ಭಕ್ತ ಕುಂಬಾರ ಚಿತ್ರದ ಚಿತ್ರೀಕರಣ ನಡೆಯುತ್ತಲಿತ್ತು.. ರಾಜಶಂಕರ್ ಎನ್ನುವ ಕಲಾವಿದ ಭಕ್ತ ನಾಮದೇವರ ಪಾತ್ರದಲ್ಲಿ ಅಭಿನಯಿಸುತ್ತಿದ್ದರು.. ಆಗ ಒಂದು ಸಂಭಾಷಣೆ ಹೇಳಬೇಕಿತ್ತು..
"ನನ್ನ ಅಜ್ಞಾನಕ್ಕೆ ದಿಕ್ಕಾರವಿರಲಿ.. ಅಹಂಕಾರ ತುಂಬಿ ಬರಿದಾಗಿರುವ ನನ್ನ ತಲೆಯೇ ಶಿವನಿಲ್ಲದ ಸ್ಥಳ... ಗುರುಗಳೇ ನನ್ನ ಮಹಾಪರಾಧವನ್ನು ಮನ್ನಿಸಿ.. " ಎಂದು ಹೇಳಬೇಕಿತ್ತು..
ಸುಮಾರು ಟೇಕ್ ಗಳು ಆದವು.. ಆ ಸನ್ನಿವೇಶ ಅದ್ಭುತವಾಗಿ ಚಿತ್ರದಲ್ಲಿ ಮೂಡಿಬಂದಿತ್ತು...
ಆ ಚಲನಚಿತ್ರ ನೋಡುತ್ತಾ ಕುಳಿತಿದ್ದೆ.. ಅರೆ ಹೌದಲ್ವ ನನಗೂ ಅದೇ ಅನುಭವವಾಗುತ್ತಿದೆ.. ಅಲ್ಲವೇ..
ಕರಿಘಟ್ಟ ಎಂಬ ಮಹೋನ್ನತ ಸ್ಥಳಕ್ಕೆ ಬ್ಲಾಗಿಗರ ಒಂದು ತಂಡ ದೊಡ್ಡ ಬಸ್ಸಿನಲ್ಲಿ ಹೋಗುತ್ತಿತ್ತು.. ಬನಶಂಕರಿ ಹತ್ತಿರ ಈ ಕಾರ್ಯಕ್ರಮದ ರೂವಾರಿ ಪ್ರಕಾಶಣ್ಣ ಮತ್ತು ಕೆಲ ಸ್ನೇಹಿತರು ಹತ್ತಿದರು.. ಯಾರ ಪರಿಚಯವು ಇಲ್ಲದ ನಾನು ಕಾಗೆ ಗೂಡಿನಲ್ಲಿ ಕೂತ ಕೋಗಿಲೆಯ ತರಹ ಅತ್ತಿತ್ತ ನೋಡುತ್ತಲಿದೆ..
"ಶ್ರೀಕಾಂತ್ ಮಂಜುನಾಥ್.. ನಮಸ್ಕಾರ" ಎಂಬ ಧ್ವನಿ ಕೇಳಿದಾಗ ನನಗೆ ಆಶ್ಚರ್ಯ... ಅಲ್ಲಿದ್ದ ಸಹ ಬ್ಲಾಗಿಗರಲ್ಲಿ ಪರಿಚಯ ಅನ್ನುವ ಪದ ನನಗೆ ಹೊಳೆದದ್ದು ಕೆಅವಲ ಪ್ರಕಾಶಣ್ಣನನ್ನು ನೋಡಿದಾಗ ಮಾತ್ರ.. ಅವರನ್ನು ಬಿಟ್ಟರೆ ಮಿಕ್ಕೆಲ್ಲರೂ ಮುಖ ಪರಿಚಯ ಇಲ್ಲದ ಸಹೃದಯ ಸ್ನೇಹಿತರು... ಆದರೆ ಕೆಲವೆ ನಿಮಿಷಗಳಲ್ಲಿ ಆ "ಅಪರಿಚಿತ" ಎನ್ನುವ ಪದದಿಂದ "ಅ" ಅನ್ನುವ ಅಕ್ಷರ ನನಗೆ ಗೊತ್ತಿಲದೇ ಬಸ್ಸಿಂದ ಇಳಿದು ಹೋಯ್ತು.. :-)
ನಾಮದೇವ ಪಾತ್ರಧಾರಿ ಹೇಳಿದಂತೆ ಏನೋ ಒಂದು ರೀತಿಯ ವಿಚಿತ್ರ ಅಹಂ ಎನ್ನುವ ಭಾವ ನನ್ನಲ್ಲಿ ಇಣುಕುತಿತ್ತು.. ಅದು ಭುವಿಯೊಳಗೆ ಸೇರಿ ಹೋದದ್ದು ಒಂದು ವಿಶಿಷ್ಟ ಪ್ರತಿಭೆಯನ್ನು ಭೇಟಿ ಮಾಡಿ ಮಾತಾಡಿಸಿದಾಗ.. .. ಎಲ್ಲರೊಳು ಒಂದಾಗು ಆವಾಗ ನೀನು ಎನ್ನುವ ಭಾವ ಹೋಗಿ ನಾವೆಲ್ಲಾ ಅನ್ನುವ ಮನೋಭಾವ ಬರುತ್ತದೆ ಎನ್ನುವ ತತ್ವ ಅರಿವಾದ ರಸಮಯ ಘಳಿಗೆ ಅದು..
ಇವರ ಬಗ್ಗೆ ಏನಾದರು ಬರೆಯೋಣ ಅಂದರೆ ಪದಾರ್ಥವೇ ಚಿಂತಾ"ಮಣಿ"ಯಾಗಿಬಿಡುತ್ತದೆ..
ಹಾಸ್ಯ ಬರೆಯೋಣ ಅಂದ್ರೆ "ಬಾಟಮ್ ಪಂಚ್" ನನ್ನನ್ನು ಪಂಚ್ ಮಾಡಲು ಓಡಿ ಬರುತ್ತದೆ...
ಕವಿತೆ ಕಟ್ಟೋಣ ಅಂದ್ರೆ "ಹಾಯ್ಕು ಕಾಯ್ಕು" ಎನ್ನುತ್ತಾ ನನ್ನತ್ತಲೇ ಹಾಯಲು ನುಗ್ಗುತ್ತದೆ..
ಸುಂದರ ಹಾಡು ಹಾಡೋಣ ಅಂದ್ರೆ "ಕರೋಕೆ" ಹಾಗೆ ತೇಲಿ ಬಂದು ಕಿವಿಗೆ ಅಪ್ಪಳಿಸುತ್ತದೆ..
ಹೋಗಲಿ ಬಿಡಿ.. ಹಾಗೆ ಕೆರೆ ಕಟ್ಟೆ ಭಾವಿಯ "ಜಲನಯನ"ದಲ್ಲಿ ನಮ್ಮ ಮುಖ ನೋಡಿಕೊಳ್ಳೋಣ ಅಂದ್ರೆ ಅಲ್ಲಿರುವ ಮೀನುಗಳೆಲ್ಲ ಮುಸಿ ಮುಸಿ ನಗುತ್ತದೆ
ತರಕಾರಿ ಸೇರಿಸಿ ಚಿತ್ರಾನ್ನ ಮಾಡೋಣ ಅಂತ ಅಡಿಗೆ ಮನೆಗೆ ನುಗ್ಗಿದರೆ.. "ಬಟಾಣಿ ಚಿಕ್ಕಿ" ಚಿಕ್ಕಿ ಬಂದ ಚಿಕ್ಕಿ ಬಂದ ಅಂತ ಕಿಸಿ ಕಿಸಿ ಎನ್ನುತ್ತದೆ..
ಇವರೆಲ್ಲ ಗುಂಡ ಹೇಳಿದಾ ಮಾತನ್ನು ಕೇಳಿ ಬಿ. ಬಿ. ನ..(ಬಿದ್ದು ಬಿದ್ದು ನಗುವಾಗ) ನಾ ಏನು ಬರೆದರೂ ಅದು ಸರಿ ಹೋಗದು ಅಲ್ಲವೇ!!!
ಬಂಗಾರದ ಮನುಷ್ಯದ "ನಗು ನಗುತಾ ನಲಿ ನಲಿ ಏನೇ ಆಗಲಿ" ಎಂಬ ಹಾಡಿನಂತೆ ತಾನೂ ನಕ್ಕು, ಇತರರನ್ನು ನಗಿಸಿ, ಸದಾ ನಸು ನಗುತ್ತಾ ಇರುವ ಒಂದು ಸುಂದರ ಮನಸ್ಸು ನಮ್ಮ ಆಜಾದ್ ಸರ್ ಅವರದು..
ನನ್ನ ಹೆಸರಿನ ಬಗ್ಗೆ ನನಗೆ ವಿಪರೀತ ವ್ಯಾಮೋಹ.. ಅದನ್ನು ಇನ್ನಷ್ಟು ಮೋಹಿಸುವಂತೆ "ಶ್ರೀಮಾನ್" ಎನ್ನುವ ಸುಂದರ ನಾಮಕರಣ ಮಾಡಿದ ಸಹೃದಯ ಗೆಳೆಯ ನಮ್ಮ ಆಜಾದ್ ಸರ್.. ಒಬ್ಬ ವ್ಯಕ್ತಿಯಲ್ಲಿ ಎಷ್ಟು ನಗು ಕಾಣಬಹದು, ಎಷ್ಟು ಪ್ರೋತ್ಸಾಹಕ ನುಡಿಮುತ್ತುಗಳನ್ನು ಕಾಣಬಹುದು ಅದರ ಅನ್ವರ್ಥಕ ಹೆಸರೇ ಆಜಾದ್ ಸರ್... ಅವರಿಂದ ಕಲಿತ ಅನೇಕ ಪಾಠಗಳಲ್ಲಿ ಅನೇಕ ನಗೆ ಪ್ರಕಾರವೂ ಒಂದು...
ನಗೆಗೂ ಹಲವಾರು ಆಯಾಮಗಳು ಇರುತ್ತವೆ.. ಹೀಗೂ ನಗಿಸಬಹುದು ಎನ್ನುವ ಒಂದು ಸೂತ್ರವನ್ನು ಕಲಿತ ಆ ಕ್ಷಣ ಅತಿ ಸುಂದರವೆನಿಸಿತು.. ನಿಮಗೂ ನೋಡಬೇಕು ಅನಿಸುತ್ತಿದೆಯೇ .. ಅರೆ ಅದಕ್ಯಾಕೆ ತಡ.. ನಡೆಯಿರಿ ನಗುವಿನ ಹಲವಾರು ಸೂತ್ರಗಳನ್ನು ಕಂಡು ಬರೋಣ... ಹಾಗೆಯೇ ಬಹುಮುಖ ಪ್ರತಿಭೆಯ ಒಂದು ಸುಂದರ ಅನಾವರಣವನ್ನು ಕಂಡು ಬರೋಣ ...!
ಇಂದು ಅವರ ಹುಟ್ಟು ಹಬ್ಬ.. ಇಂತಹ ಒಂದು ಸುಂದರ ಮನಸ್ಸನ್ನು ಭುವಿಗೆ ತಂದ ಆ ಮಹಾನ್ ಮಾತಾ ಪಿತೃಗಳಿಗೆ ವಂದಿಸುತ್ತಾ.. ಹಾಗೆಯೇ ಅವರ ಮನದನ್ನೆ ಮತ್ತು ದೇವರು ಕೊಟ್ಟ ವರ ಮಗಳು ಇವರ ತುಂಬು ಸಂಸಾರದಲ್ಲಿ ನಗೆ, ಸಂತಸ, ಶಾಂತಿ, ನೆಮ್ಮದಿ ಸದಾ ತುಂಬಿ ತುಳುಕುತ್ತಿರಲಿ ಎಂದು ಆಶಿಸುತ್ತಾ ಸಮಸ್ತ ಬ್ಲಾಗ್, ಫೇಸ್ ಬುಕ್ ಹಾಗೂ ಅದರ ಅನೇಕ ಹೆಸರಿಸಲಾಗದ ತಂಡಗಳ ಸದಸ್ಯರ ಪರವಾಗಿ ಅಜಾದ್ ಸರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.. !!!
"ನನ್ನ ಅಜ್ಞಾನಕ್ಕೆ ದಿಕ್ಕಾರವಿರಲಿ.. ಅಹಂಕಾರ ತುಂಬಿ ಬರಿದಾಗಿರುವ ನನ್ನ ತಲೆಯೇ ಶಿವನಿಲ್ಲದ ಸ್ಥಳ... ಗುರುಗಳೇ ನನ್ನ ಮಹಾಪರಾಧವನ್ನು ಮನ್ನಿಸಿ.. " ಎಂದು ಹೇಳಬೇಕಿತ್ತು..
ಸುಮಾರು ಟೇಕ್ ಗಳು ಆದವು.. ಆ ಸನ್ನಿವೇಶ ಅದ್ಭುತವಾಗಿ ಚಿತ್ರದಲ್ಲಿ ಮೂಡಿಬಂದಿತ್ತು...
ಆ ಚಲನಚಿತ್ರ ನೋಡುತ್ತಾ ಕುಳಿತಿದ್ದೆ.. ಅರೆ ಹೌದಲ್ವ ನನಗೂ ಅದೇ ಅನುಭವವಾಗುತ್ತಿದೆ.. ಅಲ್ಲವೇ..
ಕರಿಘಟ್ಟ ಎಂಬ ಮಹೋನ್ನತ ಸ್ಥಳಕ್ಕೆ ಬ್ಲಾಗಿಗರ ಒಂದು ತಂಡ ದೊಡ್ಡ ಬಸ್ಸಿನಲ್ಲಿ ಹೋಗುತ್ತಿತ್ತು.. ಬನಶಂಕರಿ ಹತ್ತಿರ ಈ ಕಾರ್ಯಕ್ರಮದ ರೂವಾರಿ ಪ್ರಕಾಶಣ್ಣ ಮತ್ತು ಕೆಲ ಸ್ನೇಹಿತರು ಹತ್ತಿದರು.. ಯಾರ ಪರಿಚಯವು ಇಲ್ಲದ ನಾನು ಕಾಗೆ ಗೂಡಿನಲ್ಲಿ ಕೂತ ಕೋಗಿಲೆಯ ತರಹ ಅತ್ತಿತ್ತ ನೋಡುತ್ತಲಿದೆ..
"ಶ್ರೀಕಾಂತ್ ಮಂಜುನಾಥ್.. ನಮಸ್ಕಾರ" ಎಂಬ ಧ್ವನಿ ಕೇಳಿದಾಗ ನನಗೆ ಆಶ್ಚರ್ಯ... ಅಲ್ಲಿದ್ದ ಸಹ ಬ್ಲಾಗಿಗರಲ್ಲಿ ಪರಿಚಯ ಅನ್ನುವ ಪದ ನನಗೆ ಹೊಳೆದದ್ದು ಕೆಅವಲ ಪ್ರಕಾಶಣ್ಣನನ್ನು ನೋಡಿದಾಗ ಮಾತ್ರ.. ಅವರನ್ನು ಬಿಟ್ಟರೆ ಮಿಕ್ಕೆಲ್ಲರೂ ಮುಖ ಪರಿಚಯ ಇಲ್ಲದ ಸಹೃದಯ ಸ್ನೇಹಿತರು... ಆದರೆ ಕೆಲವೆ ನಿಮಿಷಗಳಲ್ಲಿ ಆ "ಅಪರಿಚಿತ" ಎನ್ನುವ ಪದದಿಂದ "ಅ" ಅನ್ನುವ ಅಕ್ಷರ ನನಗೆ ಗೊತ್ತಿಲದೇ ಬಸ್ಸಿಂದ ಇಳಿದು ಹೋಯ್ತು.. :-)
ನಾಮದೇವ ಪಾತ್ರಧಾರಿ ಹೇಳಿದಂತೆ ಏನೋ ಒಂದು ರೀತಿಯ ವಿಚಿತ್ರ ಅಹಂ ಎನ್ನುವ ಭಾವ ನನ್ನಲ್ಲಿ ಇಣುಕುತಿತ್ತು.. ಅದು ಭುವಿಯೊಳಗೆ ಸೇರಿ ಹೋದದ್ದು ಒಂದು ವಿಶಿಷ್ಟ ಪ್ರತಿಭೆಯನ್ನು ಭೇಟಿ ಮಾಡಿ ಮಾತಾಡಿಸಿದಾಗ.. .. ಎಲ್ಲರೊಳು ಒಂದಾಗು ಆವಾಗ ನೀನು ಎನ್ನುವ ಭಾವ ಹೋಗಿ ನಾವೆಲ್ಲಾ ಅನ್ನುವ ಮನೋಭಾವ ಬರುತ್ತದೆ ಎನ್ನುವ ತತ್ವ ಅರಿವಾದ ರಸಮಯ ಘಳಿಗೆ ಅದು..
ಇವರ ಬಗ್ಗೆ ಏನಾದರು ಬರೆಯೋಣ ಅಂದರೆ ಪದಾರ್ಥವೇ ಚಿಂತಾ"ಮಣಿ"ಯಾಗಿಬಿಡುತ್ತದೆ..
ಹಾಸ್ಯ ಬರೆಯೋಣ ಅಂದ್ರೆ "ಬಾಟಮ್ ಪಂಚ್" ನನ್ನನ್ನು ಪಂಚ್ ಮಾಡಲು ಓಡಿ ಬರುತ್ತದೆ...
ಕವಿತೆ ಕಟ್ಟೋಣ ಅಂದ್ರೆ "ಹಾಯ್ಕು ಕಾಯ್ಕು" ಎನ್ನುತ್ತಾ ನನ್ನತ್ತಲೇ ಹಾಯಲು ನುಗ್ಗುತ್ತದೆ..
ಸುಂದರ ಹಾಡು ಹಾಡೋಣ ಅಂದ್ರೆ "ಕರೋಕೆ" ಹಾಗೆ ತೇಲಿ ಬಂದು ಕಿವಿಗೆ ಅಪ್ಪಳಿಸುತ್ತದೆ..
ಹೋಗಲಿ ಬಿಡಿ.. ಹಾಗೆ ಕೆರೆ ಕಟ್ಟೆ ಭಾವಿಯ "ಜಲನಯನ"ದಲ್ಲಿ ನಮ್ಮ ಮುಖ ನೋಡಿಕೊಳ್ಳೋಣ ಅಂದ್ರೆ ಅಲ್ಲಿರುವ ಮೀನುಗಳೆಲ್ಲ ಮುಸಿ ಮುಸಿ ನಗುತ್ತದೆ
ತರಕಾರಿ ಸೇರಿಸಿ ಚಿತ್ರಾನ್ನ ಮಾಡೋಣ ಅಂತ ಅಡಿಗೆ ಮನೆಗೆ ನುಗ್ಗಿದರೆ.. "ಬಟಾಣಿ ಚಿಕ್ಕಿ" ಚಿಕ್ಕಿ ಬಂದ ಚಿಕ್ಕಿ ಬಂದ ಅಂತ ಕಿಸಿ ಕಿಸಿ ಎನ್ನುತ್ತದೆ..
ಇವರೆಲ್ಲ ಗುಂಡ ಹೇಳಿದಾ ಮಾತನ್ನು ಕೇಳಿ ಬಿ. ಬಿ. ನ..(ಬಿದ್ದು ಬಿದ್ದು ನಗುವಾಗ) ನಾ ಏನು ಬರೆದರೂ ಅದು ಸರಿ ಹೋಗದು ಅಲ್ಲವೇ!!!
ಬಂಗಾರದ ಮನುಷ್ಯದ "ನಗು ನಗುತಾ ನಲಿ ನಲಿ ಏನೇ ಆಗಲಿ" ಎಂಬ ಹಾಡಿನಂತೆ ತಾನೂ ನಕ್ಕು, ಇತರರನ್ನು ನಗಿಸಿ, ಸದಾ ನಸು ನಗುತ್ತಾ ಇರುವ ಒಂದು ಸುಂದರ ಮನಸ್ಸು ನಮ್ಮ ಆಜಾದ್ ಸರ್ ಅವರದು..
ನನ್ನ ಹೆಸರಿನ ಬಗ್ಗೆ ನನಗೆ ವಿಪರೀತ ವ್ಯಾಮೋಹ.. ಅದನ್ನು ಇನ್ನಷ್ಟು ಮೋಹಿಸುವಂತೆ "ಶ್ರೀಮಾನ್" ಎನ್ನುವ ಸುಂದರ ನಾಮಕರಣ ಮಾಡಿದ ಸಹೃದಯ ಗೆಳೆಯ ನಮ್ಮ ಆಜಾದ್ ಸರ್.. ಒಬ್ಬ ವ್ಯಕ್ತಿಯಲ್ಲಿ ಎಷ್ಟು ನಗು ಕಾಣಬಹದು, ಎಷ್ಟು ಪ್ರೋತ್ಸಾಹಕ ನುಡಿಮುತ್ತುಗಳನ್ನು ಕಾಣಬಹುದು ಅದರ ಅನ್ವರ್ಥಕ ಹೆಸರೇ ಆಜಾದ್ ಸರ್... ಅವರಿಂದ ಕಲಿತ ಅನೇಕ ಪಾಠಗಳಲ್ಲಿ ಅನೇಕ ನಗೆ ಪ್ರಕಾರವೂ ಒಂದು...
ನಗೆಗೂ ಹಲವಾರು ಆಯಾಮಗಳು ಇರುತ್ತವೆ.. ಹೀಗೂ ನಗಿಸಬಹುದು ಎನ್ನುವ ಒಂದು ಸೂತ್ರವನ್ನು ಕಲಿತ ಆ ಕ್ಷಣ ಅತಿ ಸುಂದರವೆನಿಸಿತು.. ನಿಮಗೂ ನೋಡಬೇಕು ಅನಿಸುತ್ತಿದೆಯೇ .. ಅರೆ ಅದಕ್ಯಾಕೆ ತಡ.. ನಡೆಯಿರಿ ನಗುವಿನ ಹಲವಾರು ಸೂತ್ರಗಳನ್ನು ಕಂಡು ಬರೋಣ... ಹಾಗೆಯೇ ಬಹುಮುಖ ಪ್ರತಿಭೆಯ ಒಂದು ಸುಂದರ ಅನಾವರಣವನ್ನು ಕಂಡು ಬರೋಣ ...!
ಜಲ ನಯನ.. ಕ್ಯಾಮೇರಾ ನಯನದಲ್ಲಿ ಸೆರೆಯಾದಾಗ!!! ( ಚಿತ್ರ ಕೃಪೆ - ನಿಮ್ಮೊಳಗೊಬ್ಬ ಬಾಲು) |
ನಾ ಭವಿಷ್ಯ ಹೇಳೋಣ ಅಂತ ಬಂದ್ರೆ.. .ನನಗೆ ಜಾಕ್ ಹಾಕ್ತಾ ಇದ್ದೀರಾ (ಚಿತ್ರ ಕೃಪೆ - ಅಜಾದ್ ಸರ್) |
ನಾ ಹೇಳೋದು ಒಸಿ ಕೇಳು ಚಂದ್ರಗುಪ್ತ - ಚಿತ್ರ ಕೃಪೆ ಅಜಾದ್ ಸರ್ |
ಕನ್ನಡದಲ್ಲಿ ಕೂಡ ಚಿತ್ರ ತೆಗೆಸಿಕೊಳ್ಳುವ ಚಾಣಕ್ಯ - (ಚಿತ್ರಕೃಪೆ ಪ್ರದೀಪ್ ರಾವ್) |
ಬನ್ನಿ ಕನ್ನಡ ಬೇಡ ಎಂದವರಿಗೆ ಹಾಕೋಣ ಗಾಳಿ!!! (ಚಿತ್ರಕೃಪೆ - ಅಜಾದ್ ಸರ್) |
ಎರಡು ಪ್ರತಿಭೆಗಳು.. ಅಜಾದ್ ಸರ್ ಮತ್ತು (ಜ್ಯೂ) ಅಣ್ಣಾವ್ರು (ಚಿತ್ರಕೃಪೆ - ಅಜಾದ್ ಸರ್ ) |
ನೋಡ್ರಿ ಇವರು ಅಜಾದ್ ಅಂತೆ.. ನನಗಿಂತ ದಪ್ಪ ಮೀಸೆ.. ಇವರ ಬಾಯಿಗೆ ಅಜಾದಿನೇ ಇಲ್ಲಾ ಮೀಸೆಯೇ ತುಂಬಿ ಬಿಟ್ಟಿದೆ!!! (ಚಿತ್ರ ಕೃಪೆ - ಆಜಾದ್ ಸರ್) |
ಏನೂ ನನ್ನ ಹುಟ್ಟು ಹಬ್ಬಕ್ಕೆ ಬ್ಲಾಗ ಬಂತಾ ಹೌದಾ.. !!! (ಚಿತ್ರಕೃಪೆ ಅಜಾದ್ ಸರ್ ) |
ಶ್ರೀಮಾನ್ ಮತ್ತೆ ನನ್ನನ್ನು ಗೋಳು ಹುಯ್ದು ಕೊಳ್ಳಲು ಬಂದ್ರಾ !!! ಇರಲಿ ಹುಟ್ಟು ಹಬ್ಬ ಮುಗೀಲಿ ಆಮೇಲಿದೆ ನಿಮಗೆ ...:-) (ಚಿತ್ರಕೃಪೆ - ಅಜಾದ್ ಸರ್) |
ಶ್ರೀಮಾನ್ ಏನೇನೋ ಬರೆಯಲು ಹೋಗಬೇಡಿ (ಕೃಪೆ - ಅಜಾದ್ ಸರ್ ) |
ರಾತಿ ಹನ್ನೆರಡಕ್ಕೆ ನನಗೆ ವಿಶ್ ಮಾಡಿದ್ರ ... ಹೌದಾ.. ಇದು ಸೂಪರ್ ಆಲ್ವಾ!!! |
ನಿಮ್ಮೆಲ್ಲರ ಪ್ರೀತಿ ವಿಶ್ವಾಸಗಳನ್ನು ಕಂಡ ಮನಸ್ಸು ಹೀಗೆ ಕುಣಿಯೋಣ ಅನ್ಸುತ್ತೆ ಅಂದ್ರು ಆಜಾದ್ ಸರ್ (ಚಿತ್ರ ಕೃಪೆ - ನಿಮ್ಮೊಳಗೊಬ್ಬ ಬಾಲು) |
ಆತ್ಮೀಯರಾದ ಶ್ರೀ ಆಜಾದ್ ಸಾರ್ ಜನುಮದಿಂದ ಹಾರ್ದಿಕ ಶುಭಾಶಯಗಳು, ನಿಮ್ಮ ಎಲ್ಲಾ ಒಳ್ಳೆಯ ಕನಸುಗಳು ನನಸಾಗಲಿ . ನಿಮ್ಮ ಕೀರ್ತಿ ಮತ್ತಷ್ಟು ವಿಶ್ವ ವ್ಯಾಪಿ ಬೆಳಗಲಿ ಶ್ರೀ ಕಾಂತ್ ಇಂತಹ ಕೊಡುಗೆಗಳನ್ನು ನೀಡುವಲ್ಲಿ ನಿಮಗೆ ನೀವೇ ಸಾಟಿ, ನಿಮ್ಮ ಈ ಲೇಖನ ಅಜಾದ್ ಸಾರ್ ಅವರ ವ್ಯಕ್ತಿತ್ವದ ಬಗ್ಗೆ ಒಳ್ಳೆಯ ವಿವರ ನೀಡುತ್ತದೆ, ಒಳ್ಳೆಯ ಲೇಖನಕ್ಕಾಗಿ ಅಭಿನಂದನೆಗಳು ನಿಮಗೆ ಶ್ರೀಕಾಂತ್ ಜಿ.
ReplyDeleteಆತ್ಮೀಯ ಗೆಳೆಯರಾದ ಡಾ. ಆಜಾದ್ ಹುಟ್ಟುಹಬ್ಬದ ಶುಭಾಶಯಗಳನ್ನು ಇದಕ್ಕಿಂತ ಚೆಂದವಾಗಿ ಹೇಳಲು ಖಂಡಿತವಾಗಿ ಸಾಧ್ಯವಿಲ್ಲ. ಶ್ರೀಕಾಂತ್ ಸರ್ ನಿಜಕ್ಕು ನಿಮ್ಮ ಅಭಿಮಾನ ದೊಡ್ಡದು.
ReplyDeleteHi Sri,
ReplyDeleteಅಜ಼ಾದ್ ಸರ್ ಬಗ್ಗೆ ನೀವು ಬರೆದ ಪ್ರತಿಯೊ೦ದು ಮಾತು ನಿಜ...... ಅಪರೂಪ ವ್ಯಕ್ತಿತ್ವ...
ಹುಟ್ಟು ಹಬ್ಬದ ಹಾರ್ದಿಕೆ ಶುಭಾಶಯಗಳು ಸರ್ಜೀ..... ಯಾವಾಗ್ಲು ಹೀಗೆ ನಗ್ ನಗ್ತಾ, ಎಲ್ರನ್ನೂ ನಗಿಸ್ತಾ ಇರಿ ... ಜೈ ಹೋ.....
ತಾವು ಇದೀಗ ನನ್ನ ಮನಸ್ಸನ್ನು ಮತ್ತೆ ಗೆದ್ದಿರಿ. ಯಾವಾಗಿನದಕಿಂತಲೂ ಹಲವು ಪಟ್ಟು!
ReplyDeleteನಮ್ಮ ಅಜಾದಣ್ಣನ ಜನುಮದಿನಕೆ ಬ್ಲಾಗಿನ ಮೂಲಕ ತಾವು ಕೊಟ್ಟಿರುವ ಈ ಉಡುಗೊರೆ ನಮಗೆ ಸಂಗ್ರಹಾರ್ಹ ಮತ್ತು ಸಂಶೋಧನಾರ್ಹ.
ಬಹುಮುಖಿ ಪ್ರತಿಭೆಯನ್ನು ಅತ್ಯಂತ ಹೃದಯ ಸ್ಪರ್ಷಿಯಾಗಿ ವಿವರಿಸುತ್ತಾ ಹೋಗಿದ್ದೀರ.
ಹಾಕಿರುವ ಎಲ್ಲ ಫೋಟೋಗಳು ಬೊಂಬಾಟ್.
the best "ನಾ ಭವಿಷ್ಯ ಹೇಳೋಣ ಅಂತ ಬಂದ್ರೆ.. .ನನಗೆ ಜಾಕ್ ಹಾಕ್ತಾ ಇದ್ದೀರಾ"
ಸೂಪರ್ ಶ್ರೀಕಾಂತ್ ಚೆಂದದ ಬರಹ ಒಬ್ಬ ಪ್ರತಿಭಾನ್ವಿತ, ಸರಳ, ಸಜ್ಜನಿಕೆಯುಳ್ಳಂತ ವ್ಯಕ್ತಿಯ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ . ಇಂತಹ ಒಂದೊಳ್ಳೆ ಲೇಖನಕ್ಕೆ ಧನ್ಯವಾದಗಳು. ಪೋಟೋಗಳು ಸಕ್ಕತ್ತಾಗಿವೆ.
ReplyDeleteಅಜಾದ್ ಸರ್ ಹುಟ್ಟು ಹಬ್ಬದ ಶುಭಾಶಯಗಳು
ನಾನು ಸಂಗ್ರಹಿಸಿ ಇಡಬೇಕಾದ ಬರಹ...ಎಲ್ಲಿ ಏನು ಎಷ್ಟು ಎನ್ನುವುದು ಶ್ರೀಮನ್ ಗೆ ಗೊತ್ತು.
ReplyDeleteಮಾತು ಸಾಲವು ನಿಮ್ಮ ಆತ್ಮೀಯತೆ ಬಣ್ಣನೆಗೆ ..ಏನನ್ನೂ ಬರೆಯಲಾರೆ ಎಂದೇ ಈ ಸುಂದರ ಲೇಖನ ಅದರಲ್ಲೂ ಈ ಸಾಲುಗಳು...ವಾಹ್ ಭೈ ವಾಹ್ ಎನ್ನದೇ ವಿಧಿಯಿಲ್ಲ
ಇವರ ಬಗ್ಗೆ ಏನಾದರು ಬರೆಯೋಣ ಅಂದರೆ ಪದಾರ್ಥವೇ ಚಿಂತಾ"ಮಣಿ"ಯಾಗಿಬಿಡುತ್ತದೆ..
ಹಾಸ್ಯ ಬರೆಯೋಣ ಅಂದ್ರೆ "ಬಾಟಮ್ ಪಂಚ್" ನನ್ನನ್ನು ಪಂಚ್ ಮಾಡಲು ಓಡಿ ಬರುತ್ತದೆ...
ಕವಿತೆ ಕಟ್ಟೋಣ ಅಂದ್ರೆ "ಹಾಯ್ಕು ಕಾಯ್ಕು" ಎನ್ನುತ್ತಾ ನನ್ನತ್ತಲೇ ಹಾಯಲು ನುಗ್ಗುತ್ತದೆ..
ಸುಂದರ ಹಾಡು ಹಾಡೋಣ ಅಂದ್ರೆ "ಕರೋಕೆ" ಹಾಗೆ ತೇಲಿ ಬಂದು ಕಿವಿಗೆ ಅಪ್ಪಳಿಸುತ್ತದೆ..
ಹೋಗಲಿ ಬಿಡಿ.. ಹಾಗೆ ಕೆರೆ ಕಟ್ಟೆ ಭಾವಿಯ "ಜಲನಯನ"ದಲ್ಲಿ ನಮ್ಮ ಮುಖ ನೋಡಿಕೊಳ್ಳೋಣ ಅಂದ್ರೆ ಅಲ್ಲಿರುವ ಮೀನುಗಳೆಲ್ಲ ಮುಸಿ ಮುಸಿ ನಗುತ್ತದೆ
ತರಕಾರಿ ಸೇರಿಸಿ ಚಿತ್ರಾನ್ನ ಮಾಡೋಣ ಅಂತ ಅಡಿಗೆ ಮನೆಗೆ ನುಗ್ಗಿದರೆ.. "ಬಟಾಣಿ ಚಿಕ್ಕಿ" ಚಿಕ್ಕಿ ಬಂದ ಚಿಕ್ಕಿ ಬಂದ ಅಂತ ಕಿಸಿ ಕಿಸಿ ಎನ್ನುತ್ತದೆ..
ಇವರೆಲ್ಲ ಗುಂಡ ಹೇಳಿದಾ ಮಾತನ್ನು ಕೇಳಿ ಬಿ. ಬಿ. ನ..(ಬಿದ್ದು ಬಿದ್ದು ನಗುವಾಗ) ನಾ ಏನು ಬರೆದರೂ ಅದು ಸರಿ ಹೋಗದು ಅಲ್ಲವೇ!!!
ವಾಹ್ !
ReplyDeleteಅಜಾದ್ ಅಣ್ಣಾ ...ಜನುಮ ದಿನದ ಪ್ರೀತಿಯ ಶುಭಾಶಯಗಳು ನಿಮಗೆ. ಈ ನಗು ,ಪ್ರೀತಿ ,ಆತ್ಮೀಕ ಸ್ನೇಹ ಯಾವಾಗಲೂ ಹೀಗೆಯೇ ಇರಲಿ.
ಮೊದಲ ಭೇಟಿಯಲ್ಲಿ ಆತ್ಮೀಯರನಿಸಿದ್ರಿ..ಪ್ರೀತಿಯಿಂದ ಮಾತಾಡಿಸಿದ್ರಿ.
ಯಾವಾಗಲೂ ನಗ್ತಾ ,ಏನಾದರೊಂದು ಹಾಸ್ಯ ಚಟಾಕಿ ಹಾರಿಸ್ತಾ ಇರೋ ನೀವು ಎಲ್ಲರಿಗೂ ಬೇಗ ಆಪ್ತರಾಗ್ತೀರ :)
ಹೀಗೊಬ್ಬ ಅಣ್ಣ ನಂಗೂ ಈ ಮುಖಪುಟದಲ್ಲಿ ಪರಿಚಯವಾಗಿರೋದು ಹಿಡಿಸಲಾರದ ಖುಷಿ.
ಇರಲಿ ಈ ನಗುವ ಸ್ನೇಹ ಬದುಕ ತುಂಬಾ್....ಖುಷಿಗಳ ಜೊತೆಗೆ...ಖುಷಿಯ ಹಂಚುತಾ.
ಪ್ರೀತಿಯಿಂದ,
ಶ್ರೀಕಾಂತಣ್ಣಾ... ಸೂಪರ್ರ್ರ್ರ್ ...ಒಂದು ಸಣ್ಣ ಕುತೂಹಲವಿತ್ತು ಇವತ್ತು ನೀವೇನು ಹೇಳ್ತೀರ ಅನ್ನೋದರ ಬಗ್ಗೆ.
ತುಂಬಾ ತುಂಬಾ ಇಷ್ಟವಾಯ್ತು ನೀವು ಕಟ್ಟಿ ಕೊಟ್ಟ ಈ ಬಗೆ.
ಯಾವಾಗಲೂ ಹೊಸತಾಗೇ ಕಟ್ಟಿಕೊಡೋ ನಿಮ್ಮೀ ಭಾವ ಇವತ್ತು ನಂಗೆ ಮತ್ತೂ ಹೊಸತಂತೆ ಅನಿಸಿತು :)
ಚಂದಾ...ಚಂದ...ಚಂದದ ಉಡುಗೊರೆ
ಜನುಮ ದಿನದ ಹಾರ್ದಿಕ ಶುಭಾಶಯಗಳು ಆಜ಼ಾದ್ ಸರ್..... ದೇವರು ನಿಮ್ಮ ಬಾಳಲ್ಲಿ ಸದಾ ಸಂತೋಷ ಸಂಭ್ರಮಗಳನ್ನು ನೀಡಿ ಹರಸಲಿ............
ReplyDeleteಶ್ರೀಮಾನ್ ಶ್ರೀಕಾಂತಣ್ಣ ಬ್ಲಾಗ್ ತುಂಬಾ ಚಂದಾ ಇದೆ
ಶ್ರೀಕಾಂತ್;ಲೇಖನ ಮತ್ತು ಫೋಟೋಗಳು ಅದ್ಭುತವಾಗಿವೆ.ಅಹಂಕಾರವಿಲ್ಲದ ವ್ಯಕ್ತಿ ಎಲ್ಲರಿಗೂ ತಕ್ಷಣ ಆತ್ಮೀಯನಾಗಿಬಿಡುತ್ತಾನೆ!!!! ಅದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ನಮ್ಮ ಅಜಾದ್ ಸರ್.ಅವರು ನನಗಿಂತ ಹತ್ತು ವರುಷ ಸಣ್ಣವರಾದರೂ ಅವರನ್ನು ಸರ್ ಎಂದು ಕರೆಯದೇ ಇರಲಾರೆ. ಅವರ ವ್ಯಕ್ತಿತ್ವವೇ ಅಂತಹುದು.ಅವರನ್ನು ಕಂಡರೆ ಆತ್ಮೀಯತೆ,ಗೌರವ,ಪ್ರೀತಿ ವಿಶ್ವಾಸಗಳು ತಾನಾಗಿಯೇ ಬರುತ್ತವೆ.ಅವರು ನಮ್ಮೆಲ್ಲರಿಗೂ ಸ್ನೇಹ ಸುಧೆ ನೀಡುತ್ತಾ ನೂರಾರು ವರುಷ ನೆಮ್ಮದಿಯಿಂದ ಬದುಕಿರಲಿ.ದೇವರು ಅವರಿಗೆ ಆಯುರಾರೋಗ್ಯ ಐಶ್ವರ್ಯವನ್ನೆಲ್ಲಾ ನೀಡಲಿ ಎನ್ನುವುದೇ ಅವರಿಗೆ ಜನುಮ ದಿನದಂದು ನನ್ನ ಹಾರೈಕೆ.
ReplyDeleteSrikanth anna... super dooper blog post.....
ReplyDeleteHappy bday bhayya...
ಸುಂದರ ಬರಹ, ಸುಂದರ ಛಾಯಾಚಿತ್ರ, ಶ್ರೀಕಾಂತಣ್ಣಾ.... ಸರಳತೆಗೆ, ಪ್ರೀತಿ ವಿಶ್ವಾಸಕ್ಕೆ, ಸುಂದರ ಮನಸ್ಸಿಗೆ ಇನ್ನೊಂದು ಹೆಸರು ಅಜಾದ್ ಅಣ್ಣಾ
ReplyDeleteಓದಿದ ಮೆಚ್ಚಿದ ಹಾರೈಸಿದ ಎಲ್ಲರಿಗೂ ನನ್ನ ಧನ್ಯವಾದಗಳು.ಅಜಾದ್ ಸರ್ ಎನ್ನುವ ಒಂದು ಪರಿಪೂರ್ಣ ವ್ಯಕ್ತಿಯ ಜೊತೆಯಲ್ಲಿ ನಮ್ಮ ಸ್ನೇಹ ಸಂಬಂಧ ಇರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಅಂಥಹ ಒಂದು ಮಹಾನ್ ವ್ಯಕ್ತಿತ್ವಕ್ಕೆ ಶುಭಕೋರುವ ಅವಕಾಶ ನನಗೆ ಸಿಕ್ಕದ್ದು ನಿಮ್ಮೆಲ್ಲರ ಪ್ರೀತಿಯ ನಲ್ನುಡಿಗಳು. ಎಲ್ಲರಿಗೂ ಧನ್ಯವಾದಗಳು
ReplyDeleteSriman..ಬಹಳ ಭಾವುಕನಾಗಿಬಿಟ್ಟೆ ನಿಮ್ಮೀ ಆತ್ಮೀಯ ಲೇಖನ ಓದಿ... ಬಹಳ ಬಹಳ ಋಣಿ ನಿಮಗೆ.
ReplyDelete