ಕೆಲವೊಮ್ಮೆ ಹೀಗೂಮ್ಮೆ ಹಾಗೊಮ್ಮೆ ಅನ್ನಿಸುತ್ತದೆ..
ಆಲದ ಮರ ತನ್ನ ಬಿಳಲುಗಳನ್ನ ಭೂಮಿಗೆ ತಾಕಿಸಿ ಮತ್ತೊಂದು ಸಸಿಗೆ ಉತ್ಸಾಹ ತುಂಬುತ್ತದೆ.. ಅದರ ಮೂಲ ಹುಡುಕುತ್ತಾ ಹೋದರೆ ಮೂಲೆ ಮೂಲೆಯಲ್ಲೂ ಕಾಣೋದು ಬರಿ ಆತ್ಮ ವಿಶ್ವಾಸ, ಅಕ್ಕರೆ, ಮಧುರ ಮಧುರ ಸಿಹಿ ನೆರಳುಗಳು..
ಆ ಆಲದ ಮರದ ಬೆಚ್ಚನೆಯ ರೆಂಬೆ ಕೊಂಬೆಗಳಲ್ಲಿ ಕೂತು ಗಾನ ಲಹರಿ ಪಸರಿಸುವ ಹಕ್ಕಿ ಪಿಕ್ಕಿಗಳು ಹೇಳುತ್ತವೆ
ಓ ಮೈನಾ ಓ ಮೈನಾ, ಏನಿದು ಮಾಯೆ
ಮೋಡಗಳೆಲ್ಲಾ ಒಗ್ಗಟ್ಟಾಗಿ ನಿಂತು ಈ ಆಲದ ಮರಕ್ಕೆ ನೀರೆಯಲು ಸಜ್ಜಾಗಿದ್ದಾಗ.. ಅಲ್ಲಿಯೇ ಸುಯ್ ಎಂದು ಬೀಸುವ ಗಾಳಿ ಉಲಿಯುತ್ತದೆ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
ಆ ಮಳೆಹನಿಗೆ ಕಾತುರದಿಂದ ಕಾಯುತ್ತಿರುವ ಭೂರಮೆಯ ಸಸ್ಯ ಸಂಕುಲಗಳು ಅರೆ ಈ ಕಾಯುವಿಕೆಯನ್ನು ಹೀಗೆ ಹಾಡಬಹುದೇ ಅನ್ನುತ್ತ ತಮ್ಮಲ್ಲೇ ಗುನುಗುನಿಸುತ್ತಾ ಇರುತ್ತವೆ...
ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೇ, ಅನುರಾಗ ಎನ್ನಲೇ
ಪ್ರೀತಿಯೆನ್ನಲೇ, ಹೊಸಮಾಯೆ ಎನ್ನಲೇ
ಸಸ್ಯ ಸಂಕುಲಗಳು.. ಪ್ರತಿ ಮರಳಿನ ಕಣಗಳನ್ನು ಜಪಿಸುತ್ತಾ.. ಪ್ರಾರ್ಥನೆಯೊಂದಿಗೆ ಹೇಳುತ್ತವೆ..
ಕಾವೇರಿ ತೀರದಲಿ ಬರೇದೆನು ನಿನ್ ಹೆಸರ
ಆ ಪ್ರಾರ್ಥನೆಯಿಂದ.. ದೇವರ ಕೃಪೆಯಿಂದ ಮರಳೆಲ್ಲ ಹೊನ್ನಾಯ್ತು, ಯಾವ ಮಾಯೇ
ಮಳೆ ಬಂತು, ಮರಳೆಲ್ಲ ಹೊನ್ನಾಯ್ತು.. ಪ್ರಾಣಿ ಪಕ್ಷಿಗಳ ಸಸ್ಯ ಸಂಕುಲಗಳ ಸಂತಸಕ್ಕೆ ಹಿನ್ನೆಲೆ ಸಂಗೀತ ಇದ್ದಿದ್ದರೆ ಎಂದು ಕಾತುರತೆಯಿಂದ ಕಾಯುತ್ತಾ ಕೂತಿದ್ದಾಗ.. ಅಶರೀರವಾಣಿ ಮೊಳಗುತ್ತದೆ..
ಬಿದಿರಿನ ಕಾಡಿನಲಿ ಕೂಗಿದೆ ನಿನ್ ಹೆಸರ
ಬಿದಿರೆಲ್ಲ ಕೊಳಲಾಯ್ತು, ಯಾವ ಮಾಯೇ
ಕೊಳಲಿನ ನಾದಕ್ಕೆ ಮನ ಸೋಲದ ತನುವಿಲ್ಲ ಎನ್ನುವ ಹಾಗೆ.. ಆಕಾಶದಲ್ಲಿ ಹಾರುತ್ತಿರುವ ಅನುಭವ.. ಮನಸ್ಸು ಹೇಳುತ್ತದೆ
ಸೂತ್ರವು ಇರದೇ, ಗಾಳಿಯು ಇರದೇ
ಬಾನಲಿ ಗಾಳಿಪಟವಾಗಿರುವೇ
ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ
ನಾದಕ್ಕೆ ಮಾಧುರ್ಯಕ್ಕೆ ಮೈ ಮರೆತ ಬಳಗ.. ಕಣ್ಣು ಬಿಟ್ಟು ನೋಡಿದರೆ ಅಲ್ಲಿ ಸರಸ್ವತಿ ಲೋಕದ ಸಭಿಕರೆಲ್ಲಾ ತುಂಬಿದ್ದಾರೆ.. ಅರೆ ಇದೇನು ಮಾಯೆ.. ಶಾರದ ಲೋಕಕ್ಕೆ ಹೋಗೋಣ ಅಂದ್ರೆ.. ಶಾರದೆಯ ಲೋಕವೇ ಬಂದು ಬಿಟ್ಟಿದೆ... ಇದೆಂಥ ಮಾಯೆ.. ಓಹ್ ಇದು ಕೂಡ ಹೀಗೆ ಇರಬೇಕು ಅನ್ನುತ್ತಾ ನಾಲಿಗೆಯಲ್ಲಿ ಪದಗಳು ಹರಿದು ಬರುತ್ತಿವೆ
ಬೇಡನ ಕಣ್ಣಿಗೆ ಬಾಣವ ನಾಟಿಸುವ
ಈ ಜಿಂಕೆಬೇಟೆಯಲ್ಲಿ ಯಾವ ಮಾಯೇ
ಹತ್ತಿಗೆ ಬೆಂಕಿಯನು ಹತ್ತಿಸುವ ಮಾಯೆ
ಮೀನುಗಳೆ ಗಾಳ ಬೀಸೋ ಯಾವ ಮಾಯೆ
ಆಕಾಶಕ್ಕೆ ಬಲೆಯಾ ಬೀಸಿ
ಮೋಡ ನಗುವಾ ಮರ್ಮಾ ಏನೋ
ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ
ಹೀಗೆ..... ಒಂದು ಆಲದ ಮರ ತಾನಷ್ಟೇ ಬೆಳಯದೆ ತನ್ನ ಸುತ್ತ ಮುತ್ತಲು ಸಿಕ್ಕದ್ದನ್ನೆಲ್ಲ ಸೇರಿಸಿಕೊಂಡು ಬೆಳೆಯುವ ಹಾಗೆ .... ಆಶ್ರಯ ನೀಡುವ ಹಾಗೆ.. ನಮ್ಮೆಲ್ಲರ ಮಧ್ಯೆ ಇರುವ ಒಂದು ಆಲದ ಮರ ನಮ್ಮ DFR.- Devine Friend Roopa.
ತಾನು ಬೆಳೆದು.. ಇತರರನ್ನು ಬೆಳೆಸಿ.. ಅವರ ಬೆಳವಣಿಗೆಯಲ್ಲಿ ಸಂತಸಕಾಣುವ ಮನಸ್ಸು ಇವರದ್ದು..
ಕಾಳಿಕಾ ಮಾತೆಯ ಮುಂದೆ ನಿಂತ ಕಾಳಿದಾಸನ ಹಾಗೆ...
ಇವರನ್ನು ಹೇಗೆ ಕರೆಯಲಿ... ಕೂಗಲಿ ಎಂಬ ಗೊಂದಲ ಇದ್ದಾಗ.. ತಾಯಿಯನ್ನು ಮಗು ಹೇಗೆ ಕರೆದರೂ ಮಾತೆಗೆ ಸಂತೋಷವೇ ಅಲ್ಲವೇ ಎಂಧು ಮನಸ್ಸನ್ನು ಸಮಾಧಾನ ಪಡಿಸಿಕೊಂಡಿತು..
ಅಮ್ಮ ಎನ್ನುವ ಒಂದು ಪದವೇ ಶಕ್ತಿ ಕೊಡುತ್ತದೆ.. "ಅಮ್ಮನ ಕೃಪೆ"ಯಿಂದ ಮಣಿಕಟ್ಟಿನ ಮೇಲೆ ಮೂಡಿರುವ ಆ ಹೆಸರು ಇನ್ನಷ್ಟು ಭಾವ ಉಕ್ಕಿಸಲು ಅನುವು ಮಾಡಿಕೊಡುತ್ತದೆ.. ಮುದ್ದು ಪುಟಾಣಿ ಅಕ್ಕರೆಯ ಮೋಡಗಳ ಮಾಲೆ "ಮೇಘನ" ಇವರನ್ನು ಒಳಗೊಂಡ ಹಸಿರು ಉಸಿರಿಗೆ ಅನ್ವರ್ಥವಾಗಿರುವ ಹೆಸರು "ರೂಪ ಸತೀಶ್"..
ಇವರ ಸಾಧನೆಯ ಒಂದು ಮಜಲು "ಅಮ್ಮನ ಕೃಪೆ".. ಸಂತಸ ನೆಮ್ಮದಿ ಸುಖ ಶಾಂತಿ ಎಲ್ಲವಕ್ಕೂ ಅಮ್ಮನ ಕೃಪೆ ತವರೂರಾಗಿರಲಿ ಎಂಬ ಹಾರೈಕೆಯೊಂದಿಗೆ ಸಮಸ್ತ ಬ್ಲಾಗ್ ಕುಟುಂಬದಿಂದ ಗೃಹಪ್ರವೇಶದ ಈ ಸಮಾರಂಭಕ್ಕೆ ಅಭಿನಂದನೆಗಳು..
DFR ನಿಮ್ಮಂತಹ ಸಹೃದಯ ಮಿತ್ರರ ಸಂಖ್ಯೆ ಅಗಣಿತವಾಗಿರಲಿ... ಅವಿರತವಾಗಿರಲಿ..
ಸುಂದರ ಸಮಾರಂಭಕ್ಕೆ ಅಭಿನಂದನೆಗಳು!!!
ಆಲದ ಮರ ತನ್ನ ಬಿಳಲುಗಳನ್ನ ಭೂಮಿಗೆ ತಾಕಿಸಿ ಮತ್ತೊಂದು ಸಸಿಗೆ ಉತ್ಸಾಹ ತುಂಬುತ್ತದೆ.. ಅದರ ಮೂಲ ಹುಡುಕುತ್ತಾ ಹೋದರೆ ಮೂಲೆ ಮೂಲೆಯಲ್ಲೂ ಕಾಣೋದು ಬರಿ ಆತ್ಮ ವಿಶ್ವಾಸ, ಅಕ್ಕರೆ, ಮಧುರ ಮಧುರ ಸಿಹಿ ನೆರಳುಗಳು..
ಆ ಆಲದ ಮರದ ಬೆಚ್ಚನೆಯ ರೆಂಬೆ ಕೊಂಬೆಗಳಲ್ಲಿ ಕೂತು ಗಾನ ಲಹರಿ ಪಸರಿಸುವ ಹಕ್ಕಿ ಪಿಕ್ಕಿಗಳು ಹೇಳುತ್ತವೆ
ಓ ಮೈನಾ ಓ ಮೈನಾ, ಏನಿದು ಮಾಯೆ
ಮೋಡಗಳೆಲ್ಲಾ ಒಗ್ಗಟ್ಟಾಗಿ ನಿಂತು ಈ ಆಲದ ಮರಕ್ಕೆ ನೀರೆಯಲು ಸಜ್ಜಾಗಿದ್ದಾಗ.. ಅಲ್ಲಿಯೇ ಸುಯ್ ಎಂದು ಬೀಸುವ ಗಾಳಿ ಉಲಿಯುತ್ತದೆ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
ಆ ಮಳೆಹನಿಗೆ ಕಾತುರದಿಂದ ಕಾಯುತ್ತಿರುವ ಭೂರಮೆಯ ಸಸ್ಯ ಸಂಕುಲಗಳು ಅರೆ ಈ ಕಾಯುವಿಕೆಯನ್ನು ಹೀಗೆ ಹಾಡಬಹುದೇ ಅನ್ನುತ್ತ ತಮ್ಮಲ್ಲೇ ಗುನುಗುನಿಸುತ್ತಾ ಇರುತ್ತವೆ...
ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೇ, ಅನುರಾಗ ಎನ್ನಲೇ
ಪ್ರೀತಿಯೆನ್ನಲೇ, ಹೊಸಮಾಯೆ ಎನ್ನಲೇ
ಸಸ್ಯ ಸಂಕುಲಗಳು.. ಪ್ರತಿ ಮರಳಿನ ಕಣಗಳನ್ನು ಜಪಿಸುತ್ತಾ.. ಪ್ರಾರ್ಥನೆಯೊಂದಿಗೆ ಹೇಳುತ್ತವೆ..
ಕಾವೇರಿ ತೀರದಲಿ ಬರೇದೆನು ನಿನ್ ಹೆಸರ
ಆ ಪ್ರಾರ್ಥನೆಯಿಂದ.. ದೇವರ ಕೃಪೆಯಿಂದ ಮರಳೆಲ್ಲ ಹೊನ್ನಾಯ್ತು, ಯಾವ ಮಾಯೇ
ಮಳೆ ಬಂತು, ಮರಳೆಲ್ಲ ಹೊನ್ನಾಯ್ತು.. ಪ್ರಾಣಿ ಪಕ್ಷಿಗಳ ಸಸ್ಯ ಸಂಕುಲಗಳ ಸಂತಸಕ್ಕೆ ಹಿನ್ನೆಲೆ ಸಂಗೀತ ಇದ್ದಿದ್ದರೆ ಎಂದು ಕಾತುರತೆಯಿಂದ ಕಾಯುತ್ತಾ ಕೂತಿದ್ದಾಗ.. ಅಶರೀರವಾಣಿ ಮೊಳಗುತ್ತದೆ..
ಬಿದಿರಿನ ಕಾಡಿನಲಿ ಕೂಗಿದೆ ನಿನ್ ಹೆಸರ
ಬಿದಿರೆಲ್ಲ ಕೊಳಲಾಯ್ತು, ಯಾವ ಮಾಯೇ
ಕೊಳಲಿನ ನಾದಕ್ಕೆ ಮನ ಸೋಲದ ತನುವಿಲ್ಲ ಎನ್ನುವ ಹಾಗೆ.. ಆಕಾಶದಲ್ಲಿ ಹಾರುತ್ತಿರುವ ಅನುಭವ.. ಮನಸ್ಸು ಹೇಳುತ್ತದೆ
ಸೂತ್ರವು ಇರದೇ, ಗಾಳಿಯು ಇರದೇ
ಬಾನಲಿ ಗಾಳಿಪಟವಾಗಿರುವೇ
ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ
ನಾದಕ್ಕೆ ಮಾಧುರ್ಯಕ್ಕೆ ಮೈ ಮರೆತ ಬಳಗ.. ಕಣ್ಣು ಬಿಟ್ಟು ನೋಡಿದರೆ ಅಲ್ಲಿ ಸರಸ್ವತಿ ಲೋಕದ ಸಭಿಕರೆಲ್ಲಾ ತುಂಬಿದ್ದಾರೆ.. ಅರೆ ಇದೇನು ಮಾಯೆ.. ಶಾರದ ಲೋಕಕ್ಕೆ ಹೋಗೋಣ ಅಂದ್ರೆ.. ಶಾರದೆಯ ಲೋಕವೇ ಬಂದು ಬಿಟ್ಟಿದೆ... ಇದೆಂಥ ಮಾಯೆ.. ಓಹ್ ಇದು ಕೂಡ ಹೀಗೆ ಇರಬೇಕು ಅನ್ನುತ್ತಾ ನಾಲಿಗೆಯಲ್ಲಿ ಪದಗಳು ಹರಿದು ಬರುತ್ತಿವೆ
ಬೇಡನ ಕಣ್ಣಿಗೆ ಬಾಣವ ನಾಟಿಸುವ
ಈ ಜಿಂಕೆಬೇಟೆಯಲ್ಲಿ ಯಾವ ಮಾಯೇ
ಹತ್ತಿಗೆ ಬೆಂಕಿಯನು ಹತ್ತಿಸುವ ಮಾಯೆ
ಮೀನುಗಳೆ ಗಾಳ ಬೀಸೋ ಯಾವ ಮಾಯೆ
ಆಕಾಶಕ್ಕೆ ಬಲೆಯಾ ಬೀಸಿ
ಮೋಡ ನಗುವಾ ಮರ್ಮಾ ಏನೋ
ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ
ಹೀಗೆ..... ಒಂದು ಆಲದ ಮರ ತಾನಷ್ಟೇ ಬೆಳಯದೆ ತನ್ನ ಸುತ್ತ ಮುತ್ತಲು ಸಿಕ್ಕದ್ದನ್ನೆಲ್ಲ ಸೇರಿಸಿಕೊಂಡು ಬೆಳೆಯುವ ಹಾಗೆ .... ಆಶ್ರಯ ನೀಡುವ ಹಾಗೆ.. ನಮ್ಮೆಲ್ಲರ ಮಧ್ಯೆ ಇರುವ ಒಂದು ಆಲದ ಮರ ನಮ್ಮ DFR.- Devine Friend Roopa.
ತಾನು ಬೆಳೆದು.. ಇತರರನ್ನು ಬೆಳೆಸಿ.. ಅವರ ಬೆಳವಣಿಗೆಯಲ್ಲಿ ಸಂತಸಕಾಣುವ ಮನಸ್ಸು ಇವರದ್ದು..
ಏನೇ ಬರಲಿ.. ಹೀಗೆ ಇರಲಿ ... ಹೇಗೆ ಇರಲಿ..
೩ಕ ನನ್ನ ಬೆನ್ನ ಹಿಂದೆ..
ನಗು ನನ್ನ ಮುಂದೆ
|
ಇವರನ್ನು ಹೇಗೆ ಕರೆಯಲಿ... ಕೂಗಲಿ ಎಂಬ ಗೊಂದಲ ಇದ್ದಾಗ.. ತಾಯಿಯನ್ನು ಮಗು ಹೇಗೆ ಕರೆದರೂ ಮಾತೆಗೆ ಸಂತೋಷವೇ ಅಲ್ಲವೇ ಎಂಧು ಮನಸ್ಸನ್ನು ಸಮಾಧಾನ ಪಡಿಸಿಕೊಂಡಿತು..
ಅಮ್ಮ ಎನ್ನುವ ಒಂದು ಪದವೇ ಶಕ್ತಿ ಕೊಡುತ್ತದೆ.. "ಅಮ್ಮನ ಕೃಪೆ"ಯಿಂದ ಮಣಿಕಟ್ಟಿನ ಮೇಲೆ ಮೂಡಿರುವ ಆ ಹೆಸರು ಇನ್ನಷ್ಟು ಭಾವ ಉಕ್ಕಿಸಲು ಅನುವು ಮಾಡಿಕೊಡುತ್ತದೆ.. ಮುದ್ದು ಪುಟಾಣಿ ಅಕ್ಕರೆಯ ಮೋಡಗಳ ಮಾಲೆ "ಮೇಘನ" ಇವರನ್ನು ಒಳಗೊಂಡ ಹಸಿರು ಉಸಿರಿಗೆ ಅನ್ವರ್ಥವಾಗಿರುವ ಹೆಸರು "ರೂಪ ಸತೀಶ್"..
DFR ನಿಮ್ಮಂತಹ ಸಹೃದಯ ಮಿತ್ರರ ಸಂಖ್ಯೆ ಅಗಣಿತವಾಗಿರಲಿ... ಅವಿರತವಾಗಿರಲಿ..
ಸುಂದರ ಸಮಾರಂಭಕ್ಕೆ ಅಭಿನಂದನೆಗಳು!!!
ಹೊಸ ಮನೆಯೊಳ ಮೊದಲ ಹೆಜ್ಜೆ
ReplyDeleteನೂರು ಗೆಲುವಿಗಳಿಗಿದೇ ಸೋಪಾನ
ಮನಸ್ಸಿಗೆ ನಾಟಿ ಬಿಡುವಂತೆ ಬರೆದು ಕೊಡುವುದು ನಿಮಗೆ ಸಿದ್ದಿಸಿದ ವರ.
ರೂಪಾ ಅವರ ಬಗ್ಗೆ ಬರೆಯಲು ಕುಳಿತರೆ, ಪದಗಳು ಸುಲಲಿತ ಮಲ್ಲಿಪಂದಿರಿ!
ನಿಮ್ಮಂತಹ ಗೆಳೆಯರ ಜೊತೆಗಿರುವುದೇ ನಮಗೆ ಧನ್ಯಭಾವ.
Thank you BP avre :) neevu bandaddu khushi ..........
Deleteಶ್ರೀಕಾಂತೂ....
ReplyDeleteರೂಪಾರವರು ನಮಗೆಲ್ಲ ಸ್ಪೂರ್ತಿ ಕೊಡುವಂಥಹ ವ್ಯಕ್ತಿತ್ವ....
ಅವರ ಶ್ರಮ ... ಸಾಧನೆ.... ಖುಷಿ ಕೊಡುತ್ತದೆ.
ನಾನೇನಾದರೂ ಸಿನೇಮಾನೊ ಅಥವಾ ಸೀರಿಯಲ್ ತೆಗೆದರೆ...
"ಭಾರತ ಮಾತೆ"
ಅಥವಾ "ಕನ್ನಡ ಮಾತೆಯ" ಪಾತ್ರ ಅವರಿಗಾಗಿ ಮೀಸಲಿಡುವೆ...
ಅವರ ಮನೆಯ ಪೂಜೆಗೆ ಹೋಗಿ ತುಂಬಾ ಖುಷಿ ಪಟ್ಟು ಬಂದೆವು...
ಆಶಾ ದಿನವಿಡಿ ಅವರ ಸುದ್ಧಿಯನ್ನೇ ಹೇಳ್ತಾ ಇದ್ದಳು....
Ji, happy to read this :) dampatigaLu bandaddu bahala khushiyaaythu.....
Deleteನನಗೆ ಮಿಸ್ ಆಯ್ತು....ಶ್ರೀಮನ್ ಧನ್ಯವಾದ ಈ ಆತ್ಮೀಯ ಲೇಖನಕ್ಕೆ,,, ರೂಪಾ ಪರಿವಾರಕ್ಕೆ ಅವರ ಹೊಸ ಗೂಡಿಗೆ ಸರ್ವ ಶುಭ ಕೋರುತ್ತೇನೆ.
ReplyDeleteAzad Bhai, neevu elli miss aaglikke sadhya? Wahida Didi bandiddru, jothege nimmanna nenapisoke nimma udugoreyoo saha :) I was blessed .......
Deleteರೂಪ ಸತೀಶ್ ನಮ್ಮ ಆದ ಹುಟ್ಟಿದ ಸಹೋದರಿ ಎಂಬ ಭಾವನೆ ಬಂದು ಬಿಟ್ಟಿದೆ . ಒಬ್ಬ ಹೆಣ್ಣು ಮಗಳು ಹೇಗಿರ ಬೇಕು ಎಂಬುದಕ್ಕೆ ಒಂದು ಸ್ಪಷ್ಟ ಉದಾಹರಣೆ . ಇನ್ನು ಅವರ ಅಮ್ಮ ಸದಾ ಹಸನ್ಮುಖಿ ಸಹೃದಯರು , ಮೇಘು ಅಂತೂ ಒಳ್ಳೆಯ ಮಗಳು, ಇಂತಹ ಸಹೋದರಿಯ ಸ್ನೇಹ , ಪ್ರೀತಿ ಗಳಿಸಿದ ನಾವು ನಿಜಕ್ಕೂ ಅದೃಷ್ಟವಂತರು . ಹೊಸ ಮನೆ ಗೃಹಪ್ರವೇಶ ಮಾಡಿದ ಸಹೋದರಿಯ ಬಾಳು ಬಂಗಾರವಾಗಲಿ. ಶ್ರೀಕಾಂತ್ ನಿಮ್ಮ ಲೇಖನದ ಒಂದೊಂದು ಪದಕ್ಕೂ ನಿಮಗೆ ಜೈ ಹೇಳುತ್ತೇನೆ
ReplyDeleteDoDDa maathu Balu Sir, neevu bandu hogiddu, matte bandaddu double khushiyaythu.... Nimishambadeviya prasaada manege bandiddu namma punya.... Thanks for everything, am grateful.
Deleteನೂತನ ಗೃಹಪ್ರವೇಶದ ಅಭಿನಂದನೆಗಳು ರೂಪ ಸತೀಶ್ ಅವರೆ..
ReplyDeleteThank you Lakshmipathi avre, nimmanna naviNanaguLuguLu nalli bEti aagiddu :) Sajjana Sarala vyakthitva.... khushiyaaythu....
Deleteಹೊಸ ಮನೆ ಸದಾ ಸಂಭ್ರಮ, ನಗು, ಶಾಂತಿಯಿಂದ ತುಂಬಿರಲಿ....
ReplyDeleteರೂಪಾ ಹಾಗೂ ಪರಿವಾರದವರಿಗೆಲ್ಲಾ ಶುಭಾಶಯಗಳು....
ಪ್ರಕಾಶಣ್ಣ ಹೇಳಿದ ಹಾಗೆ ಅವರು ಕನ್ನಡ ಮಾತೆ ನೇ....
ಚೆಂದದ ಲೇಖನ ಶ್ರೀ....
Thank you Suguna - Maheshrey :) alliddoo neevu mattu Suguna ille ideera nammooralle annisutte.... Nimmibbara bagge hemmeyoo Saha :) Sneha - Preeti - Vishwaasa - Aatmeeyathe heege irali..... sadaa heege irali antha aashisteeni.....
Deleteಶ್ರೀಕಾಂತ್ ಏನ್ ಚೆಂದಾ ಬರಿತೀರಪ್ಪಾ ನೀವು, ನಿಮ್ಮ ಒಳ್ಳೆಯತನವೇ ಲೇಖನಗಳಲ್ಲಿ ಮೂಡಿಬರುತ್ತದೆ ಸದಾ ಎಲ್ಲರನ್ನೂ ಪ್ರೋತ್ಸಾಹಿಸುವ ನುಡಿ ಕೊಡುತ್ತೀರಲ್ಲಾ ಅದಕ್ಕಿಂತಾ ಒಳೆಯದು ಮತ್ತೇನಿದೆ.. ಸದಾ ನೀವು ನಗು ನಗುತ್ತಿರಿ ಹೀಗೆ ಬ್ಲಾಗ್ ಬರೆಯುತ್ತಲಿರಿ.
ReplyDeleteಇನ್ನು ರೂಪ ಅವರ ಬಗ್ಗೆ ಹೇಳುವಂತದು ಏನೂ ಇಲ್ಲ ಬಿಡಿ ಅವರ ಬಗ್ಗೆ ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ರೂಪ ಸದಾ ನೂರ್ಕಾಲ ಸುಖವಾಗಿ ತಮ್ಮ ಸುತ್ತಲಿನವರಿಗೆಲ್ಲಾ ಸಹಕಾರಿಯಾಗಿ ಇರಲೆಂದು ಆಶಿಸುತ್ತೇನೆ
Suguns, thanks for the wishes....
Deletesariyaagi heLidri :) He is so good that he finds only goodness in others :)
Sri,
ReplyDeleteThank you for the wonderful writeup.... nimma ee preethibharitha "SriViThal"ra giftanna amma odidru, eradu dinada nanthara.... avara kannalli neerittu.... idanne elli netaakoNa antha keLidru, amma, idannella ellrigoo torsokaagutta nachke aagutte .... oLage ettiDtheeni ande... Swalpadinavaadru aache idu andru, illamma ande. Aamele adanna elli ettittidaaro gottilla.... bandovrige naane toriskoLtheeni anthidru........
Thank you Sri, every time you become dearer and dearer :)