagi

    ReplyDelete
  2. ಚಂದದ ಪ್ರವಾಸ ಕಥಾನಕ...
    ವಿವಾಹ ದಿನದ ಶುಭಾಶಯಗಳು ನಿಮ್ಮ ಗೆಳೆಯರಿಗೆ...

    ReplyDelete
  3. Quuite a different way to wish....
    Happy Anniversary to Venki and Soumya

    ReplyDelete
  4. ಲೇಖನ ಎನ್ನಲಾಗದು.. ಒಳ್ಳೆ ಕಥಾನಕ :) ಖುಷಿಯಾಯ್ತು :) ಶುಭಾಶಯಗಳನ್ನು ತಿಳಿಸಿ.

    ReplyDelete
  5. ಚೆನಾಗಿದೆ ಕಥನ ಶ್ರೀ....ನಿಮ್ಮ ಗೆಳೆಯರಿಗೆ ಶುಭಾಷಯಗಳು..
    ಹಾಂ..ಇನ್ನು ಮುಂದೆ ಈ ತರ ಅವ್ರ್ನಾ ರಾತ್ರಿ ಹೊತ್ನಲ್ಲಿ ಎಬ್ಸಕ್ ಹೊಗ್ಬೇಡೀ,ಪಾಪಾ ಹಾ ಹಾ !!!!!

    ನಮಸ್ತೆ.

    ReplyDelete
  6. From where and how did you develop such a nice writing skills.
    Wonderful….no one would have thought of wishing any one in this way.

    Once again hatsoff……
    Roopashree

    ReplyDelete
  7. ಒಳ್ಳೆಯ ಪ್ರವಾಸ ಕಥನಾ ಶೀ.
    ನಿಮ್ಮ ಗೆಳೆಯರಿಗೆ ನಮ್ಮ ಶುಭಾಶಯ ತಿಳಿಸಿರಿ.

    ReplyDelete
  8. Happy anniversary to your frends from my side... day by day it is proving that u r very good at writing 'Pravaasa kathana'..nice write up..

    ReplyDelete
  9. We had such nice days...golden day of my life. Thank you Sriki for refreshing memories

    ReplyDelete
  10. Venki Thank you Guru..those days are golden chapters in our life.

    ReplyDelete
  11. ಮೌನ ರಾಗ.ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು..ನನ್ನ ಲೋಕಕ್ಕೆ ಆಗಮಿಸಿದ ನಿಮಗೆ ಧನ್ಯವಾದಗಳು..

    ReplyDelete
  12. ಅನಾಮಧೆಯರ ಶುಭಾಶಯಗಳಿಗೆ ಧನ್ಯವಾದಗಳು

    ReplyDelete
  13. ಈಶ್ವರ್ ನಿಮ್ಮ ಭೇಟಿ ನನ್ನ ಲೋಕಕ್ಕೆ ಖುಷಿ ತಂದಿತು..ಧನ್ಯವಾದಗಳು ನಿಮಗೆ..

    ReplyDelete
  14. ಚಿನ್ಮಯ್..ಆಹಾ..ಸುಂದರ ಪ್ರತಿಕ್ರಿಯೆ.ಖಂಡಿತ ಈವಾಗ ಆ ಸಾಹಸ ಮಾಡಲಿಕ್ಕೆ ಹೋಗೋಲ್ಲ.ಕಾರಣ..ಪರಕೆ ಹಿಡಿದು ಅವನ ಹೆಂಡತಿ ಬಾಗಿಲಲ್ಲೇ ಇರುತ್ತಾರೆ..ಹ ಹ ಹ..ಧನ್ಯವಾದಗಳು ನಿಮಗೆ..

    ReplyDelete
  15. Hi Roopa..Thank you So much for your nice words.

    ReplyDelete
  16. ಬದರಿ ಸರ್..ನಿಮ್ಮ ಶುಭಾಶಯಗಳು ನಮ್ಮ ಗೆಳೆಯರಿಗೆ ತಲುಪಿದೆ.ಧನ್ಯವಾದಗಳು..

    ReplyDelete
  17. Girish..Thank you so much..remembering the rewinding memories of olden days like eating a pine apple dipping in honey.

    ReplyDelete
  18. Thank you Shashi..it is a gods idea to unite all of five of us. those were the great days indeed.

    ReplyDelete
  19. Dear Venki and Soumya On Your Anniversary, Wishing you the love that never stops growing and a Life full of Happiness. Happy Anniversary
    Thanks Sriki, for re-kindling the memories and true to the fact without his the FUN part of our friendship wouldn't have been to such great heights...

    Yours Lovingly
    Satish, Samatha and Dhanush.

    ReplyDelete
  20. Thank you JM, and rekindling the momeories will blow a fresh lease of life...!

    ReplyDelete