ಅ ಆ ಇ ಈ ಕನ್ನಡದ ಅಕ್ಷರಮಾಲೆ... ಅಮ್ಮ ಎಂಬುದೇ...
ಮಾನ್ಯ ಶ್ರೋತ್ರುಗಳೇ ನೀವು ಕೇಳುತ್ತಿದ್ದ ಹಾಡು ಕರುಳಿನ ಕರೆ ಚಿತ್ರದ ಹಾಡು.. ಈ ಹಾಡಿನ ಅವಧಿ ನಾಲ್ಕು ನಿಮಿಷ ಆಗಿತ್ತು.. ಆದರೆ ಇಂದು ಎಳ್ದೆ ಎಲ್ಡು ನಿಮಿಷ ಮಾತ್ರ.. ಭಿತ್ತರ ಮಾಡುತ್ತೇವೆ..
ಬರಿ ಇದೊಂದೇ ಅಲ್ಲ.. ಇವತ್ತು ಇಡಿ ದಿನ ನಮ್ಮ ಕೇಂದ್ರದ ಎಲ್ಲಾ ಕಾರ್ಯಕ್ರಮಗಳು ಎಳ್ದೆ ಎಲ್ಡು ನಿಮ್ಷ ಪ್ರಸಾರ ಆಗೋದು..
ಶ್ರೋತ್ರುಗಳೆಲ್ಲ ತಲೆ ಕೆರೆದು ಕೊಂಡರು.. ಅಲ್ಲಿ ಇಲ್ಲಿ ಮಾತಾಡಿದರು ಊಹು.. ಊಹು ಯಾವುದೇ ಲಾಭವಿರಲಿಲ್ಲ.. ಯಾರಿಗೂ ಇದರ ಮರ್ಮ ಅರ್ಥವಾಗಲಿಲ್ಲ..
ತಲೆ ಕೆಟ್ಟು ಸೀದಾ ಆಕಾಶವಾಣಿ ಬೆಂಗಳೂರು ಕೇಂದ್ರದ ವಾಣಿಜ್ಯ ವಿಭಾಗ ನೀವು ಕೇಳುತ್ತಿರುವುದು ವಿವಿಧ ಭಾರತಿ ಎಂದು ದಿನಕ್ಕೆ ನೂರಾರು ಬಾರಿ ಹೇಳುವ ಆಕಾಶವಾಣಿ ಕೇಂದ್ರಕ್ಕೆ..
ಅಭಿಮಾನಿ ದೇವರುಗಳು ಸೀದಾ ನಿರ್ದೇಶಕರ ಕಚೇರಿಗೆ ನುಗ್ಗಿದರು..
ಗಾಬರಿಯಾದ ನಿರ್ದೇಶಕರು.. "ಏನಪ್ಪಾ ಏನಾಯ್ತು.. ನೀವೆಲ್ಲ ಯಾರು.. ಏನು ಬಂದಿದ್ದು"
"ಸರ್.. ಬೆಳಿಗ್ಗೆಯಿಂದ ನೋಡ್ತಾ ಇದ್ದೀವಿ.. ಎಲ್ಲಾ ಹಾಡುಗಳು.. ಎಲ್ಲಾ ಕಾರ್ಯಕ್ರಮಗಳು ಬರೀ ಎಳ್ದೆ ನಿಮ್ಸಾ ಬರ್ತಾ ಇದೆ.. ಕಾರಣ ಕೇಳಿದ್ರೆ.. ಹೇಳೋಲ್ಲ ಅಂತ ಇದ್ದಾರೆ.. "
"ಹೌದು.. ನಾನೇ ಆದೇಶ ಹೊರಡಿಸಿದ್ದು.. ಇವತ್ತು ಪೂರ್ತಿ ಎರಡೇ ಎರಡು ನಿಮಿಷಗಳ ಕಾರ್ಯಕ್ರಮ ಮಾತ್ರ ಬರಬೇಕು ಅಂತ.. "
"ಯಾಕೆ ಸಾ ಯಾಕೆ.. ಒಳ್ಳೆ ಒಳ್ಳೆ ಒಳ್ಳೆ ಹಾಡು ಬರ್ತಾ ಐತೆ.. ನೀವು ನೋಡಿದ್ರೆ ಎಳ್ದೆ ನಿಮ್ಸಾ ಹಾಕ್ತಾ ಇದ್ದೀರಾ.. "
"ಅದಕ್ಕೆ ಉತ್ತರ ಬೇಕು ಎಂದರೆ.. ನೀವು ನೇರವಾಗಿ ದಿಟ್ಟವಾಗಿ ನಿರಂತರವಾಗಿ.. ವಾರದ ಏಳು ದಿನಗಳು ಇಪ್ಪತನಾಲ್ಕು ಘಂಟೆಗಳು ನಿಂತರೆ ಮಾತ್ರ ಹೇಳುತ್ತೇನೆ ಹೇಳುತ್ತೇನೆ... ಹೇಳುತ್ತೇನೆ.. ಹೇಳುತ್ತೇನೆ.. ಹೇಳುತ್ತೇನೆ.. "
"ಅಯ್ಯೋ ಸಾಮಿ ಯಾಕೆ ಈ ಸಿಕ್ಸೆ.. ಸರಿಯಾಗಿ ಹೇಳಬಾರದೆ.. "
"ನಿಮ್ಮ ಸಮಯ ಎರಡು ನಿಮಿಷಾ ಆಯಿತು.. ಮತ್ತೆ ಎರಡು ನಿಮಿಷ ಬಿಟ್ಟು ಬನ್ನಿ.. "
ಅಲ್ಲಿದ್ದಾ ಯಾರ್ದೋ ಮೊಬೈಲ್ ನಲ್ಲಿ ಹಾಡು ಬರ್ತಾ ಇತ್ತು
"ಎಡವಟ್ಟಾಯ್ತು ತಲೆ ಕೆಟ್ಟೋಯ್ತು.. ತಲೆ ಕೆಟ್ಟೋಯ್ತು.. ಎಡವಟ್ಟಾಯ್ತು" ಹೇ ಯಾರಲ ಅದು.. ಆಫ್ ಮಾಡ್ಲ.. ಮೊದಲೇ ಇವರು ತಲೆಗೆ ಉಳಾ ಬಿಡ್ತಾವ್ರೆ.. ನೀನು ಬೇರೆ ನಿನ್ನ ಹಾಡು ಬೇರೆ.. ಮಡಗ್ಲಾ ಫೋನು.. "
ಫೋನ್ ಆಫ್ ಆಯಿತು .. ನಿಧಾನವಾಗಿ ಎದ್ದು ನಿಂತ ನಿರ್ದೇಶಕರು.. "ಬನ್ನಿ ನನ್ನ ಜೊತೆ.. " ಎಂದರು
ಕುರಿಗಳ ತರಹ ಅವರನ್ನೇ ಹಿಂಬಾಲಿಸಿದರು.. ಬಂದ್ದಿದ್ದ ಮಂದಿ..
ಮಲ್ಲಿಗೆ ಅಂತ ಮನಸುಳ್ಳ ಒಂದು ಸುಂದರ ವ್ಯಕ್ತಿಯನ್ನು ಪರಿಚಯಿಸುತ್ತಾ.. "ನೋಡ್ರಪ್ಪ ಇವರ ಮೇಲಿನ ಪ್ರೀತಿಗಾಗಿ ನಾವು ಇಂದು ಎಲ್ಲಾ ಕಾರ್ಯಕ್ರಮಗಳನ್ನು ಎರಡು ನಿಮಿಷಾ ಮಾತ್ರ ಭಿತ್ತರಿಸುತ್ತಿದ್ದೇವೆ.. "
"ಓಹ್ ಸಾಮಿ ಇವ್ರಾ.. ಇವರು ನಮಗೆ ಸಾನೆ ಗೊತ್ತು.. ಬೊ ಪಸಂದು ಇವರ ಮನಸ್ಸು.. ಏನ್ ಕವಿತೆ ಬರೀತಾರೆ ಅಂತೀನಿ.. ಅಕ್ಸರಗಳು ಇವ್ರು ಹೇಳ್ದಂಗೆ ಕುಣಿತಾವೆ.. ಪ್ಯಾಂಟು ಸಲ್ಟು ಹಾಕಿಕೊಂಡ ಹೈಕಳು ಸಾಲೆಗೆ ಹೋಗ್ತಾವಲ್ಲ ಅಂಗೆ... "
ಹೌದು ಇವರೇ ತಮ್ಮ ಪಾತ್ರವನ್ನು ಅನ್ವೇಷಣೆ ಮಾಡುತ್ತಾ ಮಾಡುತ್ತಾ ಸಾಲು ಮರಗಳನ್ನು ನಡೆಸಿದ ಅಶೋಕ್ ಚಕ್ರವರ್ತಿಯ ಹಾಗೆ ಸಾಲು ಸಾಲುಗಳನ್ನು ಬರೆಯುತ್ತಾ.. ತಮ್ಮ ಬಳಗದ ಎಲ್ಲರ ಲೇಖನಗಳನ್ನು ಓದುತ್ತಾ.. ಪ್ರೋತ್ಸಾಹಿಸುವ ಇವರ ಹಾಲಿನಂತ ಮನಸ್ಸು ಎಲ್ಲರಿಗೂ ಪ್ರಿಯಾ.. ಹೌದು ಇಂದು ಅವರ ಜನುಮ ದಿನ ಅದಕ್ಕಾಗಿಯೆ ಅವರ ಮೇಲಿನ ಪ್ರೀತಿಗಾಗಿ ಇವತ್ತಿನ.. ಕಾರ್ಯಕ್ರಮ ಎಲ್ಲವೂ..
ಅರೆ ಇಸ್ಕಿ.. ಈ ಇನ್ನೊಬ್ಬ ಅವ್ನೆ ಶ್ರೀಕಾಂತ್ ಮಂಜುನಾಥ ಅಂತ ಅವನು ಹಂಗೆ ಹೇಳಿದ್ದನ್ನೇ ಹೇಳ್ತಾ ಇರ್ತಾನೆ.. ಅವರ ಹುಟ್ಟು ಹಬ್ಬ ಸರಿ.. ಅವರ ಮೇಲಿನ ಪ್ರೀತಿ ಸರಿ.. ಎರಡು ನಿಮ್ಷಾ ಯಾಕೆ ಅದು ಹೇಳಿ ಮೊದ್ಲು.. "
"ಹ ಹ ಹ.. ಶ್ರೀಕಾಂತ್ ಇಲ್ಲೂ ಬಂದನೆ.. ಅವನ ಕೊರೆತ ನಿಮಗೆಲ್ಲಾ ಗೊತ್ತಾಯ್ತೆ.. ಇರಲಿ ಇರಲಿ.. "
"ಸಾಮಿ ಮೊದಲು ಹೇಳಿ ಆ ಕಾರಣವ.. "
"ನೋಡ್ರಪ್ಪ.. ಇವರು ಎಲ್ಲರನ್ನು ತುಂಬಾ ಇಷ್ಟಪಡುತ್ತಾರೆ .. ಇವರಿಗೆ ಬರುವ ಕರೆಗಳು ಅಸಂಖ್ಯಾತ.. ಹಾಗಾಗಿ ಇವರ ಫೋನ್ ಸದಾ ಬ್ಯುಸಿ ಇರುತೆ.. ಅದಕ್ಕೆ ಇವರು ತಮ್ಮ ಅಭಿಮಾನಿಗಳಿಗೆ ಸದಾ ಸಿಗುತ್ತಿರಬೇಕೆಂದು ಇವರ ಮೊಬೈಲ್ ನಲ್ಲಿ ಎಲ್ಲಾ ಕರೆಗಳು ಕೇವಲ ಎರಡು ನಿಮಿಷ ಮಾತ್ರ ಇರಬೇಕು ಎಂದು ಮಾಡಿಸಿಕೊಂಡಿದ್ದಾರೆ.. ಹಾಗಾಗಿ ೧೨೦ ನಿಮಿಷ ಆದ ಮೇಲೆ ಪ್ರಧಾನ ಮಂತ್ರಿಯೇ ಕರೆಯೆ ಆದರೂ ಕಟ್ ಕಟ್ ಕಟ್ .... !!!
ಓಹ್ ಒಹ್ ಹೀಗ ಸಮಸಾರ.. .. ಹಾಗಾದ್ರೆ ಸರಿ ನೀವು ಮಾಡಿದ್ದು.. ತಗಳಿ ನಮ್ಮದು ಒಂದು ಸುಭಾಸಯ..
ಇಂತಹ ಸುಂದರ ಜೀವಿಯ ಜೊತೆಯಲ್ಲಿ ನಾವಿರುವುದು ನಮಗೆ ಸಿಕ್ಕ ದೊಡ್ಡ ಗೌರವ ಎಂಬ ನಂಬಿಕೆ ವಿಶ್ವಾಸ ನನ್ನದು ಏನಂತೀರ..
ಹುಟ್ಟು ಹಬ್ಬದ ಶುಭಾಶಯಗಳು ಸರ್ಜಿ.. !!!!
( ಕ್ಷಮೆ ಇರಲಿ ನಿಮ್ಮ ಹೆಸರು ನಮ್ಮ ಹೃದಯದಲ್ಲಿ ಅಚ್ಚಾಗಿಕೂತಿದೆ .. ಹಾಗಾಗಿ ಇಡಿ ಲೇಖನದಲ್ಲಿ ನಿಮ್ಮ ಹೆಸರನ್ನು ಉಲ್ಲೇಖಿಸಲು ಬೆರಳುಗಳಿಗೆ ಆಗಲಿಲ್ಲ.. ಆದರೆ ನಿಮ್ಮ ಚಿತ್ರ ಹಾಕಬೇಕೆಂದು ಬೆರಳುಗಳು ಒತ್ತಾಯ ಮಾಡುತ್ತಿವೆ.. ಆದರೆ ಆಗುತ್ತಿಲ್ಲಾ.. ಹ ಹ ಹ )
ಎರಡೇ ಎರಡು ನಿಮಿಷಗಳಲ್ಲಿ ನಿಮಗೆ ಶರಣು ಹೇಳುತ್ತೇನೆ ಸರ್.
ReplyDeleteಬ್ಲಾಗ್ ಲೋಕ ನನಗೆ ನೀಡುತ್ತಿರುವ ಒಲುಮೆಯ ಮಹದೌಷದವೇ ನನ್ನ ಇರುವಿಕೆಗೆ ಮೂಲ ಕಾರಣ.
ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಶಿರ ಬಾಗಿ ವಂದಿಸುತ್ತೇನೆ.
ನನ್ನ ಪ್ರೀತಿಯ ನೆಲೆ ಬ್ಲಾಗ್ ಮೂಲಕವೇ ನನಗೆ ಶುಭಾಶಯ ಕೋರಿದ್ದು ನನಗೆ ಅಮಿತಾನಂದ ಕೊಟ್ಟಿದೆ.
ಲವ್ ಯೂ... :)
ಶ್ರೀಕಾಂತ್ ಬದರಿಯವರ ಜನುಮದಿನಕ್ಕೆ ಒಳ್ಳೆಯ ಉಡುಗೊರೆ . ನೀವು ಕನ್ನಡ ಪದಗಳ ಜೊತೆ ಈ ರೀತಿ ಆಟಾ ಆಡೋದ್ರಿಂದ ನಿಮ್ಮನ್ನು ಪದ ಗಾರುಡಿಗ ಎನ್ನುತ್ತೇನೆ . ಬದರೀ ಜಿ ನಿಮ್ಮ ಎಲ್ಲಾ ಸುಂದರ ಕನಸುಗಳು ನನಸಾಗಿ ಕನ್ನಡ ನಾಡಿನ ಹೆಮ್ಮೆಯ ಕವಿಯಾಗಿ ನಮ್ಮೆಲ್ಲರ ಜೊತೆ ಸದಾ ಇರೀ ಎನ್ನೋದೇ ನನ್ನ ಹಾರೈಕೆ ಜನುಮದಿನದ ಪ್ರೆತಿಯ ಶುಭಾಶಯಗಳು
ReplyDeleteಎಲ್ಡೇ.... ನಿಮ್ಸನ ಶಿವಾ.... ನಾನು ಬಂದೆ, ವಿಶ್ ಮಾಡೋಕೆ.... ಚಂದದ, ಹೊಸತನದ ನಿರೂಪಣೆ ಶ್ರೀ .
ReplyDeleteಪ್ರೀತಿಗೆ ಇನ್ನೊಂದು ಹಸರು ಬದರಿ!!!!! ಸ್ನೇಹಕ್ಕೆ ಮತ್ತೊಂದು ಹೆಸರು ಶ್ರೀಕಾಂತ್ !!!! ಇವರಿಬ್ಬರ ಸ್ನೇಹ ಒದಗಿಸಿ ಕೊಟ್ಟ ಬ್ಲಾಗ್ ಲೋಕಕ್ಕೆ ನಾನು ಚಿರ ಋಣಿ _/\_
ReplyDeleteಚೆನ್ನಾಗಿದೆ ಈ ಪಾತ್ರಾನ್ವೇಷಣೆ!
ReplyDeleteSuper Srikanth bhai ....Badari sir mattomme happy happy bday :) in 2 secs :)
ReplyDelete