Saturday, August 9, 2014

ಚಂದ್ರಲೋಕದಲ್ಲಿ ಕೋಲಾಹಲ.. ಸುವ್ವಿ ಸುವ್ವಾಲಿ.. !!!

ಚಂದ್ರಲೋಕದಲ್ಲಿ ಕೋಲಾಹಲ.. 

ಮನುಜ ಚಂದ್ರಲೋಕದಲ್ಲಿ ಕಾಲಿಟ್ಟ ಆ ಘಳಿಗೆ ಮನುಕುಲದಲ್ಲಿ ಇಟ್ಟ ದಿಟ್ಟ ಹೆಜ್ಜೆ ದೊಡ್ಡ ಹೆಜ್ಜೆ ನಿರಂತರ ಹೆಜ್ಜೆ.. ಹೀಗೆ ಅನೇಕ ಮಾತುಗಳು ಹೊಗಳಿಕೆಗಳು ಕೇಳಿಬರುತ್ತಿದ್ದವು.. 

ಚಂದ್ರಲೋಕದಲ್ಲಿ ಕಾಲಿಟ್ಟಾ ಆ ಮಹಾಪುರಷನ ಸಂದರ್ಶನ ಮಾಡಲು ಸುಮಾರು ವರ್ಷಗಳ ನಂತರ ಮಾಧ್ಯಮಗಳೆಲ್ಲ ನಾ ಮುಂದು ತಾ ಮುಂದು ಎಂದು ಬಡಿದಾಡುತ್ತಾ.. ಆ ಕಡೆಗೆ ಹೆಜ್ಜೆ ಹಾಕಿದರು.. 

ಸಂದರ್ಶನ ಶುರುವಾಯಿತು.. 

"ನಮಸ್ಕಾರ ನಿಮ್ಮ ಸಂದರ್ಶನ ಬೇಕಿತ್ತು..  !"

"ಅರೆ.. ಅದಕ್ಕೇನಂತೆ.. ಆದರೆ ಮೊದಲು ನಾವೆಲ್ಲಾ ಚಂದ್ರಲೋಕಕ್ಕೆ ಹೋಗೋಣ.. ಅಲ್ಲಿ ಏನೋ ಕೋಲಾಹಲ ನಡೆಯುತ್ತಿದೆಯಂತೆ.. ಮೊದಲು ಅದನ್ನು ಬಗೆ ಹರಿಸಿ ನಂತರ ವಿಷಯಕ್ಕೆ ಬರೋಣ.. ನಡೆಯಿರಿ ಗಾಡಿ ಸಿದ್ಧವಿದೆ"

... 

ಎಲ್ಲರೂ ಚಂದ್ರಲೋಕಕ್ಕೆ ಹೆಜ್ಜೆ ಇಟ್ಟರು.. 

ಸೂರ್ಯನ ಬೆಳಕು.. ಪ್ರತಿಫಲಿಸುವ ಆ ಸುಂದರ ಗೋಲ... ಭುವಿಗಿಂತ ಇನ್ನಷ್ಟು ಸುಂದರವಾಗಿ ಕಾಣುತ್ತಿತ್ತು... 

ಆ ಮಹಾಪುರುಷ.. ಚಂದ್ರನನ್ನೇ ಕೇಳಿದ.. 

"ಚಂದ್ರಪ್ಪ ಏನಪ್ಪಾ ನಿನ್ನ ಸಂಕಟ.. ಯಾಕೆ.. ಏನಾಯ್ತು.. "

ಚಂದ್ರ ನಿಧಾನಕ್ಕೆ ಬಾಯಿ ಬಿಟ್ಟಾ.... !

"ಅಲ್ಕನ್ರಪ್ಪ.. ನನ್ನ ಲೋಕದಲ್ಲಿ ಇರುವ ಗುಳಿಗಳು ಚೆನ್ನಾಗಿವೆ ಅಂಥಾ ಚಿತ್ರ ತೆಗೆದು ಭೂಲೋಕದಲ್ಲಿ ಹಂಚಿದ್ದೀರಿ... ಮಕ್ಕಳಿಗೆ ನನ್ನ ಲೋಕದಲ್ಲಿರುವ ಗುಳಿಗಳು ಮೊಲದಂತೆ ಇವೆ.. ಜಿಂಕೆಯಂತೆ ಇವೆ ಎಂದು ತೋರಿಸುತ್ತಾ ನೂರಾರು ಕಥೆ ಕಟ್ಟಿ ಮಕ್ಕಳಿಗೆ ಹೇಳಿದ್ದೀರಿ.. ಆದರೆ.. 

"ಏನಪ್ಪಾ ಚಂದ್ರಪ್ಪ ಏನು ಆದರೆ.. ಮುಂದುವರೆಸು"

ನೀನೆ ನೋಡು ಈ ಗುಳಿಗಳನ್ನು.. ಎಂದು ತನ್ನ ಲ್ಯಾಪ್ಟಾಪ್ ನಲ್ಲಿದ್ದಾ ಕೆಲವು ಗುಳಿಗಳ ಚಿತ್ರಗಳನ್ನು ತೋರಿಸಿದ ಚಂದ್ರಪ್ಪ... 








"ಹೌದು.. ಚಂದ್ರಲೋಕದಲ್ಲಿರುವ ಗುಳಿಗಳು ನಮ್ಮ ಭುವಿಯಲ್ಲಿ ತುಂಬಾ ಪ್ರಸಿದ್ಧ.. ಅದಕ್ಕೇನು ನಿನ್ನ ಸಂಕಟ "

"ಇರಪ್ಪ.. ನಾ ಹೇಳುವ ಮಾತು ಕೇಳು.. "

"ಸರಿ ಹೇಳು"

"ನನ್ನ ಲೋಕದಲ್ಲಿರುವ ಗುಳಿಗಳು ಪ್ರಸಿದ್ಧ ಸುಂದರ ಹೌದು.. ಆದರೆ ಈ ಕೆಳಗಿನ ಕೆಲವು ಚಿತ್ರಗಳನ್ನು ನೋಡಿ ಆ ಮೇಲೆ ಹೇಳು.. "

ಸ್ವಲ್ಪ ಹೊತ್ತು.. ಮೌನ ರಾಗ.. ಏನು ಹೇಳಲು ತೋಚುತ್ತಿಲ್ಲಾ ಆ ಮಹಾಪುರುಷನಿಗೆ... ಕನಸು ಕಂಗಳನ್ನು ದೊಡ್ಡದಾಗಿ ಬಿಡುತ್ತಾ ಅದರಲ್ಲಿನ ಭಾವಗಳನ್ನು ತುಂಬಿಕೊಂಡು.. "ಹೌದು ಚಂದ್ರಪ್ಪ ನೀ ಹೇಳೋದು ಸರಿ.. .. ಆ ಭಾವ.. ಆ ಮೌನ.. ಆ ಮೌನಕ್ಕೆ ಪದಗಳನ್ನು ಜೋಡಿಸುವ ಪರಿ ಆಹಾ.. ಎಂಥಹ ಗುಳಿಗಳನ್ನು ತುಂಬಿಬಿಡುತ್ತದೆ.. ಅದರ ಜೊತೆಯಲ್ಲಿ ಇನ್ನೊಂದು ವಿಷ್ಯ ಗೊತ್ತಾ ಚಂದ್ರಪ್ಪ.. "

"ಆ ಚಿತ್ರಗಳ ಬಗ್ಗೆ ತಾನೇ ನೀ ಹೇಳೋದು.. "

"ಹೌದು ಚಂದ್ರಪ್ಪ.. ಶ್ರೀಕಾಂತನ ಜೀವನದಲ್ಲಿ ಸಿಕ್ಕ ಅದ್ಭುತ ಸಹೋದರಿ.. ಈ ಸುಂದರ ಗುಳಿಯ ಪುಟ್ಟಿ.. ಅಣ್ಣಯ್ಯ ಎನ್ನುವಾಗ ಅವನ ಮೊಗದಲ್ಲಿ ಸಿಗುವ ಸಂತಸ.. ಹಾಗೆ ಅವನು ಪುಟ್ಟಿ ಸುಷ್ಮಾ ಎಂದಾಗ ಅವಳ ಕಣ್ಣಲ್ಲಿ ಸೂಸುವ ಭಾವ.... ಆ ಭಾವಕ್ಕೆ ಎಷ್ಟು ಪದಗಳನ್ನು ತುಂಬಿದರೂ ನನ್ನ ಗುಳಿ ತುಂಬಲಾರದು.. ಪದ ಸಂಪತ್ತು ಸಾಲುವುದಿಲ್ಲ.. "

"ಹೌದು ಮಹಾ ಪುರುಷ ಅದಕ್ಕೆ ನನಗೆ ಒಂದು ಸಣ್ಣ ಅನುಮಾನ ಬಂತು.. ನನ್ನಲ್ಲಿರುವ ಈ ಗುಳಿಗಳು ಸುಂದರವೋ ಅಥವಾ ಶ್ರೀಕಾಂತನ ಸಹೋದರಿಯ ಕೆನ್ನೆಯಲ್ಲಿ ಮೂಡುವ ಗುಳಿಗಳು ಸುಂದರವೋ.. ?" 

"ಚಂದ್ರಪ್ಪ.. ಶ್ರೀಕಾಂತನಿಗೆ ಜೋಡಿ ಧಮಾಕ.. ಯಾಕೆ ಗೊತ್ತಾ.. ಪುಟ್ಟಿ ಸುಷ್ಮಾಳ ಅತ್ತಿಗೆಯ ಕೆನ್ನೆಯಲ್ಲೂ ಗುಳಿ, ಪುಟ್ಟಿ ಸುಷ್ಮಾಳ ಸೊಸೆಯ ಕೆನ್ನೆಯಲ್ಲೂ ಗುಳಿ... 

ಇನ್ನೂ 

ಪುಟ್ಟಿ ಸುಷ್ಮಾಳ ಕೆನ್ನೆಯ ಗುಳಿ.. ಆಹಾ.. ನೀನೆ ನೋಡು ..." 







ಅದಕ್ಕೆ ಇಂಥಹ ಸುಂದರ ಪರಿವಾರವನ್ನು ಕಂಡಾಗ ನಾನು ಕೂಡ ಭುವಿಗೆ ಹೋಗಬೇಕು ಎಂದು ಹಠ ಮಾಡುತ್ತಿದ್ದೆ ಅದಕ್ಕೆ ಕೋಲಾಹಲವಾಗುತ್ತಿತ್ತು ಅಷ್ಟೇ.. ಸರಿ ನೀನು ಪುಟ್ಟಿ ಸುಷ್ಮಾಳಿಗೆ ಜನುಮದಿನದ ಶುಭಾಶಯವನ್ನು ಹೇಳಿ.. ನೀ ಸಂದರ್ಶನ ಮುಗಿಸಿ... ಇನ್ನೇನು ನಾಳೆ ಪೌರ್ಣಮಿ.. ಪುಟ್ಟಿ ಸುಷ್ಮಾಳ ಜನುಮದಿನಕ್ಕೆ ಶುಭಾಷಯ ಕೋರಿ ಅವಳ ಬಾಳಲ್ಲಿ ಸದಾ ಬೆಳಕು ಇರಲೆಂದು ನಾ ನನ್ನ ಬೆಳದಿಂಗಳನ್ನು ಅವಳ ಮೌನ ರಾಗದ ಮೂಲಕ ಕನಸು ಕಂಗಳ ತುಂಬಾ ತುಂಬಿ ತುಂಬಿ ಕೊಡುತ್ತಿರುತ್ತೇನೆ.. 

******************************

"ಪುಟ್ಟಿ ನೀ ನನಗೆ ಸಿಕ್ಕ ಅದ್ಭುತ ಸಹೋದರಿ.. ನಿನ್ನ ಮಾತುಗಳು ನೇರ ದಿಟ್ಟ.. ಆದರೆ ನಿನ್ನ ಮಿಡಿವ ಮನ ಸದಾ ನಿರಂತರವಾಗಿ ಪ್ರೀತಿ ಮಮತೆ ವಾತ್ಸ್ಯಲ್ಯದ ಮುಖವನ್ನು ಹೊತ್ತು ನೆಡೆದಾಡುತ್ತಿರುತ್ತದೆ..  

ಜನುಮ ದಿನದ ಶುಭಾಶಯಗಳು!!!

17 comments:

  1. ಗೆಳತಿಯೊಬ್ಬಳ ಕೆನ್ನೆಯ ಗುಳಿಯನ್ನು ವಿವರಿಸಲು ಚಂದ್ರಲೋಕಕ್ಕೆಲ್ಲಾ ತಾರಾಡಿ ಬರುವ ನಿಮ್ಮ ಲೇಖನ ಮೆಚ್ಚತಕ್ಕದ್ದೇ.

    ReplyDelete
    Replies
    1. ನನ್ನ ಪುಟ್ಟ ಸಹೋದರಿಯ ಜನುಮದ ದಿನಕ್ಕೆ ಬರೆದ ಲೇಖನವನ್ನು ಮೆಚ್ಚಿ ಪ್ರತಿಕ್ರಿಯೆ ಕೊಟ್ಟ ನಿಮ್ಮ ಮಾತುಗಳಿಗೆ ಧನ್ಯವಾದಗಳು ಹರಿಣಿ ಮೇಡಂ

      Delete
    2. ಶ್ರೀಕಾಂತ್ ಅಣ್ಣನ ಬರಹಗಳೇ ಹಾಗೆ ಹರಿಣಿ ಮೇಡಂ..
      ನಿಮ್ಮನ್ನ ಎಲ್ಲಿಂದಲೋ.. ಎಲ್ಲಿಗೋ ಕರೆದುಕೊಂಡು ಹೋಗಿ ಬರುತ್ತಾರೆ....
      :)

      Delete
  2. ಬೊಂಬಾಟ್.
    ಸುಷ್ಮ ಅತ್ಯುತ್ತಮ ಸಂವೇದನಾಶೀಲ ಕಾವ್ಯ ಮತ್ತು ಮಾಹಿತಿಪೂರ್ಣ ಲೇಖನಗಳನ್ನು ಕಟ್ಟಿಕೊಡುವ ಗೆಳತಿ. ಸ್ನೇಹಮಯಿ.

    ಇಂದು ಅವರ ಜನುಮ ದಿನಕ್ಕೆ ತಾವು ಕೊಟ್ಟ ಈ ವಿಶಿಷ್ಟ ಚಂದ್ರ ಗುಳಿ ಬರಹ ತುಂಬ ತುಂಬ ಆತ್ಮೀಯವಾಗಿದೆ.

    ಸುಷ್ಮ ನನಗೆ ಹಿರಿಯ ಬ್ಲಾಗಿಗರು. ಅವರು ಊರಿನಲ್ಲಿದ್ದಾಗಲಿಂದಲೂ ಅವರ ಬ್ಲಾಗನ್ನು ಓದುತ್ತಿದ್ದೇನೆ.

    ಹುಟ್ಟಿದ ಹಬ್ಬದ ಶುಭಾಶಯಗಳು ಸುಷ್ಮಾ ಅವರೇ.

    ReplyDelete
    Replies
    1. ನಿಮ್ಮ ಮಾತು ನಿಜ ಬದರಿ ಸರ್.. ಅವಳ ಬರಹಗಳಲ್ಲಿ ಒಂದು ಶಕ್ತಿ ಇರುತ್ತದೆ.. ಪುಟ್ಟಿಗೆ ಶುಭಾಷಯ ಕೋರಿದ್ದಕ್ಕೆ.. ಬರಹ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು..

      Delete
    2. This comment has been removed by the author.

      Delete
    3. ಬದರಿ ಸರ್ ಜೊತೆ ಹೆಚ್ಚಿನ ಒಡನಾಟವೋ, ಫೋನ್ ಕಾಲ್ ಗಳೋ, ಬೇಟಿಗಳೋ , ಚಾಟ್ ಗಳೋ ಏನೂ ಇಲ್ಲದೆ ಇರಬಹುದು... ಆದರೆ ನನ್ನ ಬದುಕಲ್ಲೊಂದು ಅಚ್ಚಳಿಯದ ಸ್ಥಾನ ಗಟ್ಟಿಸಿಕೊಂಡವರಲ್ಲಿ ನೀವೂ ಒಬ್ಬರು ಸಾರ್... ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಬಹಳಷ್ಟು ಬಾರಿ ನನ್ನ ರಿಚಾರ್ಜ್ ಮಾಡಿದ ರಿಫ್ರೆಶ್ ಮಾಡಿದ ಕೀರ್ತಿ ನಿಮಗೆ ಸಲ್ಲಬೇಕು...

      ಬ್ಲಾಗ್ ಆರಂಭಿಸಿದ ಮೊದಲ ದಿನಗಳಲ್ಲಿ ಯಾರ ಪರಿಚಯವೂ ಇಲ್ಲದೆ.. ಒಬ್ಬಳೇ ನನ್ನ ಪಾಡಿಗೆ ನಾನು ಎಲ್ಲೊ ಬರೆಯುತ್ತಾ ಕೂತಿದ್ದಾಗ.. ಅದು ಹೇಗೋ ಬ್ಲಾಗ್ ಗೆ ಬಂದು ಪ್ರೋತ್ಸಾಹ ಕೊಡುತ್ತಾ ಬಂದಿರಿ.. ಅದು ಇವತ್ತಿನವರೆಗೂ ಮುಂದುವರಿದಿದೆ... ಮೆಚ್ಚುವಿಕೆ ಅನ್ನುವುದು ಸ್ಪೂರ್ತಿಯ ಚಿಲುಮೆ.. ಆ ಚಿಲುಮೆಯನ್ನು ಸದಾ ನನ್ನೊಳಗೆ ಹರಿಸಿದ್ದಿರಿ...ಬ್ಲಾಗ್ ನಿಲ್ಲಿಸಿದಾಗ, ಮತ್ತೆ ಬರೆಯುವುದುಕ್ಕೆ ಹಚ್ಚಿದಿರಿ..
      ಸಿಕ್ಕ ಒಂದಿಷ್ಟು ಸಮಯದಲ್ಲೇ ಎಲ್ಲರನ್ನೂ ರಿಫ್ರೆಶ್ ಮಾಡುವ ನೀವೆಂದರೆ ನನಗೆ ಬಹಳಷ್ಟು ಗೌರವ...


      ನನ್ನ ಬದುಕಲ್ಲಿ ಬಂದು ನನಗೊಂದು ಸ್ಪೂರ್ತಿಯ ಸೆಲೆಯಾಗಿದ್ದಕ್ಕೆ ಥ್ಯಾಂಕ್ಸ್ ಗಳು ಸಣ್ಣದಾದೀತು...
      ಆದರೂ
      ಧನ್ಯವಾದಗಳು ಸರ್..

      Delete
  3. ಮೊದಲಿಗೆ ನಮ್ ಪುಟ್ಟಿಗೆ ಹುಟ್ಟು ಹಬ್ಬದ ಶುಭಾಶಯಗಳು...

    ಪುಟ್ಟಿಯ ಆಸೆ ಕನಸುಗಳು ನನಸಾಗಲಿ..

    ಶ್ರೀಕಾಂತೂ...

    ಎಲ್ಲಿಂದ ತರ್ತೀರಿ ಮಾರಾಯ್ರೆ... ಇಂಥಹ ಶುಭಾಶಯಗಳನ್ನು.. !!!!

    ನಿಜಕ್ಕೂ ಸ್ಸೂಪರ್.. !

    ನಿಮಗೆ ನೀವೇ ಸಾಟಿ...

    ReplyDelete
    Replies
    1. ಧನ್ಯವಾದಗಳು ಪ್ರಕಾಶಣ್ಣ.. ನಿಮ್ಮೆಲ್ಲರ ಹಾಲಿನಂತಹ ಮನಸ್ಸು ನನ್ನನ್ನು ಪ್ರೇರೇಪಿಸುತ್ತದೆ.. ಇದರ ಶ್ರೇಯ ನಿಮ್ಮೆಲ್ಲರಿಗೂ ಸಲ್ಲಬೇಕಾದದ್ದು

      Delete
    2. ಪ್ರಕಾಶಣ್ಣ
      ಧನ್ಯವಾದಗಳು...

      ಈ ಪ್ರೀತಿಗೆ ಶರಣೋ ಶರಣು...

      Delete
  4. ಅರ್ರೆ ವಾಹ್!
    ಜನುಮ ದಿನದ ಪ್ರೀತಿಯ ಶುಭಾಶಯಗಳು ಮುದ್ದಕ್ಕಾ...
    ನಿನ್ನ ಜೊತೆ ಕೂತು ಮಾಡೋ ತರಲೆ,ಜಗಳ,ಮಾತು,ನಗು ಎಲ್ಲ ಒಮ್ಮೆ ಸುಳಿದು ಹೋಯ್ತು ನೋಡು.
    ಗುಳಿಕೆನ್ನೆಯ ನಿನ್ನ ನಗು ಸದಾ ಇರಲಿ ಯಾವತ್ತೂ :)

    ಅಣ್ಣಾ, ಎಂದಿನಂತೆ ಚಂದದ ಶುಭಾಶಯ...ಚಂದ್ರ ಲೋಕ,ಗುಳಿ,ಗುಳಿಕೆನ್ನೆ ಸುಶ್ಮಕ್ಕಾ....ವಾಹ್! ಹೀಗಂದು ಯೋಚನೆ ಬರಬಹುದು ಅನ್ನೋ ಕಲ್ಪನೆಯೂ ಇದ್ದಿರಲಿಲ್ಲ ನಂಗೆ..
    ತುಂಬಾ ಇಷ್ಟವಾಯ್ತು.

    ReplyDelete
    Replies
    1. ಚಿನ್ನಾರಿ..
      ನಂಗೆ ತಂಗಿ ಇಲ್ಲ ಅನ್ನುವ ಕೊರತೆಯ ನೀಗಿಸಿದವಳು ನೀನು....
      ತಮ್ಮಂದಿರಿಗಷ್ಟೇ ಅಕ್ಕನಾಗಿದ್ದವಳಿಗೆ ತಂಗಿಯ ಮಮತೆಯ ಅರಿವು ಮಾಡಿಸಿದವಳು ನೀನು...

      ನಿನ್ನ ಈ ಪ್ರೀತಿಗೆ ಏನು ಹೇಳಲೇ ಮುದ್ದು..
      ಥ್ಯಾಂಕ್ಸ್ ಅ ಲಾಟ್...

      Delete
  5. ಇವಳೆಂದರೆ ಯಾಕೆ ಹೀಗನಿಸುತ್ತೆ ಗೊತ್ತಿಲ್ಲಾ .

    ಜೀವನ ಜಗಳಕ್ಕಾಗಿಯೇ ನನಗಾಗಿ ಕೊಟ್ಟಿದೆ ಇವಳನ್ನು ಅನಿಸುತ್ತೆ. ಆದರೆ ಅದಕ್ಕಿಂತ ಹೆಚ್ಚಿನ ಪ್ರೀತಿಯನ್ನೂ ಜೀವನ ಕೊಟ್ಟಿದೆ ಇವಳೆಡೆಗೆ ...:) ಹಾಗಾಗೆ ಇರಬೇಕು ಈ ಮುದ್ದು ಶೈತಾನ್ ಜೊತೆ ಎಷ್ಟೇ ಜಗಳ ಆಡಿದರೂ ಅದಕ್ಕಿಂತ ಒಂದು ಕೈ ಹೆಚ್ಚೇ ಪ್ರೀತಿ ಹುಟ್ಟುತ್ತೆ ಇವಳೆಡೆಗೆ .. :P

    ಜನುಮದಿನವಂತೆ ಇವತ್ತು ನನ್ನ ಮುದ್ದು ಗೂಬೆಯದು ... :)

    ಕನಸ ಕಂಗಳ ತುಂಬಾ ತುಂಬಿರುವ ಎಲ್ಲ ಕನಸುಗಳೂ ರಾಗಗಳಾಗಿ ಬದಲಾಗಿ ಸುಂದರ ಸಂಗೀತವಾಗಲಿ ಬದುಕಲ್ಲಿ ..

    ಮೌನ ಆಗಾಗ ಮುಚ್ಚಿ ತೆರೆಯುವ ರೆಪ್ಪೆಯಾದರೆ ನಿನ್ನ ಮಾತುಗಳು ಹೊಳೆವ ಕಂಗಳಂತೆ ಇರಲಿ .. :)
    ಲವ್ ಯೂ .... <3

    ಸಾಕಲ್ಲವಾ ಶುಭಾಶಯಗಳು .. ಅಯ್ಯೋ ಪ್ರೀತಿ ಜಾಸ್ತಿ ಆಗೊಯ್ತು...

    ಜಗಳಕ್ಕೆ ಯಾವಾಗ ಸಿಕ್ತೀಯಾ ????

    ReplyDelete
    Replies
    1. ಅಯ್ಯೋ... ಎಷ್ಟು ಚಂದ ಬರೆದ್ದೇ ಮುದ್ದೇ...?!

      ಕಣ್ಣಂಚಲಿ ಒಂದು ಹನಿ ಅಲ್ಲಾಡಿತು ನೋಡು... ನಾವಿಬ್ಬರೂ ಆಡಿದ ಜಗಳಕ್ಕೆ ಲೆಕ್ಕಿಲ್ಲ ಬಿಡು.. ಪ್ರೀತಿ ಆ ಲೆಕ್ಕಗಳನ್ನೆಲ್ಲಾ ಮೀರಿದ್ದು....

      ಇಷ್ಟು ಚಂದದ ಗೆಳೆತನಕ್ಕೆ.. ಈ ಮುದ್ದು ಮುದ್ದು ಶುಭಾಶಯದ ಬರಹಕ್ಕೆ ಹೇಗೆ ಥ್ಯಾಂಕ್ಸ್ ಹೇಳಲೇ ನನ್ನೊಡತಿ..?

      ಲವ್ ಯು & ಲವ್ ಯು ಅಷ್ಟೇ ಕಣೆ...

      Delete
  6. @ಶ್ರೀಕಾಂತ್
    ಅಣ್ಣಯ್ಯಾ..
    ದುಃಖವ ಮರೆವಂತೆ ನಗುವುದ ನೀವೆಲ್ಲಾ ಕಲಿಸಿದ್ದಿರಿ ನನಗೆ.. ಏನಾ ನಾ ಹೇಳಲಿ ಈ ಪ್ರೀತಿಗೆ..?

    ಹುಟ್ಟಿದ ಹಬ್ಬ ಅನ್ನುವುದು ಇವತ್ತು ನಿಜವಾಗಿ ಹಬ್ಬವಾಗಿ ಹೋಯಿತು ನನ್ನ ಪಾಲಿಗೆ...
    ಸೆಲೆಬ್ರೇಶನ್ ಏನೇ ಇಲ್ಲದೆ ಇದ್ದರೂ..
    ಹರಕೆ ಹಾರೈಕೆಗಳ ಶುಭಾಶಯಗಳ ಮಳೆಯಲ್ಲಿ ತೋಯ್ದು ಹೋಗುತ್ತಿದ್ದೇನೆ... ಇದನ್ನು ಸೆಲೆಬ್ರೇಟ್ ಮಾಡ್ತಾ ಇದ್ದೇನೆ...

    ಅದರಲ್ಲೂ ನೀವು ನನಗೆ ಚಂದ್ರಲೋಕವನ್ನೇ ತೋರಿಸಿ ಬಂದಿರಿ..
    ನನ್ನಿಷ್ಟದ "ಸುವ್ವಿ ಸುವ್ವಾಲಿ " ಟೈಟಲ್ ಬೇರೆ ಕೊಟ್ಟಿದ್ದೀರಿ... ಥ್ಯಾಂಕ್ಸ್ ಗಳು ಸಣ್ಣವಾಗುತ್ತವೇನೋ ಬಹುಶಃ ...


    ಆದರೂ..
    ಥ್ಯಾಂಕ್ಸ್ ಅ ಲಾಟ್ ಅಣ್ಣಯ್ಯಾ...

    ReplyDelete
  7. ಭೂಲೋಕದಲ್ಲಿ ಶ್ರೀ ಕಾಂತ್ ಮಂಜುನಾಥ್ ಎಂಬ ಅದ್ಭುತ ಪದ ಗಾರುಡಿಗನಿಗೆ ವಿಧ್ಯೆ ಕಲಿಸಿದ ಗುರುಗಳನ್ನು ಬೇಗ ಕರೀರಿ , ಅವರಿಗೆ ಮೊದಲು ಸಾಷ್ಟಾಂಗ ನಮಸ್ಕಾರ ಮಾಡಬೇಕು ಅಂದನು ಚಂದ್ರ , ಎಲ್ಲರಿಗೂ ಅಚ್ಚರಿ



    ಯಾಕಪ್ಪ ಚಂದ್ರ ಏನಾಯ್ತು ಎಂದ ಬ್ರಹ್ಮ ,

    ಆಹಾ ಚತುರ್ಮುಖ ಬ್ರಹ್ಮ ದೇವನೇ ನೀನು ಸೃಷ್ಟಿಸುವಾಗ ಬಹಳ ಪ್ರಸನ್ನ ನಾಗಿ ಸರಸ್ವತಿ ಯೊಡನೆ ಹರುಷ ಚಿತ್ತದಿಂದ ಇರುವಾಗ ಅವಳ ಅನುಗ್ರಹ ಪಡೆದು ಇವರನ್ನು ಸೃಷ್ಟಿಸಿರಬೇಕು , ಅದಕ್ಕೆ ನೋಡು , ನನ್ನನ್ನು ಚಿಕ್ಕ ಮಕ್ಕಳು ಚಂದಕ್ಕಿ ಮಾಮ , ಚಕ್ಕುಲಿ ಮಾಮ ಅಂತಾ ಕರೆದರೆ , ಈ ಮಹಾಶಯ ನನ್ನ ಮೈ ಮೇಲಿನ ಗುಳಿಗಳನ್ನು , ಕನ್ನಡ ನಾಡಿನ ಕಡಲ ತೀರದ ಸುಂದರಿಯ ಕೆನ್ನೆಯ ಗುಳಿಗಳಿಗೆ ಹೋಲಿಕೆ ಮಾಡಿ ಅವಳ ಜನುಮದಿನಕ್ಕೆ ಶುಭ ಕೋರುತ್ತಾನೆ . ಎಂತಾ ಸ್ಥಿತಿ ಬಂತಪ್ಪ ನನಗೆ ಎಂದು ಹರುಷ ತುಂಬಿದ ಧ್ವನಿಯಲ್ಲಿ ಚಂದ್ರ ಬ್ರಹ್ಮ ದೇವನಿಗೆ ನಿವೇದನೆ ಮಾಡಿ ಕೊಂಡ . ಸಭೆಯಲ್ಲಿ ಇದ್ದ ಮಹಾ ವಿಷ್ಣು ಅಲ್ಲ ಚಂದ್ರ ನಿನ್ನನಷ್ಟೇ ಅಲ್ಲಾ , ಶ್ರೀ ರಂಗ ಪಟ್ಟಣದಲ್ಲಿ ಮಲಗಿದ ನನ್ನನ್ನು ಎಬ್ಬಿಸಿ ಲ್ಯಾಪ್ ಟಾಪ್ ಕೊಟ್ಟ ಮಹಾನುಭಾವ ಅವನು, ಸಮಯ ಸಿಕ್ಕರೆ ಯಾವದೇವತೆ ಯನ್ನು ಯಾವ ರೂಪದಲ್ಲಿ ಬೇಕಾದರೂ ಯಾರೂ ಕಲ್ಪಿಸದೆ ಇರುವ ಹಾಗೆ ಬರವಣಿಗೆಯಲ್ಲಿ ಸೃಷ್ಟಿಸುತ್ತಾನೆ . ಇವನ ಬಗ್ಗೆ ಹುಷಾರಾಗಿ ಇರಬೇಕು , ಎನ್ನುತ್ತಿದ್ದಂತೆ ಇದೇ ದೇವ ಗಣ ಅಯ್ಯಾ ಶ್ರೀಕಾಂತ್ ಮಂಜುನಾಥ್ ಮಹಾಶಯ ನಮ್ಮ ಕೈಗೆ ಏನಾದರೂ ಕೊಡುವ ಮೊದಲು ಮುಂಚೆಯೇ ನಮಗೆ ತಿಳಿಸಿ ಉಪಕರಿಸು ಅಂತಾ ಪರಾಕ್ ಹೇಳಲು ಶುರು ಮಾಡಿದರು . ಅರೆ ಇಷ್ಟೆಲ್ಲಾ ಯಾಕೆ ಅಂದ್ರಾ ಅದೇ ರೀ ನಮ್ಮ ಈ ಶ್ರೀಕಾಂತ್ ಅಕ್ಷರಗಳ ಮೂಲಕ ಆಟಾ ಆಡುವ ರೀತಿ . ಇಲ್ಲೇ ನೋಡಿ ಎಲ್ಲಿಯ ಚಂದಿರ ಎಲ್ಲಿಯ ಸುಷ್ಮಾ ಹುಟ್ಟು ಹಬ್ಬ , ಹಾರೈಕೆ ಮಾಡುವ ರೀತಿಗೆ ಹೊಸ ಆಯಾಮ ನೀಡಿದ ಶ್ರೀಕಾಂತ್ ನಿಮಗೆ ಜೈ ಹೊ. ಜೊತೆಗೆ ಸುಷ್ಮಾ ಪುಟ್ಟಿ ನನ್ನ ಪ್ರೀತಿಯ ತಂಗಿ , ಮುದ್ದಾದ ಮಾತು, ಒಳ್ಳೆಯ ಮನಸು ಇವುಗಳ ಸಂಗಮ . ಪುಟ್ಟಿ ನಿನಗೆ ಪ್ರೀತಿಯ ಹಾರ್ದಿಕ ಶುಭಾಶಯಗಳು . ನಿನ್ನ ಬಾಳು ಹಸಿರಾಗಲಿ , ನೆಮ್ಮದಿಯೇ ಅದರ ಉಸಿರಾಗಲಿ. ನಿನಗೆ ಶುಭವಾಗಲಿ .

    ReplyDelete
    Replies
    1. ಶ್ರೀಕಾಂತ್ ಮಂಜುನಾಥ್ ಗೆ ನಿಮ್ಮೊಳಗೊಬ್ಬ ಬಾಲೂ ಅನ್ನುವರಿಂದ ನೇರ ಸ್ಪರ್ಧೆ.... :)
      "ತಂಗೀ.. "ಅನ್ನುವ ಇಬ್ಬರು ಅಣ್ಣಂದಿರ ಜುಗಲ್ ಬಂದಿ ನೋಡುವ ಅವಕಾಶ ನನಗೆ... :)

      ಬಾಲಣ್ಣ..
      ನಿಮ್ಮ ಹರಕೆ ಹಾರೈಕೆ ಆಶಿರ್ವಾದಗಳು ಸದಾ ಹೀಗೇ ಇರಲಿ..
      ಧನ್ಯವಾದಗಳು...:)

      Delete