Friday, December 27, 2013

"ನಿನ್ನ ಹೆಸರೇ" ಹೌದು.............................!

ಗೋರಾ ಗೋರಾ  ಎಂದು ಕೂಗುತ್ತಾ ಒಳ ಬರುವ ಭಕ್ತ ನಾಮದೇವರು ಅವಕ್ಕಾಗಿ ನಿಂತು ಬಿಡುತ್ತಾರೆ...

ಎರಡು ಕೈಗಳನ್ನು ಕಡಿದುಕೊಂಡು ವಿಠಲನಿಂದಲೇ ರಂಗಣ್ಣನ ರೂಪದಲ್ಲಿ ಸೇವೆಯನ್ನು ಮಾಡಿಸಿಕೊಳ್ಳುತ್ತಿದ್ದ  ಗೋರ ಆಶ್ಚರ್ಯ ಚಕಿತರಾಗಿ ಹೊರ ಬಂದು ನೋಡುತ್ತಾರೆ.. ಪರಮಾಶ್ಚರ್ಯ.. ಕೋಪಗೊಂಡು ಸಿಡಿಮಿಡಿ ನುಡಿಗಳಿಂದ ಗೋರನನ್ನು ಬಯ್ದು ಹೋಗಿದ್ದ ನಾಮದೇವರನ್ನು ನೋಡಿ,

"ನಾಮದೇವರೇ ನಾಮದೇವರೇ ಅಂದು ಮನಸ್ಸಿಗೆ ಬಹಳ ನೋವು ಮಾಡಿಕೊಂಡು ಹೋಗಿಬಿಟ್ಟಿರಿ.. ಇಂದು ನನ್ನ ಮೇಲೆ ಕೃಪೆ ಮಾಡಿ ಬಂದಿದ್ದೀರಾ.." ಎಂದು ಹಾಗೆಯೇ ಸಾಷ್ಟ್ರಾಂಗ ನಮಸ್ಕಾರ ಮಾಡುತ್ತಾರೆ..

"ಎಲ್ಲಿ ಎಲ್ಲಿ ತೋರಿಸು" 

"ಎಲ್ಲಿ ಸ್ವಾಮೀ.. ಎಷ್ಟೋ ವರ್ಷಗಳ ಬಯಕೆ.. ನಾನು ನೋಡಬೇಕೆಂಬ ಬಯಕೆ... "

"ನೀನ್ಯಾಕಪ್ಪ ಅಲ್ಲಿಗೆ ಹೋಗಬೇಕು.. ಇಲ್ಲಿಯೇ ಇಲ್ಲಿಯೇ ಬಂದು ಬಿಟ್ಟಿದ್ದೆ ನಿನಗೆ"

"ನಿಮ್ಮ ಮಾತೆ ನನಗೆ ಅರ್ಥವಾಗುತ್ತಿಲ್ಲ.. ನಮ್ಮ ಮನೆಯಲ್ಲಿ ನಾನು, ಮಂಜು... "

ಅರ್ಧದಲ್ಲಿಯೇ ಭಕ್ತ ಕುಂಬಾರ ಗೋರನ ಮಾತನ್ನು ಮೊಟಕುಗೊಳಿಸುವ ನಾಮದೇವರು

"ಅದಲ್ಲಪ್ಪ ನಾನು ಕೇಳುತ್ತಿರುವುದು ರಂಗಣ್ಣನಲ್ಲ.. ರಂಗಣ್ಣ ನೋಡು ಇಲ್ಲಿಯೇ ನನ್ನ ಪಕ್ಕದಲ್ಲಿಯೇ ನಿಂತಿದ್ದಾನೆ.. ನಾನು ಕೇಳುತ್ತಿರುವುದು ಬಾಲಣ್ಣ ಮತ್ತು ಇನ್ನೊಬ್ಬ ಅಣ್ಣ ಫೇಸ್ ಬುಕ್ ನಲ್ಲಿ ಹಾಕಿರುವ ಪೋಸ್ಟ್ ಭಾಗ್ಯ ಪುಟ್ಟಿಯ ಬ್ಲಾಗ್ ಲೇಖನ ಎಲ್ಲಿ ಎಲ್ಲಿ ಎಲ್ಲಿ ಎಲ್ಲಿ ಎಲ್ಲಿ ಎಲ್ಲಿ ತೋರಿಸು!"

"ಅಯ್ಯೋ ನಾಮದೇವರೇ ನಾನು ಅದಕ್ಕೆ ಕಾಯುತ್ತಾ ಇದ್ದೇನೆ.. ನೋಡಿ ಇನ್ನು ಸಮಯ ೧೧. ೫೮ ಇನ್ನು ಎರಡು ನಿಮಿಷ ಬಾಕಿ ಇದೆ..  ಇನ್ನೇನು ಫೇಸ್ಬುಕ್ಕಿನಲ್ಲಿ ಬಂದು ಬಿಡುತ್ತದೆ.. .. ಬನ್ನಿ ಇಲ್ಲೇ ಕೆಲವು ಮಡಕೆಗಳನ್ನು ಸರಿಸಿ ಕೂತು ವಿಶ್ರಮಿಸಿಕೊಳ್ಳಿ.. ಚಿಕಮಗಳೂರಿನ ಟೌನ್ ಕ್ಯಾಂಟೀನ್ನಲ್ಲಿ ಸಿಗುವ ಬೆಣ್ಣೆ ಮಸಾಲಾ ದೋಸೆ ಬರುತ್ತದೆ.. ಅಷ್ಟರಲ್ಲಿ ಬ್ಲಾಗ್ ಕೂಡ ಬರುತ್ತದೆ ಮತ್ತು ಭಾಗ್ಯ ಪುಟ್ಟಿ ಕೂಡ ಆನ್ಲೈನ್ ಗೆ ಬರುತ್ತಾಳೆ... "

"ಇಲ್ಲಾ ಗೋರಾ ನನಗೆ ಕಾಯಲು ಆಗುತ್ತಿಲ್ಲ.. ಕನಿಷ್ಠ ಪಕ್ಷ ಆ ಬ್ಲಾಗಿನ ಕೊಂಡಿಯನ್ನಾದರು ಕೊಡು.. ನೋಡುತ್ತಿರುತೇನೆ.. "

"ಓಹ್ ನಿಮ್ಮ ಕುತೂಹಲ ಅರ್ಥವಾಗುತ್ತಿದೆ.. ನೋಡಿ ಈ ಕೊಂಡಿಯಲ್ಲಿ ಲೇಖನ ಸಿಗುತ್ತದೆ.. ಆದರೆ ಅದನ್ನು ರಿಫ್ರೆಶ್ ಮಾಡುತ್ತಾ ಇರಬೇಕು ಆಯ್ತಾ... "

ಭಕ್ತ ಕುಂಬಾರ ಚಿತ್ರದ ನಿರ್ದೇಶಕರಿಗೆ ತಲೆ ಕೆಟ್ಟು ಹೋಗುತ್ತದೆ.. ಎಲ್ಲಿಯ ಬ್ಲಾಗ್, ಎಲ್ಲಿಯ ಮಸಾಲೆದೋಸೆ.. ಎಲ್ಲಿಯ ಭಾಗ್ಯ ಪುಟ್ಟಿ.. ಏನಿದು ನನಗೆ ತಲೆಗೆ ಹುಳ ಬಿಡುತ್ತಾ ಇದ್ದಾರೆ ಇವರು" ಎಂದು ಇಲ್ಲದ ತಲೆಯ ಕೂದಲನ್ನು ಸವರಿ ಕೊಳ್ಳುತ್ತಾ ಅತ್ತಿತ್ತಾ ನೋಡುತ್ತಾ.. ಬ್ಲಾಗ್ ಲಿಂಕ್ ಕೊಂಡಿಯನ್ನು ರಿಫ್ರೆಶ್ ಮಾಡುತ್ತಲೇ ಇರುತ್ತಾರೆ..

ಟನ್ ಟನ್ ಟನ್ ಟನ್ ಟನ್ ಟನ್ ಟನ್ ಟನ್ ಟನ್ ಟನ್ ಟನ್ ಟನ್ !!!!!

ಹನ್ನೆರಡು ಸಲ ದೂರದ ಗಡಿಯಾರ ಹೊಡೆದುಕೊಂಡು ಘಂಟೆ ಮಧ್ಯ ರಾತ್ರಿ ಹನ್ನೆರಡು ಆಯಿತು.. ಕ್ಯಾಲೆಂಡರ್ ಪ್ರಕಾರ ೨೭ನೆ ಡಿಸೆಂಬರ್ ೨೦೧೩ ಬಂತು ಅಂತ ಸಾರುತ್ತಿರುತ್ತದೆ..

"ಒಯೆ ಅಣ್ಣಾ ನಾನು ಬಂದೆ ಆನ್ಲೈನ್" ಅಂತ ಮೆಸೇಜ್ ಬರುತ್ತದೆ..

"ಒಯೆ ಮಗಳೇ.. ತಗೋ ಬ್ಲಾಗ್ ಲೇಖನ"  ಅಂತ ಈ ಕಡೆಯಿಂದ ಒಂದು ಕೊಂಡಿಯನ್ನು ಕಳಿಸುತ್ತಾರೆ!

"ಅಣ್ಣ ಈ ಸಾರಿ ನನಗೆ ಎರಡೆರಡು ಬಾರಿ ಹುಟ್ಟು ಹಬ್ಬಕ್ಕೆ ಶುಭಾಶಯಗಳು ಗೊತ್ತಾ.. ನಾನು ಫುಲ್ ಕುಶ್.. ಅಣ್ಣನಂತಹ ಅಣ್ಣ ಬಾಲಣ್ಣ ಒಂದು ದಿನ ಮೊದಲೇ ನನಗೆ ಶುಭಾಶಗಳನ್ನು ಕಳಿಸಿ ನನ್ನ ಪರೀಕ್ಷೆ ಸುಗಮವಾಗಿ ಸಾಗಲಿ ಅಂತ ಹಾರೈಸಿದ್ದಾರೆ.. ಅದರ ಜೊತೆಯಲ್ಲಿ ಸುಮಾರು ೧೦೩ ಮಂದಿ  ಆ ಪೋಸ್ಟನ್ನು ಇಷ್ಟ ಪಟ್ಟಿದ್ದಾರೆ ಮತ್ತು ೪೯ ನನ್ನ ಆತ್ಮೀಯರು, ಅಣ್ಣಂದಿರು, ಸ್ನೇಹಿತರು, ತಂಗಿಯರು, ಸ್ನೇಹಿತೆಯರು, ಗುರುಗಳು ಶುಭಾಶಯಗಳನ್ನು ತಲುಪಿಸಿದ್ದಾರೆ.. ಇನ್ನು ನನಗೆ ನಿಮ್ಮ ಮಗಳು ಶೀತಲ್ ಶ್ರೀಕಾಂತ್ ಜೊತೆಯಲ್ಲಿ ನನಗೂ ಎರಡನೇ ಮಗಳ ಸ್ಥಾನ ನೀಡಿರುವ ನೀವು ಬರೆದಿರುವ ಬ್ಲಾಗ್ ಬೇರೆ.. ನಾಳೆ ಇನ್ನು ಎಷ್ಟು ಕಾಮೆಂಟ್ ಸಿಗುತ್ತೋ.. ಈ ಸಾರಿ ನನಗೆ ಇಬ್ಬರು ಅಣ್ಣಂದಿರಿಂದ ಡಬಲ್ ಧಮಾಕ.. ಖುಷಿಯಾಗ್ತಿದೆ ಅಣ್ಣ.. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಪಡೆದಿರುವ ನಾನೇ ಧನ್ಯ.. "

ಇಲ್ಲ ಮಗಳೇ ನೀನು ಧನ್ಯಳಾಗಿರಬಹುದು...ಆದರೆ ನಿನ್ನಂತಹ ಪುಟ್ಟ ತುಂಟ ತಂಗಿ ನಮಗೆಲ್ಲ ಸಿಕ್ಕಿರುವುದು ನಮ್ಮ "ನಿನ್ನ ಹೆಸರೇ" ಹೌದು ಪುಟ್ಟಿ ...

"ಸುಂದರ ಶುಭಾಶಯಗಳು ನಿನಗಾಗಿ ಬಿ ಪಿ.. ಪರೀಕ್ಷೆಗಳು ನಿರೀಕ್ಷೆಯಂತೆ ಸುಲಭವಾಗಿರಲಿ, ಸುಗಮವಾಗಿರಲಿ.. ಜೊತೆಯಲ್ಲಿಯೇ ಮಾಯ್ನೋರ ಮನೆಯಲ್ಲಿ ಹದಿನೆಂಟು ತುಂಬಿ ನಾನು ಮತ ಹಾಕಬಹುದು ಎಂದು ನೆಗೆದಾಡಿಕೊಂಡು ಕುಣಿದಾಡಲಿ.. ಪರೀಕ್ಷೆ ಕಳೆದು (ಸಧ್ಯ ಪೋಸ್ಟ್ ಪೋನ್ ಆಗದಿದ್ದರೆ) ಬೇಗ ಊರಿಗೆ ಸೇರಿ ಬೆಳೆಯಬಹುದಾದ ಬಾಲದ ಜೊತೆಯಲ್ಲಿ ಪ್ರಕೃತಿ ಮಡಿಲಲ್ಲಿ ನೆಗೆಯುತ್ತಾ ನಗುತ್ತ ಕುಣಿದಾಡುವ ಖುಶಿ ನಿನದಾಗಲಿ.. ಹ್ಯಾಪಿ ಬರ್ತ್ಡೇ ಬಿ ಪಿ... "

ಧನ್ಯೋಸ್ಮಿ ಅಣ್ಣಾ(ಪ್ಪಾ)...ಮತ್ತೆ ಸಿಗ್ತೇನೆ.. ಓದಲು ಹೋಗಬೇಕು.. ಸಿಗ್ತೀನಿ.. ಬೈ.. ಬೈ

ನಿರ್ದೇಶಕರು ಪೂರ್ತ ತಲೆ ಕೆರೆದುಕೊಂಡು "ಭಾಗ್ಯ ಭಟ್ ನಿನ್ನ ಹುಟ್ಟು ಹಬ್ಬ ನನ್ನ ಚಿತ್ರದ ಚಿತ್ರಕಥೆಯನ್ನೇ ಬದಲಾಯಿಸಿಬಿಟ್ಟಿತು.. ಸುಂದರ ಹುಟ್ಟು ಹಬ್ಬದ ಸಡಗರ ನಿನದಾಗಲಿ... ಹುಟ್ಟು ಹಬ್ಬದ ಶುಭಾಶಯಗಳು"

10 comments:

  1. ​.ಭಾಗ್ಯ ಪುಟ್ಟಿ , ಜನುಮದಿನದ ಹಾರ್ದಿಕ ಶುಭಾಶಯಗಳು
    ​ನಿನ್ನ ಎಲ್ಲಾ ಒಳ್ಳೆಯ ಕನಸುಗಳು ನನಸಾಗಲಿ, ತಂದೆ ತಾಯಿಯರ ಮುದ್ದಿನ ಮಗಳಾಗಿ, ತುಂಟ ತಮ್ಮನ ಪ್ರೀತಿಯ ಅಕ್ಕನಾಗಿ, ನಮ್ಮೆಲ್ಲರ ತುಂಟ ಕವಯತ್ರಿಯಾಗಿ ಸದಾ ನಗು ನಗುತ್ತಾ ಸಾಧನೆಯ ಮೆಟ್ಟಿಲು ​

    ​ಹತ್ತುತ್ತಿರು ​
    ​. ​

    ​ಶುಭವಾಗಲಿ ​
    ​​
    ​ವಾರೆ ಮೇರಾ ಶೇರ್ , ಶ್ರೀ ಕಾಂತ್ ಜಿ ನಿಮ್ಮ ಕಲ್ಪನೆಯೇ ಸೂಪರ್ ಕಣ್ರೀ, ಯಾವ ಯಾವ ಸನ್ನಿವೇಶವನ್ನೋ ಹೆಕ್ಕಿ ತೆಗೆದು ಎಲ್ಲಿಗೋ ಜೋಡಿಸಿ ವಾವ್ ಎನ್ನೋ ಹಾಗೆ ಸುಂದರ ರೂಪ ನೀಡಿ ಶುಭಾಶಯ ಹರಿಸುತ್ತೀರಿ, ನೀವು
    ​ ಪದಗಳ ಗಾರುಡಿಗ ಅಂತೂ ಹೌದು

    ReplyDelete
  2. ಪುಟಾಣಿ ಕೂಸು ಭಾಗ್ಯಾ ಪುಟ್ಟಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

    ReplyDelete
  3. ಜನುಮದಿನದ ಶುಭಾಶಯ ಕೋರಲು ಇದಕಿಂತಲೂ ಅದ್ಭುತವಾದ ಆಲೋಚನೆ ಬೇರೆಯಾರಿಗೂ ಬರಲಾರದು ಬ್ರದರೋತ್ತಮ ಶ್ರೀಮಾನ್ . ಭಾಗ್ಯಾ ಅವರೇ ಹುಟ್ಟಿದ ಹಬ್ಬದ ಶುಭಾಷಯಗಳು.

    ReplyDelete
  4. "ಭಕ್ತ ಕುಂಬಾರ ಚಿತ್ರದ ನಿರ್ದೇಶಕರಿಗೆ ತಲೆ ಕೆಟ್ಟು ಹೋಗುತ್ತದೆ.. ಎಲ್ಲಿಯ ಬ್ಲಾಗ್, ಎಲ್ಲಿಯ ಮಸಾಲೆದೋಸೆ.. ಎಲ್ಲಿಯ ಭಾಗ್ಯ ಪುಟ್ಟಿ.. ಏನಿದು ನನಗೆ ತಲೆಗೆ ಹುಳ ಬಿಡುತ್ತಾ ಇದ್ದಾರೆ ಇವರು" ಎಂದು ಇಲ್ಲದ ತಲೆಯ ಕೂದಲನ್ನು ಸವರಿ ಕೊಳ್ಳುತ್ತಾ ಅತ್ತಿತ್ತಾ ನೋಡುತ್ತಾ.. ಬ್ಲಾಗ್ ಲಿಂಕ್ ಕೊಂಡಿಯನ್ನು ರಿಫ್ರೆಶ್ ಮಾಡುತ್ತಲೇ ಇರುತ್ತಾರೆ.."
    ಸೂಪರ್ ಸಾಲುಗಳು ಶ್ರೀ....
    ಭಾಗ್ಯ ನನಗೆ ನಿಮ್ಮ ನೇರ ಪರಿಚಯವಿಲ್ಲ, ಆದರು ನಿಮ್ಮ ಬ್ಲಾಗ್ ಮತ್ತೆ ನಿಮ್ಮ ಬಗ್ಗೆ ಬ್ಲಾಗ್ ಎರಡನ್ನು ಓದಿದ್ದೇನೆ. ಹುಟ್ಟು ಹಬ್ಬದ ಶುಭಾಷಯಗಳು, ಬದುಕಿನ ಪ್ರತಿ ತಿರುವಿನಲ್ಲೂ ಸಂತಸದ ನೆರಳಿರಲಿ... :)

    ReplyDelete
  5. ಸೂಪರ್ :) ಹುಟ್ಟಿದ ಹಬ್ಬದ ಶುಭಾಷಯಗಳು ಭಾಗ್ಯಾ...

    ReplyDelete
  6. ಮುದ್ದೇ...
    ಹುಟ್ಟು ಹಬ್ಬದ ಶುಭಾಶಯಗಳು.... ಖುಷಿಯಾಗಿರು ನಗುನಗುತಿರು ನೂರ್ಕಾಲ.... <3

    -ಅಕ್ಕಾ..

    ReplyDelete
  7. ಸೂಪರ್ :) ಶುಭಾಷಯಗಳು!

    ReplyDelete
  8. Super writeup! ಹುಟ್ಟಿದ ಹಬ್ಬದ ಶುಭಾಷಯಗಳು Bhagya :)

    ReplyDelete
  9. eXCELLENT THOUGHT....bHAGYA PUTTI NEENE DHANYALU...HEEGE BARUTIRALI LEKHANAGALU sRIKANTH...hATS OFF TO U.

    ReplyDelete
  10. ಶ್ರೀಕಾಂತಣ್ಣ,
    ಮಾತಿಲ್ಲ ಖುಷಿಗೆ.ಅದೆಷ್ಟು ಚಂದದ ಮನೆ ಅಲ್ವಾ ಇದು.ಬರಿಯ ಭಾವಗಳಲ್ಲಿ ಆದ ಪರಿಚಯ ಆತ್ಮೀಯವಾಗಿ,ಆತ್ಮೀಯತೆ ನನ್ನನ್ನಿಲ್ಲಿ ಮಗಳು,ಪುಟ್ಟಿ,ತಂಗಿ,ಮುದ್ದಕ್ಕ ಎಲ್ಲಾ ಬಂಧಗಳೊಟ್ಟಿಗೂ ಬೆಸೆವಾಗ ನಾ ನನ್ನೊಳಗಿರಲಿಲ್ಲ ಅವತ್ತು.
    ಅದೆಷ್ಟು ಪ್ರೀತಿಯಿಂದ ಸರಿ ರಾತ್ರಿ ಹನ್ನೆರಡಕ್ಕೆ ಜನುಮ ದಿನದ ಶುಭಾಶಯ ಹೇಳ್ತೀರ ನೀವು.

    ಹೀಗೊಂದಿಷ್ಟು ಆತ್ಮೀಯತೆ ನಂಗೆ ದಕ್ಕೋಕೆ ಕಾರಣರು ನೀವೇ. ಮಾತೇ ಆಡದಿದ್ದ ನನ್ನ ಕರೆದು ಮೊದಲು ಮಾತಿಗೆ ಕೂರಿಸಿದ್ದೂ ನೀವೆ.
    ಬಾಲಣ್ಣ,ಸಂಧ್ಯಕ್ಕ,ಸುಷ್ಮಕ್ಕ,ಪ್ರಕಾಶಣ್ಣ,ಬದರಿ ಸರ್ ,ಜೊತೆಗೆ ಅತ್ತಿಗೆ ಪುಟ್ಟಿ ಇಷ್ಟೆಲ್ಲಾ ಆತ್ಮೀಯರ ಜೊತೆ ಕೂತು ಅವರುಗಳ ತರಲೆ ಹುಡುಗಿಯಾಗಿ ಮಾತಾಡ್ತೀನಿ ಇವತ್ತಂದ್ರೆ ಕಾರಣ ನೀವೆ.
    ಪ್ರತಿಯ ಬ್ಲಾಗ್ ಗೂ ಚಂದದಿ ಕಾಮೆಂಟ್ ಹಾಕೋ,ತಪ್ಪಿದ್ರೂ ಬೇಜಾರಾಗದ ಹಾಗೇ ತಿದ್ದೋ,ದೊಡ್ಡದೊಂದು ಪ್ರೋತ್ಸಾಹ ಕೊಡೋ,ಹೀಗಿಷ್ಟು ಆತ್ಮೀಯ ಜನುಮ ದಿನಕ್ಕೆ ಶುಭಾಶಯ ಹೇಳೋ ಈ ಅಣ್ಣಂಗೆ ಏನನ್ನಲಿ ನಾ.
    ಖುಷಿಗೆ ಕಣ್ಣಂಚು ಒದ್ದೆ.
    ಪ್ರೀತಿಯಿಂದ,
    ಎರಡನೇ ಮಗಳು.

    ReplyDelete