Saturday, November 30, 2013

ಶಶಿಯ ಅ"ಪ್ರತಿಭಾ" ಪಯಣ ಹದಿನೈದರ ಹರಯದಲ್ಲಿ!!!

ಆಗ ತಾನೇ ಕಾಲೇಜು ತುಳಿದಿದ್ದ ದಿನಗಳು. ಶಾಲೆಯ ಬಂಧನ ಎನ್ನುವಂತ ಪರಿಸರದಿಂದ ಮುಕ್ತವಾದ ಬಯಲಿಗೆ ಬಿದ್ದಂತೆ ಅನುಭವವಾದ ದಿನಗಳು. ಸಮವಸ್ತ್ರ, ಬೂಟ್ಸ್, ಚೀಲ ಇದರಿಂದ ಮುಕ್ತಿ ಹೊಂದಿದ್ದ ದಿನಗಳು. ಮನದೊಳಗೆ ಇಳಿಬಿದ್ದಿದ್ದ ಆಸೆಗಳು ಗರಿಗೆದರಿ ಹಾರಲು ಸಿದ್ಧವಾಗುತ್ತಿದ್ದ ದಿನಗಳು. "ಮನದಲ್ಲಿ ಆಸೆಯೇ ಬೇರೆ ಬದುಕಲ್ಲಿ ನಡೆವುದೇ ಬೇರೆ" ಎನ್ನುವ ಮೋಡದ ಮರೆಯಲ್ಲಿ ಚಿತ್ರದ ಹಾಡಿನಂತೆ ಅರ್ಥಿಕ ಮುಗ್ಗಟ್ಟು ಇದ್ದುದರಿಂದ ಬರಿ ಓದುವುದಷ್ಟಕ್ಕೆ ಸೀಮಿತವಾಗಿತ್ತು.

ಆ ದಿನಗಳಲ್ಲಿ ಬೈಕ್ ಕಲಿಯಬೇಕು.. ಓಡಿಸಬೇಕು.. ಎನ್ನುವ ಚಪಲವಿದ್ದರೂ ಸಂಕೋಚ ಸ್ವಭಾವದ ಎಲೆಮರೆಯ ಕಾಯಿಯ ಗುಣದ ನಾನು ಬೈಕ್ ಓಡಿಸುವಿದರಲಿ ನೋಡುವ ಸಾಹಸ ಕೂಡ ಮಾಡುತ್ತಿರಲಿಲ್ಲ. ಇನ್ನೂ ಮೀಸೆ ಚಿಗುರದ ಚಿಕ್ಕ ಪುಟ್ಟ ಹುಡುಗರೆಲ್ಲಾ ಬೈಕ್ ಓಡಿಸುವುದನ್ನು ಕಂಡಾಗ ಮನದಲ್ಲಿ ನಾಚಿಕೆಯಾಗುತ್ತಿದ್ದರು ಮಿತಿಯ ಅರಿವಿದ್ದವ ತಿಮಿರವನ್ನು ತಿನ್ನುವನಂತೆ ಎನ್ನುವ ಮಾತಿನಂತೆ ಇದ್ದೆ.

ಎರಡು ಕತ್ತೆಗಳ ವಯಸ್ಸು ದಾಟಿ ಮೂರನೇ ಕತ್ತೆ ವಯಸ್ಸು ಮುಗಿಯುವ ಅಂಚಿನಲ್ಲಿದ್ದೆ.. ಜೊತೆಗೆ ಈ ಕತ್ತೆಗೆ ಒಂದು ಸುಂದರ ಕುದುರೆಯ ಜೊತೆ ಆಯಿತು.. ಮದುವೆ ಇನ್ನೇನು ಕೆಲವೇ ವಾರಗಳು ಇದ್ದವು..

ಅಂಥಹ ಒಂದು ಸುಂದರ ದಿನಗಳಲ್ಲಿ ನನ್ನ ಪ್ರೀತಿಯ ಗೆಳೆಯರು ಶಶಿ, ಲೋಕಿ, ಜೆ ಎಂ ಮತ್ತು ಅವರ ಪರಿವಾರ ಒಂದು ಹರಕೆಯ ನೆಪದಲ್ಲಿ ಯಾಣ ಮತ್ತಿತ್ತರ ತಾಣಗಳಿಗೆ ಹೋಗಬೇಕಿತ್ತು. ಹೆಬ್ಬಾಳದ ಬಳಿಯ ಸಹಕಾರನಗರದಲ್ಲಿದ್ದ ಅವನ ಮನೆಯನ್ನು ಎರಡು ಮೂರುದಿನಗಳ ಮಟ್ಟಿಗೆ ಜೋಪಾನ ಮಾಡುವ ಉಸ್ತುವಾರಿಯನ್ನು ನನಗೆ ಮತ್ತು ವೆಂಕಿಗೆ ಶಶಿ ವಹಿಸಿಕೊಟ್ಟಿದ್ದನು. ನಾವಿಬ್ಬರು ನಮ್ಮ ಕೆಲಸದ ಒತ್ತಡದ ಕಾರಣ ಅವರ ಜೊತೆಯಲ್ಲಿ ಹೋಗುವ ಪರಿಸ್ಥಿಯಲ್ಲಿರಲಿಲ್ಲ.

ತನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತಿದ್ದ..    ಮತ್ತು ಉಡುಗೊರೆಯಾಗಿ ಬಂದಿದ್ದ ಆ ಕಾಲದ ಸೂಪರ್ ಹಿಟ್ ಬೈಕ್ ಯಮಹ Rx ೧೦೦ ಈ ಬೈಕನ್ನು ಉಪಯೋಗಿಸಿಕೊಳ್ಳಲು ಅನುಮತಿ ನೀಡಿದ್ದ.. ನಾನು ಮತ್ತು ವೆಂಕಿ ಇಬ್ಬರು ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಕೆಲಸ ಮಾಡುತ್ತಿದ್ದರಿಂದ.. ನಮಗೂ ಅನುಕೂಲವಾಗಿತ್ತು..

ಅವರೆಲ್ಲರಿಗೂ ಶುಭ ಪ್ರಯಾಣ ಹೇಳಿ.. ವೆಂಕಿ ಸೂಪರ್ ಆಗಿ ಮಾಡಿದ್ದ ಚಿತ್ರಾನ್ನ ತಿಂದು ಇಬ್ಬರು ಬೆಳಿಗ್ಗೆ ಎದ್ದು ಆಫೀಸ್ ಗೆ ಹೊರಟೆವು. ವೆಂಕಿಗೆ ಬೈಕ್ ಓಡಿಸಲು ಬರುತ್ತಿತ್ತು.. ನನಗೆ ಹಹಹಃ ಹಹಹ ಹಹಃ.. ಸ್ಟಾಂಡ್ ಹಾಕಿ ನಿಲ್ಲಿಸಿದ್ದ ಬೈಕ್ ಮೇಲೆ ಕೂರಲು ಸರಿಯಾಗಿ ಬರುತ್ತಿರಲಿಲ್ಲ.. ವೆಂಕಿ ಯಾವಾಗಲೂ ಬಯ್ಯುತ್ತಿದ್ದ ಲೋ.. ಮೊದಲು ಕ್ಲಚ್ ಯಾವುದು ಬ್ರೇಕ್ ಯಾವುದು ತಿಳ್ಕೊಳೋ ಅಂಥಾ!

ಸರಿ ಸಹಕಾರನಗರದಿಂದ ಇಲೆಕ್ಟ್ರಾನಿಕ್ಸ್ ಸಿಟಿ ಕಡೆಗೆ ಶುರುವಾಯಿತು ನಮ್ಮ ಬೈಕ್ ಯಾತ್ರೆ.. ಇಬ್ಬರು ನಗುತ್ತಾ ನಗುತ್ತಾ ಅನಿಲ್ ಕುಂಬ್ಳೆ ವೃತ್ತದ ತನಕ ಬಂದೆವು.. ಅದು ಇದು ಮಾತಾಡುತ್ತಾ ಒಬ್ಬರಿಗೊಬ್ಬರು ರೇಗಿಸಿಕೊಳ್ಳುತ್ತಾ ಬರುತ್ತಿದ್ದೆವು.. ಕೆಂಪು ದೀಪ ನಮ್ಮ ನಾಗಾಲೋಟಕ್ಕೆ ತಡೆಯೊಡ್ಡಿತು..

ಸುಂದರ ಸ್ಪುರದ್ರೂಪಿ ನಮ್ಮ ವೆಂಕಿ.. ಅಚಾನಕ್ ಅವನ ಆಫೀಸಿನ ಬಸ್ ಕಾಣಿಸಿತು.. ಅಥವಾ ಬಸ್ಸಿನ ಕಿಟಕಿಯೊಳಗಿಂದ !@@@@@ ಕಾಣಿಸಿರಬೇಕು.. "ಶ್ರೀಕಿ ನಾನು ಬಸ್ಸಿನಲ್ಲಿ ಹೋಗುತ್ತೇನೆ.. ಸಂಜೆ ಸಿಗೋಣ" ಎಂದು ಹೇಳಿ ಆನ್ ನಲ್ಲೆ ಇದ್ದ ಬೈಕನ್ನು ಬಿಟ್ಟು ಬಸ್ ಹತ್ತೇ ಬಿಟ್ಟಾ.. ಕೆಂಪಿನಿಂದ ಹಸಿರು ಬಣ್ಣಕ್ಕೆ ಸಿಗ್ನಲ್ ಲೈಟ್ ತಿರುಗಿತು.. ಹಸಿರು ಬಣ್ಣ ನೋಡಿದ ನಾನು ಯಮನನ್ನು ನೋಡಿದ ಮಾರ್ಕಂಡೇಯನ ಹಾಗೆ ಆಗಿ ಬಿಟ್ಟಿತು ನನ್ನ (ಸುಂದರ) ಮುಖ..

ಹಿಂದೆಯಿಂದ ಹಾರನ್ ಗಳ ಸುರಿಮಳೆ.. ಕಷ್ಟ ಪಟ್ಟು ಮೊದಲ ಗೇರ್ ಗೆ ಹಾಕಿ ಟ್ರಿನಿಟಿ ಸರ್ಕಲ್ ತನಕ ಹಾಗೆ ಹೋದೆ.. ನನ್ನ ಅಕ್ಕ ಪಕ್ಕ ಬರುತ್ತಿದ್ದವರು ನನ್ನನ್ನು ಪ್ರಾಣಿಯೆನ್ನುವಂತೆ ನೋಡುತ್ತಿದ್ದರು.. ಹಾಗು ಹೀಗೂ ಟ್ರಿನಿಟಿ ಸರ್ಕಲ್ ಹತ್ತಿರ ಬಂದಾಗ ಧೈರ್ಯ ಮಾಡಿ ಸೆಕೆಂಡ್ ಗೇರ್ ಗೆ ಹಾಕಿದೆ.. ಎಲ್ಲರಿಗೂ ಗೊತ್ತಿರುವಂತೆ ಯಮಹ ಸದ್ದನ್ನು ನಿಲ್ಲಿಸಿಯೇ ಬಿಟ್ಟಿತು.. ಮುಂದೆ ಎರಡು ನಿಮಿಷ ಯಮ ಸಾಹಸಮಾಡಿದರೂ ಸ್ಟಾರ್ಟ್ ಆಗ್ತಾ ಇತ್ತೇ ಹೊರತು ಮುಂದಕ್ಕೆ ಹೋಗುತ್ತಿರಲಿಲ್ಲ.. ಕಾರಣ ನಿಮಗೆ ಗೊತ್ತೇ ಇದೆ ಗೇರ್ ನಲ್ಲಿ ಇತ್ತು.. ಕ್ಲಚ್ ಉಪಯೋಗ ಸರಿಯಾಗಿ ಗೊತ್ತಿರಲಿಲ್ಲ..  ಯಮಹ ಹರಯಕ್ಕೆ ಬಂದ ಜಿಂಕೆಯಂತೆ ನೆಗೆಯುತ್ತಿತ್ತು..

ಹಿಂದೆ ಆಟೋರಿಕ್ಷದಲ್ಲಿ ಸುಂದರ ಮೂರು ಕಾಲೇಜು ತರುಣಿಯರು.. ಮುಸಿ ಮುಸಿ ನಗುತ್ತಿದ್ದರು ನನ್ನ ಪಾಡು ನೋಡಿ.. ಅವರು ನಗುತ್ತಿದ್ದನ್ನು ನೋಡಿ ರಿಕ್ಷಾ ಚಾಲಕನಿಗೆ ಸ್ಫೂರ್ತಿ ಸಿಕ್ಕಿತು.. "ನೋಡಿ ಮೇಡಂ ಯಾರನ್ನೋ ಮೆಚ್ಚಿಸಲು ಯಾರದ್ದೋ ಬೈಕ್ ತಂದು ಬಿಡ್ತಾರೆ ಓಡಿಸೋಕೆ ಬರೋಲ್ಲ.. ಮಂಗ ಮುಂಡೇವು.. ಲೋ ಗುರು.. ಮೊದಲು ನ್ಯೂಟ್ರಲ್ ಗೇರ್ ಗೆ ತಂದು ಸ್ಟಾರ್ಟ್ ಮಾಡು ನಿಧಾನವಾಗಿ ಕ್ಲಚ್ ಬಿಡು.. ಇಲ್ಲಾ ಅಂದ್ರೆ ಇವತ್ತೆಲ್ಲ ಬಸವನಹುಳುವಿನ ತರಹ ಇಂಚು ಇಂಚು ಮುಂದಕ್ಕೆ ಹೋಗ್ತೀಯ ಅಂದಾ..ಆಟೋದಲ್ಲಿ ನಗುವಿನ ತರಂಗಗಳು.. ಬೆಂಗಳೂರು ಡಿಸೆಂಬರ್ ನಲ್ಲೂ ಮಳೆಯನ್ನು ತರಿಸುವ ಸುಂದರ ತಾಣ.. ಈ ಘಟನೆ ಫೆಬ್ರುವರಿ ಮತ್ತು ಮಾರ್ಚ್ ೨೦೦೩ ನಡುವೆ ನಡೆದದ್ದು.. ಆ ಸಮಯದಲ್ಲೂ ನನ್ನ ಮೈ ಮನಸ್ಸು ಒದ್ದೆ ಮಯ..

ಕಷ್ಟ ಪಟ್ಟು.. ಹೇಗೋ ಮೊದಲ ಅಥವಾ ಎರಡನೇ ಗೇರ್ ನಲ್ಲಿ ಹಾಗೂ ಹೀಗೂ ಹೊಸೂರು ರಸ್ತೆಗೆ ಬಂದೆ.. ಅಷ್ಟು ಹೊತ್ತಿಗೆ ಕ್ಲಚ್ ಮಂಗಾಟ ಅರ್ಥವಾಗಿತ್ತು.. ನನ್ನ ಮೊದಲ ಬೈಕ್ ಪಯಣ ಮೈ ಮನಸ್ಸನ್ನು ಒದ್ದೆ ಮಾಡಿದ್ದರೂ ನಂತರದ ಮೂರು ದಿನಗಳಲ್ಲಿ ಶಶಿಯ ಪ್ರೀತಿಯ ಬೈಕ್ ನನಗೆ ಸರಿಯಾಗಿ ಬೈಕ್ ಓಡಿಸಲು ಕಲಿಸಿಯೇ ಬಿಟ್ಟಿತು..

ಇಂದು ಆ ಬೈಕ್ ಗೆ ರಜತ ಮಹೋತ್ಸವ.. ಬೆಂಗಳೂರಿನ ಮೊದಲ ಮಾಲ್ ಸಂಸ್ಕೃತಿ ಬಿತ್ತಲು ಆರಂಭ ಎನ್ನಬಹುದಾದ  (ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನಂತರ) ಅಲಂಕಾರ್ ಪ್ಲಾಜಾದಲ್ಲಿ ಉಡುಗೊರೆಯಾಗಿ ಸಿಕ್ಕಿದ ಈ ಸುಂದರ ರಜತ ಮಹೋತ್ಸವದ ಗೆಳೆಯನಿಗೆ ಶುಭಾಶಯಗಳನ್ನು ಕೋರುವುದು ನಮ್ಮೆಲ್ಲರ ಕರ್ತವ್ಯ. ನಾನು ವೆಂಕಿ ಬೈಕ್ ಓಡಿಸಲು ಕಲಿತಿದ್ದೆ ಈ ಬೈಕ್ ನಲ್ಲಿ.. ಜೊತೆಯಲ್ಲಿ ಇಂದಿಗೂ ಸುಸ್ಥಿಯಲ್ಲಿ ಇರುವ ಹಾಗು ಅಷ್ಟೇ ಆಸ್ತೆಯಿಂದ ನೋಡಿಕೊಳ್ಳುತ್ತಿರುವ ಅದರ ಸರದಾರ ಶಶಿಗೂ ಕೂಡ ಅಭಿನಂದನೆಗಳು..

ಜೊತೆಯಲ್ಲಿ ಶಶಿಗೆ ನೆರಳಾಗಿ. ಬಾಳ ಸಂಗಾತಿಯಾಗಿ ಹೆಜ್ಜೆ ಹಾಕುತ್ತಿರುವ ನಮ್ಮೆಲ್ಲರ ಪ್ರೀತಿಯ ಅಕ್ಕ "ಪ್ರತಿಭಾ" ಇವರಿಬ್ಬರ ವೈವಾಹಿಕ ನಂಟಿಗೆ ಹದಿನೈದರ ಹರೆಯ.. ಸುಮಧುರ ಗೆಳೆತನ ನಮ್ಮೆಲ್ಲರದು.. ಒಂದು ಕಾಲದಲ್ಲಿ ನಡೆದಾಡಿಕೊಂಡು ಒಬ್ಬರನ್ನು ಒಬ್ಬರು ಭೇಟಿ ಮಾಡುತ್ತಿದ್ದೆವು.. ನಂತರ ಸೈಕಲ್ ಸಿಕ್ಕಿತ್ತು.. ಆಮೇಲೆ ಮೋಟಾರ್ ಸೈಕಲ್.. ಈಗ ಕಾರಲ್ಲಿ ಓಡಾಡುವ ಶಕ್ತಿ ಇದ್ದರೂ ನಮ್ಮೆಲ್ಲರ ಗೆಳೆತನದಲ್ಲಿ ಸಂತಸ ತುಂಬಿ ಹರಿಯುತ್ತಿದೆ..

ಸೂಪರ್ ಗೆಳೆಯ ಮೃಧು ಭಾಷಿ, ಸುರ ಸುಂದರ ಶಶಿ  ಮತ್ತು  ಪತಿಯ ಸ್ನೇಹಿತರನ್ನು ತಮ್ಮಂದಿರಂತೆ ಅಣ್ಣಂದಿರಂತೆ ಅಕ್ಕರೆಯಿಂದ ಕಾಣುವ ನಮ್ಮೆಲ್ಲರ ಪ್ರೀತಿಯ ಅಕ್ಕ ಪ್ರತಿಭಾ ನಿಮಗೆ ಈ "ಗ್ರೇಟ್ BOD" ತಂಡದಿಂದ ವಿವಾಹ ವಾರ್ಷಿಕೋತ್ಸವದ ಸವಿ ನೆನಪುಗಳು.. ಪ್ರೀತಿ, ಪ್ರೇಮ, ಮಧುರ ನೆನಪುಗಳು ಇವಕ್ಕೆಲ್ಲ ಕಲಶ ಎನ್ನುವಂತೆ ನಮ್ಮ ಈ ಪುಟ್ಟ ತಂಡವನ್ನು ನಡೆಸುತ್ತಿರುವ ನಮ್ಮೆಲ್ಲರ ಅಚ್ಚು ಮೆಚ್ಚಿನ ಶಶಿ ಪ್ರತಿಭಾ ಅವರಿಗೆ ನಮ್ಮೆಲ್ಲರ ಆಭಿನಂದನೆಗಳು.. ನೂರ್ಕಾಲ ಹೀಗೆ ನಸು ನಗುತ್ತಾ ಇರಿ.. ಜೊತೆಯಲ್ಲಿ ರಜತ ಮಹೋತ್ಸವದ ಸಂತಸದಲ್ಲಿ ತೇಲುತ್ತಿರುವ ನಿಮ್ಮಿಬ್ಬರ ಸಂಗಾತಿಗೂ ಕೂಡ ಶುಭವಾಗಲಿ..

ಈ ಬೈಕ್ ನ ಇಪ್ಪತ್ತೈದು ವರ್ಷಗಳ ಒಂದು ಪಕ್ಷಿನೋಟ ನಿಮಗಾಗಿ.. ನಮ್ಮೆಲ್ಲರಿಗಾಗಿ!!!

ಅಣ್ಣ ತಮ್ಮ ಮನೆಗೆ ಬಂದ ಸಂತಸದ ಉಡುಗೊರೆಯ ಜೊತೆಯಲ್ಲಿ  -
 ಶಶಿ ಮತ್ತು ವಿಶ್ವ
(ಚಿತ್ರಕೃಪೆ - ಶಶಿ) 

ದಂಪತಿಗಳು ಎನ್ನುವ ಪದಕ್ಕೆ ಒಂದು ಉತ್ತಮ ಉದಾಹರಣೆ -
ಶಶಿ ಮತ್ತು ಪ್ರತಿಭಾ
(ಚಿತ್ರಕೃಪೆ - ಶಶಿ) 
ನಗುಮೊಗದ ಸರದಾರ ನಮ್ಮ ಶಶಿ
(ಚಿತ್ರಕೃಪೆ - ಶಶಿ) 
ಮುದ್ದು ಪುಟಾಣಿ ಶಶಿ ಪ್ರತಿಭಾ ಅವರ ಮೊದಲ "ಪ್ರತಿ"- ಸಾತ್ವಿಕ್
(ಚಿತ್ರ ಕೃಪೆ ಶಶಿ)

ಅಪ್ಪ ಎಂದರೆ ಹೀಗೆ ಇರಬೇಕು - ನಮ್ಮೆಲ್ಲರ ಮಾರ್ಗದರ್ಶಿ ಶಶಿಯ ತಂದೆ
(ಚಿತ್ರಕೃಪೆ - ಶಶಿ)  

ರಜತ ಮಹೋತ್ಸವದ ಸಂಗಾತಿಯ ಜೊತೆಯಲ್ಲಿ ಶಶಿ (ಚಿತ್ರಕೃಪೆ - ಶಶಿ) 
ನಾ ಓಡಿಸಲು ಕಲಿತ ಬೈಕ್ ಮೇಲೆ ನನ್ನ ಸ್ನೇಹಿತೆ - ಶೀತಲ್ 

(ಈ ಲೇಖನ ನಮ್ಮ ಗೆಳೆತನ ಇಪ್ಪತೆಂಟು ವಸಂತಗಳನ್ನು ಕಂಡ ಸವಿನೆನಪಿಗೆ ಈ ವರ್ಷಗಳಲ್ಲಿ ನಮ್ಮ ಜೊತೆಯಲ್ಲಿ ನಡೆದ ಸವಿ ಘಟನೆಗಳನ್ನು ದಾಖಲಿಸುವ ಒಂದು ಪುಟ್ಟ ಪ್ರಯತ್ನ)  

14 comments:

 1. Tumba dhanyavadagalu Sriki....Tumba chennagi barediddiya..!!!!
  Shashi Happy 15th Anniversary to you and Silver jubilee for our Bike!!!!

  ReplyDelete
  Replies
  1. ಗೆಳೆತನದ ನೆನಪುಗಳ ಜಾತ್ರೆಯೇ ಒಂದು ಸುಂದರ ಅನುಭವ ಅದನ್ನೆಲ್ಲ ಜೊತೆಯಲ್ಲಿ ಹಂಚಿಕೊಳ್ಳುವ ಒಂದು ಪ್ರಯತ್ನ ನನ್ನದು. ಧನ್ಯವಾದಗಳು ವೆಂಕಿ

   Delete
 2. ಎಷ್ಟು ಚಂದದ ದಿನಗಳ ನೆನಪು ಮಾಡಿಕೊಂಡಿದ್ದೀರಿ , ಇಂತಹ ಘಟನೆಗಳು ಅಮೂಲ್ಯವಾದವು, ಬಹಳ ಚೆನ್ನಾಗಿ ನಿಮ್ಮ ಬೈಕ್ ಕಲಿತ ಕ್ಷಣಗಳ ನಿರೂಪಣೆ ಮೂಡಿಬಂದಿದೆ, ನಿಮ್ಮ ಹಾಗು ನಿಮ್ಮ ಗೆಳೆಯನ ಕುಟುಂಬದ ಬಗ್ಗೆ ಒಳ್ಳೆಯ ವಿವರಣೆ, ಅವರ ಒಳ್ಳೆಯ ಗುಣಗಳ ಪರಿಚಯ ಮಾಡಿಕೊಟ್ಟಿದೆ , ಇದರಲ್ಲಿ ಶ್ರೀಕಾಂತ್ ಟ್ರೇಡ್ ಮಾರ್ಕ್ ಇದ್ದೆಇದೆ. ನಿಮ್ಮ ಗೆಳೆಯರಿಗೆ ಹದಿನೈದನೆ ವಿವಾಹ ವಾರ್ಷಿಕೊತ್ಸವದ ಹಾರ್ದಿಕ ಶುಭಾಶಯಗಳು

  ReplyDelete
  Replies
  1. ಸುಂದರ ಶುಭಾಶಯಗಳಿಗೆ ಧನ್ಯವಾದಗಳು ಸರ್ಜಿ. ಖಂಡಿತ ಈ ನಿಮ್ಮ ಶುಭಾಶಯಗಳನ್ನು ತಲುಪಿಸಿದ್ದೇನೆ.

   Delete
 3. ಚಂದದ ಬರಹ ಶ್ರೀಕಾಂತಣ್ಣ ...
  ಅಗೈನ್ ಏನೋ ಹೊಸತನವಿದೆ ಇಲ್ಲೂ ..
  ಅವರಿಗೆ ನನ್ನ ಕಡೆಯಿಂದಲೂ ಪ್ರೀತಿಯ ಶುಭಾಶಯಗಳು .
  ಎಲ್ಲರ ಜನುಮ ದಿನಕ್ಕೆ,ಮದುವೆ ವಾರ್ಷಿಕೋತ್ಸವಕ್ಕೆ ಪ್ರೀತಿಯಿಂದ ಶುಭಾಶಯ ಹೇಳೋ ಈ ಅಣ್ಣನಿಗೊಂದು ನಮನ ..
  ಹಾಗೆಯೇ ನಿಮ್ಮೊಪ್ಪಿಗೆ ಕೇಳದೆ ಇಲ್ಲಿರೋ ಕೊನೆಯ ಫೋಟದಲ್ಲಿನ ಮುದ್ದು ತಂಗಿಯ ಈ ಚಂದದ ಫೋಟೊವನ್ನೂ ನಾನಿಟ್ಟುಕೊಂಡಾಯ್ತು :)
  ಸೂಪರ್ ಅಗೈನ್

  ReplyDelete
  Replies
  1. ಸಂತಸದಲ್ಲಿ ಪಾಲ್ಗೊಂಡಾಗ ಅದರ ಶೋಭೆ ಇನ್ನು ಹೆಚ್ಚು.ಅಲ್ಲವೇ ಬಿಪಿ. ಪ್ರತಿಯೊಬ್ಬರಿಗೂ ಶುಭಾಷಯ ಹೇಳುವ ಅವಕಾಶ ನನಗೆ ಸಿಕ್ಕಿದೆ ಹಾಗಾಗಿ ಆ ಸಂತೋಷ ನಿಮ್ಮೆಲ್ಲರ ಸಂಗದ ಹಂಚಿಕೊಳ್ಳುತ್ತೇನೆ. ಸುಂದರ ಪ್ರತಿಕ್ರಿಯೆ ಧನ್ಯವಾದಗಳು ಬಿಪಿ

   Delete
 4. ಚಂದದ ಬರಹ ಶ್ರೀಕಾಂತಣ್ಣಾ...ನೀವು ಬೈಕ್ ಕಲಿತ ಕಥೆ ಸೂಪರ್ ...ನಿಮ್ಮ ಗೆಳೆಯರಿಗೆ ನಮ್ಮ ಕಡೆಯಿಂದಲೂ ಪ್ರೀತಿಯ ಶುಭಾಶಯಗಳು....

  ReplyDelete
  Replies
  1. ಧನ್ಯವಾದಗಳು ಎಸ್ ಎಸ್. ಆ ದಿನದ ಸಂದರ್ಭ ಇಂದಿಗೂ ನಗೆ ಉಕ್ಕಿಸಿದರೆ, ಇನ್ನೊಂದು ಕಡೆ ಅವತ್ತಿನ ನನ್ನ ಪಾಡು ಹಹಹ..

   Delete
 5. Badarinath PalavalliDecember 2, 2013 at 6:59 AM

  ನಿಮ್ಮ ಗೆಳೆಯರಿಗೆ ನಮ್ಮ ಕಡೆಯಿಂದ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿ ಸಾರ್.
  ತಮ್ಮ ಬೈಕ್ ಪ್ರಸಂಗ ಓದಿ ನನಗೆ ನಮ್ಮ ಅಣ್ಣನ ಪ್ರಿಯಾ ಸ್ಕೂಟರ್ ಓಡಿಸಲು ಹೋಗಿ ಮೋರಿ ಮಜ್ಜನವಾದ ’ಸವಿ’ ನೆನಪು ಮತ್ತೆ ಗೆಪ್ತಿಗೆ ಬಂತು!!!

  ReplyDelete
  Replies
  1. ವೌ.. ಮೋರಿ ದಾಟಿಸಿದ ಘಟನೆ. ಸೂಪರ್ ಬದರಿ ಸರ್. ಇಷ್ಟಪಟ್ಟಿದ್ದಕ್ಕೆ ಮತ್ತು ಶುಭಾಶಯ ತಲುಪಿಸಿದ್ದಕ್ಕೆ ಧನ್ಯವಾದಗಳು

   Delete
 6. Shashidhar narasapuraDecember 2, 2013 at 7:00 AM

  Sriki, it's great gift on my anniversary and tribute to a great bike. Thank you...

  ReplyDelete
  Replies
  1. Thank you Guru..the bike and its owner always the best!!! so the article

   Delete
 7. satishkumar JagarlamudiDecember 2, 2013 at 7:00 AM

  Happy anniversary shashi and prathibha

  ReplyDelete