Monday, June 23, 2014

ಏನೀ ಸ್ನೇಹ ಸಂಬಂಧ ಎಲ್ಲಿಯದೋ ಈ ಅನುಬಂಧ.. !!!

ನನ್ನ ಬಳಿಯಿರುವ ಸುತ್ತ ಮುತ್ತಲು ಇರುವ ಎಲ್ಲವನ್ನೂ ನಾ ಮಾತಾಡಿಸುವುದು ನನ್ನ ಜಾಯಮಾನಕ್ಕೆ ಬಂದು ಬಿಟ್ಟಿದೆ.. ಅಂತರಗಳು ಜಾಸ್ತಿಯಾಯಿತು.. ಕಾರಣಗಳು ಅತಿಯಾಯಿತು.. ಕಡೆಗೆ ಕಾರಣಕ್ಕೆ ಅಂತರಗಳು ಹೆಚ್ಚಾಯಿತು.. ಕಾರಣಾಂತರ ಎನ್ನುವ ಪದ ಹುಟ್ಟಿಯೇ ಬಿಟ್ಟಿತು..

ಹಲವಾರು ವಾರಗಳಿಂದ.. ಅರಿಯದ ಒತ್ತಡಗಳಿಂದ.. ನಾ ಪ್ರೀತಿಸುವ ನನ್ನ ಬೈಕನ್ನು ಹೊರಗೆ ಓಡಾಡಿಸಿಯೇ ಇರಲಿಲ್ಲ.. ಇಂದು ಕಚೇರಿಯಿಂದ ಮನೆಗೆ ಬರುವಾಗಲೇ ಯಾಕೋ ಅನ್ನಿಸಿತು ಇವತ್ತು ಏನಾಗಲಿ ಮುಂದೆ ಸಾಗುನೀ ಎನ್ನುವಂತೆ ಬೈಕನ್ನು ಹೊರಗೆ ತೆಗೆಯಲೇ ಬೇಕು ಎಂದು ನಿರ್ಧರಿಸಿದ್ದೆ.. "ಮಗಳು" ಕೂಡ ಯಾಕೋ ಮಂಕಾಗಿದ್ದು ಕಾರಣವಾಗಿತ್ತು..

ಮನೆಗೆ ಬಂದೆ.. ನನ್ನ ಪ್ರೀತಿಯ ಬೈಕಿನ ಮೇಲೆ ಕೈಯಾಡಿಸಿದೆ.. ಕನ್ನಡಿಯಲ್ಲಿ ನನ್ನ ನೋಡಿ ಮುಗುಳುನಗೆ ಕೊಟ್ಟಿತು... ಹೊರಗೆ ಹೊರಟೆ ಬಿಟ್ಟೆ.. ನನ್ನ ಎಲ್ಲಾ ಸಾಹಸಕ್ಕೆ ಹೆಗಲು ಕೊಟ್ಟು ಸಹಕರಿಸಿದ ಮಿತ್ರನನ್ನು ಹೊರಗೆ ಗಾಳಿಯಲ್ಲಿ ಸುತ್ತಾಡಿಸಿ ಬಂದು ನಿಲ್ಲಿಸಿದೆ... ಹಾಟ್ಸ್ ಆಫ್ ಶ್ರೀ ಎಂದಿತು ಬೈಕ್..

ಹೌದು ಸ್ನೇಹದ ಸೆಳೆತವೆ ಹಾಗೆ.. ಎಲ್ಲೋ ಇದ್ದ ಹಲವಾರು ಹಾಲಿನ ಮನಸಿನ ಹೃದಯಗಳನ್ನು ಜೇನಿನ ಜೊತೆ ಬೆರೆಸಿ.. "ಜೇನಿನ ಹೊಳೆಯೋ ಹಾಲಿನ  ಮಳೆಯೋ ಸುಧೆಯೋ ಈ ಲೋಕ ಸ್ನೇಹ ಲೋಕವೋ.." ಅನ್ನುವಂತೆ ಹಾಡಿಸಿಬಿಡುತ್ತದೆ..

ನಾನು ನನ್ನದು ನನ್ನಿಂದಲೇ... ಎನ್ನುವ ಈ ಕಾಲದಲ್ಲಿ ನಾವು ನಮ್ಮದು ನಮ್ಮಿಂದಲೇ ಅಲ್ಲ ಬದಲಿಗೆ ನಿಮ್ಮಿಂದಲೇ ಎನ್ನುತ್ತಾ "ನಲಿಯುತಾ ಹೃದಯ ಹಾಡನು ಹಾಡುವ" ಸ್ನೇಹಲೋಕದ ಮೃದು ಮನಸ್ಸುಗಳು ಒಂದು ಗೂಡಿನಲ್ಲಿ  ಕೂಡಲು ಶುರುವಾಗಿ ಐದು ಕಾರ್ತಿಕಗಳು ಆಗಿದ್ದವು (ಕಾರ್ತಿಕ ಮಾಸದಲಿ ದೀಪದ ಸಾಲುಗಳು ಸುಂದರ.. ಈ ಲೋಕದಲ್ಲಿ ಸ್ನೇಹದ ದೀವಿಗೆ ನೀಡುವ ಬೆಳಕು ಸುಂದರ.. ಹಾಗಾಗಿ ವಸಂತಗಳು ಅನ್ನುವ ಬದಲು ಕಾರ್ತಿಕ ಮಾಸ ಎಂದದ್ದು)

ಆ ಲೋಕದಲ್ಲಿ ಕಾಲಿಟ್ಟೊಡನೆ ಅರೆ.. ಆ ಅಣ್ಣ.. ಅರೆ ಈ ಬ್ರದರ್.. ಅರೆ ಅಕ್ಕ.. ಅರೆ ಸಿಸ್ಟರ್.. ಅರೆ ಸರ್ಜಿ.. ಹೀಗೆ ಮಧುರ ಬಾಂಧ್ಯವ ಉಕ್ಕಿ ಹರಿಯುತ್ತಿತ್ತು.. ಯಾಕೋ ಕಣ್ಣೆತ್ತಿ ನೋಡಿದೆ.. ಅಲ್ಲಿ ಹಾಕಿದ್ದ ಫಲಕ ನೋಡಿದೆ.. ತಲೆ ಅಲ್ಲಾಡಿಸೋಣ ಅಂದರೆ.. ಆಗಲೇ ಹೃದಯ ತುಂಬಿ ನಲಿದಾಡುತ್ತಿತ್ತು..

ಸ್ನೇಹದ ಜ್ಯೋತಿಯಲ್ಲಿ ಬೆಳಗುತ್ತಿರುವ ದೇವಾಲಯ

ಸ್ನೇಹಲೋಕದ ಸುಂದರ ಪರಿವಾರ ಸ್ನೇಹ ಜ್ಯೋತಿ ಆಶ್ರಮದಲ್ಲಿ ಐದನೇ ವಾರ್ಷಿಕೋತ್ಸವ ನಡೆಸಲು ನಿರ್ಧರಿಸಿದ್ದರು.. ಅದಕ್ಕೆ ಬೇಕಿದ್ದ ಸಿದ್ಧತೆಗಳು ಸಾಗಿದ್ದವು.. ಮಕ್ಕಳು ಸಂತಸದಿಂದ ಕುಣಿಯುತ್ತಿದ್ದವು.. ಅಣ್ಣಾ ಹಾಡು ಬೇಕು ಎನ್ನುತ್ತಿತು ಒಂದು ಮುಗ್ಧ ಮಗು.. ಹಾಕಿದಾಗ ತನ್ನಷ್ಟಕ್ಕೆ ತಾನೇ ಕುಣಿಯುತ್ತಿದ್ದವು..

ದೇವರನ್ನು ಹುಡುಕುವುದೇ ಬೇಡ.. ಇಲ್ಲಿ ಅನೇಕ ದೇವರುಗಳು ಓಡಾಡುತ್ತಿದ್ದವು ಮಕ್ಕಳ ರೂಪದಲ್ಲಿ.. ಬಣ್ಣ ಬಣ್ಣದ ಕನಸುಗಳನ್ನು ಹೊತ್ತ ಮಕ್ಕಳು ಬಣ್ಣ ಬಣ್ಣದ ಪೋಷಾಕುಗಳಲ್ಲಿ ಕುಣಿಯುತ್ತಿದ್ದವು. ಹಾಡು ಕುಣಿತ ಮಕ್ಕಳೊಡನೆ ಬೆರೆವ ಆ ಸುಂದರ ಸಮಯ ಹೋದದ್ದು ಅರಿವಾಗಿದ್ದು ತಿಳಿಯಲೇ ಇಲ್ಲ..

"ಹಿಂದಿನ ಸಾಲ ತೀರಿಸಲೆಂದು ಬಂದಿಹೆವಯ್ಯ ಜನ್ಮವ ತಳೆದು ಮುಂದಿನ ಬದುಕು ಬಂದುರವೆನಿಸೋ ಗುರಿಸಾಧಿಸೋ ಕಂದ" ಎಂದು ಅಣ್ಣಾವ್ರು ಹಾಡಿದ ಹಾಗೆ ಪ್ರತಿ ಕಂದನಲ್ಲೂ ಏನೋ ಒಂದು ಸೆಳೆವ ಶಕ್ತಿ ಕಾಣುತ್ತಿತ್ತು.. ಅಲ್ಲಿ ಬಂದ ಎಲ್ಲಾ ಸಹೃದಯರು ಮಕ್ಕಳ ಸ್ಥಾನಕ್ಕೆ ಇಳಿದು ಅವರೊಡನೆ ಬೆರೆತು ಮಾತಾಡಿದ್ದು ಕುಣಿದದ್ದು.. ಊಟ ಮಾಡಿದ್ದು ವಿಶೇಷ. ಆ ದೇವರ ಪ್ರತಿನಿಧಿಗಳಿಗೆ ಯಾವುದೇ ರೀತಿಯಲ್ಲೂ ಕೀಳರಿಮೆ ಮೂಡದಂತೆ ಅವುಗಳ ಬೆನ್ನು ತಟ್ಟಿ ಮಿಕ್ಕವರ  ಹೃದಯವನ್ನು ತಟ್ಟುವ ಕಾರ್ಯವನ್ನು ಎಲ್ಲರೂ ಮಾಡುತ್ತಿದ್ದರು.. ಆ ಮಕ್ಕಳಿಗೆ ಗುರು ತೋರಿಸುವ.. ಗುರಿ ಕಾಣಿಸುವ .. ಮನಸ್ಸಿಗೆ ಬಣ್ಣ ಬಣ್ಣದ ಕನಸುಗಳನ್ನು ಬಿತ್ತುವ ಕೆಲಸವನ್ನು ಮಾಡುತ್ತಿದರು.. ಮಕ್ಕಳಿಗೆ ಬೇಕಿರುವುದು ಬೆಳೆಸುವ ಕನಸು.. ಆ ಕನಸಿನ ಸಸಿಗೆ ನೀರೆರೆಯುವ ಕಾಯಕ ಸ್ನೇಹಲೋಕದ್ದು ಆಗಿತ್ತು ಎನ್ನುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯವಾಗಿತ್ತು ..

ಈ ಲೋಕದಲ್ಲಿ ನಾ ಕಾಣದ ಸುಂದರ ಚಹರೆಗಳು ಅಪಾರವಾಗಿದ್ದರೂ.. ಶ್ರೀಕಾಂತಣ್ಣ.. ಎನ್ನುತ್ತಾ ಆತ್ಮೀಯವಾಗಿ ಬರಮಾಡಿಕೊಂಡ ಸ್ನೇಹಲೋಕದ ಬಳಗಕ್ಕೆ ನನ್ನ ತುಂಬು ಹೃದಯದಿಂದ ಧನ್ಯವಾದಗಳು..

ಲೋಕದ ಸ್ನೇಹದ ಮಂದೇ!!!!

ಕಾರ್ಯಕ್ರಮ ಶುರುವಾಗಿದ್ದು ಬೆಂಗಳೂರು ಮುಂಬಯಿಗೆ ಬಸ್ಸಿನಲ್ಲಿ ಓಡಾಡುವಂತೆ ಓಡಾಡುವ ಶ್ರೀ ಅಶೋಕ್ ಶೆಟ್ಟಿಯವರಿಂದ ಸ್ವಾಗತ ಭಾಷಣದಿಂದ .. ನಂತರ ದೂರದೂರಿಗ ಸತೀಶ್ ನಾಯಕ್ ಅವರಿಂದ ಅತಿಥಿಗಳ ಕಿರು ಪರಿಚಯ.. ನಂತರ ರಮೇಶ್ ಅವರಿಂದ ಕಾರ್ಯಕ್ರಮದ ಕಿರು ಪ್ರಸ್ತಾಪ. ನಂತರ ಸ್ನೇಹಲೋಕದ ಸುಂದರ ಪರ್ಪಂಚಕ್ಕೆ ಅಡಿಗಲ್ಲನಿಟ್ಟ ಮಂಜು ಮತ್ತು ಸುಮನ.. ಜೊತೆಯಲ್ಲಿ ಜೇನಿನ ಗೂಡಿನಲ್ಲಿ ದುಡಿವ ಜೇನು ಮರಿಗಳಂತೆ ಇರುವ ಅಶ್ವಥ್, ಮಲ್ಲೇಶ್, ಮಹೇಶ್, ಪ್ರಾಣಪಕ್ಷಿ, ಸತೀಶ್ ಕನ್ನಡಿಗ ಹೀಗೆ ಹೇಳುತ್ತಾ ಹೋದರೆ ಜೇನು ಗೂಡಿನ ಹನಿಗಳನ್ನು ಲೆಕ್ಕ ಹಾಕಿದ ಹಾಗೆ ಅಸಂಖ್ಯಾತ..

ಈ ಲೋಕ ಸ್ನೇಹ ಲೋಕ 
ಅತಿಥಿ ಸ್ಥಾನದಲ್ಲಿ ಆಸೀನರಾಗಿದ್ದ ಪ್ರಕಾಶಣ್ಣ, ಆಜಾದ್ ಸರ್,  ಬಾಲೂ ಸರ್, ಮಣಿಕಾಂತ್ ಸರ್.. ತಮ್ಮ ತಮ್ಮ ಅನುಭವ  ಪ್ರಪಂಚದಲ್ಲಿ ನಮ್ಮನ್ನು ನಡೆಸುತ್ತಾ ಬಂದರು.. "ಮಕ್ಕಳಿಗೆ ಗುರಿ ತೋರಿಸಿದರೆ ಸಾಕು... ಚಿಕ್ಕ ಚಿಕ್ಕ ಆಸರೆ ನೀಡಿದರೆ ಸಾಕು.. ಬಳ್ಳಿ ಮರಕ್ಕೆ ಹಬ್ಬಿ ಮರವನ್ನು ತಬ್ಬಿ ಮರಕ್ಕೂ ಆಸರೆಯಾಗಿ ಅದರ ಜೊತೆಯಲ್ಲಿ ಹೂವು ಹಣ್ಣಿಗೂ ಆಸರೆಯಾಗಿ ಮುಂದಿನ ಪೀಳಿಗೆಗೆ ಜೊತೆಯಾಗಿ ನಿಲ್ಲುವಂತೆ ಈ ಮಕ್ಕಳು ನಿಲ್ಲುತ್ತಾರೆ... ಅವರು ಸಾಧಕರಾಗಲಿ ಎನ್ನುವ ಆಶಯ ಎಲ್ಲರಲ್ಲೂ ಇದೆ ಎನ್ನುವ ಅವರ ಕಿವಿವಾಣಿ ಮಾರ್ಧನಿಸುವಂತೆ ಇತ್ತು..

ನಗೆ ಲೋಕದ ಸ್ನೇಹದ ಸರದಾರರು!!!

ಆ ಮಕ್ಕಳ ಆಗಮನದ ವಿಷಯವೇ ಬೇಡ.. ನಾವೆಲ್ಲರೂ ಈ ವಸುಂಧರೆಯಲ್ಲಿ ಕೆಲವು ಕಾರಣಗಳಿಗೋಸ್ಕರ ಬಂದಿದ್ದೇವೆ.. ಆ ಕಾರಣ ಒಳ್ಳೆಯದೋ ಕೆಟ್ಟದೋ ಅದು ಬೇಡವೇ ಬೇಡ.. ಭಗವಂತನ ದೃಷ್ಟಿಯಲ್ಲಿ ಎಲ್ಲವೂ ಒಂದೇ.. ಆ ಮಕ್ಕಳ ಏಳಿಗೆಯಲ್ಲಿ ಒಂದು ಚಿಕ್ಕ ಅಳಿಲು ಸೇವೆ ನಮ್ಮದು ಎನ್ನುವ ಉದಾರ ಮನೋಭಾವ ಈ ಸ್ನೇಹಲೋಕದ ಹೃದಯವಾಣಿಯಾಗಿತ್ತು.

ಸ್ನೇಹ ಒಂದು ನೂಲಿನ ಹಾಗೆ.. ಸುತ್ತಿದಷ್ಟು ಬಂಧ ಬಿಗಿಯಾಗುತ್ತದೆ ಮಿಕ್ಕವರನ್ನು ಸೆಳೆಯುತ್ತದೆ..

ಸ್ನೇಹದ ಬಂಧನ.. ಹೀಗೆ ಇರುತ್ತದೆ 

ಒಂದು ಬಾರಿ ಸ್ನೇಹ ಲೋಕದ ಸರಪಳಿಯಲ್ಲಿ ಸಿಕ್ಕವರು ಸ್ನೇಹಕ್ಕೆ ನಿಷ್ಟರಾಗಿರುತ್ತಾರೆ.. ಅದುವೇ ಸ್ನೇಹದ ತಾಕತ್..

ಸ್ನೇಹಕ್ಕೆ ನಿಷ್ಠೆ ಈ ಲೋಕದ ಶಕ್ತಿ 
ಸುಂದರ ಭೋಜನ, ಹೊಟ್ಟೆ ತುಂಬಾ ಮಾತು, ಕಣ್ಣಲ್ಲಿ ನೀರು ಬರಿಸುವಷ್ಟು ನಗು, ಕದಡಿದ ಮಾನಸ ಸರೋವರ ಮತ್ತೆ ತಿಳಿಯಾಗಲು ಈ ಸುಂದರ ಭಾನುವಾರ ಸಹಕಾರಿಯಾಗಿತ್ತು..

ಇದಕ್ಕೆ ಸಾಕ್ಷಿ ಬೇಕೇ.. ನೋಡಿ ಈ ಕೆಳಗಿನ ಚಿತ್ರಗಳನ್ನು... ಪದಗಳು ಕಟ್ಟಿ ಕೊಡಲಾರದ ಕತೆಗಳನ್ನು ಈ ಚಿತ್ರಗಳು ಪೋಣಿಸಿಕೊಡುತ್ತಿವೆ.
ಆಲಯ ದೇವಾಲಯ ದೇವರುಗಳು ಇರುವ ಆಲಯ 

ಮಕ್ಕಳ ಗುರಿಗೆ zoom ಹಾಕಲೇ ಬೇಕು!!!

ಸುಂದರ ದಿನಕ್ಕೆ ಸಿಹಿಯ ಮಿಶ್ರಣ

ಮಕ್ಕಳ ದೃಷ್ಟಿ ಗುರಿಯತ್ತ

ಪ್ರತಿಭಾ ಲೋಕಾ!!!

ಪ್ರತಿಭಾ ಲೋಕಾ!!!

ಪ್ರತಿಭಾ ಲೋಕಾ!!!

ಪ್ರತಿಭಾ ಲೋಕಾ!!!

ಪ್ರತಿಭಾ ಲೋಕಾ!!!

ಸಾಧನೆಯ ಕಡೆ ದೃಷ್ಟಿ!!! 

ನನ್ನ ಬೈಕಿನ ಹಾಗೆ ಅಲ್ಲಿನ ಎಲ್ಲಾ ಮಕ್ಕಳು ಕೂಡ ನಸು ನಗುತ್ತಾ ನಲಿದದ್ದು ಎಲ್ಲರ ಹೃದಯಗಳಲ್ಲಿ..  ಗೆಜ್ಜೆ ಕಟ್ಟಿ ಕುಣಿದ ಯಕ್ಷಗಾನ ಪಾತ್ರಧಾರಿಯ ಹಾಗೆ.. ಮನ ತುಂಬಿ ಬಂದಿತ್ತು.. ಮಕ್ಕಳ ಪ್ರತಿಭೆ ಅನಾವರಣ ಮಾಡುವ ಸುಂದರ ಕಾರ್ಯಕ್ರಮ ನಡೆದಿತ್ತು.. ತುಂಟ ನೃತ್ಯ, ಗಮನ ಸೆಳೆಯುವ ಸಮೂಹ ನೃತ್ಯ, ಸಾಧಕರಿಗೆ ದೃಷ್ಟಿ ಮುಖ್ಯ ಅಲ್ಲಾ.. ಸಾಧನೆಯ ಕಡೆಯಿರುವ ದೃಷ್ಟಿ ಮುಖ್ಯ ಎಂದು ಬಿಂಬಿಸುವ ಯೋಗಾಸನ..ಎಲ್ಲವೂ ಒಬ್ಬಟ್ಟು ತಿಂದಷ್ಟೇ ಸಂತೋಷವಾಗುತ್ತಿತು.

ಸ್ನೇಹಕ್ಕೆ ಅಂತರ ಬೇಡ.. ಕಾರಣಗಳು ಬೇಡ.. ಆ ಲೋಕದಲ್ಲಿ ಬೇಕಿರುವುದು ಕಣ್ಣಲ್ಲಿ ಇಣುಕುವ ಮಿಂಚು.. ಮೊಗದಲ್ಲಿ ಕಾಣುವ ಹಲ್ಲಿನ ಕೋಲ್ಮಿಂಚಿನ ನಗೆ.. ಹೃದಯದಲ್ಲಿ ಬೆಚ್ಚನೆ ಗೂಡು ಕಟ್ಟಿಕೊಳ್ಳುವ ಬಾಂಧ್ಯವ.

ಇವೆಲ್ಲ ಇರುವ ತಾಣ ಸ್ನೇಹಲೋಕ ತಾಣ.. ಅದಕ್ಕೆ ಈ ಲೋಕ ಸದಾ ನಂಬರ್ ಒನ್ ಲೋಕ

ಸ್ನೇಹ ಲೋಕ ಯಾವಾಗಲೂ ಒಂದು... !

ಎಲ್ಲಾ ಸ್ನೇಹ ಲೋಕ ತಾಣದ ಸದಸ್ಯರಿಗೆ ಅವರ ಅಹರ್ನಿಶಿ ಸೇವಾ ಮನೋಭಾವಕ್ಕೆ ಶಿರಸಾ ನಮಿಸಿ ಶುಭ ಹಾರೈಸುವೆ..

ಇಂಥ ಒಂದು ಲೋಕ ಹೀಗೆ ಇರುವುದೇ ಎನ್ನುವ ಪುರಾವೆ ಬೇಕೇ... ನೋಡಿ ಇಲ್ಲಿದೆ

ಈ ಲೋಕಕ್ಕೆ ಚಿನ್ಹೆ ಬೇಕೇ.. ಹುಡುಕಲೇ ಬೇಡಿ ಇಲ್ಲೇ ಇದೆ ನೋಡಿ 

ಒಂದು ಸುಂದರ ರವಿವಾರವನ್ನು ಕೊಟ್ಟ ನಿಮಗೆ ನನ್ನ _____________/\___

16 comments:

  1. ಪ್ರೀತಿಯ ಶ್ರೀಕಾಂತೂ..
    ಎಷ್ಟೋ ಬಾರಿ ನಾವೆಲ್ಲ ಬೇಸರ ಪಟ್ಟುಕೊಳ್ಳುತ್ತೇವೆ... ನಾವು ಭಾಗ್ಯವಂತರಲ್ಲ..
    ನಮ್ಮ ಅದೃಷ್ಟ ಚೆನ್ನಾಗಿಲ್ಲ ಅಂತೆಲ್ಲ...

    ಮೊನ್ನೆಯ ಅನುಭವ ನಿಜಕ್ಕೂ ಅಪೂರ್ವ..

    ಸ್ನೇಹಲೋಕದ ಹುಡುಗರಿಗೆ ಸಾವಿರ ಸಾವಿರ ವಂದನೆಗಳು...

    ಸುಮ್ನೆ ಫೋಟೊ ತೆಗೆಯೋಣ ಅಂತ ಹೋಗಿದ್ದವನಿಗೆ ಸ್ತೇಜಿನ ಮೇಲೆ ಕುಳ್ಳಿರಿಸಿಬಿಟ್ಟರು...

    ಅಲ್ಲಿ ಕುಳಿತವಗೆ ಮನಸ್ಸು ತಡೆಯಲಾಗಲ್ಲಿಲ್ಲ..

    ಆ ಪುಟ್ಟ ಕಂದಮ್ಮಗಳ ಕಣ್ಣುಗಳು ಸಾವಿರ ಸಾವಿರ ಕಥೆಗಳನ್ನು ಹೇಳುತ್ತಿದ್ದವು..

    ನಿಜಕ್ಕೂ ಆ ಮುಖಗಳು..
    ಕಣ್ಣುಗಳು ಕಾಡುತ್ತಿವೆ...

    ತುಂಬಾ ಚಂದದ ಲೇಖನ... ನೆನಪುಗಳನ್ನು ಹಸಿರಾಗಿಸಿದ್ದಕ್ಕೆ ಧನ್ಯವಾದಗಳು ತಮ್ಮಾ....

    ReplyDelete
  2. Manikanth sir. Nanage maate baruttilla. Ellavannu nive helidri.. danyavaadagalu sir..

    ReplyDelete
    Replies
    1. hi Ashwath, This is Srikanth Manjunath's blog........ and yes, preethi, khaalaji, sneha tumbida baraha....... idu heege iroke - halavaaru snehahrudayagaLu kaarana.......
      Kantha, the Magnet :) Sneha, the Magnet :)

      Delete
  3. Muddu makkaLa manasu nOyadanthirali, avarigaagi midiva hrudayagaLigondu namana.......

    ReplyDelete
  4. nanu baruva plan madikondde sir...adre important programme commit agiddarinda miss madikonde...photos nodidre gothaguthe...estu chennagithu..anta...

    ReplyDelete
  5. ಇಂತಹ ಒಂದು ಒಳ್ಳೆ ಕಾರ್ಯಕ್ಕೆ ಕೈಗುಡಿಸಿದ ಸ್ನೇಹಲೋಕದ ಸಧ್ಯಸರಿಗೆ ಸಲ್ಯೂಟ್... ಶ್ರೀ ನಿಮ್ಮ ನಿರೂಪಣೆ ಮತ್ತೆ ಚಿತ್ರಗಳ ಬಗ್ಗೆ ಎಷ್ಟು ಹೇಳಿದರು ಕಮ್ಮಿ... ಸೂಪರ್

    ReplyDelete
  6. ಶ್ರೀಕಾಂತಣ್ಣ
    ನಿಮ್ಮ ಬರಹ ಅತಿ ಮದುರ ಪ್ರಿಯ ರಾಗ... ಮನದಾಳದ ಮಾತುಗಳೆಂದರೆ ಹೀಗೆ ಇರುತ್ತದೆ.
    ನಿಮ್ಮ ಈ ಪ್ರೀತಿಗೆ ನಾ ಚಿರಋಣಿ.
    ನಿಮ್ಮ ಮನಸ್ಸು ತುಂಬಿದ ಮಾತುಗಳು ನಮ್ಮ ನೆನಪುಗಳಲ್ಲಿ ಹಚ್ಚ ಹಸಿರಾಗಿ ಸದಾ ಸ್ವಾಗತಿಸಲಿ.
    ನಿಮ್ಮ ಸ್ನೇಹ ಸಂಭಂದ ನಮ್ಮ ಮನದಲ್ಲಿ ಶಾಶ್ವತ ಮನೆ ಮಾಡಿರಲಿ...
    ನಿಮ್ಮ ಈ ಮಧುರ ಬಾಂಧವ್ಯ ಕೊನೆತನಕ ಕೊಡುಗೆಯಾಗಲಿ...
    ನಿಮ್ಮೊಂದಿಗೆ ನಮ್ಮ ಪ್ರೀತಿ ಸದಾ ಚಿಮ್ಮುತಿರಲಿ...

    ನೀವು , ಪ್ರಕಾಶಣ್ಣ - ಅಶಾ ಅತ್ತಿಗೆ , ಅಜಾದ್ಅಣ್ಣ ಅವರ ಭಾವ, ಬಾಲಣ್ಣ, ನಾನು ಅತೀ ಹೆಚ್ಚು ಇಷ್ಟಪಡುವ ವ್ಯಕ್ತಿ ಮಣಿಕಾಂತ್ ಸರ್, ಪ್ರೀತಿಯ ಶಮ್ಮಿ ಅಕ್ಕ, ರಾಘವ ಶರ್ಮ ಸರ್ , ನಾಗರಾಜ್ ವೈದ್ಯ ಮತ್ತು ನಮ್ಮ ನೆಚ್ಚಿನ ಸ್ನೇಹಿತರು- ಸ್ನೇಹಿತೆಯರು ನಮ್ಮ ಕಾರ್ಯಕ್ರಮಕ್ಕೆ ಬಂದು ನಮಗೆಲ್ಲಾ ತುಂಬ ಸಂತೋಷ ಕೊಟ್ಟಿದ್ದೀರ. ನಿಮ್ಮ ಈ ಸ್ನೇಹ - ಸಂಭಂದ, ಪ್ರೀತಿ -ವಿಶ್ವಾಸ, ನೋವು - ನಲಿವು , ಹೀಗೆ ಸದಾ ಕಾಲ ನಮ್ಮೊಂದಿಗೆ ಸಾಗುತ್ತಿರಲಿ.......

    ReplyDelete
  7. ಮನ ತಣಿಸುವ ಬರಹ ಕಣ್ ಕಲಕುವ ಚಿತ್ರಗಳೊಡನೆ ನಮ್ಮ ಸ್ನೇಹಲೋಕದ ಅಳಿಲು ಸೇವೆಯನ್ನು ತುಂಬಾ ಚೆನ್ನಾಗಿ ತಿಳಿಸಿದ ನಿಮಗೆ ಅನಂತ ಧನ್ಯವಾದಗಳು ಶ್ರೀಕಾಂತಣ್ಣ.

    "ಹಿಂದಿನ ಸಾಲ ತೀರಿಸಲೆಂದು ಬಂದಿಹೆವಯ್ಯ ಜನ್ಮವ ತಳೆದು ಮುಂದಿನ ಬದುಕು ಬಂದುರವೆನಿಸೋ ಗುರಿಸಾಧಿಸೋ ಕಂದ"


    ಹಿಂದಿನ ಸಾಲ ತೀರಿಸುವ ಒಂದು ಪ್ರಯತ್ನ ನಮ್ಮದು ಸಹಕಾರ ನಮ್ಮೆಲ್ಲ ಸ್ನೇಹಿತರದ್ದು.


    ReplyDelete
  8. Adbuta lekhana... Mana tereyitu... nimma Sneha tumbida preethi Sahakara hige irali.....

    ReplyDelete
  9. ಪ್ರೇರಣೆ ನೀಡುವ ಬರಹ.
    ಸ್ನೇಹಲೋಕದ ಸನ್ಮಿತ್ರರಾದ ಕೊಡುಗೈ ಮತ್ತು ಸಮಾಜಮುಖಿ ಚಟುವಟಿಕೆಗಳು ಎಲ್ಲರಿಗೂ ಮಾದರಿ.

    ಚಿತ್ರಗಳಿಗೆ ತಾವು ಕೊಟ್ಟ ಶೀರ್ಷಿಕೆಗಳು ಒಪ್ಪತಕ್ಕವಾಗಿವೆ.

    ReplyDelete
  10. super kantha

    ReplyDelete
  11. super Srikanthanna

    ReplyDelete
  12. ಪ್ರಾಣಪಕ್ಷಿ ಮನದಾಳದ ಮಾತುJune 28, 2014 at 8:28 AM

    sakathaagi ketthavre.. Dhanyosmi..

    ReplyDelete