ನಮ್ಮದೊಂದು ಗುಂಪು.. ಸಮಾನಾಭಿರುಚಿ, ಸಮಾನ ಯೋಚನೆ.. ಊಹುಂ.. ಇಲ್ಲ.. ಎಲ್ಲರೂ ಬುದ್ದಿಯವಂತರೇ.. ಎಲ್ಲರೂ ಹೃದಯವಂತರೇ.. ಆದರೂ ಒಬ್ಬರ ಯೋಚನೆ ಇನ್ನೊಬ್ಬರ ತಲೆಗೆ ಬರೋಲ್ಲ.. ಆದರೂ ಕಳೆದ ಮೂರು ದಶಕಗಳಿಂದ ಜೊತೆ ಇದ್ದೀವಿ.. ನಮ್ಮಲ್ಲಿ ವೈಯುಕ್ತಿಕ ಎನ್ನುವ ಪದಕ್ಕೆ ಅರ್ಥವೇ ಗೊತ್ತಿಲ್ಲ.. ಎಲ್ಲರ ಬಗ್ಗೆ ಎಲ್ಲರಿಗೂ ಗೊತ್ತು.. ನಕರ ಮಾಡುವ ಪ್ರಶ್ನೆಯೇ ಇಲ್ಲ..
ಪೀಠಿಕೆ ಸಾಕು ಅಂತೀರಾ.. ಹಲವಾರು ವರ್ಷಗಳಿಂದ ಇದರ ಬಗ್ಗೆ ಬರೆಯುತ್ತಲೇ ಇದ್ದೇನೆ.. ಆದರೂ ಮುಗಿಯದ ಕಡಲು ಇದು..
ಶಶಿ, ಲೋಕಿ, ವೆಂಕಿ, ಜೆಎಂ ಮತ್ತು ಶ್ರೀ ಪಂಚ ಪಾಂಡವರು.. ವರ್ಷ ಪೂರ್ತಿ ನಮ್ಮದು, ನಮ್ಮ ಮಡದಿಯರದು, ಮಕ್ಕಳದು ಹುಟ್ಟು ಹಬ್ಬಗಳು ಇದ್ದೆ ಇರ್ತಾವೆ.. ಹಾಗಾಗಿ ಶುಭಾಶಯಗಳನ್ನ ಕೋರೋದು ನೆಡೆದೆ ಇರುತ್ತೆ. .
ವೆಂಕಿ ಅಕ್ಟೋಬರ್ ೧೮, ಜೆಎಂ, ಮೇ ೧೩ ಹೀಗೆ ವಿವಾಹದಿನಗಳು ಬರುತ್ತವೆ.. ವಿಶ್ ಮಾಡುತ್ತೇನೆ..ದಿನಗಳು ಕಳೆಯುತ್ತವೆ.. ಆದರೆ ಈ ನವೆಂಬರ್ ಮೂವತ್ತು ಬಂದರೆ ಚಳಿ ಜ್ವರ ಬರುತ್ತೆ ನನಗೆ.. ಒಂದು ಬಾರಿ ೨೦೧೪ ರಲ್ಲಿ ಕೆಲಸದ ಒತ್ತಡಗಳಿಂದ ಮಿಸ್ ಮಾಡಿದ್ದಕ್ಕೆ ಒಂದು ವರ್ಷ ಬಹಿಷ್ಕಾರ ಹಾಕಿದ್ದರು ಅಕ್ಕಯ್ಯ ಪ್ರತಿಭಾ.. ಕಡೆಗೆ ನನ್ನ ಶೈಲಿಯಲ್ಲಿ ಪುಸಲಾಯಿಸಿ ಶರಣು ಅಂತ ಹೇಳಿ.. ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಿದ ಮೇಲೆ ಮನ್ನಿಸಿದ್ದು.. ಅಂತಹ ಅದ್ಭುತ ಪ್ರೀತಿ ಇವರದ್ದು..
ಇವರ ಬಳಿ ಪ್ರಶ್ನೆಗಳ ರಾಶಿಯೇ ಇರುತ್ತದೆ.. ಇಪ್ಪತ್ತು ವರ್ಷಗಳಿಂದ ಕೇಳಿದ ಪ್ರಶ್ನೆ, ಹೇಳಿದ ಉತ್ತರ ಗೊತ್ತಿದ್ದರೂ ಮತ್ತೆ ಮತ್ತೆ ಭೇಟಿಯಾದಾಗೆಲ್ಲ ಅದೇ ರಿಪೀಟ್..
"ಟೊಮೇಟೊ ಯಾಕೆ ತಿನ್ನಲ್ಲ?"
"ಕಾಫಿ ಯಾಕೆ ಅಷ್ಟೊಂದು ಕುಡಿತೀರಾ?"
"ಯಾಕೆ ಕಾಫೀ ಕುಡಿಯಲ್ಲ?"
ಹೀಗೆ ಪ್ರಶ್ನಾವಳಿಗಳು ನೆಡೆಯುತ್ತಲೇ ಇರುತ್ತವೆ..
"ಅಕ್ಕಯ್ಯ ದೇಶದಲ್ಲಿ ನೂರಾರು ಸಮಸ್ಯೆಗಳಿವೆ.. ಭಾರತ ಮುನ್ನುಗ್ಗುತ್ತಿದೆ, ಮುಂದಿನ ಚುನಾವಣೆಯಲ್ಲಿ ಮೋದಿ ಗೆಲ್ಲಬೇಕು, ಕ್ರಿಕೆಟ್ ವಿಶ್ವಕಪ್ ಭಾರತ ಗೆಲ್ಲಬೇಕು.. ಇಂಧನದ ದರ ಕಡಿಮೆಯಾಗಬೇಕು.. ನಾನು" ಹೇಳುತ್ತಲೇ ಇರುತ್ತೇನೆ.. ಆದರೆ ಅವಾಗ
"ಅಣ್ಣ.. ಅದೆಲ್ಲ ನನಗೆ ಬೇಡದ ವಿಷಯ.. ಅದನ್ನು ನೋಡಿಕೊಳ್ಳೋಕೆ ಇದ್ದಾರೆ.. ನನ್ನ ಅಣ್ಣನ ಬಗ್ಗೆ ಕಾಳಜಿ ಮುಖ್ಯ.." ಎಂದು ಗದರಿಸುತ್ತಾರೆ..
ಇದು ಇವರ ವಿಷಯವಾದರೆ..
ಶ್ರೀಕಿ.. ಬರಿ ಕತೆ ಹೇಳ್ತೀಯ ನೀನು.. ವೆಂಕಿ ಮಾತಿನಲ್ಲಿ ನಂಬಿಕೆ ಇದೆ.. ನಿನ್ನ ಮೇಲೆ..#$$#$#.. ನಿನಗೆ ಅರ್ಥವಾಯಿತು ತಾನೇ..
ಅದೇನು ಬರೀತೀಯೋ.. ಅದಕ್ಕೆ ಅರ್ಥಗಳನ್ನು ನೀನೆ ಹೇಳಬೇಕು ಎನ್ನುತ್ತಾ.. ಇನ್ನಷ್ಟು ವಿಚಿತ್ರವಾಗಿ ಬರೆಯಲು ಪ್ರೇರೇಪಿಸುತ್ತಾನೆ..
ಶ್ರೀಕಿ.. ನೀ ನಿನ್ನ ಆರೋಗ್ಯದ ಬಗ್ಗೆ ಯೋಚನೆ ಮಾಡು.. ಹೊರಗಿನ ಬಗ್ಗೆ ಯೋಚಿಸೋಕೆ ನಾವಿದ್ದೇವೆ ಎಂದು ನನಗೆ ಧೈರ್ಯ ತುಂಬುವ ಶಶಿ...
ಶ್ರೀಕಿ ನಿಂದು ನಿನ್ನ ಅಕ್ಕಯ್ಯನದು ಹೊಡೆದಾಟ ನಾ ಮಧ್ಯೆ ಬರೋಲ್ಲ.. ಏನಾದರೂ ಮಾಡಿಕೊಳ್ಳಿ ಎನ್ನುತ್ತಾ.. ತಟಸ್ಥವಾಗಿರುವ ಶಶಿ..
ಈ ಇಬ್ಬರು ಜೊತೆಯಾಗಿ ನನ್ನ ಮೇಲೆ ಅಭಿಮಾನ ತೋರಿಸುತ್ತಾ ಕಳೆದ ವರ್ಷಗಳು ೨೦... ಇಂದು ಒಂದಾದ ದಿನ.. ಎರಡು ದಶಕಗಳು ಕಳೆದದ್ದೇ ಅರಿವಾಗದೇ ಸಾಗಿದೆ.. ತಂದೆಯಂತೆಯೇ ಬುದ್ಧಿವಂತನಾದ ಮಗರಾಯ ವೈದ್ಯನಾಗುವತ್ತ ಹೆಜ್ಜೆ ಇಟ್ಟಿದ್ದಾನೆ.. ಮನೆಯ ಕೆಲಸದ ಜೊತೆಯಲ್ಲಿ ತಂದೆ ಮಗನ ಯೋಗಕ್ಷೇಮ ವಿಚಾರಿಸುತ್ತಾ.. ಪತಿಗೆ ತಕ್ಕ ಸತಿಯಾಗಿ ಜವಾಬ್ಧಾರಿ ಹಂಚಿಕೊಂಡು ಸಾಗುವ ಪ್ರತಿಭಾ.. ಇಬ್ಬರಿಗೂ ವಿವಾಹ ದಿನದ ಶುಭಾಶಯಗಳು..
ಶಶಿ ಪ್ರತಿಭಾ ಈ ಸಮಯ ಎರಡು ದಶಕ ಕಳೆದ ಸಮಯ.. ಸುಖ ಸಂತೋಷ ನೆಮ್ಮದಿ ಸದಾ ನಿಮದಾಗಿರಲಿ.. !!!

No comments:
Post a Comment