Friday, January 17, 2014

ನಮ್ಮೆಲ್ಲರ ಪ್ರೀತಿಯ ಪ್ರಕಾಶಣ್ಣ!!!

ಕಪಾಟಿನಲ್ಲಿದ್ದ ಪುಸ್ತಕಗಳು ಕಣ್ಣು ಮಿಟುಕಿಸುತ್ತಿದ್ದವು...

ದೇವರ ಕೋಣೆಯಲ್ಲಿ ಪಟಗಳಲ್ಲಿ, ಫ್ರೇಮ್ಗಳಲ್ಲಿ, ವಿಗ್ರಹ ರೂಪಗಳಲ್ಲಿ ಇದ್ದ ದೇವಾನುದೇವತೆಗಳು ತೋಳನ್ನು ಮೇಲೇರಿಸಿ ಕಾಯುತ್ತಿದ್ದವು..

ಅವರುಗಳೆಲ್ಲ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಿದ್ದರು..

"ಈ ಕಾಂತನಿಗೆ ಬೇರೆ ಏನು ಕೆಲಸ ಇಲ್ಲ ಅನ್ನಿಸುತ್ತೆ.. ಹಾಯಾಗಿ ಭಕ್ತರ ಉದ್ಧಾರ ಮಾಡುತ್ತಾ ಕುಳಿತವರನ್ನು ತನ್ನ ಡ@##@@@ ವಿಚಿತ್ರ ಲೇಖನಗಳಲ್ಲಿ ಎಳೆದುತಂದು ಯುಗಯುಗಳಲ್ಲೂ ಅಪರೂಪಕ್ಕೆ ಸೇರದ ನಮ್ಮನ್ನು ಎಳೆದಾಡಿ ಕೂರಿಸುತ್ತಾನೆ.."

ಅಲ್ಲೇ ಕಪಾಟಿನಲ್ಲಿದ್ದ ಪುಸ್ತಕ ಹಲ್ಲು ಬಿರಿಯುತ್ತಾ

 "ಹೌದು ದೇವ್ರೇ.. ನಮ್ಮೊಡಲಲ್ಲಿ ಅಡಗಿರುವ ಕಥೆಗಳನ್ನು ಯಾವ ಯಾವ ಪುಟಕ್ಕೋ ಸೇರಿಸಿ...  ಬೆಸುಗೆ ಹಾಕಿ ನಿಮ್ಮನ್ನು ಕರೆದುತಂದು ಸುಮ್ಮನೆ ತಲೆಗೆ ಹುಳ ಬಿಡ್ತಾನೆ.. ಅದಕ್ಕೆ ನೋಡು ಇವತ್ತು ಎಲ್ಲಾ ಕಥೆಗಳನ್ನು  ಗಟ್ಟಿಯಾಗಿ ಹಿಡಿದು ಕೊಂಡುಬಿಟ್ಟಿದೀನಿ... ಓಹ್ ನೀವುಗಳು ಒಬ್ಬರಿಗೊಬ್ಬರು ಕೈ ಕೈ ಹಿಡಿದುಕೊಂಡು ಬಿಟ್ಟಿದ್ದೀರ.. ಒಳ್ಳೆಯದು ಇವತ್ತು ಅವನಿಗೆ ನಾವ್ಯಾರು ಜಗ್ಗೋಲ್ಲ ಅಂತ ತೋರಿಸಬೇಕು.. ಪಾಪ ಅವನ ಓದುಗರಿಗೆ ತಲೆ ಕೆಟ್ಟು ಹೋಗಿದೆ.. "

ಒಯೆ,,, ಆಗಲೇ ಹನ್ನೊಂದು ಘಂಟೆಯಾಯಿತು..ಇನ್ನು ಸ್ವಲ್ಪ ಹೊತ್ತು ತನ್ನ ಲ್ಯಾಪ್ಟಾಪ್ ತಗೆಯುತ್ತಾನೆ.. ಹುಷಾರು ಯಾರೂ ಸದ್ದು ಮಾಡಬೇಡಿ.. ನೋಡೋಣ ಅದೇನು ಕಿಸಿಯುತ್ತಾನೆ ಈ ಸಾರಿ...!

******** 
"ಅರೆ ಏನಿದು ಇಂದು..

ಯಾಕೆ...

ಛೆ

ಏನಾಗುತ್ತಿದೆ..

ಯಾಕೋ..

ತಲೆಗೆ ಹೊಳಿತಾನೆ ಇಲ್ಲಾ..

ಅದು ...

ಅಲ್ಲಾ..

ಪ್ಸೆ

"ದೇವಾ ಏನಿದು ನಿನ್ನ ಲೀಲೆ.. ಇಂದು ತನ್ನ ಬಳಗವನ್ನೇ ನಗೆಗಡಲಲ್ಲಿ ಮೀಯಿಸುವ ಪ್ರಕಾಶಣ್ಣನ ಹುಟ್ಟು ಹಬ್ಬ.. ಅವರ ಹುಟ್ಟು ಹಬ್ಬಕ್ಕೆ ಏನಾದರೂ ಬರೆಯೋಣ ಅಂದ್ರೆ ... ಪುಸ್ತಕಗಳ ಒಂದು ಹಾಳೆಯನ್ನು ತೆರೆಯಲಾಗುತ್ತಿಲ್ಲ.. ದೇವರುಗಳು ಪ್ರತ್ಯಕ್ಷವಾಗುತ್ತಿಲ್ಲ.. "ರಂಗನಾಥಸ್ವಾಮೀ ಆರು ತಿಂಗಳ ಹಿಂದೆ ಎದ್ದು ಕೂತಿದ್ದವರು ಮತ್ತೆ ಮಲಗಿಬಿಟ್ಟಿದ್ದಾರೆ.. ಏನು ಮಾಡಲಿ ನಾನು ಹೇಗೆ  (ಏನು) ಬರೆಯಲಿ... "

ಯೋಚಿಸುತ್ತಾ ಕುಳಿತಿದ್ದೆ.. ಹೊತ್ತು ಸಾಗುತ್ತಿಲ್ಲ..

ಆಗ ಎಲ್ಲಿಂದಲೋ ಒಂದು ಇಟ್ಟಿಗೆ ಹಾರಿ ಬಂತು..  ಆ "ಇಟ್ಟಿಗೆ"ಯನ್ನು ಸೂಕ್ಷವಾಗಿ ಗಮನಿಸಿದೆ... ಅದಕ್ಕೆ ಸಿಮೆಂಟಿಂ(ಟಿಂ)ದ ಸ್ನಾನವಾಗಿತ್ತು.. ಅದರ "ಛಾಯ ಚಿತ್ತಾರ"ವನ್ನು ನೋಡೋಣ ಎಂದು ದರ್ಪಣದ ಮುಂದೆ ನಿಂತೇ...

ನನ್ನ ಮುಖ ನೋಡುತ್ತಲೇ "ಆ ಅವರಾ .

"ಹೊತ್ತು ಹೋಗದ ಕಥೆ"ಗಳನ್ನು ಬರೆಯುವ .. ಅವರು ನನಗೆ "ಹೆಸರೇ ಬೇಡಾ" ಎನ್ನುತ್ತಾರೆ...


ತುಂಬಾ ಬಲವಂತ ಮಾಡಿದರೆ.. "ಹೋಗ್ರಿ ಹೋಗ್ರಿ "ಇದೆ ಅದರ ಹೆಸರು" ಅನ್ನುತ್ತಾರೆ..

ಸಿಹಿಯಾಗಿ ಗದರುತ್ತಾ ಏನ್ ಸಾರ್ ಜೋಕ್  ಮಾಡ್ತೀರಾ ಹೆಸರು ಹೇಳ್ತಿರೋ ಇಲ್ವೋ ಅಂದ್ರೆ

"ತಮ್ಮಯ್ಯ.. "ಇದರ ಹೆಸರು ಅದಲ್ಲಾ" ಎನ್ನುತ್ತಾರೆ....

ಚಕ್ರವ್ಯೂಹದಂತೆಯೇ ಸುತ್ತಿ ಸುತ್ತಿ ನಗಿಸುತ್ತಾ ಇರುತ್ತಾರೆ.. "

*****************
ಪುಸ್ತಕಗಳು.. ಕಪಾಟುಗಳು.. ಕೋಣೆಯಲ್ಲಿದ್ದ ದೇವರುಗಳು ಕುಣಿದಾಡತೊಡಗಿದವು.. ಹುರ್ರ.. ಕಾಂತನಿಗೆ ಹುಚ್ಚು ಹಿಡಿಸುತ್ತಿದ್ದೇವೆ.. ನೋಡಿ ಪುಸ್ತಕಗಳು ಇಲ್ಲಾ.. ದೇವರು ಇಲ್ಲ ಏನೇನೂ ಬರೆಯುತ್ತಾ ಇದ್ದಾನೆ... ಹ ಹ ಹ ಹ ಹ.... ಮನೆಯಲ್ಲಿ ನಗುವಿನ ಹೊಳೆ ಹರಿಯುತ್ತಿತ್ತು..

ಅಷ್ಟರಲ್ಲಿ..  ಟ್ರಿಂಗ್ ಟ್ರಿಂಗ್ ಟ್ರಿಂಗ್.. ಮನೆಯ ಕರೆಘಂಟೆ ಕೂಗುತ್ತಿತ್ತು..

"ಶ್ ಶ್.... ಸದ್ದು ಬೇಡಾ ಸದ್ದು ಬೇಡಾ.. ಯಾರೋ ಬರ್ತಾ ಇದಾರೆ... ಎಲ್ಲರೂ ನಿಮ್ಮ ನಿಮ್ಮ ಕಪಾಟು.. ಕೋಣೆ ಸೇರಿಕೊಳ್ಳಿ.. "

*********
 ಕಾಂತ ಬಾಗಿಲು ತೆಗೆದ...

ಕಣ್ಣಲ್ಲಿ ಆನಂದಭಾಷ್ಪ.. ಮನೆಯ ರೇಡಿಯೋದಲ್ಲಿ ...

"ನಿಮ್ಮ ಸ್ನೇಹಕೆ ನಾ ಸೋತು ಹೋದೆನು.. ಎಲ್ಲಾ ದೇವರಾ ನಾ ಬೇಡಿ ಕೊಂಡೆನು.. ದೇವರ ಒಲವೋ ಪುಣ್ಯದ ಫಲವೋ ಕಾಣೆನು.. ನಿಮ್ಮ ನಾ ಪಡೆದೆನು" ಹಾಡು ಬರುತ್ತಿತ್ತು

"ಪ್ರಕಾಶಣ್ಣ.. ನೀವು ನಮ್ಮ ಮನೆಗೆ.. ವಾಹ್ ನನಗೆ ನಂಬೋಕೆ  ಆಗ್ತಾ ಇಲ್ಲ.. ನೋಡಿ ಪುಸ್ತಕಗಳು.. ದೇವರುಗಳು ನಗುತ್ತಿವೆ... ಪ್ರತಿ ಸಾರಿ ನಾ ಕರೆದಾಗೆಲ್ಲ ಬಂದು ಬಂದು ನಿಂತು ಸುಸ್ತಾಗಿವೆ ಅಂತ ಹೇಳ್ತಾ ಇವೆ.. " ಕಣ್ಣಲ್ಲಿ ನೀರು ತುಂಬಿ ಬರುತ್ತಿತ್ತು...

ರೇಡಿಯೋದ ಹಾಡು

"ಏನು ಮಾಡಲಿ ನಾನು ಹೇಗೆ ಹೇಳಲಿ.. " ಜೋರಾಗಿಯೇ ಕೇಳುತ್ತಿತ್ತು..

"ತಮ್ಮಯ್ಯ..ಅದಕ್ಕೆ ಯಾಕೆ ಯೋಚನೆ.. ಆ ಪುಸ್ತಕಗಳು.. ಕೋಣೆಯಲ್ಲಿರುವ ದೇವರುಗಳು ಬರದೆ ಇದ್ದರೆ ಏನಂತೆ ... ನೋಡಿಲ್ಲಿ ಪ್ರಪಂಚದ ಸಕಲ ಸಮಸ್ಯೆಗಳಿಗೂ ಪರಿಹಾರ ತುಂಬಿಕೊಂಡಿರುವ ಈ ಗ್ರಂಥ ನಿನಗಾಗಿ ತಂದಿರುವೆ.. ಓದು ನಲಿ ಇನ್ನಷ್ಟು ಬರಿ.. ನಿನಗೆ ಶ್ರೀಕೃಷ್ಣ ಸದಾ ಸ್ಪೂರ್ತಿ ಎನ್ನುವೆ.. ತಗೋ ಆ ಸ್ಫೂರ್ತಿಯ ಮಹಾಭಾರತ ನಿನಗಾಗಿ..ಈ ಗ್ರಂಥದಲ್ಲಿ ಇಲ್ಲದೆ ಇರುವುದು ಜಗತ್ತಲ್ಲಿ ಇಲ್ಲ.. ತಗೋ ತಮ್ಮಯ್ಯ.. ಇದು ಒಂದು ಪುಸ್ತಕ ಇದ್ದರೆ ನಿನ್ನ ಬಳಿ ಎಲ್ಲವೂ ನಿನ್ನ ಎದುರಲ್ಲೇ ನಿಲ್ಲುತ್ತದೆ.. "

ಕಣ್ಣು ಮಂಜಾಯಿತು.. ವರೆಸಿಕೊಂಡೆ.. ಸಮಯ ನೋಡಿದೆ ... ಅರೆ ಮಧ್ಯ ರಾತ್ರಿ ಹನ್ನೊಂದು ಘಂಟೆ ಐವತ್ತ ಒಂಬತ್ತು ನಿಮಿಷ.. ಅರೆ ಇನ್ನು ಒಂದೇ ನಿಮಿಷ ಬಾಕಿ..

ಪ್ರಕಾಶಣ್ಣ ನಿಮ್ಮ ಹುಟ್ಟು ಹಬ್ಬದ ದಿನ ನನಗಾಗಿ ನನ್ನ ಮನದೊಳಗೆ ಬಂದ ನೀವು... ನನ್ನ ಮೆಚ್ಚಿನ ಮಹಾಭಾರತ ತಂದಿದ್ದೀರಿ.. ಕೊಟ್ಟಿದ್ದೀರಿ.. ನಿಮಗೆ ಶುಭಾಷಯ ಕೋರೋಣ ಅಂದ್ರೆ.. ನೀವೇ ನನಗೆ ಶುಭ "ಪ್ರಕಾಶಾ"ಮಾನವಾಗಿ ಬಂದಿದ್ದೀರಾ.. ನಿಮಗಿದೋ ಧನ್ಯವಾದ..

ನೀವು ನಾ ಕಂಡ ಬಹುಮುಖ ಪ್ರತಿಭೆ.. ಸಾಹಿತ್ಯ.. ಛಾಯಾಗ್ರಹಣ.. ಸ್ನೇಹದ ಬೆಸುಗೆ... ಉತ್ತಮ ವಾಗ್ಮಿ.. ಇದೆಲ್ಲ ಮೇಲಾಗಿ ಅಪೂರ್ವ ಹೃದಯವಂತ.. ಅಣ್ಣ ಎಂದರೆ ನಮ್ಮಣ್ಣ ಎನಿಸುವಷ್ಟು ಹತ್ತಿರ ಸಿಗುವ ನಿಮ್ಮ ಸುಂದರ ವ್ಯಕ್ತಿತ್ವಕ್ಕೆ ನನ್ನ ನಮನಗಳು..
ಯಾರು ಹೇಳುತ್ತಾರೆ ಸುಂದರ ಸ್ನೇಹ ಜೀವ ಸಿಗಲು ಹತ್ತು ಜನ್ಮ ಬೇಕು ಅಂತ.. ಅದೆಲ್ಲಾ ಏನು ಬೇಡಾ.. ಕೇವಲ ಹತ್ತು ಸಂಖ್ಯೆಗಳನ್ನು ದಾಟಿದರೆ ನೀವು ನಮಗೆ ಸಿಗುತ್ತೀರಿ "ಹಲೋ ತಮ್ಮಯ್ಯ ಹೇಗಿದ್ದೀರಾ.. " ಇಷ್ಟು ಸಾಕು.. ನಾವು ಚೆನ್ನಾಗಿದ್ದೀವಿ ಅಂದ್ರೆ ಸಾಕು "ಮುಂದಿನ ಹಲವಾರು ನಿಮಿಷಗಳು(ಕೆಲವೊಮ್ಮೆ ಘಂಟೆಗಳು) ನಗೆ ಗಡಲಿನಲ್ಲಿ ತೇಲಿಸಿಬಿಡುತ್ತೀರಾ"

ತಮ್ಮಯ್ಯ.. ನೀನು ಏನಾದರೂ ಬರೆಯುವೆ ಅಂತ  ಗೊತ್ತಿತ್ತು.. ಬಾಗಿಲನ್ನು ಕೈಯಿಂದ ತಟ್ಟುತ್ತಾರೆ.. ತಮ್ಮಯ್ಯ ಮನದ ಬಾಗಿಲನ್ನು ಪದಗಳಿಂದ ಭಾವ ಪೂರಿತ ಮಾತುಗಳಿಂದ ತಟ್ಟಿ ಬಿಟ್ಟೆ.. ನಮ್ಮ ವೃತ್ತ ನಿಜವಾಗಿಯೂ ಸುಂದರವಾಗಿದೆ.. ಧನ್ಯೋಸ್ಮಿ ಶ್ರೀಕಾಂತೂ"

ಚಿತ್ರಕೃಪೆ -  ಪ್ರಕಾಶಣ್ಣ ಅವರ ಸ್ನೇಹ ಬಳಗದ ಹೂವು ಶ್ರೀನಿಧಿ ಕ್ಲಿಕ್ಸ್!!! 


ಧನ್ಯೋಸ್ಮಿ ಪ್ರಕಾಶಣ್ಣ.. ಹಾಗೆಯೇ ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು!!!

******************
ಕಪಾಟೆಲ್ಲ ಒದ್ದೆಯಾಗಿತ್ತು.. ದೇವರ ಕೋಣೆಯಲ್ಲಿ ಪಟಗಳೆಲ್ಲ ನೀರಿನಲ್ಲಿ ತೇಲಾಡುತ್ತಿದ್ದವು.. ಆನಂದ ಭಾಷ್ಪ ಒರೆಸಿಕೊಂಡು... ನಾವೆಲ್ಲಾ ಶ್ರೀ ಜೊತೆಯಲ್ಲಿ ಇದ್ದಿದ್ದರೆ.. ಯಾವುದೋ ಯುಗದಲ್ಲಿ ನಡೆದಿದ್ದ ಕಥೆಯನ್ನು ಇಂದಿಗೆ ಕರೆತಂದು ಸೇರಿಸುತ್ತಿದ್ದ.. ಇರಲಿ ಇರಲಿ.. ಜನಗಳಿಗೆ ಸ್ವಲ್ಪ ಬದಲಾವಣೆ ಇರಲಿ.. ಮತ್ತೆ ನಮ್ಮನ್ನು ಕರೆಯುತ್ತಾನೆ.. ನಾವು ಬಂದೆ ಬರುತ್ತೇವೆ..

ಅಭಿಮಾನಿ ದೇವರುಗಳೇ.. ನಮ್ಮೆಲ್ಲರ ಪ್ರೀತಿಯ ಪ್ರಕಾಶಣ್ಣ ಅವರಿಗೆ.. ಈ ಲೇಖನದ ಅಂಗಳಕ್ಕೆ ಬರುವವರೆಲ್ಲ ಒಂದೊಂದು ಶುಭಾಷಯ ಪತ್ರಗಳನ್ನು.. ಮಾತುಗಳನ್ನು.. ಹಾರೈಕೆ ನುಡಿಗಳನ್ನು ತಲುಪಿಸಿ ಬಿಡಿ.. ಮಾಡ್ತೀರಲ್ಲ !!!!!

******************

13 comments:

  1. ಜನುಮದಿನದ ಹಾರ್ದಿಕ ಶುಭಾಶಯಗಳು, ಪ್ರಕಾಶಣ್ಣ , ಎಲ್ಲರಿಗೂ ಒಳ್ಳೆಯದನ್ನು ಬಯಸುವ, ಒಳ್ಳೆಯ ಮನಸಿನ, ನಿಮಗೆ ನಮ್ಮೆಲ್ಲರ ಪ್ರೀತಿ ತುಂಬಿದ ಶುಭಾಶಯಗಳು, ನಿಮ್ಮ ಎಲ್ಲ ಒಳ್ಳೆಯ ಕನಸುಗಳು ನನಸಾಗಲಿ, ಶ್ರೀಕಾಂತ್ ಇಂತಹ ಶುಭಾಶಯ ಕೋರುವ ಪರಿಗೆ ನಿಮ್ಮನ್ನು ಮೀರಿಸಲು ಸಾಧ್ಯವಿಲ್ಲ . ಬೊಂಬಾಟ್ ಸಾರ್ಜಿ

    ReplyDelete
  2. ನಮ್ಮೆಲ್ಲರ ಪ್ರೇರಕ ಶಕ್ತಿಯಾದ ಶ್ರೀ. ಪ್ರಕಾಶ್ ಹೆಗ್ಡೆಯವರ ಜನುಮದಿನಕ್ಕಾಗಿ ತಾವು ಬರೆದುಕೊಟ್ಟ ಈ ಬ್ಲಾಗ್ ಬರಹ ತುಂಬಾ ಭಾವನಾತ್ಮಕವಾಗಿ ಮೂಡಿಬಂದಿದೆ.

    ನಿಮ್ಮ ಕ್ಲಿಕ್ಕಿನ ಚಿತ್ರವೂ ಸೂಪರ್ರು.

    ReplyDelete
  3. ಹುಟ್ಟುಹಬ್ಬದ ಶುಭಾಶಯಗಳು ಪ್ರಕಾಶ್ ಅವರಿಗೆ. ಶ್ರೀ ಸೊಗಸಾಗಿದೆ ನಿಮ್ಮ ಶುಭಾಷಯ ಕೋರುವ ಪರಿ.. :)

    ReplyDelete
  4. ಹುಟ್ಟುಹಬ್ಬದ ಶುಭಾಶಯಗಳು ಪ್ರಕಾಶಣ್ಣ :)

    ReplyDelete
  5. ಸೂಪರ್ ಶ್ರೀಕಾಂತ್ ಭಾಯ್....ಪ್ರಕಾಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಸೀಮೆಂಟು ಮರಳಿನ ಮಧ್ಯೆ , ಹೆಚ್ಚು ಹೆಚ್ಚು ಕಥೆಗಳು ಮೂಡಿ ಬರಲಿ , ಛಾಯೆ ಚಿತ್ತಾರವಾಗಲಿ

    ReplyDelete
  6. ತುಂಬಾ ಚೆನ್ನಾಗಿದೆ ನಿಮ್ಮ ಬರಹ... ಪ್ರಕಾಶಣ್ಣರವರ ಹುಟ್ಟು ಹಬ್ಬದ ಸಡಗರಕ್ಕೆ ಸುಂದರ ಉಡುಗೊರೆ ಈ ಬರಹ. ಹಠ ಬಿಟ್ಟುಕೊಡದ ಪುಸ್ತಕಗಳಿಗೆ ತಕ್ಕ ಶಾಸ್ತಿ ಮಾಡಿದ್ದೀರಿ! ನೂರಾರು ಕಾಲ ಹೀಗೆ ನಗು ನಗುತ್ತ ನಗಿಸುತ್ತಾ ಹುಟ್ಟು ಹಬ್ಬ ಆಚರಿಸಿಕೊಳ್ಳುವಂತಹವರಾಗಲಿ ನಮ್ಮ ಪ್ರಕಾಶಣ್ಣ.

    ReplyDelete
  7. roopashree.venkatarajuJanuary 17, 2014 at 5:13 PM

    How do you get such ideas??????????
    No one can match you boss….great writing..

    ReplyDelete
  8. ಶ್ರೀಮನ್...ಸುಂದರ ವ್ಯಕ್ತಿತ್ವಕ್ಕೆ ನಿಮ್ಮದೇ ವಿಷಿಷ್ಟ ಶೈಲಿಯಲ್ಲಿ ಶುಭಕಾಮನೆಗಳು. ಬಹುಪರಾಕ್ ನಿಮ್ಮ ಈ ಏಕಮೇವಾದ್ವಿತೀಯ ಶೈಲಿಗೆ.

    ReplyDelete
  9. ಖಂಡಿತವಾಗಿಯು ಮಾವ, ನೀನು ನಮ್ಮೆಲ್ಲರ ಪ್ರೀತಿಯ ಪ್ರಕಾಶಣ್ಣನೇ... ಕಾಮ-ದ್ವೇಷ-ಅಸೂಯೆ-ಲೋಭ-ಮೋಹ ಎಲ್ಲಾ ತರಹದ ಅರಿಷಡ್ವರ್ಗಗಳನ್ನು ಮೀರಿದ ಬರಹಗಳನ್ನು ನಮಗೆ ನೀಡಿ ಮುಂಬರುವ ಪೀಳಿಗೆಗೆ ಏನು ಬೇಕೋ, ಅದಕ್ಕೆ (ಪಕ್ಕಾ)ತಕ್ಕನಾಗಿ ನವರಸ ಸಹಿತ ಪೋಷ್ಟುಗಳು ಈಗಲ್ಲ - ಏಳೇಳು ಜನುಮಕ್ಕು ನಮನಾರ್ಹ... ಇಂಥಹ 'ಸ'ಕಾರ್ಯಕ್ಕೆ ಧನ್ಯವಾದ ಸಲ್ಲಿಸುವುದು ಅಪಮಾನ ಮಾಡಿದಂತೆ, ಚಿಕ್ಕದಾಗಿ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು :-)

    ReplyDelete
  10. ಸ್ವಲ್ಪ ತಡವಾಗಿ ಜನುಮ ದಿನದ ಶುಭಾಶಯಗಳು ಪ್ರಕಾಶಣ್ಣ.
    ಎಲ್ಲರೂ ಹೊಟ್ಟೆ ಹಿಡಿದು ನಗೋ ತರ ಮಾಡೋ,ದೊಡ್ಡಣ್ಣನಾಗಿ ನಮ್ಮಗಳ ಬರಹ ಭಾವಗಳ ಪ್ರೋತ್ಸಾಹಿಸೋ ನಿಮ್ಮ ಪ್ರೀತಿಗೊಂದು ನಮನ.

    ಶ್ರೀಕಾಂತಣ್ಣ ಎಂದಿನಂತೆ ಚಂದದ ಬರಹ...ಚಂದದ ಭಾವಗಳ ಜೊತೆ ಇವರುಗಳ ಸ್ನೇಹ ಕಟ್ಟಿ ಕೂತಿರೋವಾಗ ಹೀಗೊಂದಿಷ್ಟು ಭಾವಗಳು ಹರಿಯಲೇಬೇಕೇನೋ ಅಲ್ವಾ?
    ಚಂದಾ ಚಂದ ಈ ಭಾವಗುಚ್ಛ.

    ReplyDelete