Wednesday, May 1, 2013

ಪುಟ್ಟಿನ ಪರ್ಬದ ಹಾರೈಕೆ!

ಯೋಚನೆ ಮಾಡುತ್ತಾ ಕೂತಿದ್ದೆ!

ಅಚಾನಕ್ಕಾಗಿ ಕಿಟ್ಟು ಪುಟ್ಟು ಚಿತ್ರ ನೆನಪಿಗೆ ಬಂತು.. ಯಾಕೋ ಆ ಚಿತ್ರ ನೋಡಬೇಕು ಅನ್ನಿಸಿತು. ಪರದೆಯ ಮೇಲೆ ಚಿತ್ರ ಓಡುತ್ತಿತ್ತು. ಬೆರಳುಗಳು ಕೀಲಿ ಮಣೆಯ ಮೇಲೆ ನರ್ತನ ಮಾಡುತಿತ್ತು.

"ಮಾತೊಂದ ಹೇಳುವೆ ಹತ್ತಿರ ಹತ್ತಿರ ಬಾ
ನುಡಿ"ಮುತ್ತೊಂದ" ಕಳಿಸಿರುವೆ ಮೆತ್ತಗೆ ಮೆತ್ತಗೆ ರೀಡ್"

ಅರೆ ಇದೇನು ಹಾಡಿನ ಸಾಹಿತ್ಯವೇ ಬದಲಾಯಿತೆ ಎನ್ನುತ್ತಾ ಕತ್ತೆತ್ತಿ ಸುತ್ತಲೂ ನೋಡಿದೆ! ಮೊಬೈಲ್ ಕ್ರೀಕ್ ಕ್ರೀಕ್ ಅಂತ ಸದ್ದು ಮಾಡಿತು. ಗಡಿಯಾರ ನೋಡಿದೆ.. ಹಲ್ಲು ಕಿರಿದೆ..

ಹೊರಗೆ ಓಡಿ ಬಂದು ಆಕಾಶದ ಕಡೆಗೆ ಕಣ್ಣು ಹಾಯಿಸಿದೆ...  ಸೂರ್ಯದೇವ ನಗುತ್ತಲಿದ್ದ..

ನನಗಿಂತಲೂ ಚೆನ್ನಾಗಿ ನಗುತ್ತಾರೆ  ಅಶೋಕ್ ಶೆಟ್ಟಿ! (ಚಿತ್ರಕೃಪೆ ಅಂತರ್ಜಾಲ)

ನಾನು "ಬೆಳಕು ಬೀರುತಾ ನೀ ಬರುವೆ ....  ಇಂದೇಕೆ ನಗುತಲಿರುವೆ" ಎಂದು ಕೇಳಿದೆ

ಆಗ ಸೂರ್ಯದೇವ "ಕಾಂತ.. ಪ್ರಕೃತಿಗೆ  ನಾನು  ಬೆಳಕನ್ನು ಕೊಡುತ್ತಿರುವೆ.. ಇನ್ನೊಬ್ಬರು ಜ್ಞಾನದ ಬೆಳಕನ್ನು ಕೊಡುತ್ತಲಿರುವರು... ನನ್ನ ಬೆಳಕು ಹೊರಜಗತ್ತಿಗೆ.. ಅವರ ಬೆಳಕು ಒಳ ಜಗತ್ತಿಗೆ... ಅಂತ ಹೇಳಿ ಕಪ್ಪು ಕನ್ನಡಕ ಧರಿಸಿ ಮೋಡದ ಮರೆಯಲ್ಲಿ ಮರೆಯಾದ!
ಅವರು ಕಲಿಸುವ ನುಡಿಮುತ್ತುಗಳು ಯಾವತ್ತಿಗೂ ಸೂಪರ್ ಕೂಲ್! (ಚಿತ್ರಕೃಪೆ - ಅಂತರ್ಜಾಲ)

ಯೋಚಿಸಿದೆ ಹೌದಲ್ವಾ! . ಅಶೋಕ ಸಾಮ್ರಾಟ ಕಳಿಂಗ ಯುದ್ಧವಾದ ಮೇಲೆ ಅಪಾರ ನಷ್ಟವನ್ನು ನೋಡಿ ಸಹಿಸಲಾರದೆ ಶಾಂತಿಯ ಮೊರೆ ಹೊಕ್ಕನು. ನಮ್ಮ  ಗೆಳೆಯ ಸುಂದರ ಹೃದಯದ ಅಶೋಕ್ ಸಾಮ್ರಾಟರು ನಮ್ಮ ಮನದೊಳಗೆ ನಡೆಯುತ್ತಿರುವ ಯುದ್ಧಕ್ಕೆ ಬಿಳಿ ಬಾವುಟ ತೋರಿಸುವ ಸುಂದರ ಸಂದೇಶ ಕಳುಹಿಸುತ್ತಿದ್ದಾರೆ. ಎಷ್ಟು  ಸಾಮ್ಯತೆ ಅಲ್ಲವೇ!. ಹೌದು ಆ ಹೆಸರಿನಲ್ಲೇ ಅಂಥಹ ಒಂದು ತಾಕತ್ ಇದೆ.

ಆ ಆಶೋಕ್ ಸಾಮ್ರಾಟ ಯುದ್ಧದ ನಂತರ ಶಾಂತಿ ಸ್ಥಾಪಿಸಿದರು.. ನಮ್ಮ ನುಡಿಮುತ್ತುಗಳ.. ಸ್ನೇಹಲೋಕದ ಸಾಮ್ರಾಟ್ ಮನದೊಳಗೆ ನಡೆಯುತ್ತಿರುವ ಕಾಳಗವನ್ನು ನಿಲ್ಲಿಸಲು ಸುಂದರ ನುಡಿಮುತ್ತುಗಳನ್ನು ಹೆಣೆಯುತ್ತಾರೆ.

ನುಡಿಮುತ್ತುಗಳು ತಂಡ ಒಂದು ಸುಂದರ ಸ್ನೇಹ ಲೋಕ ! (ಚಿತ್ರಕೃಪೆ ಅಂತರ್ಜಾಲ)

ಇಂತಹ ಅಮರ ಸ್ನೇಹ ಬಯಸುವ ಸುಂದರ ಹೂವಿನ ಮನಸ್ಸುಳ್ಳ ಅಶೋಕ್ ಅವರದು ಇಂದು ಹುಟ್ಟಿದ ಹಬ್ಬ. ಇಂತಹ ಸಹೃದಯದ ಸುಂದರ ಮನಸ್ಸಿನ ನಗುಮೊಗದ ವ್ಯಕ್ತಿತ್ವಕ್ಕೆ ಶುಭಾಶಯಗಳನ್ನು ಕೋರುವ ಭಾಗ್ಯ ನನ್ನದು. 


"ದಿನೋಲ ಸೂರ್ಯೇ ಮೂಡನಗ ಪೊಸತ್ ಭರವಸೆದ ಸಂದೇಶ ಪಥರ್ಪೆ
ಮಾತಾ ಭರವಸೆಲು ಜೀವನದ ಬೊಲ್ಪು ಆಪುಂಡು
ಜೀವನ ಶಾಂತಿದ ತಾದಿ ಆಪುಂಡು
ಶಾಂತಿ ಸಂತೋಷದ ತಾದಿ ಆಪುಂಡು
ಸಂತೋಷ ದಿನನು ಬೊಲ್ಪು ಮಲ್ಪವುಂಡು
ದಿನ ಪೂರ ಸಮಯ ಎಡ್ಡೆಡು ಇಪ್ಪಡು ಪಂದು ಬೇಡುವೆ
ಪುಟ್ಟಿನ ಪರ್ಬದ ಹಾರೈಕೆ!"

ಇದಪ್ಪಾ ನಗು ಅಂದ್ರೆ ಸದಾ ಹೀಗೆ ಇರಲಿ! (ಚಿತ್ರಕೃಪೆ - ವಿಜಯ್ ಆದಿತ್ಯ)
ಅಶೋಕ್ ಸರ್ ಹುಟ್ಟು ಹಬ್ಬದ ಶುಭಾಶಯಗಳು.  ಹೃದಯ ಸಿಂಹಾಸನದಲ್ಲಿ ಕುಳಿತಿರುವ ನಿಮ್ಮ ಸಂಸಾರದಲ್ಲಿ,  "ಕುಶಿ" ಎನ್ನುವ ನಿಮ್ಮ ಮನೆಯ ದೀಪ,  ಸದಾ "ವಿನೋದ"ದಿಂದ ನಗು ನಗುತ್ತಾ...  ನಿಮ್ಮ ಮುಗ್ಧ ಸುವಾಸಿತ ನಗುವಿನ ಜೊತೆಯಲ್ಲಿ  ಸದಾ ಜೀವನದಲ್ಲಿ ಬೆಳಕು ತುಂಬಿರಲಿ.  

(ಹುಟ್ಟು ಹಬ್ಬದ ಸಂದೇಶವನ್ನು ತುಳು ಭಾಷೆಯಲ್ಲಿ ಬರೆದು ಕೊಟ್ಟ ಸ್ಮೈಲಿಂಗ್ ಸಿಸ್ಟರ್ (ಎಸ್ ಎಸ್ = ಸುಲತ ಶೆಟ್ಟಿ ಅವರಿಗೆ ಧನ್ಯವಾದಗಳು)

16 comments:

  1. many many happy returns of the day :) happy birthday :) DOM

    ReplyDelete
    Replies
    1. ಓದಿದ... ಮೆಚ್ಚಿದ..ಹರಸಿದ.. ಮನಕ್ಕೆ ಧನ್ಯವಾದಗಳು ಮಹೇಶ್

      Delete
  2. ನುಡಿ ಮುತ್ತುಗಳ ಬ್ರಹ್ಮನಿಗೆ
    ಮುತ್ತಿನಂತಹ
    ಜನುಮದಿನದ ಶುಭಾಶಯಗಳು.

    ನಿಮ್ಮ ಮಾತಿ ನಿಜ ಶ್ರೀಮಾನ್
    ನಕ್ಕರೆ ಅಶೋಕ್ ಶೆಟ್ಟಿಯವರಂತೆ
    ಮನ ಬಿಚ್ಚಿ ನಗಬೇಕು.

    ಭಗವಂತವು ಅವರಿಗೆ
    ಸದಾ ಕಾಲ
    ಸಕಲ ಆರೋಗ್ಯ ಐಶ್ವರ್ಯ
    ಪದ ನೀಡಿ ಆಶೀರ್ವದಿಸಲಿ.

    ReplyDelete
    Replies
    1. ಸ್ನೇಹಕ್ಕೆ ಶುದ್ಧ ಮನಸ್ಸು ಬೇಕು.. ಅಂತಹ ಮನಸ್ಸುಳ್ಳ ಅಶೋಕ್ ಸರ್ ಅವರಿಗೆ ಶುಭಾಷಯ ತಿಳಿಸುವ ನಿಟ್ಟಿನಲ್ಲಿ ಹೊರಹೊಮ್ಮಿದ ಲೇಖನ ಧನ್ಯವಾದಗಳು ಬದರಿ ಸರ್

      Delete
  3. Happy birthday frnd god bless u

    ReplyDelete
    Replies
    1. ನನ್ನ ಲೋಕಕ್ಕೆ ಸ್ವಾಗತ.

      Delete
  4. ಜನುಮ ದಿನದ ಪ್ರೀತಿಯ ಶುಭಾಶಯಗಳು ಅಶೋಕ್ ಸರ್ :)


    ಮತ್ತದೇ ಹೊಸ ತನ ತುಂಬಿರೋ ಹುಟ್ಟುಹಬ್ಬದ ನಲ್ಮೆಯ ಶುಭಾಶಯ ಪತ್ರ ಇಷ್ಟ ಆಯ್ತು ಶ್ರೀಕಾಂತಣ್ಣ :)

    ReplyDelete
    Replies
    1. ನಿನ್ನ ಅಭಿಮಾನವೇ ಶ್ರೀ ರಕ್ಷೆ. ಇಷ್ಟವಾಗಿದ್ದಕ್ಕೆ ಸಂತಸವಾಯಿತು

      Delete
  5. ಸೂಪರ್ ಶ್ರೀಕಾಂತಣ್ಣ :)

    ಪುಟ್ಟಿನ ಪರ್ಬದ ಹಾರೈಕೆ ಶೆಟ್ರೆ:)

    ReplyDelete
    Replies
    1. ಈ ಲೇಖನದ ಯಶಸ್ಸು ನಿಮಗೆ ಎಸ್ ಎಸ್.

      Delete
  6. ಹಾ ಹಾ....ಶ್ರೀಕಾಂತಜೀ ಕೀ ಜೈ...
    ಹುಟ್ಟು ಹಬ್ಬದ ಶುಭಾಷಯಗಳು ಅಶೋಕ್ ಜೀ..

    ReplyDelete
    Replies
    1. ಧನ್ಯವಾದಗಳು ಚಿನ್ಮಯ್. ಮೆಚ್ಚುವ ಮನಕ್ಕೆ ನಮನ

      Delete
  7. ಶ್ರೀಕಾಂತ್ ಸರ್,

    I am really speechless....ಏನು ಹೇಳ್ಬೇಕು ಅಂತ ಗೊತ್ತಾಗ್ತಾ ಇಲ್ಲ ....this is the best gift i have received.....ನಿಮ್ಮಈ ಪ್ರೀತಿ, ಅಭಿಮಾನಕ್ಕೆ ಹೃದಯ ತುಂಬಿ ಬಂದಿತು.... ನೀವು ನನ್ನನ್ನು ಹೊಗಳಿರುವುದು ನಿಮ್ಮ ದೊಡ್ಡಗುಣ.... ಎಲ್ಲೋ ಓದಿದ ನೆನಪು - "When you are with your real friends you will feel rewarded and honored by the relationships that you have with them because they always appreciate and compliment your talents and abilities without feeling insecure".............I can proudly say you are one of them.......

    Thank you...thank u very much for the special wishes....

    Thank you Mahesh,Badri sir, Guru, Bhagya Bhat, Chimay Bhat, Sulatha

    ReplyDelete
    Replies
    1. ಹುಟ್ಟಿದ ಹಬ್ಬಕ್ಕೆ ಶುಭಾಶಯದ ಉಡುಗೊರೆ ಕೊಡಲು ಹೋದರೆ ನೀವೇ ಮಣ ಭಾರ ಹೊರಿಸಿಬಿಟ್ರಲ್ಲ ಅಶೋಕ್ ಸರ್. ನಿಮ್ಮ ಅಭಿಮಾನಕ್ಕೆ ನಾ ಚಿರಋಣಿ

      Delete
  8. ನಮ್ಮ ನಿಮ್ಮೆಲ್ಲರ ಹಿರಿಯ ಸ್ನೇಹಿತರಾದ ಅಶೋಕ್ ಶೆಟ್ಟಿ ಯವರ ಬಗ್ಗೆ ತುಂಬ ಚೆನ್ನಾಗಿ ಬರೆದಿದ್ದೀರಿ.. ಅಶೋಕ್ ಶೆಟ್ಟಿ ಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು..

    ReplyDelete
    Replies
    1. ಧನ್ಯವಾದಗಳು ವಿಜಯ್ . ನನ್ನ ಬ್ಲಾಗ್ ಲೋಕಕ್ಕೆ ಸ್ವಾಗತ

      Delete